ಬ್ರೇಕಿಂಗ್ ನ್ಯೂಸ್
27-10-24 08:33 pm Giridhar Shetty ಕ್ರೈಂ
ಉಡುಪಿ, ಅ.27: ಯಾರೂ ಊಹೆ ಮಾಡಲಾರದ, ಯಾರೂ ನಂಬಲಾಗದ ರೀತಿಯ ಕ್ರೈಂ ಕತೆಯಿದು. ಸಿನಿಮಾ, ಸೀರಿಯಲ್ನಲ್ಲಿ ನೋಡುತ್ತಿದ್ದ ಕತೆಯೀಗ ನಮ್ಮ ನಡುವಲ್ಲೇ ನಡೆದುಹೋಗುತ್ತಿದ್ದು, ಜನರು ಇದೂ ಸತ್ಯನಾ ಎಂಬ ನೆಲೆಯಲ್ಲಿ ಪ್ರಶ್ನೆ ಮಾಡುತ್ತಿದ್ದಾರೆ. ಹೌದು.. ಅಜೆಕಾರಿನ ಬಾಲಕೃಷ್ಣ ಪೂಜಾರಿಯನ್ನು ಅವರ ಪತ್ನಿಯೇ ತನ್ನ ಪ್ರಿಯಕರನ ಜೊತೆ ಸೇರಿ ಉಪಾಯದಿಂದ ಕೊಲೆ ಮಾಡಿರುವ ಸುದ್ದಿಯನ್ನು ಜನಸಾಮಾನ್ಯರಿಗೆ ಅರಗಿಸಿಕೊಳ್ಳಲಾಗದ ಸ್ಥಿತಿಯಾಗಿದೆ.
ಈ ನಡುವೆ, ಆರೋಪಿ ಪ್ರತಿಮಾ ಸ್ವತಃ ತನ್ನ ಅಣ್ಣನ ಕೊಲೆ ಕೃತ್ಯದ ಬಗ್ಗೆ ಮಾತನಾಡಿರುವ ಆಡಿಯೋ ವೈರಲ್ ಆಗಿದೆ. ಭಾವ ಬಾಲಕೃಷ್ಣ ಪೂಜಾರಿಯನ್ನು ಅನಾರೋಗ್ಯಕ್ಕೀಡಾದ ಸಂದರ್ಭದಲ್ಲಿ ತನ್ನ ಬಂಗಾರವನ್ನೇ ಅಡವಿಟ್ಟು ಬೆಂಗಳೂರು, ಮಂಗಳೂರು ಎಂದು ಹಲವು ಆಸ್ಪತ್ರೆಗಳಿಗೆ ಒಯ್ದು ಚಿಕಿತ್ಸೆ ಕೊಡಿಸಿದ್ದ ಸಂದೀಪ್, ತನ್ನ ತಂಗಿಯೊಂದಿಗೆ ನಿರ್ದಾಕ್ಷಿಣ್ಯವಾಗಿ ಮಾತನಾಡುತ್ತಾರೆ. ನನ್ನ ಭಾವ ದೇವರಂತ ಮನುಷ್ಯ, ನೀನು ಈ ರೀತಿ ಮಾಡ್ತೀಯಾ ಎಂದು ಅನಿಸಿರಲಿಲ್ಲ. ನೀನು ಈಗಲೇ ಸತ್ತು ಹೋಗು.. ನನಗೇನೂ ಬೇಜಾರಿಲ್ಲ. ನಿನ್ನ ಅಂತ್ಯ ಕರ್ಮಗಳನ್ನೂ ನಾನು ಮಾಡುವುದಿಲ್ಲ. ಸತ್ತೇ ಹೋಗು, ಆದರೆ ನಿನಗೆ ಶಿಕ್ಷೆಯಾಗಲೇಬೇಕು ಎಂದು ಹೇಳುತ್ತ ಆಡಿಯೋ ರೆಕಾರ್ಡ್ ಮಾಡಿಕೊಂಡಿದ್ದಾರೆ.
ಪೊಲೀಸರಿಗೆ ದೂರು ಕೊಡುವುದಕ್ಕೂ ಮೊದಲು ಕೊಲೆ ಕೃತ್ಯದ ಬಗ್ಗೆ ಸಂಶಯದಲ್ಲಿ ತನ್ನ ತಂಗಿಯನ್ನು ವಿಚಾರಣೆ ಮಾಡಿದ್ದ ಸಂದೀಪ್, ಇಷ್ಟೊಂದು ಚಿಕಿತ್ಸೆ ಮಾಡಿದ ಬಳಿಕ ಭಾವನ ಆರೋಗ್ಯ ಸುಧಾರಣೆಯಾಗಿತ್ತು. ನಿನ್ನೆ ರಾತ್ರಿ ಆ ಕೊಲೆಗಡುಕನನ್ನು ನೀನೇ ಫೋನ್ ಮಾಡಿ ಕರೆಸಿಕೊಂಡಿದ್ದಲ್ವಾ.. ಮಧ್ಯರಾತ್ರಿ ವರೆಗೂ ನಾನು ಇದ್ದೆ. ಚಿಕ್ಕಮ್ಮ ಇದ್ದರು. ಇಬ್ಬರು ಮಕ್ಕಳನ್ನು ನೋಡಿಯೂ ನಿನಗೆ ಕರುಣೆ ಬರಲಿಲ್ಲ ಅಲ್ವಾ ಎಂದು ಕೇಳುತ್ತಾರೆ. ತಪ್ಪಾಯ್ತು ಎಂದು ಹೇಳುತ್ತಾ ಆಕೆ ಬಿಕ್ಕಳಿಸುತ್ತಾಳೆ. ನಾನು ಸಾಯುತ್ತೇನೆ ಎನ್ನುತ್ತ ತನ್ನ ಪ್ರಿಯಕರ ತಡರಾತ್ರಿ ಬಂದು ಸಾಯಿಸಿದ್ದನ್ನು ಹೇಳುತ್ತಾಳೆ. ಮೂರು ತಿಂಗಳ ಹಿಂದೆಯೇ ನಿನಗೆ ಹೇಳಿದ್ದೆ, ಈಗ ಭಾವನನ್ನು ಆಸ್ಪತ್ರೆಯಿಂದ ಕರೆತಂದ ದಿನವೇ ಮುಗಿಸಿದ್ದೀಯಲ್ಲಾ.. ನಿನ್ನನ್ನು ನಾನು ಬಿಡೋದಿಲ್ಲ. ತಕ್ಕ ಶಾಸ್ತಿ ಆಗಲೇಬೇಕು, ನಿನ್ನ ಅಣ್ಣ ಅಂಥವನಲ್ಲ ಎಂದು ನಿರೂಪಿಸುತ್ತೇನೆ. ನಿನಗೆ ಶಿಕ್ಷೆಯಾದರೆ ಮಾತ್ರ ಭಾವನಿಗೆ ಮೋಕ್ಷ ಸಿಕ್ಕೀತು ಎಂದು ಸಂದೀಪ್ ಹೇಳುವುದು ಆಡಿಯೋದಲ್ಲಿ ರೆಕಾರ್ಡ್ ಆಗಿದೆ.
ಗಂಡನ ಕೊಲೆಗಾಗಿ ಜಾಗರಣೆ ಮಾಡಿದ್ದ ಪತ್ನಿ
ಆಡಿಯೋ ಆಧಾರದಲ್ಲಿ ನೋಡುವುದಾದರೆ, ಪ್ರತಿಮಾ ಅ.20ರಂದು ರಾತ್ರಿ ತನ್ನ ಗಂಡನ ಕೊಲೆ ಮಾಡುವುದಕ್ಕಾಗಿಯೇ ರಾತ್ರಿಯಿಡೀ ಜಾಗರಣೆ ಮಾಡಿದ್ದಳು. ತಡರಾತ್ರಿ 2 ಗಂಟೆ ವೇಳೆಗೆ ತನ್ನ ಪ್ರಿಯಕರ ದಿಲೀಪ್ ಹೆಗ್ಡೆಯನ್ನು ಕರೆಸಿ, ಮಲಗಿದ್ದ ಗಂಡನನ್ನು ತಲೆದಿಂಬನ್ನು ಒತ್ತಿಟ್ಟು ಸಾಯಿಸಿದ್ದಾಳೆ ಇದರಿಂದ ದಿಟವಾಗುತ್ತದೆ.
ಆಸ್ಪತ್ರೆಯಲ್ಲೂ ಮೊಬೈಲಿನಲ್ಲೇ ಕಳೆಯುತ್ತಿದ್ದಳು
ಪತ್ನಿ ನೀಡಿದ್ದ ಸ್ಲೋ ಪಾಯ್ಸನ್ ಕಾರಣದಿಂದ ಕಳೆದ ಮೂರು ತಿಂಗಳಿನಿಂದ ಜಾಂಡಿಸ್ ರೀತಿಯ ಕಾಯಿಲೆಯಿಂದ ಬಾಲಕೃಷ್ಣ ಪೂಜಾರಿ (44) ಬಳಲಿದ್ದರು. ಕಾರ್ಕಳ, ಉಡುಪಿಯಿಂದ ತೊಡಗಿ, ಮಂಗಳೂರು ಬೆಂಗಳೂರು ಸೇರಿ ಏಳು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡಿಸಲಾಗಿತ್ತು. ಆಸ್ಪತ್ರೆಯಿಂದ ಆಸ್ಪತ್ರೆಗೆ ಸಾಗಿಸುತ್ತಿದ್ದರೂ, ಪತ್ನಿ ಪ್ರತಿಮಾ ಮಾತ್ರ ಚಿಕಿತ್ಸೆಯ ಬಗ್ಗೆ ಆಸಕ್ತಿ ವಹಿಸಿರಲಿಲ್ಲ. ನಾಮ್ಕೇವಾಸ್ತೆ ಆಸ್ಪತ್ರೆಯಲ್ಲಿದ್ದರೂ, ಹೊರಗೆ ಹೋಗಿ ದಿನ ಕಳೆಯುತ್ತಿದ್ದಳು. ಆಸ್ಪತ್ರೆಯಲ್ಲಿ ಬಾಲಕೃಷ್ಣ ಅವರ ಚಿಕ್ಕಮ್ಮ ಬಂದು ಆರೈಕೆ ಮಾಡುತ್ತಿದ್ದರು. ದಿನವಿಡೀ ಮೊಬೈಲಿನಲ್ಲಿ ಚಾಟಿಂಗ್ ಮಾಡುತ್ತ ಕಳೆಯುತ್ತಿದ್ದಳು. ಯಾರೊಂದಿಗೋ ಫೋನಲ್ಲಿ ಮಾತನಾಡುತ್ತ ಇರುತ್ತಿದ್ದಳು ಎನ್ನುವ ವಿಚಾರ ಸಂಬಂಧಿಕರ ನಡುವೆ ಚರ್ಚೆಯಾಗುತ್ತಿದೆ.
ಚೇತರಿಸಿ ಮನೆಗೆ ಹಿಂತಿರುಗಿದ್ದ ದಿನವೇ ಸ್ಕೆಚ್
ಬೆಂಗಳೂರಿನಲ್ಲಿ ಚಿಕಿತ್ಸೆ ಬಳಿಕ ಸಾಕಷ್ಟು ಚೇತರಿಸಿಕೊಂಡಿದ್ದ ಬಾಲಕೃಷ್ಣ ಅವರನ್ನು ಅ.19ರಂದು ಡಿಸ್ಚಾರ್ಜ್ ಮಾಡಲಾಗಿತ್ತು. ಅಂದು ರಾತ್ರಿ 8 ಗಂಟೆಗೆ ಅಜೆಕಾರಿನ ಮನೆಗೆ ತಲುಪಿದ್ದರು. ತುಂಬ ದಿನಗಳ ಬಳಿಕ ಮರಳಿದ್ದರಿಂದ ಆಸುಪಾಸಿನ ಸಂಬಂಧಿಕರು ಬಂದಿದ್ದರು. ಎಲ್ಲರೊಂದಿಗೂ ಬಾಲಕೃಷ್ಣ ಮಾತನಾಡಿದ್ದರು. ಭಾವ ಸಂದೀಪ್ (ಪ್ರತಿಮಾ ಅಣ್ಣ) ಮಧ್ಯರಾತ್ರಿ ವರೆಗೂ ಇದ್ದು ಎಲ್ಲರ ಜೊತೆ ಊಟ ಮಾಡಿ ತನ್ನ ಮನೆಗೆ ತೆರಳಿದ್ದರು. ಹೆತ್ತವರು ಆಸ್ಪತ್ರೆಯಲ್ಲಿದ್ದಾಗ ಮಾವ ಸಂದೀಪ್ ಜೊತೆಗಿದ್ದ ಇಬ್ಬರು ಮಕ್ಕಳು ಕೂಡ ಅವರ ಜೊತೆಗೇ ಹೊರಟಿದ್ದರು. ರಾತ್ರಿ ವರೆಗೂ ಚಿಕ್ಕಮ್ಮ ಅವರೂ ಇದ್ದರು. ಆದರೆ ಅಲ್ಲಿಯೇ ಹತ್ತಿರ ಮನೆ ಇದ್ದುದರಿಂದ ಅವರನ್ನೂ ತುಂಬ ದಿನದಿಂದ ಆಸ್ಪತ್ರೆಯಲ್ಲಿದ್ರಲ್ವಾ.. ಮನೆಗೋಗಿ ವಿಶ್ರಾಂತಿ ಪಡೆಯಿರಿ ಅಂತ ಪ್ರತಿಮಾಳೇ ಸಾಗಹಾಕಿದ್ದಳು.
ಚಿಕ್ಕಮ್ಮ ರಾತ್ರಿ ಮನೆಯಲ್ಲೇ ಇದ್ದಾರೆಂದು ಸಂದೀಪ್ ತನ್ನ ಮನೆಗೆ ತೆರಳಿದ್ದರು. ಆದರೆ ಸಂದೀಪ್ ತೆರಳಿದ ಬೆನ್ನಲ್ಲೇ ಚಿಕ್ಕಮ್ಮಳನ್ನೂ ಪ್ರತಿಮಾಳೇ ಸಾಗ ಹಾಕಿದ್ದು ನೋಡಿದರೆ ಈಕೆ ಮೊದಲೇ ಕೊಲೆ ಕೃತ್ಯದ ಪ್ಲಾನ್ ಮಾಡಿಕೊಂಡಿದ್ದಳು ಅನ್ನುವುದಕ್ಕೆ ಸಾಕ್ಷಿ ಹೇಳುತ್ತದೆ. ತಡರಾತ್ರಿ ಪ್ರತಿಮಾ ತನ್ನ ಪ್ರಿಯಕರ ದಿಲೀಪ್ ಹೆಗ್ಡೆಗೆ ಫೋನಾಯಿಸಿ ಮನೆಗೆ ಕರೆಸಿಕೊಂಡಿದ್ದಳು. ಸುಮಾರು 2 ಗಂಟೆಯ ಹೊತ್ತಿಗೆ ಮನೆಗೆ ಬಂದಿದ್ದ ಆತ ನಡುರಾತ್ರಿ ಗಾಢ ನಿದ್ದೆಗೆ ಜಾರಿದ್ದ ಬಾಲಕೃಷ್ಣ ಪೂಜಾರಿಯನ್ನು ತಲೆದಿಂಬು ಒತ್ತಿಟ್ಟು ಸಾಯಿಸಿದ್ದಾರೆ. ಬೈಕಿನಲ್ಲಿ ಬಂದಿದ್ದ ಆರೋಪಿ ದಿಲೀಪ್ ಕೊಲೆ ಕೃತ್ಯದ ಬಳಿಕ ಅಲ್ಲಿಂದ ಸದ್ದಿಲ್ಲದೆ ಕಾಲ್ಕಿತ್ತಿದ್ದ. ತನ್ನ ಬೈಕನ್ನು ನೂರು ಮೀಟರ್ ದೂರದಲ್ಲೇ ಇಟ್ಟು ಬಂದಿದ್ದ ಎನ್ನುವುದು ಪೊಲೀಸ್ ತನಿಖೆಯಿಂದ ತಿಳಿದುಬಂದಿದೆ.
ಸ್ಲೋ ಪಾಯ್ಸನ್ ಕಾರಣ ಕಿಡ್ನಿ, ಲಿವರ್ ಗೆ ಪೆಟ್ಟು
ದಿಲೀಪ್ ತಂದುಕೊಟ್ಟಿದ್ದ ವಿಷವನ್ನು ಪ್ರತಿಮಾ ತನ್ನ ಗಂಡನಿಗೆ ಊಟದಲ್ಲಿ ಅಲ್ಪಸ್ವಲ್ವ ಬೆರೆಸಿ ಕೊಡುತ್ತಾ ಬಂದಿದ್ದಳು. ಇದರಿಂದಾಗಿ ಅನಾರೋಗ್ಯಕ್ಕೀಡಾದ ಬಾಲಕೃಷ್ಣ ಪೂಜಾರಿಗೆ ಕಿಡ್ನಿ ಮತ್ತು ಲಿವರ್ ಸಮಸ್ಯೆ ಕಾಣಿಸಿಕೊಂಡಿತ್ತು. ಜಾಂಡಿಸ್ ರೀತಿಯಲ್ಲಿ ಲಕ್ಷಣ ಇದ್ದುದರಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರೂ, ಮತ್ತೆ ಮತ್ತೆ ಸಮಸ್ಯೆ ಉಂಟಾಗಿತ್ತು. ಕೊನೆಗೆ, ಬೆಂಗಳೂರಿನಲ್ಲಿ ಚಿಕಿತ್ಸೆ ಪಡೆದ ಬಳಿಕ ಬಾಲಕೃಷ್ಣ ಪೂಜಾರಿ ಸಾವನ್ನು ಗೆದ್ದು ಬಂದಿದ್ದರು. ಆದರೆ ಧೂರ್ತ ಪತ್ನಿಯೇ ತನ್ನ ಕೊಲೆಗೆ ಮುಹೂರ್ತ ಇಟ್ಟಿದ್ದರಿಂದ ಅಮಾಯಕ ಬಾಲಕೃಷ್ಣ ಪೂಜಾರಿ ಯಾರೂ ಊಹಿಸದ ರೀತಿಯಲ್ಲಿ ಸಾವು ಕಂಡಿದ್ದಾರೆ.
ಈ ನಡುವೆ, ಆರೋಪಿ ದಿಲೀಪ್ ಹೆಗ್ಡೆ ವಿಷ ಖರೀದಿ ಮಾಡಿದ ಅಂಗಡಿಯಲ್ಲಿ ಪೊಲೀಸರು ಮಹಜರು ಮಾಡಿದ್ದು, ಕೃತ್ಯಕ್ಕೆ ಬಳಸಿದ ಐ 20 ಕಾರು ಮತ್ತು ಸ್ಕೂಟರ್, ಮೊಬೈಲ್, ಸಿಮ್ ಕಾರ್ಡ್ ವಶಕ್ಕೆ ಪಡೆದಿದ್ದಾರೆ. ಪ್ರತಿಮಾಗೆ ನ್ಯಾಯಾಲಯ ನ.7ರ ತನಕ ನ್ಯಾಯಾಂಗ ಬಂಧನ ವಿಧಿಸಿದ್ದರೆ, ದಿಲೀಪ್ ಹೆಗ್ಡೆಯನ್ನು ಪೊಲೀಸರು ಕಸ್ಟಡಿಗೆ ಪಡದಿದ್ದಾರೆ.
Karkala murder case, detailed crime report of how wife planned husbands murder, audio of brother goes viral. New revelations have emerged in the high-profile murder case of Balakrishna (44), from Marne village in Ajekar, Karkala taluk, with the involvement of his wife Prathima and her lover, Dilip Hegde. The two allegedly conspired to kill Balakrishna, suffocating him with a bedsheet in the early hours of October 20.
04-08-25 01:00 pm
Bangalore Correspondent
Veerappa Moily, Kharge: 1980ರಲ್ಲೇ ನಾನು ಸಿಎಂ ಆ...
03-08-25 09:30 pm
Ravi Poojary Aide Kaviraj Arrested, Kolar Pol...
03-08-25 10:52 am
Dharmasthala News, High Court; ಧರ್ಮಸ್ಥಳ ಸುದ್ದ...
01-08-25 11:34 pm
‘Comedy Kiladigalu’, Chandrashekhar Siddi Sui...
01-08-25 10:45 pm
04-08-25 05:11 pm
HK News Desk
ಗೆಳೆಯನೊಂದಿಗೆ ಪತ್ನಿಯ ಸರಸ ; ಪರಿ ಪರಿ ಬೇಡಿಕೊಂಡರೂ...
04-08-25 02:16 pm
ವಿಮಾನದಲ್ಲಿ ಸಹ ಪ್ರಯಾಣಿಕನಿಗೆ ಕಪಾಳಮೋಕ್ಷ ; ಅಶಿಸ್ತ...
03-08-25 05:44 pm
ಮಾಲೆಗಾಂವ್ ಸ್ಫೋಟ ಪ್ರಕರಣದಲ್ಲಿ ನರೇಂದ್ರ ಮೋದಿ, ಭಾಗ...
03-08-25 04:25 pm
ಮಾಲೆಗಾಂವ್ ಪ್ರಕರಣದಲ್ಲಿ ಮೋಹನ್ ಭಾಗವತ್ ಬಂಧಿಸುವುದಕ...
01-08-25 10:48 pm
04-08-25 07:38 pm
Mangalore Correspondent
ವಿದ್ಯುತ್ ನಿಗಮಗಳ ನೌಕರರಿಗೆ ಪಿಂಚಣಿಗಾಗಿ ಗ್ರಾಹಕರಿ...
04-08-25 06:05 pm
VK Furniture & Electronics Launches 4th Annua...
04-08-25 04:48 pm
Dharmasthala Skeleton Mystery: ಧರ್ಮಸ್ಥಳ ಅಸ್ತಿ...
04-08-25 01:58 pm
Dharmasthala Case: ಧರ್ಮಸ್ಥಳ ಪ್ರಕರಣ ; ಆರನೇ ಪಾಯ...
04-08-25 01:24 pm
03-08-25 10:11 pm
Mangalore Correspondent
ಮುಖ್ಯಶಿಕ್ಷಕನ ವರ್ಗಾವಣೆಗೆ ಸಂಚು ; ಶಾಲೆಯ ವಾಟರ್ ಟ...
03-08-25 08:16 pm
Mangalore Massive Lucky Scheme Fraud: ಸುರತ್ಕಲ...
02-08-25 10:04 pm
ಪ್ರಜ್ವಲ್ ರೇವಣ್ಣ ಅಪರಾಧಿ ; 14 ವರ್ಷ ಅಲ್ಲ, ಜೀವನಪರ...
02-08-25 07:20 pm
Suhas Shetty Murder, NIA Raid Mangalore: ಸುಹಾ...
02-08-25 04:43 pm