ಬ್ರೇಕಿಂಗ್ ನ್ಯೂಸ್
25-03-25 04:40 pm Bangalore Correspondent ಕ್ರೈಂ
ಬೆಂಗಳೂರು, ಮಾ.25 : ರಿಯಲ್ ಎಸ್ಟೇಟ್ ಉದ್ಯಮಿ ಲೋಕನಾಥ್ ಸಿಂಗ್ ಕೊಲೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು ಅತ್ತೆ ಮತ್ತು ಪತ್ನಿಯೇ ಸೇರಿಕೊಂಡು ಹತ್ಯೆ ಮಾಡಿಸಿದ್ದಾರೆ ಎಂಬುದನ್ನು ಪೊಲೀಸರು ಪತ್ತೆ ಮಾಡಿದ್ದಾರೆ. ಪ್ರಕರಣ ಸಂಬಂಧಿಸಿ ಪತ್ನಿ ಯಶಸ್ವಿನಿ (21) ಹಾಗೂ ಅತ್ತೆ ಹೇಮಾ ಬಾಯಿ (37) ಅವರನ್ನು ಸೋಲದೇವನಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಮಾಗಡಿ ತಾಲ್ಲೂಕಿನ ಕುದೂರು ನಿವಾಸಿ ಲೋಕನಾಥ್ ಸಿಂಗ್ ಅವರನ್ನು ನಗರದ ಬಿಜಿಎಸ್ ಲೇಔಟ್‌ನ ನಿರ್ಮಾಣ ಹಂತದ ಕಟ್ಟಡದ ಬಳಿ ಕೊಲೆ ಮಾಡಲಾಗಿತ್ತು. ಸಹೋದರ ನೀಡಿದ್ದ ದೂರಿನ ಮೇರೆಗೆ ಪ್ರಕರಣ ದಾಖಲಿಸಿದ್ದ ಪೊಲೀಸರು ತನಿಖೆ ನಡೆಸಿದ್ದರು. ಲೋಕನಾಥ್ ಕೌಟುಂಬಿಕ ವಿಚಾರದ ಬಗ್ಗೆ ಮಾಹಿತಿ ಕಲೆ ಹಾಕಿದ್ದರು. ಕಳೆದ ಡಿಸೆಂಬರ್‌ನಲ್ಲಿ ಲೋಕನಾಥ್ ಸಿಂಗ್, ರಿಯಲ್ ಎಸ್ಟೇಟ್ ಉದ್ಯಮಿ ಕೃಷ್ಣ ಸಿಂಗ್ ಹಾಗೂ ಹೇಮಾ ದಂಪತಿಯ ಪುತ್ರಿ ಯಶಸ್ವಿನಿ ಎಂಬಾಕೆಯನ್ನು ರಿಜಿಸ್ಟರ್ ಕಚೇರಿಯಲ್ಲಿ ಮದುವೆಯಾಗಿದ್ದರು. ಇವರ ನಡುವೆ 14 ವರ್ಷ ವಯಸ್ಸಿನ ಅಂತರವಿದ್ದ ಕಾರಣ ಯಶಸ್ವಿನಿ ಕುಟುಂಬದವರು ಮದುವೆಗೆ ಒಪ್ಪಿರಲಿಲ್ಲ. ಈ ಹಿನ್ನೆಲೆಯಲ್ಲಿ ಕುಣಿಗಲ್ ರಿಜಿಸ್ಟರ್ ಕಛೇರಿಯಲ್ಲಿ ಮದುವೆಯಾಗಿದ್ದರು. ಮದುವೆ ವಿಚಾರವನ್ನು ಲೋಕನಾಥ್ ಸಿಂಗ್ ತನ್ನ ಮನೆಯವರಿಂದಲೂ ಮುಚ್ಚಿಟ್ಟಿದ್ದರು. ಪತ್ನಿಯನ್ನ ಅವರ ಕುಟುಂಬಸ್ಥರ ಜತೆಯಲ್ಲೇ ಬಿಟ್ಟಿದ್ದರು. ಲೋಕನಾಥ್ ಗೆ ಎಂ.ಬಿ.ಎ ವ್ಯಾಸಂಗ ಮಾಡುತ್ತಿದ್ದ ಯಶಸ್ವಿನಿ ಪರಿಚಯವಾಗಿತ್ತು. ಬಳಿಕ ಇಬ್ಬರೂ ಮೊಬೈಲ್ ಸಂಖ್ಯೆ ಬದಲಿಸಿಕೊಂಡು ಪರಸ್ಪರ ಪ್ರೀತಿಸಿ ಮದುವೆಯಾಗಿದ್ದರು.
ಈ ನಡುವೆ, ಲೋಕನಾಥ್ ಬೇರೆ ಹುಡುಗಿಯ ಜೊತೆಗೂ ಓಡಾಟ ನಡೆಸುವುದು ಅತ್ತೆ ಹೇಮಾ ಬಾಯಿ ಹಾಗೂ ಯಶಸ್ವಿನಿಗೆ ಗೊತ್ತಾಗಿತ್ತು. ಈ ಸಂಬಂಧ ಇವರ ನಡುವೆ ಜಗಳವಾಗಿತ್ತು. ಪ್ರಶ್ನೆ ಮಾಡಿದ ಅತ್ತೆ ಹಾಗೂ ಪತ್ನಿಗೆ ಲೋಕನಾಥ್ ಬೆದರಿಕೆ ಹಾಕಿದ್ದರು. ಬೆದರಿಕೆ ಹಾಕಿದ್ದರಿಂದ ಸಿಟ್ಟಿನಲ್ಲಿ ತಾಯಿ ಮಗಳು ಸೇರಿ ಲೋಕನಾಥ್ ಕೊಲೆಗೆ ಸಂಚು ರೂಪಿಸಿದ್ದರು. ಮಾರ್ಚ್ 23ರಂದು ಬೆಳಗ್ಗೆ ಯಶಸ್ವಿನಿ, ಪತಿ ಲೋಕನಾಥ್ ಸಿಂಗ್‌ಗೆ ಕರೆ ಮಾಡಿ, ತನ್ನ ಜೊತೆಗೆ ಬರುವಂತೆ ಕೇಳಿಕೊಂಡಿದ್ದಳು.
ಕಾರಿನಲ್ಲಿ ಬಂದಿದ್ದ ಲೋಕನಾಥ್ ಜೊತೆಗೆ ಯಶಸ್ವಿನಿ ತೆರಳಿದ್ದಳು. ಪತ್ನಿಯ ಸೂಚನೆಯಂತೆ ಬಿಳಿಜಾಜಿಯ ಬಿಜಿಎಸ್ ಲೇಔಟ್‌ನ ನಿರ್ಜನ ಪ್ರದೇಶಕ್ಕೆ ತೆರಳಿದ್ದರು. ಈ ವೇಳೆ, ಮನೆಯಿಂದಲೇ ಸಿದ್ಧಪಡಿಸಿ ತಂದಿದ್ದ ಊಟವನ್ನು ಪತಿಗೆ ಕೊಟ್ಟಿದ್ದಳು. ಅದರಲ್ಲಿ ನಿದ್ರೆ ಮಾತ್ರೆ ಬೆರೆಸಿದ್ದ ಯಶಸ್ವಿನಿ, ಪತಿಗೆ ಊಟ ಮಾಡಿಸಿದ್ದಳು. ಪುತ್ರಿಯನ್ನು ಕಾರಿನಲ್ಲಿ ಕಳುಹಿಸಿ ತಾಯಿ ಹೇಮಾ ಬಾಯಿ ಹಿಂದಿನಿಂದ ಆಟೊದಲ್ಲಿ ಬಂದಿದ್ದಳು. ಬಿಜಿಎಸ್ ಲೇಔಟ್‌ನಲ್ಲಿ ಕಾರು ನಿಲ್ಲಿಸಿ ಪತ್ನಿ ಜೊತೆಗಿದ್ದ ಲೋಕನಾಥ್ ಮೇಲೆ ಹೇಮಾ ದಾಳಿ ಮಾಡಿದ್ದಳು. ನಿದ್ದೆ ಮಂಪರಿನಲ್ಲಿದ್ದ ಅಳಿಯನ ಕುತ್ತಿಗೆಗೆ ಚಾಕುವಿನಿಂದ ಇರಿದಿದ್ದಳು. ನಂತರ ಚಾಕು ಜೊತೆಗೆ ಕಾರನ್ನು ಅಲ್ಲಿಯೇ ಬಿಟ್ಟು ಮಗಳು ಯಶಸ್ವಿನಿ ಜೊತೆಗೆ ಅಲ್ಲಿಂದ ಎಸ್ಕೇಪ್ ಆಗಿದ್ದರು.
ಪೊಲೀಸರು ಕೌಟುಂಬಿಕ ವಿಚಾರದಲ್ಲಿ ತನಿಖೆ ನಡೆಸಿ ಪೂರಕವಾಗಿ ಸಿಸಿಟಿವಿ ದಾಖಲೆ ಪರಿಶೀಲನೆ ಮಾಡಿದ್ದಾರೆ. ತಾಯಿ, ಮಗಳ ಮೊಬೈಲ್ ನೆಟ್‌ವರ್ಕ್ ಹಾಗೂ ಲೋಕನಾಥ್ ಸಿಂಗ್ ಅಂಗರಕ್ಷಕನ ಹೇಳಿಕೆಯಲ್ಲಿ ಸುಳಿವು ದೊರೆಕಿತ್ತು. ಮಗಳ ಭವಿಷ್ಯದ ಬಗ್ಗೆ ಚಿಂತಿಸಿ ಅತ್ತೆ ಹೇಮಾನೇ ಅಳಿಯನ ಕೊಲ್ಲುವುದಕ್ಕೆ ಸಂಚು ಹೂಡಿದ್ದಳು ಎನ್ನುವುದು ತನಿಖೆಯಲ್ಲಿ ಪತ್ತೆಯಾಗಿದೆ.
A 37-year-old real-estate businessman was allegedly murdered by his wife and mother-in-law over his alleged multiple extramarital affairs and illegal business dealings in Bengaluru last week, police said on Monday. The two accused have been arrested. According to the police, the incident came to light when the body of the victim, Loknath Singh, was found by a few people in an abandoned car in a deserted area in Chikkabanavara on Saturday.
17-09-25 06:02 pm
Bangalore Correspondent
Sadananda Gowda, Cyber Fraud: ಮಾಜಿ ಸಿಎಂ ಡಿವಿಎ...
17-09-25 05:45 pm
Lokayukta, Dinesh Gundu Rao: ಜಮೀರ್ ಅಹ್ಮದ್ ಅಕ್...
16-09-25 11:00 pm
Nanjegowda MLA, Malur: ಮಾಲೂರು ಕಾಂಗ್ರೆಸ್ ಶಾಸಕ...
16-09-25 10:54 pm
Bangalore Suicide, Air force: ಸಹೋದರಿ ಜೊತೆ ಜಗಳ...
15-09-25 08:53 pm
16-09-25 10:11 pm
HK News Desk
Cloudburst, Dehradun: ಡೆಹ್ರಾಡೂನ್ನಲ್ಲಿ ಭಾರೀ ಮ...
16-09-25 02:46 pm
Waqf, Supreme Court; ವಕ್ಫ್ ತಿದ್ದುಪಡಿ ಕಾಯ್ದೆ...
15-09-25 04:57 pm
ನಾನು ಶಿವಭಕ್ತ ; ನಿಂದನೆಯ ವಿಷವನ್ನು ಕುಡಿದು ಜೀರ್ಣಿ...
14-09-25 10:49 pm
ಪ್ರಧಾನಿ ಮೋದಿ ಅಸ್ಸಾಂನಲ್ಲಿ ಇರುವಾಗಲೇ 5.8ರ ತೀವ್ರತ...
14-09-25 07:31 pm
17-09-25 11:05 pm
Mangalore Correspondent
Mahesh Shetty Timarodi, Arms, FIR: ಮಹೇಶ್ ಶೆಟ್...
17-09-25 10:37 pm
Poonja International Hotel, Prabhakar Poonja...
17-09-25 10:06 pm
Mangalore, Heart Attack, Puttur: ಕೊಣಾಜೆಕಲ್ಲು...
17-09-25 06:54 pm
Dharmasthala Case. Vittal Gowda: ಧರ್ಮಸ್ಥಳ ಕೇಸ...
17-09-25 03:19 pm
18-09-25 11:44 am
HK News Desk
Vijayapura Bank Robbery: SBI ಬ್ಯಾಂಕ್ ದರೋಡೆ ;...
17-09-25 09:44 pm
Mangalore Crime, Cattle Theft: ಅಡ್ಯಾರ್ ನಲ್ಲಿ...
17-09-25 06:04 pm
Udupi, Job Fraud, Scam: ವಿದೇಶದಲ್ಲಿ ಕೆಲಸ ಕೊಡಿಸ...
17-09-25 02:46 pm
ಫುಡ್ ಡೆಲಿವರಿ ನೆಪದಲ್ಲಿ ಬಾಗಿಲು ತಟ್ಟಿದ ಕಳ್ಳ ; ವೃ...
17-09-25 12:25 pm