ಬ್ರೇಕಿಂಗ್ ನ್ಯೂಸ್
16-10-24 02:44 pm Mangalore Correspondent ಕ್ರೈಂ
ಮಂಗಳೂರು, ಅ.15: ಇತ್ತೀಚೆಗೆ ಉಡುಪಿ, ಮಂಗಳೂರಿನಲ್ಲಿ ಅಕ್ರಮ ಬಾಂಗ್ಲಾ ವಲಸಿಗರು ಪತ್ತೆಯಾದ ಹಿನ್ನೆಲೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಮೀನುಗಾರಿಕೆ, ಕಟ್ಟಡ ಕಾರ್ಮಿಕರಾಗಿ ಅತಿ ಹೆಚ್ಚು ಉತ್ತರ ಭಾರತೀಯರು ಕರಾವಳಿಯಲ್ಲಿ ಇದ್ದಾರೆ. ಈ ಪೈಕಿ ಹೆಚ್ಚಿನವರು ತಮ್ಮ ಮೂಲವನ್ನು ಪಶ್ಚಿಮ ಬಂಗಾಳ, ಬಿಹಾರ, ಅಸ್ಸಾಂ ಎಂದೇ ಉತ್ತರಿಸುತ್ತಾರೆ. ಆದರೆ ಇವರ ನೈಜ ನೆಲೆ ಯಾವುದು, ಇವರ ಊರು ಯಾವುದು, ದಾಖಲೆ ಪತ್ರಗಳು ಇವೆಯಾ ಎನ್ನುವ ಬಗ್ಗೆ ಯಾರೂ ತಲೆಕೆಡಿಸಿಕೊಂಡಿಲ್ಲ.
ಹಿಂದೆಲ್ಲಾ ಕೂಲಿ ಕಾರ್ಮಿಕರಾಗಿ ಉತ್ತರ ಕರ್ನಾಟಕದವರೇ ಹೆಚ್ಚಿರುತ್ತಿದ್ದರು. ಈಗ ಆ ಜಾಗವನ್ನು ಉತ್ತರ ಭಾರತೀಯರು ಆಕ್ರಮಿಸಿಕೊಂಡಿದ್ದಾರೆ. ಕಡಿಮೆ ಸಂಬಳ, ರಜೆ ಹಾಕದೆ ದುಡಿಯುತ್ತಾರೆಂಬ ಕಾರಣಕ್ಕೆ ಹೆಚ್ಚು ಇವರನ್ನೇ ಕೆಲಸಕ್ಕೆ ಆಶ್ರಯಿಸುತ್ತಾರೆ. ಅಕ್ರಮ ಮರಳುಗಾರಿಕೆಯನ್ನೂ ಇವರಿಂದಲೇ ಮಾಡಿಸುತ್ತಾರೆ. ಅಲ್ಲಿ ಯಾರಾದ್ರೂ ಸತ್ತರೂ, ಪರಿಹಾರ ನೀಡದೆ ಮುಚ್ಚಿ ಹಾಕುತ್ತಾರೆ. ಹೀಗೆ ಕೂಲಿ ಕಾರ್ಮಿಕರಾಗಿ ಬರುವವರಲ್ಲಿ ಬಾಂಗ್ಲಾದವರೂ ಇದ್ದಾರೆ ಎನ್ನುವ ಶಂಕೆ ಮೊದಲಿನಿಂದಲೂ ಇತ್ತು. ಆದರೆ, ಇದನ್ನು ಪೊಲೀಸರಾಗಲೀ, ಇತರೇ ಅಧಿಕಾರಿಗಳಾಗಲೀ ತನಿಖೆ ಮಾಡಿದ್ದಿಲ್ಲ. ಕಟ್ಟಡದ ಕಂಟ್ರಾಕ್ಟರುಗಳು ಕೂಡ ತಪಾಸಣೆ ಮಾಡುವುದಿಲ್ಲ. ಮೇಲ್ನೋಟಕ್ಕೆ ಪಶ್ಚಿಮ ಬಂಗಾಳ ಎಂದೇ ಹೇಳಿಕೊಂಡು ಬಾಂಗ್ಲಾದವರು ಝಂಡಾ ಊರುತ್ತಿದ್ದಾರೆ.
ಪಶ್ಚಿಮ ಬಂಗಾಳ, ಅಸ್ಸಾಂ ಮೂಲಕ ಒಳನುಸುಳಿಕೊಂಡು ರೈಲಿನಲ್ಲಿ ದಕ್ಷಿಣ ಭಾರತಕ್ಕೆ ಬರುವ ಇವರು ಹೆಚ್ಚು ಗುಂಪಾಗಿಯೇ ಒಂದೂರಿನಿಂದ ಇನ್ನೊಂದೂರಿಗೆ ತೆರಳುತ್ತಾರೆ. ಚೆನ್ನೈಗೆ ಬಂದವರು ಇತ್ತ ಕೇರಳ, ಕರ್ನಾಟಕದ ಕರಾವಳಿಗೂ ಕಾಲಿಟ್ಟಿದ್ದಾರೆ. ಇವರಿಗೆ ನಕಲಿ ದಾಖಲೆ ಪತ್ರಗಳನ್ನು ಮಾಡಿಕೊಡುತ್ತಿರುವ ಜಾಲವೂ ಸಕ್ರಿಯವಾಗಿದೆ. ದೇಶ ವಿರೋಧಿ ಚಟುವಟಿಕೆಯಲ್ಲಿ ನಿರತರಾಗಿರುವ ಮಂದಿ ಇಂಥ ಕೃತ್ಯಕ್ಕೆ ಪೋಷಣೆ ನೀಡುತ್ತಾರೆ. ಬಾಂಗ್ಲಾನ್ನರು ನಕಲಿ ದಾಖಲೆ ಮೂಲಕ ಪಾಸ್ ಪೋರ್ಟ್ ಅನ್ನೂ ಮಾಡಿಸುತ್ತಿರುವುದು ವ್ಯವಸ್ಥೆಯ ದುರಂತ ಎನ್ನಬೇಕಷ್ಟೆ. ಸಾಮಾನ್ಯವಾಗಿ ಪಾಸ್ ಪೋರ್ಟ್ ಮಾಡಿಸಬೇಕಿದ್ದರೆ, ಹೆಸರು, ವಿಳಾಸ, ಕುಟುಂಬಸ್ಥರ ಮಾಹಿತಿ, ಕ್ರಿಮಿನಲ್ ಹಿನ್ನೆಲೆ ಇತ್ಯಾದಿ ಹತ್ತಾರು ಪ್ರಶ್ನೆಗಳಿಗೆ ಪೊಲೀಸರ ತಪಾಸಣೆ ನಡೆಸಬೇಕು. ಇದಕ್ಕಾಗಿಯೇ ಪೊಲೀಸ್ ವೆರಿಫಿಕೇಶನ್ ಎನ್ನುವುದೇ ಪಾಸ್ ಪೋರ್ಟ್ ನೀಡುವಿಕೆಯಲ್ಲಿ ಪ್ರಮುಖವಾಗಿರುತ್ತದೆ.
ಆದರೆ, ಅಕ್ರಮ ಬಾಂಗ್ಲಾನ್ನರು ಸ್ಥಳೀಯ ದಾಖಲೆ ತೋರಿಸಿ ಪಾಸ್ ಪೋರ್ಟ್ ಮಾಡಿಸುತ್ತಾರಂದ್ರೆ, ಪೊಲೀಸರ ಸಾಥ್ ಇಲ್ಲದೆ ಸಾಧ್ಯವೇ ಎನ್ನುವ ಪ್ರಶ್ನೆ ಬರುತ್ತದೆ. ಅವರನ್ನು ನೋಡಿದರೂ, ಸ್ಥಳೀಯರಲ್ಲದ ವ್ಯಕ್ತಿಯೆಂಬ ಶಂಕೆ ಬರುತ್ತದೆ. ಹೀಗಿದ್ದರೂ ಕೆಲವು ತಿಂಗಳು ಅಲ್ಲಿ ವಾಸ ಇರುತ್ತಾರೆ ಎಂಬ ಕಾರಣಕ್ಕೆ ಪೊಲೀಸರು ಕ್ಲಿಯರನ್ಸ್ ಕೊಡಲು ಹೇಗೆ ಸಾಧ್ಯ. ಅಲ್ಲದೆ, ನಕಲಿ ಆಧಾರ್ ಕಾರ್ಡ್, ಓಟರ್ ಐಡಿ ಕಾರ್ಡ್ ಹೇಗೆ ಮಾಡಲು ಸಾಧ್ಯ ಎನ್ನುವ ಪ್ರಶ್ನೆಗಳಿಗೆ ಪೊಲೀಸರಲ್ಲಿ ಉತ್ತರ ಇಲ್ಲ. ಇದಲ್ಲದೆ, ಒಮ್ಮೆ ಪಾಸ್ ಪೋರ್ಟ್ ಮಾಡಿದವರು ವಿದೇಶಕ್ಕೆ ಹೋಗಿದ್ದಾರೆಯೇ, ಎಷ್ಟು ಮಂದಿ ಅದನ್ನು ಮಿಸ್ ಯೂಸ್ ಮಾಡಿದ್ದಾರೆ ಎಂಬ ಬಗ್ಗೆಯೂ ಪೊಲೀಸರಿಗೆ ಮಾಹಿತಿ ಇಲ್ಲ. ಜಿಲ್ಲೆಯಲ್ಲಿ ಶಿಕ್ಷಣಕ್ಕಾಗಿ ಬರುವವರನ್ನು ಸೇರಿಸಿ ಒಟ್ಟು ವಿದೇಶಿಗರು ಎಷ್ಟಿದ್ದಾರೆ, ಎಲ್ಲಿಯವರು ಎಂದು ಕೇಳಿದರೆ ಸರಿಯಾದ ಮಾಹಿತಿ ಸಿಗುವುದಿಲ್ಲ.
ಶಿಕ್ಷಣ ಉದ್ದೇಶಕ್ಕೆ ಬಂದಿದ್ದರೆ, ಆಯಾ ಶಿಕ್ಷಣ ಸಂಸ್ಥೆಗಳಿಗೆ ಗೊತ್ತಿರುತ್ತದೆ. ಅದು ಬಿಟ್ಟರೆ ಜಿಲ್ಲಾಡಳಿತಕ್ಕೂ ಮಾಹಿತಿ ಹೋಗಿರುತ್ತದೆ. ಸ್ಥಳೀಯ ಠಾಣೆಯ ಪೊಲೀಸರಿಗೂ ಈ ಬಗ್ಗೆ ಮಾಹಿತಿ ಇರಬೇಕಾಗುತ್ತದೆ. ನಕಲಿ ಪಾಸ್ ಪೋರ್ಟ್ ಬಳಸಿ ಉಗ್ರಗಾಮಿ ಚಟುವಟಿಕೆಗಳನ್ನು ಮಾಡುವುದಕ್ಕೂ ಅವಕಾಶ ಇರುತ್ತದೆ. ಇತ್ತೀಚೆಗೆ ಉಡುಪಿ ಜಿಲ್ಲೆಯ ಮಲ್ಪೆಯಲ್ಲಿ ಸಿಕ್ಕಿಬಿದ್ದವರಲ್ಲಿ ದಾಖಲೆ ಪತ್ರಗಳೇ ಇರಲಿಲ್ಲ. ಒಬ್ಬಾತ ಮಾತ್ರ ನಕಲಿ ದಾಖಲೆ ಸೃಷ್ಟಿಸಿದ್ದಲ್ಲದೆ, ಅದನ್ನೇ ಮುಂದಿಟ್ಟು ಪಾಸ್ ಪೋರ್ಟ್ ಬಳಸಿ ದುಬೈಗೆ ಹಾರಲು ಮುಂದಾಗಿದ್ದ. ಹೊರ ರಾಜ್ಯದಿಂದ ಅದರಲ್ಲೂ ಈಶಾನ್ಯ ಭಾರತದಿಂದ ಕಾರ್ಮಿಕರನ್ನು ತರಿಸುವ ದೊಡ್ಡ ಜಾಲವೇ ಕರ್ನಾಟಕದಲ್ಲಿ ಇದೆ ಎನ್ನಲಾಗುತ್ತದೆ. ಇದಕ್ಕಾಗಿಯೇ ಏಜಂಟರು ಕೆಲಸ ಮಾಡುತ್ತಾರೆ. ಇವರಿಗೆ ನಕಲಿ ದಾಖಲೆಗಳನ್ನು ಕೊಡಿಸುವ ಫ್ಯಾಕ್ಟರಿಯೇ ಕರಾವಳಿಯಲ್ಲಿ ಸಕ್ರಿಯವಾಗಿದೆ ಎನ್ನಲಾಗುತ್ತಿದೆ.
ಹತ್ತು ಸಾವಿರಕ್ಕೆ ಆಧಾರ್ ದಾಖಲೆ!
ಯಾವುದೇ ವಿಳಾಸ ದಾಖಲೆ ಇಲ್ಲದೆ ದುಡಿಯುತ್ತಿರುವ ಬಾಂಗ್ಲಾ ವಲಸಿಗರು ಏಜಂಟರಿಂದ ಹಣ ಕೊಟ್ಟು ನಕಲಿ ದಾಖಲೆಯನ್ನೂ ಮಾಡಿಸುತ್ತಾರೆ. ಹತ್ತು ಸಾವಿರ ಕೊಟ್ಟರೆ ನಕಲಿ ದಾಖಲೆ ಮಾಡಿಕೊಡುವ ವ್ಯವಸ್ಥೆಯೂ ಈ ಭಾಗದಲ್ಲಿ ಇದೆಯಂತೆ. ಮಲ್ಪೆಯಲ್ಲಿ ಸಿಕ್ಕಿಬಿದ್ದಿರುವ ಮಂದಿ ಹತ್ತು ಸಾವಿರ ಕೊಟ್ಟರೆ ದಾಖಲೆ ಮಾಡಿಸಿಕೊತ್ತಾರೆಂಬ ಮಾಹಿತಿಯನ್ನೂ ಪೊಲೀಸರಿಗೆ ನೀಡಿದ್ದಾರೆ. ಇವರಿಗೆ ಸ್ಥಳೀಯವಾಗಿ ಯಾರು ಸಹಾಯ ಮಾಡಿದ್ದಾರೆಂಬುದನ್ನು ಪತ್ತೆ ಮಾಡಲು ಪೊಲೀಸರು ಮುಂದಾಗಿದ್ದಾರೆ.
ನಿಗದಿತ ವೀಸಾ ಇಲ್ಲದೆ ಸಿಕ್ಕಿಬಿದ್ದ ವಿದೇಶಿಗರನ್ನು ಪೊಲೀಸರು ಬಂಧಿಸುತ್ತಾರೆ. ಅಕ್ರಮವಾಗಿ ನೆಲೆಸಿರುವುದು ಪತ್ತೆಯಾದಲ್ಲಿ ಸುಲಭದಲ್ಲಿ ಜಾಮೀನು ಕೂಡ ಸಿಗದು. ಅಲ್ಲದೆ, ದೇಶದಿಂದ ಗಡೀಪಾರು ಮಾಡುವುದಕ್ಕೂ ಅವಕಾಶ ಇರುತ್ತದೆ. ಅಕ್ರಮ ವಾಸ ಸಾಬೀತಾದರೆ ಕೋರ್ಟಿನಲ್ಲಿ ಏಳು ವರ್ಷಕ್ಕೆ ಮೀರದಂತೆ ಶಿಕ್ಷೆ ವಿಧಿಸಬಹುದು ಎನ್ನುತ್ತಾರೆ, ಪರಿಣತ ವಕೀಲರು.
Fake aadhar racket active in dakshina Kannada Mangalore, police hunt for arrest of fraudsters. Nine Bangladeshi nationals have been apprehended by the police for illegally residing in India without valid passports and visas. The individuals had been staying in Malpe, Udupi district for the past three years.
01-05-25 01:48 pm
Bangalore Correspondent
Dk Suresh, Pavitra, wife Video: ಡಿ.ಕೆ ಬ್ರದರ್...
01-05-25 01:08 pm
MA Saleem, DGP-IGP, Prashanth Thakur, Police:...
30-04-25 05:08 pm
R Ahsok, Cm Siddaramaiah, Pak: ಕಾಂಗ್ರೆಸ್ನವರಿ...
29-04-25 10:45 pm
CM Siddaramaiah, Belagavi, BJP Suresh Kumar:...
29-04-25 09:51 pm
30-04-25 06:59 pm
HK News Desk
India Pakistan War: ಭಾರತೀಯ ಸೇನಾಪಡೆಗೆ ಪರಮಾಧಿಕಾ...
30-04-25 03:14 pm
Pakistan, No-fly zone islamabad: ಭಾರತದ ಪ್ರತೀಕ...
30-04-25 02:13 pm
ಮೋದಿ 'ಗಾಯಬ್' ಎಂದು ಕಾಂಗ್ರೆಸ್ ಪೋಸ್ಟ್ ; ಕಾಂಗ್ರೆಸ...
29-04-25 03:45 pm
'ನನಗೆ ಪಾಕಿಸ್ತಾನದಲ್ಲಿ ಯಾರೂ ಇಲ್ಲ, ದಯವಿಟ್ಟು ಉಳಿಸ...
28-04-25 06:52 pm
02-05-25 03:52 am
Mangaluru Staff
Suhas Shetty murder, Mangalore Bandh: ಸುಹಾಸ್...
02-05-25 03:29 am
Mangalore, Kudupu Murder case, MLA Bharath Sh...
01-05-25 09:29 pm
Mangalore Kudupu Murder Case, Update, Police:...
01-05-25 05:38 pm
Ramanath Rai, Kudupu Murder case, SIT: ಧರ್ಮಾಧ...
01-05-25 04:01 pm
01-05-25 10:06 pm
Mangalore Correspondent
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm
Mangalore Mudipu Murder, Mob, Police, Crime:...
29-04-25 09:59 pm
Kudupu Murder, Mangalore Crime, Police: ಕುಡುಪ...
29-04-25 02:53 pm
Belthagady, Blackmail, Mangalore crime: ಬೆಳ್ತ...
28-04-25 11:39 am