ಬ್ಯಾರಿ ಅಕಾಡೆಮಿ ವೆಬ್​ಸೈಟ್​ ಮತ್ತೊಮ್ಮೆ ಹ್ಯಾಕ್ ; ಸೈಬರ್ ಠಾಣೆಗೆ ಅಧ್ಯಕ್ಷರ ದೂರು

23-07-21 04:20 pm       Mangalore Correspondent   ಕ್ರೈಂ

ಇತ್ತೀಚೆಗಷ್ಟೆ ಆರಂಭಿಸಲಾಗಿದ್ದ ಇಂಗ್ಲಿಷ್ ಲಿಪಿಯಿಂದ ಬ್ಯಾರಿ ಭಾಷೆಯ ಲಿಪಿಗೆ ಲಿಪ್ಯಂತರ ಮಾಡುವ ಅಧಿಕೃತ ವೆಬ್‌ಸೈಟನ್ನು ಕಿಡಿಗೇಡಿಗಳು ಹ್ಯಾಕ್ ಮಾಡಿದ್ದಾರೆ. 

ಮಂಗಳೂರು, ಜುಲೈ 23 : ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯಿಂದ ಇತ್ತೀಚೆಗಷ್ಟೆ ಆರಂಭಿಸಲಾಗಿದ್ದ ಇಂಗ್ಲಿಷ್ ಲಿಪಿಯಿಂದ ಬ್ಯಾರಿ ಭಾಷೆಯ ಲಿಪಿಗೆ ಲಿಪ್ಯಂತರ ಮಾಡುವ ಅಧಿಕೃತ ವೆಬ್‌ಸೈಟನ್ನು ಕಿಡಿಗೇಡಿಗಳು ಹ್ಯಾಕ್ ಮಾಡಿದ್ದಾರೆ. 

ವೆಬ್​ಸೈಟ್​ ಅನ್ನು ಜುಲೈ 7ರಂದು ಲೋಕಾರ್ಪಣೆ ಮಾಡಲಾಗಿತ್ತು.  ಇದರಲ್ಲಿ ಇಂಗ್ಲಿಷ್​ ಲಿಪಿಯಲ್ಲಿ ಟೈಪ್ ಮಾಡಿದರೆ ಅದು ಬ್ಯಾರಿ ಭಾಷೆಗೆ ಅನುವಾದವಾಗುವ ತಂತ್ರಾಂಶವನ್ನಾಗಿ ಅಭಿವೃದ್ದಿಪಡಿಸಲಾಗಿತ್ತು.

ಜುಲೈ 14ರಂದು ಮೊದಲ ಬಾರಿಗೆ ಈ ವೆಬ್‌ಸೈಟನ್ನು ಹ್ಯಾಕ್ ಮಾಡಲಾಗಿತ್ತು. ಆ ಸಂದರ್ಭದಲ್ಲಿ ಸೈಟ್​ನ್ನು ತೆರೆದಾಗ ಅಶ್ಲೀಲ ಚಿತ್ರಗಳು ಬರುತ್ತಿದ್ದವು. ಅಲ್ಲದೇ ಅದರಲ್ಲಿ HACKED BY MR.7 MIND ಎಂದು ಬರೆಯಲಾಗಿತ್ತು.

ನಂತರ ಇದರ ಪಾಸ್​ವರ್ಡ್ ಬದಲಿಸಿ ಸರಿಪಡಿಸಲಾಗಿತ್ತು. ಇದೀಗ 2ನೇ ಬಾರಿಗೆ ಹ್ಯಾಕ್ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ರಹೀಂ ಉಚ್ಚಿಲ್ ಅವರು ಮಂಗಳೂರು ಸೈಬರ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

Mangalore Karnataka Beary Sahithya Academy website hacked by hackers for a second-time case filed at the cybercrime police station