ಬ್ರೇಕಿಂಗ್ ನ್ಯೂಸ್
22-04-21 05:27 pm Mangalore Correspondent ಕ್ರೈಂ
ಮಂಗಳೂರು, ಎ.22: ಕೇರಳದಲ್ಲಿ ನಾಯಿಯನ್ನು ದರ ದರನೆ ಎಳ್ಕೊಂಡು ಹೋಗಿದ್ದು ದೇಶಾದ್ಯಂತ ದೊಡ್ಡ ಸುದ್ದಿಯಾಗಿತ್ತು. ಅದರ ಬಗ್ಗೆ ಮಾನವೀಯತೆ ಇಲ್ಲದವರು ಎಂಬ ಆಕ್ರೋಶವೂ ಕೇಳಿಬಂದಿತ್ತು. ಆದರೆ, ಈಗ ಅಂಥದ್ದೇ ಘಟನೆ ಬುದ್ಧಿವಂತರ ಜಿಲ್ಲೆ ಮಂಗಳೂರಿನಲ್ಲೂ ನಡೆದಿದೆ. ನಾಯಿಯನ್ನು ಹಗ್ಗದಲ್ಲಿ ಕಟ್ಟಿ ಬೈಕಿನಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಎಳ್ಕೊಂಡು ಹೋಗುವ ಘಟನೆಯ ವಿಡಿಯೋ ವೈರಲ್ ಆಗಿದ್ದು, ಘಟನೆಯ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದೆ.
ಸುರತ್ಕಲ್ ಬಳಿಯ ಎನ್ಐಟಿಕೆ ಸಮೀಪದ ರಾಷ್ಟ್ರೀಯ ಹೆದ್ದಾರಿಯಲ್ಲಿ ಘಟನೆ ನಡೆದಿದೆ ಎನ್ನಲಾಗುತ್ತಿದ್ದು, ವಿಡಿಯೋ ನೋಡಿದರೆ ಅಲ್ಲಿನ ಮೇಲ್ಸೇತುವೆಯಲ್ಲಿ ವಿಡಿಯೋ ಅಂತ್ಯವಾಗುತ್ತದೆ. ಬೈಕಿಗೆ ನಾಯಿಯನ್ನು ಕಟ್ಟಿದ್ದು, ಬೈಕಿನಲ್ಲಿ ಇಬ್ಬರು ಮಧ್ಯ ವಯಸ್ಕರು ಕುಳಿತಿದ್ದಾರೆ. ಇದನ್ನು ಇನ್ಯಾರೋ ಬೇರೊಂದು ಬೈಕಿನಲ್ಲಿದ್ದವರು ಮೊಬೈಲಿನಲ್ಲಿ ವಿಡಿಯೋ ಮಾಡಿದ್ದಾರೆ.

ಎಪ್ರಿಲ್ 15ರಂದು ರಾತ್ರಿ 8.30ರ ಸುಮಾರಿಗೆ ಘಟನೆ ನಡೆದಿದೆ ಎನ್ನಲಾಗುತ್ತಿದೆ. ವಿಡಿಯೋ ಈಗ ಭಾರೀ ಷೇರ್ ಆಗಿದ್ದು ಮನುಷ್ಯತ್ವ ಇಲ್ಲದೆ ವರ್ತಿಸಿದವರನ್ನು ಬಂಧಿಸುವಂತೆ ಒತ್ತಾಯ ಕೇಳಿಬಂದಿದೆ. ಮಂಗಳೂರಿನ ಪೊಲೀಸರು ಇನ್ನೂ ಇದರ ಬಗ್ಗೆ ಎಚ್ಚತ್ತುಕೊಂಡಿಲ್ಲ.
ಕೇರಳದ ಮಲ್ಲಪ್ಪುರಂ ಜಿಲ್ಲೆಯ ಎಡಕ್ಕರ ಎಂಬಲ್ಲಿ ಇದೇ ಎಪ್ರಿಲ್ 15ರಂದು ಇದೇ ರೀತಿ ನಾಯಿಯನ್ನು ಒಬ್ಬಾತ ಬೈಕಿಗೆ ಕಟ್ಟಿ ಎಳ್ಕೊಂಡು ಹೋದ ಘಟನೆ ನಡೆದಿತ್ತು. ವಿಡಿಯೋ ಬಗ್ಗೆ ಭಾರೀ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ಆರೋಪಿಯನ್ನು ಪೊಲೀಸರು ಬಂಧಿಸಿದ್ದರು. ಕ್ಸೇವಿಯರ್ ಎನ್ನುವ 53 ವರ್ಷದ ಆರೋಪಿ, ಆತನ ಚಪ್ಪಲಿಯನ್ನು ಕಚ್ಚಿ ತುಂಡರಿಸಿದ್ದ ಕೋಪದಲ್ಲಿ ಮನೆಯಲ್ಲಿದ್ದ ನಾಯಿಯನ್ನು ರಸ್ತೆಯಲ್ಲಿ ಎಳ್ಕೊಂಡು ಹೋಗಿದ್ದ.
A pet dog was tied to a two-wheeler and dragged along a road at NITK Surathkal in Mangalore. The incident took place on April 15th, 2021. A video of the incident has gone viral.
13-12-25 10:47 pm
HK News Desk
ಕುರ್ಚಿ ಗುದ್ದಾಟ ; ಪರಮೇಶ್ವರ್ ಸಿಎಂ ಆಗಲೆಂದು ಹಾರೈಸ...
13-12-25 08:38 pm
BJP MLA Subhash Guttedar: ಅಳಂದ ಮತಗಳವು ಪ್ರಕರಣ...
13-12-25 04:00 pm
Pet Parrot, Bangalore Youth Death: 2 ಲಕ್ಷ ರೂ....
12-12-25 08:47 pm
Yatnal, Dk Shivakumar, Vijayendra: ಡಿಕೆ ಸಿಎಂ,...
12-12-25 07:47 pm
13-12-25 08:34 pm
HK News Desk
ಕಾರ್ತಿಗೈ ದೀಪೋತ್ಸವ ವಿವಾದ ; ಮಸೀದಿಯವರೇ ಆಕ್ಷೇಪಿಸಿ...
12-12-25 11:00 pm
ಮೋದಿ ಉತ್ತರಾಧಿಕಾರಿ ಯಾರು ? ಆರೆಸ್ಸೆಸ್ ನಿರ್ಧರಿಸುತ...
11-12-25 04:24 pm
ಮಂಗಳೂರು ಏರ್ಪೋರ್ಟ್ಗೆ ವಿದೇಶಿ ನೇರ ವಿಮಾನ ವ್ಯವಸ್...
11-12-25 02:09 pm
ತಮಿಳುನಾಡಿನಲ್ಲಿ ಕಾರ್ತಿಗೈ ದೀಪಕ್ಕೆ ಹೈಕೋರ್ಟ್ ಅನುಮ...
10-12-25 11:13 pm
13-12-25 11:02 pm
Mangalore Correspondent
ಕೆಂಜಾರು ಬಳಿ ಗೋವುಗಳನ್ನು ಕಡಿದು ಹತ್ಯೆ ; ಪೊದೆಯಲ್ಲ...
13-12-25 04:36 pm
ಸತತ ನಾಲ್ಕು ಗಂಟೆ ಸ್ಕೇಟಿಂಗ್ ನಲ್ಲಿ ಶಾಸ್ತ್ರೀಯ ನೃತ...
12-12-25 10:28 pm
ದೈವ ನರ್ತನದ ಬಗ್ಗೆ ನಮಗೆ ಸಂಶಯಗಳಿಲ್ಲ, ಗ್ರಾಮ ದೈವಕ್...
12-12-25 07:32 pm
ಆಯುಷ್ ಇಲಾಖೆಯಲ್ಲಿ ಅವಧಿ ಮೀರಿದ ಔಷಧ ಪೂರೈಕೆ ; ಅಧಿಕ...
12-12-25 02:02 pm
13-12-25 12:51 pm
HK News Desk
ಹಣ್ಣಿನ ವ್ಯಾಪಾರಿಯನ್ನು ಅಡ್ಡಗಟ್ಟಿ 19 ಸಾವಿರ ನಗದು...
12-12-25 01:58 pm
Hassan Crime, Murder: ಸ್ನೇಹಿತನನ್ನು ಪಾರ್ಟಿಗೆ ಕ...
11-12-25 09:53 pm
Bangalore Crime, Blackmail, Suicide: ಬೆತ್ತಲೆ...
11-12-25 07:49 pm
Imprisonment in Malpe Case: ಮಲ್ಪೆಯಲ್ಲಿ ನೆಲೆಸಿ...
10-12-25 10:14 pm