ಬ್ರೇಕಿಂಗ್ ನ್ಯೂಸ್
11-06-21 03:28 pm Mangalore Correspondent ಕ್ರೈಂ
ಮಂಗಳೂರು, ಜೂನ್ 11: ಅಂತಾರಾಷ್ಟ್ರೀಯ ಮಟ್ಟದಲ್ಲಿ ನಡೆಯುತ್ತಿದ್ದ ಮಾನವ ಕಳ್ಳಸಾಗಾಣಿಕೆ ಜಾಲವನ್ನು ಮಂಗಳೂರು ಪೊಲೀಸರು ಭೇದಿಸಿದ್ದಾರೆ. ಖಚಿತ ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಸಿದ ಮಂಗಳೂರು ಪೊಲೀಸರು, ಮಂಗಳೂರಿನ ವಿವಿಧ ಲಾಡ್ಜ್ ಗಳಲ್ಲಿ ಉಳಿದುಕೊಂಡಿದ್ದ ಶ್ರೀಲಂಕಾ ಮೂಲದ 38 ಮಂದಿ ಪ್ರಜೆಗಳನ್ನು ಬಂಧಿಸಿದ್ದಾರೆ.
ಕೆನಡಾಕ್ಕೆ ತೆರಳುವ ಉದ್ದೇಶದಿಂದ ಶ್ರೀಲಂಕಾ ಪ್ರಜೆಗಳು ಭಾರತ ಪ್ರವೇಶ ಮಾಡಿದ್ದರು. ಹೆಚ್ಚಿನವರು ತಮಿಳು ಭಾಷೆ ಮಾತನಾಡುತ್ತಿದ್ದು, ಉತ್ತರ ಶ್ರೀಲಂಕಾ ಭಾಗದ ನಿವಾಸಿಗಳು. ತಮಿಳುನಾಡಿನ ತೂತುಕುಡಿ ಬಂದರಿಗೆ ಬೋಟಿನಲ್ಲಿ ಆಗಮಿಸಿದ್ದ ಇವರು ಬಳಿಕ ಅಲ್ಲಿಂದ ವಾಹನದ ಮೂಲಕ ಬೆಂಗಳೂರಿಗೆ ಬಂದಿದ್ದರು. ಬೆಂಗಳೂರಿನ ಶಾಂತಿನಗರ ಬಸ್ ನಿಲ್ದಾಣ ಆವರಣದಲ್ಲಿ ಸ್ವಲ್ಪಕಾಲ ಉಳಿದುಕೊಂಡಿದ್ದ ಅವರನ್ನು ಆನಂತರ ಮಂಗಳೂರಿಗೆ ಕರೆತರಲಾಗಿತ್ತು ಎಂದು ಕಮಿಷನರ್ ಶಶಿಕುಮಾರ್ ಮಾಹಿತಿ ನೀಡಿದ್ದಾರೆ.
ಮಂಗಳೂರಿನ ಬಂದರು ಪ್ರದೇಶದಲ್ಲಿರುವ ಸೀ ಪೋರ್ಟ್ ಲಾಡ್ಜ್, ರಾವ್ ಅಂಡ್ ರಾವ್ ಸರ್ಕಲ್ ಬಳಿಯ ಸಿಟಿ ಲಾಡ್ಜ್ ಹಾಗೂ ಕಸಬಾ ಬೆಂಗರೆಯಲ್ಲಿ ಅಕ್ರಮವಾಗಿ ಉಳಿದುಕೊಂಡಿದ್ದ 38 ಮಂದಿಯನ್ನು ಬಂಧಿಸಲಾಗಿದೆ. ಇವರಿಗೆ ಆಶ್ರಯ ನೀಡಿದ್ದ ಆರೋಪದಲ್ಲಿ ಸ್ಥಳೀಯ ಆರು ಮಂದಿಯನ್ನು ಬಂಧಿಸಲಾಗಿದೆ ಎಂದು ಮಾಹಿತಿ ನೀಡಿದ ಕಮಿಷನರ್, ಶ್ರೀಲಂಕಾ, ತಮಿಳುನಾಡು ಮತ್ತು ಮಂಗಳೂರು ನಡುವೆ ಸಂಪರ್ಕ ಇರುವ ಏಜನ್ಸಿಯೊಂದು ಇವರನ್ನು ಮಂಗಳೂರಿಗೆ ಕರೆತಂದಿದೆ. ಏಜನ್ಸಿ ಯಾವುದು, ಹೇಗೆ ಒಯ್ಯುತ್ತಾರೆ ಎನ್ನುವ ಮಾಹಿತಿಯನ್ನು ಇನ್ನಷ್ಟೇ ಪತ್ತೆ ಮಾಡಬೇಕಿದೆ. ಶ್ರೀಲಂಕಾದಲ್ಲಿ ಅಲ್ಲಿನ ಕರೆನ್ಸಿ 6ರಿಂದ 10 ಲಕ್ಷ ರೂ. ಏಜನ್ಸಿಗೆ ನೀಡಿದ್ದಾಗಿ ಮಾಹಿತಿ ನೀಡಿದ್ದಾರೆ. ತಮಿಳು ಭಾಷೆ ಮಾತನಾಡುತ್ತಿದ್ದು, ವಿಚಾರಣೆ ನಡೆಸುತ್ತಿದ್ದೇವೆ ಎಂದು ಹೇಳಿದರು.
ಮಾ.17ರಂದು ತಮಿಳುನಾಡಿನ ತೂತುಕುಡಿ ಬಂದರಿಗೆ ಆಗಮಿಸಿದ್ದರು. ಆದರೆ, ತಮಿಳುನಾಡಿನಲ್ಲಿ ಚುನಾವಣೆ ಇದ್ದುದರಿಂದ ಪೊಲೀಸರು ಅಲರ್ಟ್ ಆಗಿದ್ದರೆಂದು ಬೆಂಗಳೂರು ಮೂಲಕ ಮಂಗಳೂರಿಗೆ ಬಂದು ಅಡಗಿಕೊಂಡಿದ್ದರು. ಇದೇ ವೇಳೆ, ತಮಿಳುನಾಡಿನಲ್ಲಿ 40ಕ್ಕೂ ಹೆಚ್ಚು ಮಂದಿ ಲಂಕನ್ನರನ್ನು ಇದೇ ಪ್ರಕರಣಕ್ಕೆ ಸಂಬಂಧಿಸಿ ಅಲ್ಲಿನ ಪೊಲೀಸರು ಬಂಧಿಸಿದ್ದಾರೆ. ಮಂಗಳೂರಿನಲ್ಲಿ ಬಂಧಿಸಲ್ಪಟ್ಟ ಯಾರಲ್ಲಿ ಕೂಡ ಪಾಸ್ಪೋರ್ಟ್ ಆಗಲೀ, ಇನ್ನಿತರ ದಾಖಲೆ ಪತ್ರಗಳಾಗಲೀ ಇರಲಿಲ್ಲ. 38 ಮಂದಿಯ ವಿರುದ್ಧ 120 ಬಿ, 370, 420 ಐಪಿಸಿ, ಪಾಸ್ಪೋರ್ಟ್ ಏಕ್ಟ್ ಮತ್ತು ಫಾರಿನರ್ ಏಕ್ಟ್ ಅಡಿ ಪಾಂಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಮಂಗಳೂರಿನ ಲಾಡ್ಜ್ ಗಳಲ್ಲಿ ಮೀನುಗಾರಿಕೆ, ಕೂಲಿ ಕಾರ್ಮಿಕರು ಎಂದು ಹೇಳಿ ಲಾಡ್ಜ್ ಪಡೆದಿದ್ದರು. ಆದರೆ, ಇವರ ಹಿಂದೆ ಸಕ್ರಿಯ ಜಾಲ ಇರುವ ಮಾಹಿತಿಗಳಿದ್ದು ವಿಚಾರಣೆ ನಡೆಸಲಾಗುತ್ತಿದೆ.
ಕೆನಡಾದಲ್ಲಿ ಪಾಸ್ಪೋರ್ಟ್ ಇಲ್ಲದೆ ಬರುವ ಮಂದಿಯನ್ನು ನಿರಾಶ್ರಿತರು ಎಂದು ಪರಿಗಣಿಸಿ, ಕೂಲಿ ಇನ್ನಿತರ ಕೆಲಸಗಳಿಗೆ ಬಳಸಿಕೊಳ್ಳಲಾಗುತ್ತಿದೆ. ಹೀಗಾಗಿ ಕೆನಡಾಕ್ಕೆ ತೆರಳುತ್ತಿದ್ದಾರೆ ಎನ್ನಲಾಗುತ್ತಿದೆ. ಈ ಬಗ್ಗೆ ಅವರಲ್ಲಿ ಕೇಳಿದರೆ, ನಾವು ಕೆನಡಾದಲ್ಲಿ ಉದ್ಯೋಗಕ್ಕಾಗಿ ತೆರಳುತ್ತಿದ್ದೇವೆ. ಅಲ್ಲಿಯೇ ಒಳ್ಳೆದು ಅಂತ ಎನ್ನಿಸಿದರೆ ಕೆನಡಾದಲ್ಲೇ ಪೂರ್ತಿ ಸೆಟ್ಲ್ ಆಗುತ್ತೇವೆ ಎಂದು ಹೇಳಿದ್ದಾರೆ.
ತಮಿಳುನಾಡು ಮತ್ತು ಮಂಗಳೂರು ಪೊಲೀಸರು ಜಂಟಿಯಾಗಿ ಮಾನವ ಕಳ್ಳಸಾಗಣೆ ಜಾಲದ ಬಗ್ಗೆ ತನಿಖೆ ಮುಂದುವರಿಸಲಿದ್ದು, ಇನ್ನೂ ಕೂಡ ಹಲವಾರು ಮಂದಿ ಅಕ್ರಮವಾಗಿ ಉಳಿದುಕೊಂಡಿರುವ ಸಾಧ್ಯತೆಯಿದೆ. ಇದನ್ನು ಗಂಭೀರವಾಗಿ ಪರಿಗಣಿಸಿ, ಕಾರ್ಯಾಚರಣೆ ನಡೆಸಲಾಗುವುದು ಎಂದು ಕಮಿಷನರ್ ತಿಳಿಸಿದ್ದಾರೆ.
ಇದೇ ರೀತಿಯ ಪ್ರಕರಣ ಮಾನವ ಕಳ್ಳಸಾಗಣೆ ಜಾಲ 2012ರಲ್ಲಿ ಮಂಗಳೂರಿನಲ್ಲಿ ಪತ್ತೆಯಾಗಿತ್ತು. ಆಸ್ಟ್ರೇಲಿಯಾಕ್ಕೆ ತೆರಳುವ ಉದ್ದೇಶದಿಂದ 84 ಮಂದಿ ಅಕ್ರಮವಾಗಿ ಶ್ರೀಲಂಕಾದಿಂದ ಮಂಗಳೂರಿಗೆ ಬಂದು ನೆಲೆಸಿದ್ದರು. ಪೊಲೀಸರು ಬಳಿಕ ಬಂಧಿಸಿ ತಮಿಳುನಾಡು ಪೊಲೀಸರ ವಶಕ್ಕೆ ಒಪ್ಪಿಸಿದ್ದರು. ಇದೀಗ ಅದೇ ರೀತಿಯ ಪ್ರಕರಣ ಮಂಗಳೂರಿನಲ್ಲಿ ಮತ್ತೆ ಬೆಳಕಿಗೆ ಬಂದಿದೆ.
Video:
Mangalore police busted a Sri Lankan human trafficking racket and have arrested 38 persons who were about to leave to Cannada from Mangalore via Thoothukudi. In 2012 84 Sri Lankans were arrested who where to leave to Australia from Mangaluru.
16-08-25 10:03 pm
Bangalore Correspondent
ಸೆ.9ರಂದು ಉಪ ರಾಷ್ಟ್ರಪತಿ ಚುನಾವಣೆ ; ಬಿಹಾರ ರಾಜ್ಯಪ...
16-08-25 09:58 pm
Dharmasthala, Eshwar kandre: ಧರ್ಮಸ್ಥಳ ತಲೆಬುರು...
16-08-25 09:15 pm
BJP, Dharmasthala, DK Shivakumar, SIT Probe:...
16-08-25 08:05 pm
ಧರ್ಮಸ್ಥಳ ಪ್ರಕರಣದಲ್ಲಿ ಸುಳ್ಳು ಹೇಳಿ, ಅಪಪ್ರಚಾರ ಮಾ...
15-08-25 10:29 pm
17-08-25 09:09 pm
HK News Desk
ಜಮ್ಮು, ಕಾಶ್ಮೀರದಲ್ಲಿ ಮತ್ತೆ ಮೇಘ ಸ್ಫೋಟ, ಏಳು ಮಂದಿ...
17-08-25 03:02 pm
ಭಾರತಕ್ಕೆ ಮರಳಿದ ಗಗನಯಾತ್ರಿ ಶುಭಾಂಶು ಶುಕ್ಲಾ ; ದೆಹ...
17-08-25 12:54 pm
Dharmasthala, Dk Shivakumar, Pralhad Joshi: ಧ...
16-08-25 03:34 pm
ಕೆಂಪುಕೋಟೆಯಲ್ಲಿ ಸತತ 12ನೇ ಬಾರಿಗೆ ಸ್ವಾತಂತ್ರ್ಯೋತ್...
15-08-25 08:46 pm
17-08-25 11:06 pm
Mangalore Correspondent
Mangalore Rain, School Holiday: ಚಂಡಮಾರುತಕ್ಕೆ...
17-08-25 10:50 pm
Mangalore, Thokottu, Police: ತೊಕ್ಕೊಟ್ಟು ಮೊಸರು...
17-08-25 05:26 pm
Mangalore, Talapady Toll Plaza Fight: ಟೋಲ್ ತಪ...
17-08-25 04:13 pm
Landslide at Shiradi Ghat: ಭಾರೀ ಮಳೆಗೆ ಶಿರಾಡಿ...
16-08-25 11:11 pm
17-08-25 10:07 pm
Mangalore Correspondent
Mangalore Police, Drugs, Arrest: ಗಾಂಜಾ ಸೇವನೆ...
16-08-25 10:49 pm
Bengaluru Woman Hurls Abuses at Traffic Cops:...
16-08-25 07:06 pm
ಉತ್ತರ ಪ್ರದೇಶದಲ್ಲಿ ಮತ್ತೊಂದು ಮತಾಂತರ ಜಾಲ ; ಹಿಂದು...
16-08-25 11:25 am
Gold Robbery, Mangalore, Kerala: ಕೇರಳದ ಚಿನ್ನದ...
16-08-25 10:20 am