ಬ್ರೇಕಿಂಗ್ ನ್ಯೂಸ್
26-09-24 11:07 pm Richard, HK News Desk ಕ್ರೈಂ
ಕಾರವಾರ, ಸೆ.26: ಪುಣೆ ಮೂಲದ ಉದ್ಯಮಿ ವಿನಾಯಕ ನಾಯ್ಕ್ ಎಂಬವರನ್ನು ಮೊನ್ನೆ ಸೆ.22ರಂದು ಬೆಳ್ಳಂಬೆಳಗ್ಗೆ ಹಣಕೋಣದ ಮನೆಯಲ್ಲಿದ್ದಾಗಲೇ ತಲವಾರಿನಿಂದ ಕಡಿದು ಹತ್ಯೆ ಮಾಡಲಾಗಿತ್ತು. ಯಾವುದೇ ಕಳ್ಳತನ ಆಗದೇ ಇದ್ದುದರಿಂದ ಯಾರೋ ಭೂಗತ ಪಾತಕಿಗಳು ದ್ವೇಷದಿಂದ ಹತ್ಯೆ ಮಾಡಿಸಿದ್ದಾರೆ ಎನ್ನುವ ಗುಮಾನಿ ಪೊಲೀಸರದ್ದಾಗಿತ್ತು. ತನಿಖೆ ಕೈಗೆತ್ತಿಕೊಂಡ ಪೊಲೀಸರು ಮೂರೇ ದಿನದಲ್ಲಿ ದೆಹಲಿಯಲ್ಲಿ ಇಬ್ಬರು ಹಂತಕರನ್ನು ಸೆರೆಹಿಡಿದಿದ್ದರು. ಆದರೆ ಇದೇ ಹೊತ್ತಿಗೆ ಗೋವಾದಲ್ಲಿ ಮತ್ತೊಬ್ಬ ಉದ್ಯಮಿ ನಿಗೂಢ ಸಾವಿಗೀಡಾಗಿದ್ದು ಒಟ್ಟು ತನಿಖೆಯ ದಿಕ್ಕನ್ನೇ ಬದಲಿಸಿದೆ.
ಗೋವಾದಲ್ಲಿ ಲಿಕ್ಕರ್ ಉದ್ಯಮಿಯಾಗಿದ್ದ ಗುರುಪ್ರಸಾದ್ ರಾಣೆ ನದಿಯಲ್ಲಿ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇಷ್ಟಾಗುತ್ತಲೇ ವಿನಾಯಕ್ ನಾಯ್ಕ್ ಹತ್ಯೆಗೆ ಸುಪಾರಿ ನೀಡಿದ್ದ ಗುರುಪ್ರಸಾದ್ ಸಾವಿಗೆ ಶರಣಾಗಿದ್ದಾರೆ ಎನ್ನುವ ಸುದ್ದಿ ಹರಡಿತ್ತು. ಪೊಲೀಸರು ತನಿಖೆಯನ್ನು ಅತ್ತ ವಿಸ್ತರಿಸುತ್ತಲೇ ಇವೆರಡು ಕುಟುಂಬದ ನಡುವಿನ ಅಕ್ರಮ ಸಂಬಂಧ, ಪತಿ- ಪತ್ನಿಯರ ಒಡನಾಟದ ನಂಟು ಹೊರಬಿದ್ದಿದೆ. ಪುಣೆಯಲ್ಲಿ ಇಲೆಕ್ಟ್ರಿಕಲ್ಸ್ ಉದ್ಯಮಿಯಾಗಿದ್ದ ವಿನಾಯಕ ನಾಯ್ಕ್ ಮತ್ತು ಗುರುಪ್ರಸಾದ್ ರಾಣೆ ದೂರದ ಸಂಬಂಧಿಗಳಾಗಿದ್ದರು. ಇವರೊಳಗೆ ಸಂಬಂಧಕ್ಕಿಂತ ಮೀರಿದ ಅಕ್ರಮ ಸಂಬಂಧ ಪತಿ- ಪತ್ನಿಯರ ನಡುವೆ ಇತ್ತು ಎನ್ನುವ ವಿಷಯ ತನಿಖೆಯಲ್ಲಿ ತಿಳಿದುಬಂದಿದೆ. ಗುರುಪ್ರಸಾದ್ ರಾಣೆ ಪತ್ನಿ ಮತ್ತು ವಿನಾಯಕ ನಾಯ್ಕ್ ನಡುವೆ ಸಂಬಂಧ ಇದ್ದರೆ, ಇದೇ ವೇಳೆ ಗುರುಪ್ರಸಾದ್ ರಾಣೆಗೆ ನಾಯ್ಕ್ ಪತ್ನಿಯೊಂದಿಗೆ ಅಕ್ರಮ ಸಂಬಂಧ ಇತ್ತು ಎನ್ನಲಾಗಿದೆ. ಪತಿ- ಪತ್ನಿಯರ ಅಕ್ರಮ ಸಂಬಂಧವೇ ಎರಡು ಕುಟುಂಬಗಳ ಮಧ್ಯೆ ದ್ವೇಷ, ಹತ್ಯೆಗೆ ಕಾರಣವಾಯ್ತು ಎನ್ನುವ ವಿಚಾರ ತನಿಖೆಯಲ್ಲಿ ಬಯಲಾಗಿದೆ.
ಉತ್ತರ ಕನ್ನಡ ಎಸ್ಪಿ ನಾರಾಯಣ ಅವರು ಪ್ರಕರಣದಲ್ಲಿ ಮೂವರನ್ನು ಬಂಧಿಸಿದ್ದು, ಗುರುಪ್ರಸಾದ್ ರಾಣೆ ಮತ್ತು ವಿನಾಯಕ್ ನಾಯ್ಕ್ ಕುಟುಂಬದ ನಡುವಿನ ಅಕ್ರಮ ಸಂಬಂಧವೇ ಕೊಲೆ ಕೃತ್ಯಕ್ಕೆ ಕಾರಣ ಎಂದು ತಿಳಿಸಿದ್ದಾರೆ. ಪೊಲೀಸರು ಕೊಲೆ ಕೃತ್ಯ ನಡೆಸಿದ ಬಿಹಾರ ಮೂಲದ ಅಜ್ಮಲ್ (24), ಮಸೂಮ್ (23), ಅಸ್ಸಾಂ ಮೂಲದ ಲಕ್ಷ್ಯ ಜ್ಯೋತಿನಾಥ್ (31) ಎಂಬವರನ್ನು ಬಂಧಿಸಿದ್ದಾರೆ. ಅಜ್ಮಲ್ ಮತ್ತು ಮಸೂಮ್ ಅವರನ್ನು ದೆಹಲಿಯಲ್ಲಿ ಬಂಧಿಸಿದರೆ, ಜ್ಯೋತಿನಾಥ್ ಅವರನ್ನು ಗೋವಾದ ಮಡಗಾಂವ್ ನಲ್ಲಿ ಬಂಧಿಸಲಾಗಿದೆ. ಇದೇ ವೇಳೆ, ಗುರುಪ್ರಸಾದ್ ರಾಣೆ ತನ್ನನ್ನು ಪೊಲೀಸರು ಹುಡುಕುತ್ತಿದ್ದಾರೆಂದು ತಿಳಿದು ಸಾವಿಗೆ ಶರಣಾಗಿದ್ದಾರೆ.
ಗುರುಪ್ರಸಾದ್ ರಾಣೆ ಮತ್ತು ವಿನಾಯಕ ನಾಯ್ಕ್ ಅಕ್ಕಪಕ್ಕದ ನಿವಾಸಿಗಳಾಗಿದ್ದು ಜೊತೆಗೇ ಬೆಳೆದವರಾಗಿದ್ದರು. ಆನಂತರ, ರಾಣೆ ಗೋವಾದಲ್ಲಿ ಉದ್ಯಮ ಕಟ್ಟಿಕೊಂಡಿದ್ದರೆ, ನಾಯ್ಕ್ ಪುಣೆಯಲ್ಲಿ ನೆಲೆಸಿದ್ದರು. ಆದರೆ ಪತಿ- ಪತ್ನಿಯರ ಅಕ್ರಮ ಸಂಬಂಧ ಎರಡು ಕುಟುಂಬದ ಗಂಡಂದಿರನ್ನೇ ಅಂತ್ಯಗೊಳಿಸುವಂತೆ ಮಾಡಿದೆ. ಈ ಎರಡು ಕುಟುಂಬಗಳ ಅಕ್ರಮ ಸಂಬಂಧ ಇತರರಿಗೂ ತಿಳಿದಿತ್ತು. ಇದೇ ವಿಚಾರದಲ್ಲಿ ಎರಡು ಕುಟುಂಬಗಳ ನಡುವೆ ಜಗಳವೂ ನಡೆದಿತ್ತು. ಇದೇ ವಿಚಾರದಲ್ಲಿ ಸಿಟ್ಟಿಗೆದ್ದ ಗುರುಪ್ರಸಾದ್ ರಾಣೆ ಆರು ತಿಂಗಳ ಹಿಂದೆಯೇ ವಿನಾಯಕ್ ನಾಯ್ಕ್ ಅವರನ್ನು ಕೊಲೆ ಮಾಡಲು ಸ್ಕೆಚ್ ಹಾಕಿದ್ದ. ಇದಕ್ಕಾಗಿ ಹಳೇ ಸ್ವಿಫ್ಟ್ ಕಾರನ್ನು ಖರೀದಿಸಿ ಕೊಟ್ಟು ದೆಹಲಿ ಮೂಲದ ಸುಪಾರಿ ಕಿಲ್ಲರ್ ಗಳನ್ನೂ ಸಂಪರ್ಕಿಸಿದ್ದ. ಆದರೆ ಕೊಲೆಗೆ ಆದೇಶ ನೀಡಿರಲಿಲ್ಲ.
ಇದೇ ವೇಳೆ, ಸೆ.3ರಂದು ವಿನಾಯಕ್ ನಾಯ್ಕ್ ತನ್ನ ಪತ್ನಿಯೊಂದಿಗೆ ಕಾರವಾರದ ಹುಟ್ಟೂರು ಹಣಕೋಣಕ್ಕೆ ಬಂದಿದ್ದರು. ಸ್ಥಳೀಯ ದೇವಸ್ಥಾನದಲ್ಲಿ ಕಾರ್ಯಕ್ರಮ ಮತ್ತು ತಾಯಿಯ ಡೆತ್ ಎನಿವರ್ಸರಿಯೂ ಇದ್ದುದಕ್ಕೆ ಊರಿಗೆ ಬಂದಿದ್ದು ಸೆ.22ರಂದು ಮರಳಿ ಪುಣೆಗೆ ಹಿಂತಿರುಗಲು ತಯಾರಿ ನಡೆಸಿದ್ದ. ಇದೇ ಸಂದರ್ಭದಲ್ಲಿ ಸೆ.19ರಂದು ರಾಣೆ ಪತ್ನಿ ಹಣಕೋಣಕ್ಕೆ ಬಂದು ವಿನಾಯಕ್ ನಾಯ್ಕ್ ಕುಟುಂಬಸ್ಥರ ಜೊತೆಗೆ ಜಗಳ ಮಾಡಿದ್ದಳು. ಇದೇ ವಿಚಾರದಲ್ಲಿ ನಾಯ್ಕ್ ನೇರವಾಗಿ ಗುರುಪ್ರಸಾದ್ ರಾಣೆಗೆ ಫೋನ್ ಮಾಡಿ, ನಿನ್ನ ಪತ್ನಿಯನ್ನು ಕಳಿಸಿಕೊಟ್ಟು ನನ್ನ ಮರ್ಯಾದೆ ತೆಗೆಸ್ತೀಯಾ.. ದೂರ ಇದ್ದರೆ ಒಳ್ಳೆದು ಎಂದು ವಾರ್ನ್ ಮಾಡಿದ್ದ. ಇದೇ ವಿಚಾರದಲ್ಲಿ ಇಬ್ಬರ ನಡುವೆ ಮಾತಿನ ಚಕಮಕಿಯೂ ನಡೆದಿತ್ತು. ಇದೇ ಸಿಟ್ಟಿನಲ್ಲಿ ಗುರುಪ್ರಸಾದ್ ರಾಣೆ ತಾನು ಮೊದಲೇ ಗೊತ್ತು ಮಾಡಿದ್ದ ಸುಪಾರಿ ಹಂತಕರಿಗೆ ಕೊಲ್ಲುವುದಕ್ಕೆ ಆರ್ಡರ್ ಮಾಡಿದ್ದ. ಭಾನುವಾರ ಬೆಳಗ್ಗೆ ಪುಣೆಗೆ ಹಿಂತಿರುಗಲು ರೆಡಿಯಾಗುತ್ತಿದ್ದಾಗಲೇ ಮೂವರು ಹಂತಕರು ತಲವಾರು ಬೀಸಿ ಪತ್ನಿಯೆದುರಲ್ಲೇ ಭೀಕರವಾಗಿ ಕೊಲೆ ಮಾಡಿ ಹೋಗಿದ್ದರು.
ಕೊಲೆ ಕೃತ್ಯದ ಬಳಿಕ ತನಿಖೆ ಆರಂಭಿಸಿದ ಪೊಲೀಸರಿಗೆ ಎರಡು ಕುಟುಂಬಗಳ ನಡುವಿನ ದ್ವೇಷ, ಅಕ್ರಮ ಸಂಬಂಧ ಬಗ್ಗೆ ಯಾರು ಕೂಡ ಮಾಹಿತಿ ನೀಡಿರಲಿಲ್ಲ. ಸಾಂದರ್ಭಿಕ ಸಾಕ್ಷ್ಯ ಆಧರಿಸಿ ಪೊಲೀಸರು ತನಿಖೆ ನಡೆಸಿದ್ದರು. ಆದರೆ ಘಟನಾ ಸ್ಥಳದಲ್ಲಿ ದರೋಡೆ ಆಗದೇ ಇದ್ದುದು ಅಂಡರ್ ವರ್ಲ್ಡ್ ಕನೆಕ್ಷನ ಇರುವ ಬಗ್ಗೆ ಸಂಶಯ ಎದ್ದಿತ್ತು. ಪುಣೆ ಉದ್ಯಮಿಯಾಗಿದ್ದರಿಂದ ಯಾರೋ ಕೊಲ್ಲಿಸಿದ್ದಾರೆ ಎನ್ನುವ ವದಂತಿಯೂ ಸೃಷ್ಟಿಯಾಗಿತ್ತು. ಆದರೆ ತನಿಖೆ ಸಾಗುತ್ತಲೇ ಎರಡು ಕುಟುಂಬಗಳ ನಡುವಿನ ದ್ವೇಷ, ಅಕ್ರಮ ಸಂಬಂಧ ಹೊರಗೆ ಬಂದಿದೆ ಎನ್ನುವ ಮಾಹಿತಿಯನ್ನು ಪೊಲೀಸರು ಹೊರಗೆಡವಿದ್ದಾರೆ.
Karwar Murder case twist, Extramarital affairs behind brutal murder of Pune businnes, prime accused died by suicide in Goa. The prime accused in the case Guruprasad Rane allegedly died by suicide in Goa and his body was found on Wednesday. The officer said Rane was in a relationship with Naik’s wife and Naik having an affair with Rane’s wife. Their families were aware of their relationships and there were fights between them over the issue in the past, said the officer.
04-08-25 01:00 pm
Bangalore Correspondent
Veerappa Moily, Kharge: 1980ರಲ್ಲೇ ನಾನು ಸಿಎಂ ಆ...
03-08-25 09:30 pm
Ravi Poojary Aide Kaviraj Arrested, Kolar Pol...
03-08-25 10:52 am
Dharmasthala News, High Court; ಧರ್ಮಸ್ಥಳ ಸುದ್ದ...
01-08-25 11:34 pm
‘Comedy Kiladigalu’, Chandrashekhar Siddi Sui...
01-08-25 10:45 pm
04-08-25 05:11 pm
HK News Desk
ಗೆಳೆಯನೊಂದಿಗೆ ಪತ್ನಿಯ ಸರಸ ; ಪರಿ ಪರಿ ಬೇಡಿಕೊಂಡರೂ...
04-08-25 02:16 pm
ವಿಮಾನದಲ್ಲಿ ಸಹ ಪ್ರಯಾಣಿಕನಿಗೆ ಕಪಾಳಮೋಕ್ಷ ; ಅಶಿಸ್ತ...
03-08-25 05:44 pm
ಮಾಲೆಗಾಂವ್ ಸ್ಫೋಟ ಪ್ರಕರಣದಲ್ಲಿ ನರೇಂದ್ರ ಮೋದಿ, ಭಾಗ...
03-08-25 04:25 pm
ಮಾಲೆಗಾಂವ್ ಪ್ರಕರಣದಲ್ಲಿ ಮೋಹನ್ ಭಾಗವತ್ ಬಂಧಿಸುವುದಕ...
01-08-25 10:48 pm
04-08-25 10:58 pm
Mangalore Correspondent
Dharmasthala Case, Jayan T: ಧರ್ಮಸ್ಥಳ ಕೇಸ್, ಪೊ...
04-08-25 10:34 pm
Mangalore Congress: ಮೆಸ್ಕಾಂ ನೌಕರರ ಪಿಂಚಣಿಗೆ ಗ್...
04-08-25 09:51 pm
Dharmasthala Case, SIT, Body Found: ಬಂಗ್ಲೆಗುಡ...
04-08-25 07:38 pm
ವಿದ್ಯುತ್ ನಿಗಮಗಳ ನೌಕರರಿಗೆ ಪಿಂಚಣಿಗಾಗಿ ಗ್ರಾಹಕರಿ...
04-08-25 06:05 pm
03-08-25 10:11 pm
Mangalore Correspondent
ಮುಖ್ಯಶಿಕ್ಷಕನ ವರ್ಗಾವಣೆಗೆ ಸಂಚು ; ಶಾಲೆಯ ವಾಟರ್ ಟ...
03-08-25 08:16 pm
Mangalore Massive Lucky Scheme Fraud: ಸುರತ್ಕಲ...
02-08-25 10:04 pm
ಪ್ರಜ್ವಲ್ ರೇವಣ್ಣ ಅಪರಾಧಿ ; 14 ವರ್ಷ ಅಲ್ಲ, ಜೀವನಪರ...
02-08-25 07:20 pm
Suhas Shetty Murder, NIA Raid Mangalore: ಸುಹಾ...
02-08-25 04:43 pm