ಬ್ರೇಕಿಂಗ್ ನ್ಯೂಸ್
25-10-24 09:36 pm Mangalore Correspondent ಕ್ರೈಂ
ಮಂಗಳೂರು, ಅ.25: ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬ ಯುವತಿಗೆ ಲೈಂಗಿಕ ಕಿರುಕುಳ ನೀಡಿ, ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಿದ ಘಟನೆ ನಡೆದಿದ್ದು ಆರೋಪಿ ವಿರುದ್ದ ಸಂತ್ರಸ್ತ ಯುವತಿ ಮಂಗಳೂರಿನ ಪಾಂಡೇಶ್ವರ ಮಹಿಳಾ ಠಾಣೆಯಲ್ಲಿ ದೂರು ನೀಡಿದ್ದಾರೆ.
15 ದಿನಗಳ ಹಿಂದೆ ಸ್ನೇಹಿತರ ಬಳಿ ಯುವತಿಯ ನಂಬರ್ ಪಡೆದುಕೊಂಡಿದ್ದ ರಿಯಲ್ ಎಸ್ಟೆಟ್ ಉದ್ಯಮಿ ರಶೀದ್ ಎಂಬಾತ ಯುವತಿಗೆ ಕರೆ ಮಾಡಿ ಕುಶಾಲನಗರದ ಸೈಟ್ ಬಗ್ಗೆ ವಿವರಿಸಿ ಖರೀದಿಸಲು ತಿಳಿಸಿದ್ದ. ಯುವತಿ ಅಲ್ಲಿನ ಸ್ಥಳೀಯ ನಿವಾಸಿ ಆದ ಕಾರಣ ಜಾಗ ಖರೀದಿಸಲು ಒಲವು ತೋರಿದ್ದರು. ಉದ್ಯಮಿ ಜಾಗ ನೋಡಲು ತನ್ನ ಕಾರಿನಲ್ಲೇ ಬಾ, ನಾನೇ ನಿನ್ನನ್ನು ಕರೆದುಕೊಂಡು ಹೋಗುತ್ತೇನೆ ಎಂದು ಹೇಳಿದಾಗ ಯುವತಿ ಒಪ್ಪಿಕೊಂಡಿದ್ದರು. ಹಾಗೆಯೇ ರಾತ್ರಿ 8 ಗಂಟೆ ಸುಮಾರಿಗೆ ಕೊಡಗಿನ ವಿರಾಜಪೇಟೆ ತಲುಪಿದ್ದು ಯುವತಿ ಉಳಿದುಕೊಳ್ಳಲು ಹೋಟೆಲ್ ನಲ್ಲಿ ಎರಡು ರೂಂ ಬುಕ್ ಮಾಡಿದ್ದರು. ಇದನ್ನು ಪ್ರಶ್ನಿಸಿದ ರಶೀದ್ ಒಂದೇ ರೂಮ್ ನಲ್ಲಿ ಇರಬಹುದು ಅಲ್ವಾ.. ಎರಡು ರೂಮ್ ಯಾಕೆ ಬುಕ್ ಮಾಡಿದ್ದು ಎಂದು ಹೇಳಿದಾಗ ಭಯಗೊಂಡ ಯುವತಿ ಅಲ್ಲಿಂದ ತೆರಳಿ ಸಮೀಪದ ತಂಗಿಯ ಮನೆಯಲ್ಲಿ ಉಳಿದುಕೊಂಡಿದ್ದರು.
ಮರುದಿನ ರಶೀದ್ ಕರೆ ಮಾಡಿ 12 ಗಂಟೆಗೆ ಸೈಟ್ ನೋಡಲು ಬಾ ಎಂದಿದ್ದಾನೆ. ನಿನ್ನೆ ಒಂದೇ ರೂಂ ನಲ್ಲಿ ಇರಬಹುದು ಇತ್ತು. ನಾನು ಏನೋ ನಿರೀಕ್ಷೆ ಮಾಡಿದ್ದೆ ಎಂದಾಗ ಯುವತಿ, ನೀವು ಹೀಗೆ ಮಾತಾನಾಡುವುದು ಸರೀ ಅಲ್ಲ. ನೀವು ವಯಸ್ಸಿನಲ್ಲಿ ನನ್ನ ತಂದೆ ಸಮಾನ ಎಂದಾಗ ತಪ್ಪಾಯಿತು ಎಂದು ಹೇಳಿದ್ದನು. ಮತ್ತೆ ಕಾರಿನಲ್ಲಿ ಸೈಟ್ ನೋಡಲು ತೆರಳಿದಾಗ, ದಾರಿ ಮಧ್ಯೆ ಕಾರು ನಿಲ್ಲಿಸಿ 1 ಲಕ್ಷ ನೋಟಿನ ಕಟ್ಟು ತೋರಿಸಿ ನನಗೆ ನೀನು ಬೇಕು, ನೀನು ನನ್ನ ಜೊತೆ ಸಹಕರಿಸಿದರೆ ಈ ಹಣ ನೀಡುತ್ತೇನೆ ಎಂದಾಗ ಯುವತಿ ವಿರೋಧಿಸಿದ್ದಾಳೆ. ಬಳಿಕವೂ ನೀನು ಸಹಕರಿಸಿದರೆ ಕುಶಾಲನಗರದಲ್ಲಿ ಇರುವ ತನ್ನ ಎರಡು ಫ್ಲಾಟ್ ಗಳನ್ನು ನಿನ್ನ ಹೆಸರಿಗೆ ಬರೆದು ಕೊಡುತ್ತೇನೆ ಎಂದು ಆಫರ್ ಮೇಲೆ ಆಫರ್ ಕೊಟ್ಟು ಯುವತಿಯ ಎದೆ, ಮೈಮೇಲೆ ಕೈ ಹಾಕಿದ್ದಾನೆ. ಇದರಿಂದ ಆತಂಕಗೊಂಡ ಯುವತಿ ಬೊಬ್ಬೆ ಹಾಕಿ ಕಾರಿನಿಂದ ಇಳಿದು ತಪ್ಪಿಸಿಕೊಂಡಿದ್ದಾಳೆ.
ಇದೀಗ ಮಂಗಳೂರಿನ ಪಾಂಡೇಶ್ವರ ಮಹಿಳಾ ಠಾಣೆಯಲ್ಲಿ ಲೈಂಗಿಕ ಕಿರುಕುಳ ನೀಡಿ, ಹಲ್ಲೆ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಜೀವ ಬೆದರಿಕೆ ಹಾಕಿದ್ದಾಗಿ ರಶೀದ್ ವಿರುದ್ಧ ದೂರು ನೀಡಿದ್ದಾರೆ. ರಶೀದ್ ಮಂಗಳೂರಿನಲ್ಲಿ ರಿಯಲ್ ಎಸ್ಟೇಟ್ ನಡೆಸುತ್ತಿದ್ದಾನೆ.
Mangalore builder booked over sexual harrasment case at pandeshwar police station. The builder has been identified as Rashid.
25-08-26 03:39 pm
HK News Staffer
ಕರ್ನಾಟಕದಲ್ಲಿ H1N1 ಆತಂಕ ; 8 ತಿಂಗಳಲ್ಲಿ 4,212 ಪ...
24-08-26 03:16 pm
ಕರ್ನಾಟಕದಲ್ಲಿ ‘ಅನಲಾಗ್ ಪನ್ನೀರ್’ಗೆ ಒಂದು ವರ್ಷ ನಿಷ...
22-08-26 10:15 pm
ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ನಾಪತ್ತೆ ; ಏ...
22-08-26 03:01 pm
500 ಕೆಪಿಎಸ್ ಶಾಲೆಗಳ ಸಮಗ್ರ ಅಭಿವೃದ್ಧಿಗೆ ₹2500 ಕೋ...
22-08-26 11:10 am
26-08-26 06:41 pm
HK News Staffer
ಹಿಜಾಬ್ ಇಸ್ಲಾಮಿನ ಧಾರ್ಮಿಕ ಆಚರಣೆಯಲ್ಲಿ ಅನಿವಾರ್ಯ ಅ...
26-08-26 02:05 pm
ಮಂಗಳೂರನ್ನು ಪಾಲಕ್ಕಾಡ್ ರೈಲ್ವೇ ವಿಭಾಗದಿಂದ ತೆರವು ಮ...
26-08-26 12:01 pm
ಅಮರಾವತಿ ಆಸ್ಪತ್ರೆಯಲ್ಲಿ ಭೀಕರ ಅಗ್ನಿ ದುರಂತ ; ವೆಂಟ...
24-08-26 04:55 pm
ಪಾಲ್ಘಾಟ್ ರೈಲ್ವೇ ವಿಭಾಗದಿಂದ ಮಂಗಳೂರು ಹೊರಕ್ಕೆ ; ವ...
22-08-26 08:37 pm
25-08-26 09:37 pm
HK News Staffer
'ಕಿಂಗ್ಸ್ ಬಜಾರ್' ಹೆಸರಲ್ಲಿ ದುಪ್ಪಟ್ಟು ಲಾಭದ ಹೂಡಿಕ...
25-08-26 09:00 pm
ಪುತ್ತೂರು ಪೇಟೆಯಲ್ಲಿ ಸ್ವಯಂಪ್ರೇರಿತ ಬಂದ್ ; ವಾಹನ ಸ...
25-08-26 02:55 pm
ಕೆಎಸ್ ಹೆಗ್ಡೆ ಮೆಡಿಕಲ್ ಕಾಲೇಜಿನ ಪ್ರೊಫೆಸರ್, ಮಂಗಳೂ...
24-08-26 06:25 pm
ಈದ್ ಮಿಲಾದ್ ; ಬೆಳಗ್ಗೆ ಕೋಟೆಪುರದಿಂದ ಉಳ್ಳಾಲ ದರ್ಗಾ...
24-08-26 04:14 pm
26-08-26 11:26 am
HK News Staffer
ವಿಜಯಪುರದಲ್ಲಿ ಭೀಕರ ದುರಂತ ; ನಾಪತ್ತೆಯಾಗಿದ್ದ ಒಂದೇ...
26-08-26 11:23 am
ಚಿಕ್ಕಮಗಳೂರು ; ಟಿಪ್ಪು ಕಟೌಟ್ ಜೊತೆಗೆ ಮುಜಾಹಿದ್ ಹಾ...
25-08-26 10:39 pm
ಉಡುಪಿಯ ದೇವಸ್ಥಾನದ ಕೆರೆಯಲ್ಲಿ ಮುಳುಗಿ 15 ವರ್ಷದ ವಿ...
25-08-26 07:27 pm
ವಿಟ್ಲ ; ಈಜಲು ತೆರಳಿದ್ದ ಎಸ್ಸಿಡಿಸಿಸಿ ಬ್ಯಾಂಕ್...
25-08-26 12:46 pm