ಬ್ರೇಕಿಂಗ್ ನ್ಯೂಸ್
29-11-25 10:57 pm Mangalore Correspondent ಕ್ರೈಂ
ಮಂಗಳೂರು, ನ.29 : ತಾನು ಹೊಸ ಕಚೇರಿ ತೆರೆಯುತ್ತಿದ್ದು ಉದ್ಘಾಟನೆ ದಿನ ಬರುವ ಅತಿಥಿಗಳಿಗೆ ಚಿನ್ನದ ಬಿಸ್ಕೆಟ್ ಗಿಫ್ಟ್ ನೀಡಲಿದೆಯೆಂದು ಹೇಳಿ ನಗರದ ಆಭರಣ ಜುವೆಲ್ಲರ್ಸ್ ನಿಂದ ತಲಾ ಹತ್ತು ಗ್ರಾಮಿನ 24 ಚಿನ್ನದ ಬಿಸ್ಕೆಟ್ ಗಳನ್ನು ತರಿಸಿಕೊಂಡು ಹಣ ಕೊಡದೆ ವಂಚಿಸಿದ್ದ ಆರೋಪಿಯನ್ನು ಉರ್ವಾ ಠಾಣೆ ಪೊಲೀಸರು ತಮಿಳುನಾಡಿನಲ್ಲಿ ಬಂಧಿಸಿದ್ದಾರೆ.
ಆರೋಪಿಯನ್ನು ಕೊಯಂಬತ್ತೂರಿನ ಸಿಂಗನಲ್ಲೂರು ನಿವಾಸಿ ಪುಗಲ್ ವಾಸನ್ @ ಪುಗಲ್ ಹಸನ್ @ ಅರುಣ್ (50) ಎಂದು ಗುರುತಿಸಲಾಗಿದೆ. ಆರೋಪಿ ನ.21 ರಂದು ಸಂಜೆ ಉರ್ವಾಸ್ಟೋರ್, ಚಿಲಿಂಬಿ, ಗುಜ್ಜಾಡಿ ಚೇಂಬರ್ಸ್ ನಲ್ಲಿರುವ ಸ್ವರ್ಣ ಜುವೆಲರ್ಸ್ ಅಂಗಡಿಗೆ ಬಂದು ಅರುಣ್ ಎಂದು ಪರಿಚಯ ಮಾಡಿಕೊಂಡಿದ್ದು ಮರುದಿನ ಬಿಜೈ ಕಾಪಿಕಾಡ್ ನಲ್ಲಿರುವ ಅಜಂತಾ ಬಿಸಿನೆಸ್ ಸೆಂಟರ್ ನಲ್ಲಿ ತಾನು ಹೊಸ ಕಚೇರಿ ತೆರೆಯಲ್ಲಿದ್ದೇನೆ. ಅಲ್ಲಿಗೆ ಬರುವ ಗೆಸ್ಟ್ ಗಳಿಗೆ ಚಿನ್ನದ ಬಿಸ್ಕೆಟ್ ನೀಡಲು ಇದೆ, ಹಾಗಾಗಿ ತಲಾ 10 ಗ್ರಾಂ ತೂಕದ 24 ಚಿನ್ನದ ಬಿಸ್ಕೆಟ್ ಗಳು ಬೇಕು ಎಂದು ಹೇಳಿದ್ದ.
ಬಳಿಕ ಬಿಸ್ಕೆಟ್ ಗಳ ಡಿಸೈನ್ ಸೆಲೆಕ್ಟ್ ಮಾಡಿ ಮರುದಿನ ನ.22ರಂದು ಮಧ್ಯಾಹ್ನ 12 ಗಂಟೆಗೆ ಬಿಜೈ ಕಾಪಿಕಾಡ್ ನಲ್ಲಿರುವ ಅಜಂತಾ ಬಿಸಿನೆಸ್ ಸೆಂಟರ್ ನಲ್ಲಿರುವ ತನ್ನ ಕಚೇರಿಗೆ ತಂದುಕೊಡಲು ತಿಳಿಸಿದ್ದು ಚಿನ್ನ ದೊರೆತ ಕೂಡಲೇ ಚಿನ್ನದ ಹಣವನ್ನು RTGS ಮಾಡುತ್ತೇನೆಂದು ಹೇಳಿದ್ದ. ಇದರಂತೆ, ಸ್ವರ್ಣ ಜ್ಯುವೆಲರ್ಸ್ ಸಿಬ್ಬಂದಿ ಚಿನ್ನದ ಬಿಸ್ಕೆಟ್ ಗಳನ್ನು ರೆಡಿ ಮಾಡಿ, ನ.22ರಂದು ಕೊಡಲು ಹೋಗಿದ್ದು ಆರೋಪಿ ಅಜಂತಾ ಬಿಸಿನೆಸ್ ಸೆಂಟರಿನ 5ನೇ ಮಹಡಿಯಲ್ಲಿರುವ ಕೆಫೆಟೇರಿಯಾಕ್ಕೆ ಕರೆದುಕೊಂಡು ಹೋಗಿ ಅಲ್ಲಿ ತಲಾ 10 ಗ್ರಾಂ ತೂಕದ 24 ಕ್ಯಾರೆಟಿನ 24 ಚಿನ್ನದ ಬಿಸ್ಕೆಟ್ ಗಳನ್ನು ಪಡೆದುಕೊಂಡು ತಾನು 3ನೇ ಮಹಡಿಯಲ್ಲಿರುವ ಆಫೀಸ್ ನಲ್ಲಿ RTGS ಮಾಡುತ್ತೇನೆಂದು ತಿಳಿಸಿ ಹಣ ಪಾವತಿ ಮಾಡದೇ ವಂಚಿಸಿ ಪರಾರಿಯಾಗಿದ್ದ.
ಸುಮಾರು ರೂ.31 ಲಕ್ಷ ಮೌಲ್ಯದ ಚಿನ್ನವನ್ನು ಪಡೆದು ವಂಚಿಸಿದ ಬಗ್ಗೆ ಸ್ವರ್ಣ ಜ್ಯುವೆಲರ್ಸ್ ಮಾಲಕ ಅಜಯ್ ರಾಮದಾಸ ನಾಯಕ್ ನೀಡಿದ ದೂರಿನಂತೆ ಉರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣದಲ್ಲಿ ಭಾಗಿಯಾದ ಅರುಣ್ ಎಂಬಾತನ ಪತ್ತೆ ಬಗ್ಗೆ ಉರ್ವಾ ಪೊಲೀಸ್ ಠಾಣೆಯ ಅಧಿಕಾರಿ, ಸಿಬ್ಬಂದಿಗಳು ತಾಂತ್ರಿಕವಾಗಿ ಮಾಹಿತಿಯನ್ನು ಕಲೆಹಾಕಿ ಆರೋಪಿ ತಮಿಳುನಾಡಿನ ಕೊಯಂಬತ್ತೂರಿನಲ್ಲಿರುವ ಮಾಹಿತಿ ಪಡೆದು ಬೆನ್ನತ್ತಿದ್ದರು. ನ.26ಂದು ಕೊಯಂಬತ್ತೂರು ಜಿಲ್ಲೆಯ ಪುಲಿಯಕುಲಂ ಎಂಬಲ್ಲಿ ಆರೋಪಿಯನ್ನು ದಸ್ತಗಿರಿ ಮಾಡಿರುತ್ತಾರೆ.
ಆರೋಪಿ ಮೇಲೆ ತನಿಖೆ ನಡೆಸಿದಾಗ, ನಕಲಿ ಹೆಸರುಗಳನ್ನು ಹೇಳಿಕೊಂಡು ಹಲವು ಕಡೆ ವಂಚಿಸಿರುವುದು ಪತ್ತೆಯಾಗಿದೆ. ಆರೋಪಿಯಿಂದ ಪ್ರಕರಣಕ್ಕೆ ಸಂಬಂಧಿಸಿ ರೂ.31,04,000/- ಮೌಲ್ಯದ ಒಟ್ಟು 240 ಗ್ರಾಂ ತೂಕದ 24 ಕ್ಯಾರೆಟ್ ಶುದ್ದತೆಯ ಚಿನ್ನದ ಬಿಸ್ಕಿಟ್ ಗಳನ್ನು ಸ್ವಾಧೀನಪಡಿಸಲಾಗಿದೆ. ಆರೋಪಿ ಈ ಹಿಂದೆ ಮಹಾರಾಷ್ಟ್ರದ ಮುಂಬೈ, ತೆಲಂಗಾಣದ ಹೈದರಾಬಾದ್, ತಮಿಳುನಾಡಿನ ಚಿತ್ತೋಡ್, ಆಂದ್ರಪ್ರದೇಶದ ತಿರುಪತಿಯಲ್ಲಿ ಇದೇ ತರ ವಂಚನೆ ಕೃತವನ್ನು ಎಸಗಿರುವುದು ಪತ್ತೆಯಾಗಿದೆ.
ಉರ್ವಾ ಪೊಲೀಸ್ ಠಾಣೆಯ ನಿರೀಕ್ಷಕರಾದ ಶ್ಯಾಮ್ ಸುಂದರ್ ಹೆಚ್.ಎಂ, ಪಿಎಸ್ಐ ಗುರಪ್ಪ ಕಾಂತಿ, ಪಿಎಸ್ಐ ಎಲ್.ಮಂಜುಳಾ, ಎಎಸ್ಐ ವಿನಯ್ ಕುಮಾರ್ ಮತ್ತು ಸಿಬ್ಬಂದಿಗಳಾದ ಅನಿಲ್, ಭಾಸ್ಕರ್, ಹರೀಶ್, ವೆಂಕಟೇಶ್, ಚಂದ್ರಹಾಸ, ಯೆಲ್ಲಾಲಿಂಗ ಕಾರ್ಯಾಚರಣೆ ನಡೆಸಿದ್ದಾರೆ.
A man who took 24 gold biscuits of 10 grams each from a city jewellery store claiming he needed them as gifts for guests at the inauguration of his new office — and then escaped without paying — has been arrested by Urwa Police from Tamil Nadu.
30-04-26 08:16 pm
HK News Staffer
ಬೆಂಗಳೂರು ಸೇರಿ 18 ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳ...
30-04-26 11:53 am
ಸದ್ಯಕ್ಕಿಲ್ಲ ಡಿಕೆಶಿಗೆ ಸಿಎಂ ಭಾಗ್ಯ ; ರಾಜ್ಯಸಭೆ- ಏ...
29-04-26 10:36 am
ನಾಯಕತ್ವ ಬದಲಾವಣೆ ಮಾತೇ ಇಲ್ಲ, ಮೇ 20ರೊಳಗೆ ಸಂಪುಟ ವ...
26-04-26 08:05 pm
ಅಧಿಕಾರಕ್ಕೆ ತಂದವರಿಗೆ ಕೆಳಗಿಳಿಸುವುದೂ ಗೊತ್ತಿದೆ, ಚ...
26-04-26 12:41 pm
29-04-26 11:18 pm
HK News Staffer
ಇದು ಫ್ರೆಂಡ್ಲಿ ಫೆಡರಲ್ ಅಸ್ಸಾಸಿನ್, ಟ್ರಂಪ್ ಅತ್ಯಾಚ...
27-04-26 02:48 pm
ಶ್ವೇತಭವನದ ಡಿನ್ನರ್ ಪಾರ್ಟಿಯಲ್ಲಿ ಗುಂಡಿನ ದಾಳಿ ; ಭ...
26-04-26 12:49 pm
ರಾಘವ್ ಚಡ್ಡಾ ಸೇರಿ ಏಳು ಆಪ್ ಸಂಸದರು ಬಿಜೆಪಿಗೆ ; ಮೇ...
25-04-26 03:54 pm
ರಾಘವ್ ಚಡ್ಡಾ ಸೇರಿ ಏಳು ಆಪ್ ಸಂಸದರು ಬಿಜೆಪಿಗೆ ; ಮೇ...
25-04-26 03:53 pm
29-04-26 11:05 pm
HK News Staffer
ತಾಲೂಕು ಆಸ್ಪತ್ರೆ ಖಾಸಗಿ ವಶಕ್ಕೆ ; ಆರೋಗ್ಯ ಸಚಿವರ ಉ...
28-04-26 09:18 pm
ASI Assault Case, Mangalore: ಎಎಸ್ಐ ಮೇಲೆ ಹಲ್ಲೆ...
28-04-26 01:35 pm
ನೂತನ ಮನೆಯ ಔತಣಕೂಟ ದಿನವೇ ಮೃತಪಟ್ಟ ಯಜಮಾನ ; ಬಂಟ್ವಾ...
28-04-26 01:26 pm
ಮಂಗಳೂರು- ಬೆಂಗಳೂರು ರೈಲಿನಲ್ಲಿ ಮಗುವಿಗೆ ಜನ್ಮವಿತ್ತ...
27-04-26 10:29 am
30-04-26 04:30 pm
HK News Staffer
ಪ್ರೀ ವೆಡ್ಡಿಂಗ್ ಶೂಟ್ ಗೆ ವಧುವನ್ನು ಕರೆತರಲು ಹೋಗುತ...
30-04-26 12:31 pm
ರಾಜ್ಯದಲ್ಲಿ ನಕಲಿ ಪಿಎಚ್ಡಿ ಬಾಂಬ್; 400ಕ್ಕೂ ಹೆಚ್ಚ...
30-04-26 10:45 am
ವಾಹನ ಪಾರ್ಕ್ ಮಾಡುವಾಗ ವಿದ್ಯುತ್ ವೈರ್ ಬಿದ್ದು 17...
30-04-26 10:14 am
ಗಾಂಜಾ ಪ್ರಕರಣದಲ್ಲಿ ಹಣ ಕೇಳಿದ್ದಕ್ಕೆ ಬಿಎಸ್ಸಿ ವಿದ...
29-04-26 11:10 pm