ಬ್ರೇಕಿಂಗ್ ನ್ಯೂಸ್
21-07-21 02:42 pm Headline Karnataka News Network ಕ್ರೈಂ
ಮುಂಬೈ, ಜು.21 : ಅಶ್ಲೀಲ ಚಿತ್ರಗಳ ರಚನೆ, ಬಿತ್ತರಿಸಿದ ಪ್ರಕರಣದಲ್ಲಿ ಬಂಧಿಸಲ್ಪಟ್ಟ ನಟಿ ಶಿಲ್ಪಾ ಶೆಟ್ಟಿಯ ಗಂಡ ಉದ್ಯಮಿ ರಾಜ್ ಕುಂದ್ರಾ ಬ್ರಿಟನ್ ಬ್ಲೂ ಫಿಲ್ಮ್ ಕಂಪೆನಿಯೊಂದಿಗೆ ನಂಟು ಹೊಂದಿದ್ದು ಕೋಟಿಗಟ್ಟಲೆ ವ್ಯವಹಾರ ನಡೆಸಿರುವುದು ಬೆಳಕಿಗೆ ಬಂದಿದೆ.
ಕುಂದ್ರಾ ಸಂಬಂಧಿಯ ಮಾಲಕತ್ವದ ಲಂಡನ್ ಮೂಲದ ಸಂಸ್ಥೆಯು ಭಾರತಕ್ಕೆ ಅಶ್ಲೀಲ ವಿಷಯವನ್ನು ಉತ್ಪಾದಿಸುತ್ತಿದೆ ಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆ.
ರಾಜ್ ಕುಂದ್ರಾ ಅವರನ್ನು ಸೋಮವಾರ ರಾತ್ರಿ ಅಪರಾಧ ವಿಭಾಗವು ಬಂಧಿಸಿದೆ. ಅಶ್ಲೀಲ ಚಿತ್ರಗಳ ರಚನೆ ಹಾಗೂ ಅವುಗಳನ್ನು ಕೆಲವು ಆ್ಯಪ್‌ಗಳ ಮೂಲಕ ಹಣ ಕೊಟ್ಟು ಸಬ್ಸ್ಕ್ರೈಬ್ ಮಾಡಿದವರಿಗೆ ವೀಡಿಯೋ ವೀಕ್ಷಿಸಲು ಸಾಧ್ಯವಾಗುತ್ತಿತ್ತು ಎಂಬ ಆರೋಪದ ಮೇಲೆ ಕುಂದ್ರ ಅವರನ್ನು ಅರೆಸ್ಟ್ ಮಾಡಲಾಗಿತ್ತು
ಮಂಗಳವಾರ ಕುಂದ್ರಾ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು, ನ್ಯಾಯಾಲಯವು ಅವರನ್ನು ಜುಲೈ 23 ರವರೆಗೆ ಪೊಲೀಸ್ ಕಸ್ಟಡಿಯಲ್ಲಿ ಇರಿಸಿದೆ.
ರಾಜ್ ಕುಂದ್ರಾ ಅವರ ಮಗನ ಹೆಸರಿನಲ್ಲಿ ನೋಂದಾಯಿಸಿರುವ ವಯಾನ್ ಇಂಡಸ್ಟ್ರೀಸ್ ಲಂಡನ್ ಮೂಲದ ಕೆನ್ರಿನ್ ಕಂಪೆನಿ ಜೊತೆ ಒಪ್ಪಂದ ಮಾಡಿಕೊಂಡಿದ್ದು, ಈ ಕಂಪೆನಿಯು 'ಹಾಟ್‌ಶಾಟ್ಸ್' ಆ್ಯಪ್ ನ ಮಾಲಕತ್ವ ಹೊಂದಿದ್ದು ಕೋಟಿಗಟ್ಟಲೆ ವ್ಯವಹಾರ ನಡೆಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
"ಕಂಪನಿಯು ಲಂಡನ್‌ನಲ್ಲಿ ನೋಂದಾಯಿತವಾಗಿದ್ದರೂ, ವಿಷಯ ರಚನೆ, ಅಪ್ಲಿಕೇಶನ್‌ನ ಕಾರ್ಯಾಚರಣೆ ಹಾಗೂ ಅಕೌಂಟಿಂಗ್ ಅನ್ನು ಕುಂದ್ರಾ ಅವರ ವಯಾನ್ ಇಂಡಸ್ಟ್ರೀಸ್ ಮೂಲಕ ನಿರ್ವಹಿಸಲಾಗಿದೆ" ಎಂದು ಜಂಟಿ ಪೊಲೀಸ್ ಆಯುಕ್ತ (ಅಪರಾಧ) ಮಿಲಿಂದ್ ಭಾರಂಬೆ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಕೆನ್ರಿನ್ ಕಂಪೆನಿಯು ರಾಜ್ ಕುಂದ್ರಾ ಅವರ ಸೋದರ ಮಾವನ ಒಡೆತನದಲ್ಲಿದೆ ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ..
ಪೊಲೀಸರು ಎರಡು ವ್ಯಾಪಾರಿ ಸಂಸ್ಥೆಗಳ ನಡುವೆ ಸಂಪರ್ಕವನ್ನು ಸ್ಥಾಪಿಸುವ ಪುರಾವೆಗಳನ್ನು ಸಂಗ್ರಹಿಸಿದ್ದಾರೆ.
ಫೆಬ್ರವರಿ 4 ರಂದು ಉಪನಗರ ಮುಂಬೈನ ಮಾಲ್ವಾನಿ ಪೊಲೀಸ್ ಠಾಣೆಯಲ್ಲಿ ದಾಖಲಾದ ಅಶ್ಲೀಲ ಚಿತ್ರ ಪ್ರಕರಣದ "ಪ್ರಮುಖ ಸಂಚುಕೋರ" ರಾಜ್ ಕುಂದ್ರಾ ಎಂದು ಸೋಮವಾರ ಪೊಲೀಸರು ತಿಳಿಸಿದ್ದಾರೆ.
ಬಂಧನದ ಬೆನ್ನಲ್ಲೇ ರಾಜ್ ಕುಂದ್ರಾ ಹಳೇ ಟ್ವೀಟ್ಗಳು ವೈರಲ್;
2012ರಲ್ಲಿ ಶಿಲ್ಪಾ ಶೆಟ್ಟಿ ಅವರ ಗಂಡ ರಾಜ್ ಕುಂದ್ರಾ ಮಾಡಿದ್ದ ಟ್ವೀಟ್ಗಳು ಈಗ ಮತ್ತೆ ಚರ್ಚೆಗೊಳಗಾಗಿವೆ. ವಿಪರ್ಯಾಸವೆಂದರೆ 9 ವರ್ಷಗಳ ಹಿಂದೆ ಪೋರ್ನೋಗ್ರಫಿ ಮತ್ತು ವೇಶ್ಯಾವಾಟಿಕೆಯ ಬಗ್ಗೆ ಟ್ವೀಟ್ಗಳನ್ನು ಮಾಡಿದ್ದ ರಾಜ್ ಕುಂದ್ರಾ ಇದೀಗ ಅದೇ ಅಶ್ಲೀಲ ಸಿನಿಮಾಗಳನ್ನು ಚಿತ್ರೀಕರಿಸಿದ ಆರೋಪದಡಿ ಬಂಧನಕ್ಕೊಳಗಾಗಿದ್ದಾರೆ. ‘ವೇಶ್ಯಾವಾಟಿಕೆ ನಡೆಸುವುದು ಕಾನೂನು ಪ್ರಕಾರ ಅಕ್ರಮ. ಆದರೆ, ಸೆಕ್ಸ್ಗಾಗಿ ದುಡ್ಡು ಕೊಟ್ಟು ಕ್ಯಾಮೆರಾದಲ್ಲಿ ಚಿತ್ರೀಕರಿಸುವುದು ಏಕೆ ಕಾನೂನು ಪ್ರಕಾರ ಅಪರಾಧವಲ್ಲ?’ ಎಂದು 2021ರ ಮಾರ್ಚ್ 29ರಂದು ರಾಜ್ ಕುಂದ್ರಾ ಟ್ವೀಟ್ ಒಂದನ್ನು ಮಾಡಿದ್ದರು.
ಅದರ ಬೆನ್ನಲ್ಲೇ 2012ರ ಮೇ 3ರಂದು ಇನ್ನೊಂದು ಟ್ವೀಟ್ ಮಾಡಿದ್ದ ರಾಜ್ ಕುಂದ್ರಾ, ‘ಭಾರತದಲ್ಲಿ ನಟರು ಕ್ರಿಕೆಟ್ ಆಟವಾಡುತ್ತಿದ್ದಾರೆ, ಕ್ರಿಕೆಟರ್ಗಳು ರಾಜಕಾರಣ ಮಾಡುತ್ತಿದ್ದಾರೆ, ರಾಜಕಾರಣಿಗಳು ಪೋರ್ನ್ ಸಿನಿಮಾ (ಅಶ್ಲೀಲ ಚಿತ್ರ)ಗಳನ್ನು ನೋಡುತ್ತಿದ್ದಾರೆ, ನೀಲಿಚಿತ್ರ ತಾರೆಯರು ಸಿನಿಮಾಗಳ ನಾಯಕಿಯರಾಗುತ್ತಿದ್ದಾರೆ!’ ಎಂದು ಟ್ವೀಟ್ ಮಾಡಿದ್ದರು.
ಆ ಹಳೇ ಟ್ವೀಟ್ಗಳನ್ನು ಈಗ ಶೇರ್ ಮಾಡಿಕೊಳ್ಳುತ್ತಿರುವ ಟ್ವಿಟ್ಟಿಗರು ಈ ವಿಷಯದ ಬಗ್ಗೆ ಈಗ ರಾಜ್ ಕುಂದ್ರಾ ಅಧಿಕೃತವಾಗಿಯೇ ಮುಂಬೈ ಪೊಲೀಸರ ಜೊತೆ ಚರ್ಚೆ ನಡೆಸಬಹುದು. ಅವರಿಗೆ ಈಗ ಪೋರ್ನೋಗ್ರಫಿ ವಿಚಾರದಲ್ಲಿ ಸಾಕಷ್ಟು ತಿಳುವಳಿಕೆಯೂ ಇದೆ ಎಂದು ಲೇವಡಿ ಮಾಡಿದ್ದಾರೆ.
ಸೋಮವಾರ ರಾತ್ರಿ ಅಶ್ಲೀಲ ವಿಡಿಯೋಗಳನ್ನು ಚಿತ್ರೀಕರಿಸಿ ಮೊಬೈಲ್ ಆ್ಯಪ್ಗಳಿಗೆ ಅಪ್ಲೋಡ್ ಮಾಡುತ್ತಿದ್ದ ಆರೋಪದಲ್ಲಿ ಮುಂಬೈ ಪೊಲೀಸರು ನಟಿ ಶಿಲ್ಪಾ ಶೆಟ್ಟಿ ಅವರ ಪತಿ ರಾಜ್ ಕುಂದ್ರಾ ಅವರನ್ನು ಬಂಧಿಸಿದ್ದರು. ಈ ಪ್ರಕರಣದಲ್ಲಿ ರಾಜ್ ಕುಂದ್ರಾ ವಿರುದ್ಧ ಸಾಕಷ್ಟು ಸಾಕ್ಷಿಗಳು ಲಭ್ಯವಾದ ಹಿನ್ನೆಲೆಯಲ್ಲಿ ಅವರನ್ನು ಬಂಧಿಸಲಾಗಿದೆ. ಈ ಹಗರಣದ ಪ್ರಮುಖ ಆರೋಪಿಯೂ ರಾಜ್ ಕುಂದ್ರಾ ಅವರೇ ಆಗಿದ್ದಾರೆ. ಈ ಘಟನೆ ಬೆಳಕಿಗೆ ಬಂದ ನಂತರ ಬಾಲಿವುಡ್ ಶಾಕ್ಗೆ ಒಳಗಾಗಿದೆ.
ಪೋರ್ನ್ ಸಿನಿಮಾಗಳನ್ನು ಚಿತ್ರೀಕರಿಸಿ ಅದನ್ನು ಮೊಬೈಲ್ ಆ್ಯಪ್‌ಗಳ ಮೂಲಕ ಎಲ್ಲ ಕಡೆ ಪ್ರಸಾರ ಮಾಡಲಾಗುತ್ತಿದೆ ಎಂದು 2021ರ ಫೆಬ್ರವರಿ ತಿಂಗಳಲ್ಲಿ ಮುಂಬೈನ ಕ್ರೈಂ ಬ್ರಾಂಚ್ ಪೊಲೀಸರಿಗೆ ದೂರು ಬಂದಿತ್ತು. ಈ ಪ್ರಕರಣದಲ್ಲಿ ಉದ್ಯಮಿ ರಾಜ್ ಕುಂದ್ರಾ ಅವರು ಪ್ರಮುಖ ಆರೋಪಿ ಎಂಬುದಕ್ಕೆ ಸಾಕ್ಷಿಗಳು ಲಭ್ಯವಾಗಿದ್ದು ಅವರನ್ನು ಬಂಧಿಸಿದ್ದೇವೆ ಎಂದು ಮುಂಬೈ ಪೊಲೀಸ್ ಕಮಿಷನರ್ ಹೇಮಂತ್ ನಗ್ರಾಲೆ ಖಚಿತಪಡಿಸಿದ್ದರು.
ಕೆಂಡ್ರಿಂಗ್ ಹೆಸರಿನ ಇಂಗ್ಲೆಂಡ್ ಮೂಲದ ಕಂಪನಿ ಮೇಲೆ ರಾಜ್ 10 ಕೋಟಿ ಹೂಡಿಕೆ ಮಾಡಿದ್ದಾರೆ. ಈ ಪ್ರಕರಣದಲ್ಲಿ ಉಮೇಶ್ ಎಂಬಾತನನ್ನು ಬಂಧಿಸಲಾಗಿದೆ. ರಾಜ್ ಕುಂದ್ರಾ ಹಾಗೂ ಉಮೇಶ್ ನಡುವೆ ಒಪ್ಪಂದ ಇತ್ತು ಎನ್ನಲಾಗಿದೆ. ಬಂಧನಕ್ಕೊಳಗಾಗಿರುವ ರಾಜ್ ಕುಂದ್ರಾ ಅವರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ.
ನಾವು ಮಾಡಿದ್ದು ಬೋಲ್ಡ್ ಸಿನಿಮಾ, ಅದು ಪೋರ್ನ್ ಅಲ್ಲ; ರಾಜ್ ಕುಂದ್ರಾ ಬೆಂಬಲಕ್ಕೆ ನಟಿ ಗೆಹೆನಾ ವಸಿಷ್ಠ್;
'ಗಂದಿ ಬಾತ್' ಎನ್ನುವ ಆನ್ಲೈನ್ ಶೋ ಮೂಲಕ ಹೆಸರು ಮಾಡಿರುವ ನಟಿ ಗೆಹೆನಾ ವಸಿಷ್ಠ್ ಮಾತನಾಡಿ ರಾಜ್ ಕುಂದ್ರಾ ಜೊತೆಗೆ ತಾನು ಕೆಲಸ ಮಾಡಿದ್ದೇನೆ. ಆತ ಮಾಡುತ್ತಿರುವುದು ಪೋರ್ನ್ ಸಿನಿಮಾ ಅಲ್ಲ, ಅದು ಬೋಲ್ಡ್ ಸಿನಿಮಾ. ಅದರಲ್ಲಿ ನಟಿಸುವವರಿಗೆ ಸರಿಯಾಗಿ ಹಣ ನೀಡುತ್ತಾರೆ ಮತ್ತು ಕಲಾವಿದರು ತಮ್ಮ ಇಚ್ಛೆಯಿಂದಷ್ಟೇ ನಟಿಸುತ್ತಾರೆ, ನಾನು ಕೂಡಾ ಆತ ನಿರ್ಮಿಸಿದ 3 ಚಿತ್ರಗಳಲ್ಲಿ ನಾಯಕಿಯಾಗಿ ನಟಿಸಿದ್ದೇನೆ ಎಂದಿದ್ದಾರೆ ಗೆಹೆನಾ.
8 ಜನರ ಜೊತೆಗೆ ಗೆಹೆನಾ ವಸಿಷ್ಠ್ ಕೂಡಾ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಅರೆಸ್ಟ್ ಆಗಿದ್ದರು. ಈ ಸಂಬಂಧ ತಾನು ತನ್ನದಲ್ಲದ ತಪ್ಪಿಗೆ ಜೈಲಿನಲ್ಲಿ ಇರುವಂತಾಯ್ತು. ಅದರಿಂದ ತನ್ನ ಇಡೀ ಬದುಕೇ ನಿರ್ಣಾಮವಾಗಿದೆ ಎಂದು ಗೆಹೆನಾ ವಿಡಿಯೋ ಒಂದರಲ್ಲಿ ಹೇಳಿದ್ದಾರೆ. jನ ಬೋಲ್ಡ್ ಅಥವಾ ಎರಾಟಿಕ್ ಸಿನಿಮಾ ಅಂದ್ರೆ ಏನು ಎಂದು ಮೊದಲು ತಿಳಿದುಕೊಳ್ಳಬೇಕು. ಎರಾಟಿಕ್ ಚಿತ್ರಗಳಿಗೂ ನೀಲಿ ಚಿತ್ರಗಳಿಗೂ ಬಹಳ ವ್ಯತ್ಯಾಸವಿದೆ. ಅದನ್ನು ಅರಿತರೆ ಮಾತ್ರ ಈ ತಪ್ಪು ಕಲ್ಪನೆಗಳು ದೂರವಾಗುತ್ತವೆ. ನಾನು ನಟಿಸಿದ ಚಿತ್ರಗಳಿಗೆ ನನಗೆ ಉತ್ತಮವಾಗಿ ಸಂಭಾವನೆ ದೊರಕಿದೆ. ನಾನು ಯಾವ ತಪ್ಪು ಕೆಲಸವನ್ನೂ ಮಾಡಿಲ್ಲ, ಮಾಡದ ತಪ್ಪಿಗೆ ಶಿಕ್ಷ ಅನುಭವಿಸಿದ್ದೇನೆ. ಈಗ ರಾಜ್ ಕುಂದ್ರಾ ವಿಚಾರದಲ್ಲೂ ಅದೇ ಆಗುತ್ತಿದೆ ಎಂದಿದ್ದಾರೆ ಗೆಹೆನಾ ವಸಿಷ್ಠ್.
ನೀಲಿ ಚಿತ್ರಗಳನ್ನು ಮಾಡುವವರನ್ನು ಬಂಧಿಸಿ. ಅದನ್ನು ಬಿಟ್ಟು ನೀಲಿ ಚಿತ್ರ ಮತ್ತು ಎರಾಟಿಕ್ ಸಿನಿಮಾ ನಡುವೆ ವ್ಯತ್ಯಾಸ ತಿಳಿಯದೆ ಇಂಥಾ ಆರೋಪ ಮಾಡಿ ಬದುಕು ಹಾಳು ಮಾಡುವುದು ಸರಿಯಲ್ಲ ಎಂದಿದ್ದಾರೆ ಗೆಹೆನಾ. ಇನ್ನು ರಾಜ್ ಕುಂದ್ರಾ ಬಂಧನದ ನಂತರ, ಅಕ್ಟೋಬರ್ನಲ್ಲಿ ನಡೆದ ಕೆಲವು ವಾಟ್ಸಾಪ್ ಚಾಟ್‌ಗಳು ಹೊರ ಬಂದಿವೆ. ಪೋರ್ನ್ ಸಿನಿಮಾ ವ್ಯವಹಾರದಿಂದ ರಾಜ್ ಕುಂದ್ರಾ ಸಾಕಷ್ಟು ಹಣ ಸಂಪಾದಿಸಿದ್ದರು ಎಂಬುದು ಈ ಚಾಟ್ಗಳಿಂದ ಬಹಿರಂಗವಾಗಿದೆ ಎಂದು ಮುಂಬೈ ಕ್ರೈಮ್ ಬ್ರಾಂಚ್ ಅಧಿಕಾರಿಗಳು ಮಾಧ್ಯಮಗಳಿಗೆ ತಿಳಿಸಿದ್ದಾರೆ.
‘ಎಚ್ ಅಕೌಂಟ್ಸ್’ ಹೆಸರಿನ ಗ್ರೂಪ್ನ ಚಾಟ್‌ಗಳು ಇವಾಗಿದ್ದು ಇದರ ಅಡ್ಮಿನ್ ರಾಜ್ ಕುಂದ್ರಾ ಆಗಿದ್ದಾರೆ. ಈ ಗ್ರೂಪ್ನಲ್ಲಿ ರಾಜ್ ಅವರು ತಮ್ಮ ಸಂಬಂಧಿ ಮತ್ತು ಕೆನ್ರಿನ್ ಪ್ರೊಡಕ್ಷನ್ ಹೌಸ್ ಅಧ್ಯಕ್ಷ ಪ್ರದೀಪ್ ಭಕ್ಷಿ ಅವರೊಂದಿಗೆ ಹಣದ ವ್ಯವಹಾರದ ಬಗ್ಗೆ ಚರ್ಚಿಸಿರುವುದು ಕಂಡು ಬಂದಿದೆ. ಸಿನಿಮಾದಿಂದ ದಿನಕ್ಕೆ ಲಕ್ಷಾಂತರ ರೂಪಾಯಿ ಹಣ ಬರುತ್ತಿತ್ತು ಎಂಬುದು ಚಾಟ್ನಿಂದ ಗೊತ್ತಾಗಿದೆ.
A company of businessman Raj Kundra arrested in a porn films case, was running operations for a London-based firm floated by a close relative which was into producing pornographic content for India, Mumbai police said today.
08-05-25 12:23 pm
HK News Desk
Special Poojas, Indian Army, Minister Ramalin...
07-05-25 04:07 pm
ಭಾರತ - ಪಾಕ್ ಮಧ್ಯೆ ಉದ್ವಿಗ್ನ ಸ್ಥಿತಿ ; ಮೇ 7 ರಂದು...
06-05-25 11:23 pm
Mysuru, Prison, Arrest, Siddaramaiah: ಬೆಳಗಾವಿ...
06-05-25 09:38 pm
ಓಬಳಾಪುರಂ ಅಕ್ರಮ ಮೈನಿಂಗ್ ಪ್ರಕರಣ ; ಮಾಜಿ ಸಚಿವ ಗಾಲ...
06-05-25 08:18 pm
08-05-25 12:47 pm
HK News Desk
Masood Azhar: ಜೈಶ್ ಮೊಹಮ್ಮದ್ ಉಗ್ರರ ನೆಲೆ ಧ್ವಂಸ...
07-05-25 10:45 pm
Operation Sindoor: ಸೇನಾ ದಾಳಿಗೆ ‘ಆಪರೇಶನ್ ಸಿಂಧೂ...
07-05-25 10:28 pm
Gunfire at Border; ಗಡಿಯಲ್ಲಿ ಗುಂಡಿನ ಮೊರೆತ ; ಕಾ...
07-05-25 06:14 pm
Kasaragod Toll, Kumbla: ತಲಪಾಡಿ – ಚೆರ್ಕಳ ಆರು ಪ...
07-05-25 12:20 pm
07-05-25 10:30 pm
Mangalore Correspondent
Operation Sindhoor, MP Brijesh Chowta, Manga...
07-05-25 03:36 pm
Hindu Maha Sabha, Mangalore, Rajesh Pavitran:...
07-05-25 02:36 pm
Mangalore, Satish Kumapla, U T Khader: ಚಿಕ್ಕಮ...
06-05-25 06:36 pm
Suhas Shetty Murder, Bommai, Dinesh Gundurao:...
06-05-25 06:17 pm
03-05-25 02:16 pm
Mangalore Correspondent
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm
Mangalore Mudipu Murder, Mob, Police, Crime:...
29-04-25 09:59 pm