ಬ್ರೇಕಿಂಗ್ ನ್ಯೂಸ್
23-07-21 02:29 pm Udupi Correspondent ಕ್ರೈಂ
ಉಡುಪಿ, ಜುಲೈ 23: ಷೇರು ಬ್ರೋಕರ್ ಒಬ್ಬನನ್ನು ಅಪಹರಿಸಿ ದರೋಡೆಗೈದ ಪ್ರಕರಣದಲ್ಲಿ ಪೊಲೀಸರು ಕಾರ್ಕಳ ಮೂಲದ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಸಂತೋಷ್ ಬೋವಿ, ಅನಿಲ್ ಪೂಜಾರಿ ಮತ್ತು ಮಣಿ ಅಲಿಯಾಸ್ ಮಣಿಕಂಠ ಖಾರ್ವಿ ಬಂಧಿತರು.
ತುಮಕೂರು ಜಿಲ್ಲೆ ಮೂಲದ ಅಶೋಕ್ ಕುಮಾರ್ ಎಂಬವರು ಉಡುಪಿ ಪೇಟೆಯ ವಾದಿರಾಜ್ ಕಾಂಪ್ಲೆಕ್ಸ್ ನಲ್ಲಿ ಷೇರು ಬ್ರೋಕರ್ ಆಗಿ ಕೆಲಸ ಮಾಡುತ್ತಿದ್ದಾರೆ. ಮೊನ್ನೆ ಜುಲೈ 16ರಂದು ಕಚೇರಿಗೆ ಬಂದಿದ್ದ ಸಂತೋಷ್ ಎಂಬಾತ ವ್ಯವಹಾರದ ಬಗ್ಗೆ ಮಾತನಾಡಲೆಂದು ಕಾರಿನಲ್ಲಿ ಕರೆದೊಯ್ದಿದ್ದ. ಅಜ್ಜರಕಾಡು ಸಮೀಪಿಸುತ್ತಿದ್ದಂತೆ ಕಾರಿಗೆ ಇತರ ನಾಲ್ವರು ಯುವಕರು ಕೂಡ ಬಂದಿದ್ದು ಅಲ್ಲಿಂದ ಅಶೋಕ್ ಕುಮಾರ್ ಅವರನ್ನು ಮುಖಕ್ಕೆ ಬಟ್ಟೆ ಸುತ್ತಿಕೊಂಡು ನಿಗೂಢ ಜಾಗಕ್ಕೆ ಕರೆದೊಯ್ದಿದ್ದಾರೆ.
ಅಲ್ಲಿ ಆತನನ್ನು ಕೂಡಿಹಾಕಿ ಬೆದರಿಸಿ, ಎರಡು ಲಕ್ಷ ರೂಪಾಯಿ ಹಣ ಮತ್ತು ಎರಡು ಮೊಬೈಲ್ ಫೋನ್ ಕಿತ್ತುಕೊಂಡಿದ್ದಾರೆ. ಅಲ್ಲದೆ, ನಿನ್ನನ್ನು ಜೀವಂತ ಬಿಡಬೇಕಿದ್ದರೆ 70 ಲಕ್ಷ ರೂ. ನಗದು ನೀಡಬೇಕೆಂದು ಬೆದರಿಕೆ ಒಡ್ಡಿದ್ದರು. ಮರುದಿನ ಬ್ಯಾಂಕಿನಿಂದ ಹತ್ತು ಲಕ್ಷ ತೆಗೆಸಿಕೊಡುವುದಾಗಿ ಹೇಳಿ ಅಶೋಕ್ ಕುಮಾರ್, ಅದರಲ್ಲಿ ಒಬ್ಬ ಯುವಕನ ಜೊತೆ ಬ್ಯಾಂಕ್ ಒಳಗೆ ಹೋಗಿದ್ದ. ಆದರೆ ಅಶೋಕ್ ಕುಮಾರ್ ನೇರವಾಗಿ ಬ್ಯಾಂಕ್ ಮ್ಯಾನೇಜರ್ ಇದ್ದ ಚೇಂಬರಿಗೆ ತೆರಳಿದ್ದು, ತನ್ನನ್ನು ಯುವಕರು ಸೇರಿ ದರೋಡೆ ಮಾಡುತ್ತಿದ್ದಾರೆ ಎಂದು ಹೇಳಿದ್ದಾನೆ. ಅಷ್ಟಾಗುತ್ತಿದ್ದಂತೆ, ಜೊತೆಗಿದ್ದ ಯುವಕ ತನ್ನನ್ನು ಬ್ಯಾಂಕ್ ಸಿಬಂದಿ ಸೇರಿ ಹಿಡಿದುಬಿಡುತ್ತಾರೆಂಬ ಭಯದಲ್ಲಿ ಅಲ್ಲಿಂದ ಕಾಲ್ಕಿತ್ತಿದ್ದು ಹೊರಗೆ ಓಡಿದ್ದಾನೆ.
ಕೂಡಲೇ ಅಶೋಕ್ ಕುಮಾರ್ ಉಡುಪಿ ಪೊಲೀಸರಿಗೆ ಮಾಹಿತಿ ನೀಡಿದ್ದು, ಬಳಿಕ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಕಾರ್ಯಾಚರಣೆ ನಡೆಸಿದ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದು, 1.35 ಲಕ್ಷ ರೂಪಾಯಿ ನಗದು ಮತ್ತು ಪಿಸ್ತೂಲ್ ಅನ್ನು ವಶಕ್ಕೆ ಪಡೆದಿದ್ದಾರೆ. ಆರೋಪಿಗಳು ಕಾರ್ಕಳದಲ್ಲಿ ಸಂಘಟನೆಯೊಂದರ ಕಾರ್ಯಕರ್ತರು ಎನ್ನಲಾಗುತ್ತಿದ್ದು, ಕೃತ್ಯದ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
The Udupi town police have arrested three persons in connection with the robbery and kidnap of a Share broker on July 22. The arrested have been identified as Santhosh Bovi, Anil Poojary and Mani alias Manikanta Kharvi. According to the police, the victim Ashok Kumar a native of Tumkur district was working as a share broker at the Vadiraj Complex in Car Street.
08-05-25 12:23 pm
HK News Desk
Special Poojas, Indian Army, Minister Ramalin...
07-05-25 04:07 pm
ಭಾರತ - ಪಾಕ್ ಮಧ್ಯೆ ಉದ್ವಿಗ್ನ ಸ್ಥಿತಿ ; ಮೇ 7 ರಂದು...
06-05-25 11:23 pm
Mysuru, Prison, Arrest, Siddaramaiah: ಬೆಳಗಾವಿ...
06-05-25 09:38 pm
ಓಬಳಾಪುರಂ ಅಕ್ರಮ ಮೈನಿಂಗ್ ಪ್ರಕರಣ ; ಮಾಜಿ ಸಚಿವ ಗಾಲ...
06-05-25 08:18 pm
08-05-25 12:47 pm
HK News Desk
Masood Azhar: ಜೈಶ್ ಮೊಹಮ್ಮದ್ ಉಗ್ರರ ನೆಲೆ ಧ್ವಂಸ...
07-05-25 10:45 pm
Operation Sindoor: ಸೇನಾ ದಾಳಿಗೆ ‘ಆಪರೇಶನ್ ಸಿಂಧೂ...
07-05-25 10:28 pm
Gunfire at Border; ಗಡಿಯಲ್ಲಿ ಗುಂಡಿನ ಮೊರೆತ ; ಕಾ...
07-05-25 06:14 pm
Kasaragod Toll, Kumbla: ತಲಪಾಡಿ – ಚೆರ್ಕಳ ಆರು ಪ...
07-05-25 12:20 pm
08-05-25 04:52 pm
Mangalore Correspondent
Mangalore, Suhas Shetty, NIA, Sunil Kumar: ಸು...
08-05-25 04:14 pm
MLA Harish Poonja, High Court: ಮುಸ್ಲಿಮರ ಬಗ್ಗೆ...
07-05-25 10:30 pm
Operation Sindhoor, MP Brijesh Chowta, Manga...
07-05-25 03:36 pm
Hindu Maha Sabha, Mangalore, Rajesh Pavitran:...
07-05-25 02:36 pm
03-05-25 02:16 pm
Mangalore Correspondent
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm
Mangalore Mudipu Murder, Mob, Police, Crime:...
29-04-25 09:59 pm