ಬ್ರೇಕಿಂಗ್ ನ್ಯೂಸ್
12-04-21 03:08 pm Mangalore Correspondent ಕ್ರೈಂ
ಮಂಗಳೂರು, ಎ.12: ಹಣಕಾಸು ಸೆಟ್ಲ್ ಮೆಂಟ್, ದರೋಡೆ, ಕೊಲೆ, ಕಿಡ್ನಾಪ್ ಹೀಗೆ ವಿವಿಧ ರೀತಿಯ ಅಪರಾಧ ಕೃತ್ಯಗಳಿಗಾಗಿಯೇ ಗ್ಯಾಂಗ್ ಕಟ್ಟಿಕೊಂಡು ವ್ಯವಸ್ಥಿತವಾಗಿ ಸಂಚು ರೂಪಿಸಿ, ಹಣ ಪೀಕಿಸಿಕೊಂಡು ಜಾಲಿ ಮಾಡುತ್ತಿದ್ದ ಕುಖ್ಯಾತ ದರೋಡೆ ಕಂ ಕಿಡ್ನಾಪ್ ಗ್ಯಾಂಗ್ ಒಂದನ್ನು ಮಂಗಳೂರು ಪೊಲೀಸರು ಸೆರೆಹಿಡಿದಿದ್ದಾರೆ.
ನೈಟ್ ಕರ್ಫ್ಯೂ ಹಿನ್ನೆಲೆಯಲ್ಲಿ ರಾತ್ರಿ ವೇಳೆ ಕಂಕನಾಡಿ ಗ್ರಾಮಾಂತರ ಠಾಣೆ ಪೊಲೀಸರು ಗಸ್ತು ನಡೆಸುತ್ತಿದ್ದಾಗ ಇನ್ನೋವಾ ಕಾರಿನಲ್ಲಿ ಹೆದ್ದಾರಿ ದರೋಡೆಗೆ ಹೊಂಚು ಹಾಕಿದ್ದಾಗ ಎಂಟು ಮಂದಿಯ ತಂಡ ಸಿಕ್ಕಿಬಿದ್ದಿದ್ದಾರೆ. ಕಂಕನಾಡಿ ಗ್ರಾಮಾಂತರ ಠಾಣೆ ವ್ಯಾಪ್ತಿಯ ಉಲಾಯಿಬೆಟ್ಟು ಗ್ರಾಮದ ಪರಾರಿ ಎಂಬಲ್ಲಿ ನಿನ್ನೆ ರಾತ್ರಿಯ ಮುಂಜಾವಿನ ವೇಳೆಗೆ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ. ಇನೋವಾ ಕಾರನ್ನು ರಸ್ತೆ ಬದಿ ಪಾರ್ಕ್ ಮಾಡಿದ್ದಲ್ಲದೆ, ಮಾರಕಾಯುಧಗಳನ್ನು ವಾಹನದಲ್ಲಿಟ್ಟು ರಸ್ತೆಯಲ್ಲಿ ಬರುವ ವಾಹನಗಳನ್ನು ಅಡ್ಡಗಟ್ಟಿ ದರೋಡೆ ನಡೆಸಲು ಹೊಂಚು ಹಾಕಿದ್ದರು. ಈ ವೇಳೆ, ಕಾರಿನಲ್ಲಿದ್ದ ಎಂಟು ಮಂದಿಯನ್ನು ಪೊಲೀಸರು ಬಂಧಿಸಿದ್ದಾಗಿ ಮಂಗಳೂರು ಪೊಲೀಸ್ ಕಮಿಷನರ್ ಶಶಿಕುಮಾರ್ ಮಾಹಿತಿ ನೀಡಿದ್ದಾರೆ.
ಮಾರ್ನಮಿಕಟ್ಟೆ ನಿವಾಸಿ ತೌಸಿರ್ ಅಲಿಯಾಸ್ ಪತ್ತೊಂಜಿ ತೌಸಿರ್ (28), ಫರಂಗಿಪೇಟೆಯ ಅರ್ಕುಳ ನಿವಾಸಿ ಮಹಮ್ಮದ್ ಅರಾಫತ್ (29), ಅಮ್ಮೆಮಾರ್ ನಿವಾಸಿ ತಸ್ಲಿಂ(27), ತುಂಬೆ ನಿವಾಸಿ ನಾಸೀರ್ ಹುಸೇನ್ (29), ಪುದು ನಿವಾಸಿ ಮಹಮ್ಮದ್ ರಫಳೀಕ್ (37), ಮೊಹಮ್ಮದ್ ಸಫ್ವಾನ್ (25), ಮೊಹಮ್ಮದ್ ಜೈನುದ್ದೀನ್ (24), ಮೊಹಮ್ಮದ್ ಉನೈಜ್ (26) ಬಂಧಿತರು. ಆರೋಪಿಗಳ ಬಳಿಯಿಂದ ಎರಡು ತಲವಾರು, ಚೂರಿ ಎರಡು, ಡ್ರ್ಯಾಗನ್ ಒಂದು, ಮೊಬೈಲ್ ಫೋನ್ ಗಳು ಎಂಟು, ಮಂಕಿ ಕ್ಯಾಪ್ 5, ಮೆಣಸಿನ ಹುಡಿ 3 ಪ್ಯಾಕೆಟ್ ಮತ್ತು ಇನ್ನೋವಾ ಕಾರು ಸಹಿತ ಒಟ್ಟು 10.89 ಲಕ್ಷ ಮೌಲ್ಯದ ಸೊತ್ತನ್ನು ವಶಕ್ಕೆ ಪಡೆದಿದ್ದಾರೆ.
ಟಿಬಿ ಗ್ಯಾಂಗ್ ಕಟ್ಟಿದ್ದ ಖದೀಮರು
ತೌಸಿರ್ ಮತ್ತು ಆತನ ಸ್ನೇಹಿತ ಬಾಸಿತ್ ಈ ಗ್ಯಾಂಗಿನ ರೂವಾರಿಗಳು. ಇವರ ಹೆಸರಿನ ಆರಂಭದ ಅಕ್ಷರದ T B (Thouseer & Bathish) ಹೆಸರಲ್ಲಿ ವಾಟ್ಸಪ್ ಗ್ರೂಪ್ ಮಾಡಿಕೊಂಡಿದ್ದು ಇದರಲ್ಲಿ ತನ್ನ ಸಹಚರರನ್ನು ಸೇರಿಸಿಕೊಂಡು ಹಣಕಾಸಿನ ಸೆಟ್ಲ್ ಮೆಂಟ್ ವ್ಯವಹಾರವನ್ನು ಮಾಡುತ್ತಿದ್ದರು. ಅದಕ್ಕಾಗಿ ಮಂಗಳೂರು ಮೂಲದ ಮುಸ್ಲಿಮ್ ವ್ಯಕ್ತಿಗಳ ಹಣಕಾಸು ವ್ಯವಹಾರದ ಸೆಟ್ಲ್ ಮೆಂಟನ್ನು ತೌಸಿರ್ ತನ್ನ ಸಹಚರರ ಮೂಲಕ ಮಾಡಿಕೊಳ್ಳುತ್ತಿದ್ದ. ತೌಸಿರ್ ಮತ್ತು ಸಹಚರರು ಮಂಗಳೂರು ಆಸುಪಾಸಿನಲ್ಲಿದ್ದರೆ, ಬಾಸಿತ್ ವಿದೇಶದ ಸೌದಿ ಅರೇಬಿಯಾದಲ್ಲಿದ್ದುಕೊಂಡು ಈ ಕೆಲಸ ಮಾಡುತ್ತಿದ್ದ.
ವಿದೇಶದಿಂದಲೇ ಧಮ್ಕಿ ಹಾಕುತ್ತಿದ್ದ ಬಾತಿಶ್
ಮಂಗಳೂರಿನ ಬೋಳಾರ ಮೂಲದ ಬಾತಿಶ್ ಅಲಿಯಾಸ್ ಬಾಸಿತ್ ಎರಡು ವರ್ಷದ ಹಿಂದೆ ವಿದೇಶಕ್ಕೆ ಪರಾರಿಯಾಗಿದ್ದಾನೆ ಎನ್ನಲಾಗುತ್ತಿದೆ. ಮಂಗಳೂರಿನಲ್ಲಿ ವಿವಿಧ ಪ್ರಕರಣಗಳಲ್ಲಿ ಸಿಕ್ಕಿಬಿದ್ದ ಬಳಿಕ ನಕಲಿ ಪಾಸ್ಪೋರ್ಟ್ ಮಾಡಿಸಿ, ವಿದೇಶಕ್ಕೆ ಪರಾರಿಯಾಗಿದ್ದ. ತನ್ನ ಗ್ಯಾಂಗನ್ನು ಆತನೇ ನಿರ್ವಹಿಸಿಕೊಂಡಿದ್ದು, ಹಣಕ್ಕಾಗಿ ವಿವಿಧ ವ್ಯಕ್ತಿಗಳಿಗೆ ಬಾಸಿತ್ ವಿದೇಶದಿಂದಲೇ ಕರೆ ಮಾಡಿ ಬೆದರಿಕೆ ಹಾಕುತ್ತಿದ್ದ. ಹಣದ ಸೆಟ್ಲ್ ಮೆಂಟ್ ಮಾಡಿಲ್ಲ ಅಂದ್ರೆ ಕೊಲ್ಲುವ ಬೆದರಿಕೆ ಹಾಕುತ್ತಿದ್ದ. ತೌಸಿರ್ ಮೂಲಕ ಮಂಗಳೂರು, ಬೆಂಗಳೂರಿನಲ್ಲಿ ಈ ಕಾರ್ಯಾಚರಣೆ ಮಾಡುತ್ತಿದ್ದರು.
ಝಾಯಿದ್ ಕಿಡ್ನಾಪ್ ಮಾಡಿ ಕೊಲೆಗೆ ಸಂಚು
ಬಂಟ್ವಾಳ ತಾಲೂಕಿನ ಮೆಲ್ಕಾರ್ ಮೂಲದ ಝಿಯಾದ್ ಬೆಂಗಳೂರಿನಲ್ಲಿದ್ದು ಆತನ ಕೊಲೆಗೆ ತಂಡ ಸಂಚು ರೂಪಿಸಿತ್ತು. ತೌಸಿರ್ ಗ್ಯಾಂಗಿನ ಸಫ್ವಾನ್ ನಿಂದ 12 ಲಕ್ಷ ರೂಪಾಯಿ ಹಣವನ್ನು ಪಡೆದಿದ್ದ ಝಿಯಾದ್, ವಾಪಸ್ ನೀಡಿರಲಿಲ್ಲ. ಈ ಬಗ್ಗೆ ಬಾಸಿತ್ ಸೂಚನೆಯಂತೆ, ಝಿಯಾದ್ ನನ್ನು ಅಪಹರಿಸಿ ತರಲು ಗ್ಯಾಂಗ್ ಸದಸ್ಯರು ಬೆಂಗಳೂರಿಗೆ ತೆರಳಿದ್ದರು. ಬೆಂಗಳೂರಿನಲ್ಲಿ ಹುಡುಕಾಡಿ, ಝಿಯಾದ್ ಸಿಗದೇ ಇದ್ದಾಗ ಮರಳಿದ್ದರು. ಮಂಗಳೂರಿಗೆ ಮರಳಿದ ಬಳಿಕ ಹಣಕ್ಕಾಗಿ ಹೆದ್ದಾರಿ ದರೋಡೆಗೆ ಸ್ಕೆಚ್ ಹಾಕಿದ್ದು ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ.
ಫರಂಗಿಪೇಟೆಯಲ್ಲಿ ಡಬಲ್ ಮರ್ಡರ್ ಆರೋಪಿ
2017ರಲ್ಲಿ ಫರಂಗಿಪೇಟೆಯಲ್ಲಿ ಝಿಯಾ ಮತ್ತು ಫಯಾಸ್ ಎಂಬಿಬ್ಬರ ಡಬಲ್ ಮರ್ಡರ್ ಪ್ರಕರಣದಲ್ಲಿ ಇದೇ ತಂಡ ಕೈಯಾಡಿಸಿತ್ತು. ಈಗ ಬಂಧಿತನಾಗಿರುವ ತಸ್ಲಿಂ ಡಬಲ್ ಮರ್ಡರ್ ಪ್ರಕರಣದಲ್ಲಿ ಆರೋಪಿಯಾಗಿದ್ದು, ಇದಲ್ಲದೆ ಮಂಗಳೂರು, ಬೆಳ್ತಂಗಡಿ, ಮೂಡಿಬಿದಿರೆ, ಬೆಂಗಳೂರು ಸೇರಿ ಹಲವು ಠಾಣೆಗಳಲ್ಲಿ 12 ಪ್ರಕರಣ ಎದುರಿಸುತ್ತಿದ್ದಾನೆ. ತೌಸಿರ್ ಮೇಲೆ ಕೊಲೆ, ಕೊಲೆಯತ್ನ, ದರೋಡೆ ಸೇರಿ ಆರು ಪ್ರಕರಣಗಳಿವೆ. 2020ರಲ್ಲಿ ಧರ್ಮಸ್ಥಳದಲ್ಲಿ ನಡೆದ ದರೋಡೆ ಯತ್ನ ಪ್ರಕರಣದಲ್ಲಿ ತೌಸಿರ್ ಮತ್ತು ತಸ್ಲಿಂ ಇಬ್ಬರೂ ಭಾಗಿಯಾಗಿದ್ದರು. ಈ ವೇಳೆ, ಮನೆಯಲ್ಲಿದ್ದ ಸಾಕು ನಾಯಿಯನ್ನು ತಲವಾರಿನಿಂದ ಕಡಿದು ಕೊಂದು ಹಾಕಿದ್ದ ಬಗ್ಗೆ ಪ್ರಕರಣ ದಾಖಲಾಗಿತ್ತು.
Video:
The city crime branch (CCB) police have succeeded in arresting eight people of TB gang who were involved in highway robbery, Daicoty and Murder in Mangalore.
05-10-25 09:41 pm
HK News Desk
ನಾಯಿ ದಾಳಿಗೆ ಸ್ಥಳೀಯರ ಆಕ್ರೋಶ ; ಬೀದಿ ನಾಯಿಗಳ ಮೇಲೆ...
05-10-25 08:08 pm
ಲಿಂಗಾಯತರನ್ನು ಪ್ರತ್ಯೇಕಿಸುವುದು ಸಮಾಜ ವಿರೋಧಿ ಕೆಲಸ...
05-10-25 07:57 pm
ಬಿಹಾರ ಚುನಾವಣೆ ಬಳಿಕ ರಾಜ್ಯದಲ್ಲಿ ರಾಜಕೀಯ ಕ್ರಾಂತಿ...
05-10-25 07:38 pm
ಜಾತಿ ಗಣತಿ ತೆರಳಿದ್ದ ಶಿಕ್ಷಕಿ ಮತ್ತು ಪತಿಗೆ ಅಟ್ಟಾಡ...
05-10-25 07:18 pm
05-10-25 11:07 pm
HK News Desk
ಡೆಡ್ಲಿ ಸಿರಪ್ 'ಕೋಲ್ಡ್ರಿಫ್ 'ಶಿಫಾರಸು ಮಾಡಿದ್ದ...
05-10-25 10:38 pm
Coldrif syrup: ಸಿರಪ್ ಸೇವಿಸಿ 11 ಮಕ್ಕಳು ಸಾವು ;...
04-10-25 04:45 pm
Rashmika Mandanna, Vijay Deverakonda Marriage...
04-10-25 03:11 pm
ಕಾಂತಾರ ಬ್ಲಾಕ್ ಬಸ್ಟರ್, ನಾವೆಲ್ಲ ಚಿತ್ರೋದ್ಯಮಿಗಳು...
04-10-25 01:11 pm
06-10-25 02:58 pm
Mangalore Correspondent
Ullal, UT Khader, Sharadotsava Clash: ಉಳ್ಳಾಲ...
04-10-25 10:29 pm
103ನೇ ವರ್ಷದ ರಥಬೀದಿ 'ಮಂಗಳೂರು ಶಾರದಾ ಮಹೋತ್ಸವ' ಸಂ...
03-10-25 11:07 pm
Puttur Krishna Rao, Baby, Pratibha Kulai: ಕೃಷ...
03-10-25 05:59 pm
Ullal Dasara Issue, Mangalore 2025: ದಸರಾ ಶೋಭಾ...
03-10-25 02:11 pm
05-10-25 03:22 pm
Mangalore Correspondent
Shivamogga Murder, Mother: ಶಿವಮೊಗ್ಗ ; ಮಗಳನ್ನು...
04-10-25 02:57 pm
Karkala Murder, Crime: ಕಾರ್ಕಳ ; ಪ್ರೀತಿಸಿದ ಯುವ...
03-10-25 11:28 pm
ಸುಧಾಮೂರ್ತಿ, ನಿರ್ಮಲಾ ಸೀತಾರಾಮನ್ ಹೆಸರಲ್ಲಿ ಎಐ ವಿಡ...
01-10-25 02:39 pm
Ullal Gold Robbery, Mangalore, CCB police: ಜು...
29-09-25 01:24 pm