ಬ್ರೇಕಿಂಗ್ ನ್ಯೂಸ್
28-11-25 02:16 pm Bangalore Correspondent ಕ್ರೈಂ
ಬೆಂಗಳೂರು, ನ 28 : ನಿವೃತ್ತ ಡಿಜಿಪಿ ಓಂ ಪ್ರಕಾಶ್ ಹತ್ಯೆ ಪ್ರಕರಣ ಸಂಬಂಧ ನ್ಯಾಯಾಂಗ ಬಂಧನದಲ್ಲಿರುವ ಆರೋಪಿ ಪತ್ನಿ ಪಲ್ಲವಿ ಅವರು ಮಾನಸಿಕವಾದಿ ಸದೃಢವಾಗಿದ್ದು, ಈ ಬಗ್ಗೆ ನಿಮ್ಹಾನ್ಸ್ ವೈದ್ಯರು ವರದಿ ನೀಡಿದ್ದಾರೆ.
1981ರ ಬ್ಯಾಚ್‌ನ ಐಪಿಎಸ್ ಅಧಿಕಾರಿಯಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದ ಓಂ ಪ್ರಕಾಶ್ ಅವರನ್ನು ಕಳೆದ ವರ್ಷದ ಏಪ್ರಿಲ್ 20ರಂದು ಎಚ್‌ಎಸ್‌ಆರ್ ಲೇಔಟ್‌ನ ಅವರ ಮನೆಯಲ್ಲಿ ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಸಮಗ್ರ ತನಿಖೆಗಾಗಿ ಗೃಹ ಇಲಾಖೆ ಪ್ರಕರಣವನ್ನು ಸಿಐಡಿಗೆ ವರ್ಗಾಯಿಸಿತ್ತು. ಕೃತ್ಯ ಸಂಬಂಧ ಪಲ್ಲವಿಯನ್ನು ಪೊಲೀಸರು ಬಂಧಿಸಿದ್ದರು. ಈ ವೇಳೆ ಆಕೆ ಮಾನಸಿಕ ಅಸ್ವಸ್ಥೆ ಎಂದು ಹೇಳಲಾಗುತ್ತಿತ್ತು. ಹೀಗಾಗಿ ಪೊಲೀಸರು ನಿಮ್ಹಾನ್ಸ್‌ಗೆ ದಾಖಲಿಸಿದ್ದರು.
ಪಲ್ಲವಿ ಸುಮಾರು 14 ದಿನಗಳ ಕಾಲ ವೈದ್ಯರು ಕೌನ್ಸೆಲಿಂಗ್, ಬುದ್ದಿಮಟ್ಟ ಪರೀಕ್ಷೆ ಸೇರಿದಂತೆ ವಿವಿಧ ಪರೀಕ್ಷೆಗಳಿಗೆ ಒಳಪಡಿಸಿದ್ದರು. ಈ ವೇಳೆ ಪಲ್ಲವಿ ಮಾನಸಿಕವಾಗಿ ಸಡೃಢವಾಗಿರುವುದನ್ನು ಖಚಿತಪಡಿಸಿಕೊಂಡು ನ್ಯಾಯಾಲಯಕ್ಕೆ ವರದಿ ಸಲ್ಲಿಸಿದ್ದರು.
ಮತ್ತೊಂದೆಡೆ, ಪತಿಯ ಹತ್ಯೆ ಬಳಿಕ "I Have Killed Monster" ಎಂದು ಪಲ್ಲವಿ ವಾಯ್ಸ್ ನೋಟ್ ಕಳುಹಿಸಿದ್ದರು. ಈ ವಾಯ್ಸ್ ನೋಟ್ ಸಂಗ್ರಹಿಸಿ ಎಫ್ಎಸ್‌ಎಲ್‌ಗೆ ಕಳುಹಿಸಲಾಗಿತ್ತು. ವರದಿಯಲ್ಲಿ ವಾಯ್ಸ್ ನೋಟ್‌ನಲ್ಲಿ ಮಾತನಾಡಿರುವ ಧ್ವನಿ ಹಾಗೂ ಪಲ್ಲವಿ ಅವರ ಧ್ವನಿ ತಾಳೆಯಾಗಿರುವುದು ದೃಢಪಟ್ಟಿದೆ. ಪ್ರಕರಣಕ್ಕೆ ಇದು ಪ್ರಮುಖ ಸಾಕ್ಷ್ಯಾಧಾರವಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪ್ರಕರಣ ಸಂಬಂಧ ಇದೇ ವರ್ಷದ ಆಗಸ್ಟ್‌ನಲ್ಲಿ ಸಿಸಿಬಿ ಪೊಲೀಸರು ನಗರದ 1ನೇ ಎಸಿಎಂಎಂ ನ್ಯಾಯಾಲಯಕ್ಕೆ 1,150 ಪುಟಗಳ ಚಾರ್ಜ್‌ಶೀಟ್ ಸಲ್ಲಿಸಿದ್ದರು. ಈ ವರದಿಯಲ್ಲಿ ಪಲ್ಲವಿಯನ್ನು ಪ್ರಮುಖ ಆರೋಪಿಯನ್ನಾಗಿ ಮಾಡಲಾಗಿತ್ತು. ಆಸ್ತಿ ಹಾಗೂ ಕೌಟುಂಬಿಕ ಕಲಹಗಳಿಂದಾಗಿ ಪತ್ನಿಯೇ ಪತಿಯನ್ನು ಹತ್ಯೆ ಮಾಡಿರುವುದಾಗಿ ತನಿಖಾಧಿಕಾರಿಗಳು ವರದಿಯಲ್ಲಿ ಉಲ್ಲೇಖಿಸಿದ್ದರು.
ಕೃತ್ಯದಲ್ಲಿ ಓಂ ಪ್ರಕಾಶ್ ಮಗಳಾದ ತೃಪ್ತಿ ಪಾತ್ರ ಕಂಡುಬಂದಿಲ್ಲ. ಹೀಗಾಗಿ, ಆರೋಪಪಟ್ಟಿಯಲ್ಲಿ ಆಕೆಯ ಹೆಸರನ್ನು ಕೈ ಬಿಡಲಾಗಿತ್ತು.
ಊಟ ಮಾಡುವಾಗಲೇ ಹತ್ಯೆ:
ಐಪಿಎಸ್ ಅಧಿಕಾರಿಯಾಗಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಕಾರ್ಯನಿರ್ವಹಿಸುವಾಗ ಖರೀದಿಸಿದ್ದ ಜಮೀನಿನ ಕೆಲಭಾಗವನ್ನು ಸಹೋದರಿ ಹೆಸರಿಗೆ ನೋಂದಣಿಗೆ ಮಾಡಲು ಮುಂದಾಗಿದ್ದರು. ಇದನ್ನು ವಿರೋಧಿಸಿದ್ದ ಪಲ್ಲವಿ, ಇದೇ ವಿಚಾರವಾಗಿ ಜಗಳ ಮಾಡುತ್ತಿದ್ದರು. ಏ.20ರಂದು ಹೊರಗಿನಿಂದ ಮೀನೂಟ ತರಿಸಿಕೊಂಡು ಊಟ ಮಾಡುವಾಗಲೇ ನಡೆದ ಜಗಳದಲ್ಲಿ ಪತ್ನಿಯಿಂದಲೇ ಬರ್ಬರವಾಗಿ ಹತ್ಯೆಗೊಳಗಾಗಿದ್ದರು. ಚಾಕು ಹಾಗೂ ಸ್ಕ್ರೂ ಡ್ರೈವರ್‌ನಿಂದ ಇರಿತಕ್ಕೆ ಒಳಗಾದ ಪ್ರಕಾಶ್ ರಕ್ತ ಮಡುವಿನಲ್ಲಿ ಬಿದ್ದಿದ್ದರು. ಖಾರದಪುಡಿ ಎರಚಿ ಅವರ ಮೇಲೆ ಅಡುಗೆ ಎಣ್ಣೆ ಸುರಿಯಲಾಗಿತ್ತು. ದೇಹದ 10 ಕಡೆಗಳಲ್ಲಿ ಗಾಯವಾಗಿತ್ತು. ಕೊಲೆ ಸಂಬಂಧ ಪುತ್ರ ಕಾರ್ತಿಕೇಶ್ ನೀಡಿದ ದೂರಿನ ಮೇರೆಗೆ ಪತ್ನಿಯನ್ನು ಏ.21ರಂದು ಪೊಲೀಸರು ಬಂಧಿಸಿದ್ದರು.
NIMHANS doctors have confirmed that Pallavi, wife of retired DGP Om Prakash and the prime accused in his brutal murder, is mentally stable, dismissing earlier claims of psychological illness. The report, along with a voice-note match where Pallavi said “I have killed the monster,” has become key evidence in the case.
28-11-25 10:37 pm
Bangalore Correspondent
ಇಬ್ಬರೂ ಬಿಟ್ಕೊಡ್ತಾ ಇಲ್ಲ, 3ನೇ ಸೂತ್ರ ತಯಾರಾಗ್ತಾ ಇ...
28-11-25 10:33 pm
ಸಿದ್ದರಾಮಯ್ಯ ಕೃತಘ್ನ ವ್ಯಕ್ತಿ, ತನ್ನ ಬೆಳೆಸಿದವರನ್ನ...
28-11-25 09:31 pm
ಸಿದ್ದರಾಮಯ್ಯ ಸಂಕಲ್ಪ ಈಡೇರುತ್ತೆ, ಡಿಕೆ ಶಿವಕುಮಾರ್...
28-11-25 07:19 pm
Koppala News, Baby: ವಸತಿ ನಿಲಯದಲ್ಲೇ ಮಗುವಿಗೆ ಜನ...
27-11-25 10:23 pm
28-11-25 10:42 pm
HK News Desk
ಗೋವಾದಲ್ಲಿ ಜಗತ್ತಿನ ಅತಿ ಎತ್ತರದ ಶ್ರೀರಾಮನ ಮೂರ್ತಿ...
28-11-25 07:28 pm
ಪಾಕಿಸ್ತಾನ ಜೈಲಿನಲ್ಲಿ ಮಾಜಿ ಪ್ರಧಾನಿ ಇಮ್ರಾನ್ ಖಾನ್...
26-11-25 07:16 pm
ಅಯೋಧ್ಯೆಯಲ್ಲಿ ಹತ್ತಡಿ ಎತ್ತರದ ಬೃಹತ್ ಭಗವಾಧ್ವಜ ಅನಾ...
25-11-25 04:30 pm
ಚೆನ್ನೈ ; ಎರಡು ಖಾಸಗಿ ಬಸ್ಗಳ ನಡುವೆ ಅಪಘಾತ, 6 ಮಂದ...
24-11-25 10:04 pm
28-11-25 02:48 pm
Udupi Correspondent
Mangalore, Udupi, PM Narendra Modi, Krishna M...
28-11-25 11:29 am
ಪೊಲೀಸ್ ವಾರ್ಷಿಕ ಕ್ರೀಡಾಕೂಟ ; ನಾಗರಾಜ್ ಗೌಡ ಓಟದಲ್ಲ...
26-11-25 07:21 pm
ಬನ್ನಂಜೆಯಿಂದ ಕಲ್ಸಂಕ ಜಂಕ್ಷನ್ ವರೆಗೆ ಮೋದಿ ರೋಡ್ ಶ...
26-11-25 03:34 pm
ಪ್ರಧಾನಿ ಮೋದಿ ಆಗಮನದಿಂದ ಸಂಚಾರ ತೊಡಕು ; ನ.28ರಂದು...
25-11-25 10:51 pm
28-11-25 06:23 pm
HK News Desk
ಡಿಜಿಪಿ ಓಂ ಪ್ರಕಾಶ್ ಹತ್ಯೆ ಕೇಸ್ ; ಪ್ರಮುಖ ಆರೋಪಿ ಪ...
28-11-25 02:16 pm
9 ಕ್ಯಾರೆಟ್ ಚಿನ್ನ ಮಂಗಳೂರಿನ ಮಾರುಕಟ್ಟೆಗೆ ಲಗ್ಗೆ ಇ...
27-11-25 09:14 pm
ಹೊರ ಗುತ್ತಿಗೆ ಸಿಬಂದಿ ಸಂಬಳ ಪಾವತಿಗೆ 30 ಸಾವಿರ ಲಂಚ...
27-11-25 09:07 pm
ಧರ್ಮಸ್ಥಳದಲ್ಲಿ ಭಕ್ತರ ಬ್ಯಾಗ್ ನಿಂದ ಚಿನ್ನಾಭರಣ ಕಳವ...
26-11-25 10:43 pm