ಬ್ರೇಕಿಂಗ್ ನ್ಯೂಸ್
09-12-20 01:43 pm Mangalore Correspondent ಕ್ರೈಂ
ಮಂಗಳೂರು, ಡಿ.8: ಮಂಗಳೂರಿನಲ್ಲಿ ಇತ್ತೀಚೆಗೆ ಕಂಡುಬಂದಿದ್ದ ಗೋಡೆ ಬರಹ ಪ್ರಕರಣ ಪೊಲೀಸರಿಗೆ ಸವಾಲಾಗಿ ಪರಿಣಮಿಸಿತ್ತು. ಒಂದೆಡೆ ಇಲಾಖೆಯ ಸಿಸಿಟಿವಿಗಳು ಕೈಕೊಟ್ಟಿರುವುದು ಮತ್ತು ಖಾಸಗಿ ಕಟ್ಟಡಗಳ ಸಿಸಿಟಿವಿಗಳಲ್ಲೂ ಯಾವುದೇ ಕುರುಹು ಸಿಗದೇ ಇದ್ದುದು ತಲೆಬಿಸಿಗೆ ಕಾರಣವಾಗಿತ್ತು. ಆದರೆ, ಘಟನೆ ನಡೆದ ಒಂದೇ ವಾರದಲ್ಲಿ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಮಂಗಳೂರಿಗೆ ಆಗಮಿಸಿದ್ದು ಮತ್ತು ಅದೇ ಸಂದರ್ಭದಲ್ಲಿ ಒಬ್ಬನನ್ನು ಪೊಲೀಸರು ವಶಕ್ಕೆ ಪಡೆದಿದ್ದು ಅಚ್ಚರಿ ಸೃಷ್ಟಿಸಿತ್ತು.
ಕಾರ್ಯಕ್ರಮ ನಿಮಿತ್ತ ಮಂಗಳೂರಿಗೆ ಬಂದಿದ್ದ ಗೃಹ ಸಚಿವರಿಗೆ ಗೋಡೆ ಬರಹದ್ದೇ ಸವಾಲಿನ ಪ್ರಶ್ನೆಯಾಗಿತ್ತು. ಹೀಗಾಗಿ ಪೊಲೀಸರಿಗೆ ಮೊದಲೇ ಒತ್ತಡ ಬಿದ್ದಿತ್ತು. ಏನೇ ಆದ್ರೂ ಆರೋಪಿಗಳನ್ನು ಆದಷ್ಟು ಬೇಗನೆ ಪತ್ತೆ ಮಾಡಬೇಕು ಎಂದು ಸೂಚನೆ ನೀಡಲಾಗಿತ್ತು. ಹೀಗಾಗಿ ಮಂಗಳೂರು ಕಮಿಷನರ್, ಸಿಸಿಬಿ ಮತ್ತು ಕದ್ರಿ ಪೊಲೀಸರನ್ನು ಒಳಗೊಂಡು ಪ್ರತ್ಯೇಕ ನಾಲ್ಕು ತಂಡಗಳನ್ನು ರಚನೆ ಮಾಡಿದ್ದರು. ಆದರೆ, ಏನೇ ಒತ್ತಡ ಬಿದ್ದರೂ, ತನಿಖೆ ಶುರುವಿಟ್ಟಿದ್ದ ಪೊಲೀಸರಿಗೆ ಯಾವುದೇ ಸುಳಿವೂ ಸಿಕ್ಕಿರಲಿಲ್ಲ. ಇದೇ ಸಂದರ್ಭದಲ್ಲಿ ಪೊಲೀಸ್ ಇಲಾಖೆಯ ಹೊಣೆ ಹೊತ್ತ ಗೃಹ ಸಚಿವರು ಬರಬೇಕೇ..? ತನಿಖೆ ಹೊಣೆ ಹೊತ್ತಿದ್ದ ಪೊಲೀಸರಿಗೆ ತಲೆ ಚಿಟ್ಟು ಹಿಡಿಯುವಂಥ ಸ್ಥಿತಿ ಎದುರಾಗಿತ್ತು.

ಒಂದಷ್ಟು ಮಂದಿ ಜಾಲತಾಣ ಸೇರಿ ಟೆಕ್ನಿಕಲ್ ವಿಚಾರದಲ್ಲಿ ತಡಕಾಡಿದ್ರೆ, ಮತ್ತೊಂದಷ್ಟು ಮಂದಿ ಸಿಸಿಟಿವಿ ಹಿಂದೆ ಬಿದ್ದಿದ್ದರು. ಯಾರ್ಯಾರದ್ದೋ ಮನೆ ಬಾಗಿಲು ಎಡತಾಕಿ ಸಿಸಿಟಿವಿ ನೋಡಲು ಗೋಗರೆಯುತ್ತಿದ್ದರು. ಇನ್ನೊಂದಷ್ಟು ಮಂದಿ ಹಳೆ ಅಪರಾಧಿಗಳು, ಮೊಬೈಲ್ ಲೊಕೇಶನ್ ಟ್ರೇಸ್ ಹೀಗೆ ಬೇರೆ ಬೇರೆ ಕೋನಗಳಲ್ಲಿ ತಪಾಸಣೆಯಲ್ಲಿ ತೊಡಗಿದ್ದರು. ಆದರೆ, ಇವರು ಏನೇ ತಿಪ್ಪರಲಾಗ ಹಾಕಿದ್ರೂ ಸುಳಿವು ಸಿಕ್ಕಿರಲಿಲ್ಲ.
ಪೊಲೀಸರನ್ನು ಉಸಿರಾಡಿಸಿದ್ದೇ ಆ ವಕ್ತಿ !
ಪೊಲೀಸರು ಒಂದೆಡೆ ಗೋಡೆ ಬರಹದ ಬೆನ್ನತ್ತಿ ಎಗರಾಡುತ್ತಿರ ಬೇಕಿದ್ದರೆ, ಒಂದು ದಿನ ವೃದ್ಧ ವ್ಯಕ್ತಿಯೊಬ್ಬರು ಕದ್ರಿ ಠಾಣೆಗೆ ಬಂದಿದ್ದರು. ಠಾಣಾಧಿಕಾರಿಯನ್ನು ಭೇಟಿಯಾಗಿ ವೃತ್ತಾಂತ ಬಿಚ್ಚಿಟ್ಟಿದ್ದರು. ತನ್ನ ಮಗ ಇಂಜಿನಿಯರಿಂಗ್ ಸ್ಟೂಡೆಂಟ್. ಆತನ ಭವಿಷ್ಯ ಹಾಳಾಗಬಾರದು, ಇದರಲ್ಲಿ ಆತನ ಪಾತ್ರ ಏನೂ ಇಲ್ಲ ಎಂದು ಪರಿ ಪರಿಯಾಗಿ ಬೇಡಿಕೊಂಡರು. ಅಲ್ಲಿವರೆಗೂ ನಡುನೀರಿನಲ್ಲಿ ಬಿದ್ದು ವಿಲವಿಲ ಒದ್ದಾಡುತ್ತಿದ್ದ ಪೊಲೀಸರಿಗೆ ಮರದ ದಿಮ್ಮಿಯೇ ತೇಲಿ ಬಂದಂತಾಗಿತ್ತು. ಆನಂತ್ರ ಎರಡು ದಿನ ಕಳೆಯುವಷ್ಟರಲ್ಲಿ ಗೃಹ ಸಚಿವರು ಮಂಗಳೂರಿಗೆ ಬಂದಿದ್ದರು. ಬೆಳಗ್ಗೆ ಸುದ್ದಿಗಾರರಲ್ಲಿ ಆರೋಪಿಗಳ ಸುಳಿವು ಸಿಕ್ಕಿದೆ ಎಂದಿದ್ದರು. ಸಂಜೆಯ ವೇಳೆಗೆ ಈ ಸುದ್ದಿ ಮಾಧ್ಯಮಕ್ಕೆ ಲೀಕ್ ಆಗಿತ್ತು. ಒಬ್ಬನ ಬಂಧನ ಆಗಿದೆ ಅನ್ನುವ ಸುದ್ದಿ ಮಾಧ್ಯಮಗಳಲ್ಲಿ ಬಂದಿತ್ತು. ಆದರೆ, ಇಲಾಖೆಯ ಹಿರಿಯಧಿಕಾರಿಗಳು ಮಾತ್ರ ಆನಂತರ 2-3 ದಿನ ಕಳೆದರೂ ಬಂಧನ ಆಗೇ ಇಲ್ಲ ಎನ್ನುತ್ತಿದ್ದರು.

ವೃದ್ಧ ವ್ಯಕ್ತಿಯ ಮಾತು ಕೇಳಿದ ಪೊಲೀಸರು ಮೊದಲಿಗೆ ಎತ್ತಿದ್ದೇ ಇಂಜಿನಿಯರಿಂಗ್ ಕಲಿಯುತ್ತಿದ್ದ ಮಾಝ್ ಅಹ್ಮದ್ ಎಂಬ ಹದಿಹರೆಯದ ಯುವಕನನ್ನು. ಆತನನ್ನು ವಶಕ್ಕೆ ಪಡೆದು ವಿಚಾರಿಸಿದಾಗ, ಮತ್ತಷ್ಟು ವಿಚಾರ ಬಯಲಾಯ್ತು. ಕೋರ್ಟ್ ಆವರಣದಲ್ಲಿ ಎರಡು ವಾರಗಳ ಮೊದಲೇ ಬರೆದಿದ್ದು ಮತ್ತು ಅದು ಅದು ಸಾರ್ವಜನಿಕರ ಗಮನ ಸೆಳೆದಿಲ್ಲ ಎಂದು ಬೇರೆ ಜಾಗ ಹುಡುಕಾಡಿದ್ದನ್ನೂ ಹೇಳಿದ್ದ. ಕೊನೆಗೆ ಬಿಜೈ ಬಳಿಯ ಅಪಾರ್ಟ್ಮೆಂಟ್ ಆವರಣದ ಗೋಡೆಯನ್ನು ಗುರುತಿಸಿದ್ದು ಮಾಝ್ ಗೆಳೆಯ ಮೊಹಮ್ಮದ್ ಶಾರೀಕ್. ಆದರೆ, ಅಲ್ಲಿ ಬರೆಯುವುದಕ್ಕೆ ಮಾಝ್ ಅಹ್ಮದ್ ಹೋಗಿರಲಿಲ್ಲ. ಶಾರೀಕ್ ಒತ್ತಾಯ ಮಾಡಿದ್ರೂ ಆತ ಹೋಗಿರಲಿಲ್ವಂತೆ. ಕೊನೆಗೆ, ಮೊಹ್ಮದ್ ಶಾರೀಕ್ ಒಬ್ಬಂಟಿಯಾಗೇ ಬಂದು ಮೊದಲೇ ನಿಶ್ಚಯಿಸಿದ್ದ ಬರಹವನ್ನು ಬರೆದು ಹೋಗಿದ್ದ. ರಸ್ತೆಗೆ ಕಾಣುವಂತಿದ್ದ ಲಷ್ಕರ್ ಜಿಂದಾಬಾದ್ ಬರಹ ಮರುದಿನ ಸಂಚಲನ ಸೃಷ್ಟಿಸಿದ್ದಲ್ಲದೆ, ದೊಡ್ಡ ಸುದ್ದಿಯಾಗಿತ್ತು.

ವಿದೇಶದಿಂದ ಬಂದಿತ್ತು ಹುಕುಂ !
ಬಿಕಾಂ ಪದವೀಧರನಾಗಿದ್ದ ಮೊಹಮ್ಮದ್ ಶಾರೀಕ್ ಗೆ ವಿದೇಶದಿಂದ ಒಬ್ಬಾತ ಕರೆ ಮಾಡುತ್ತಿದ್ದ. ಮಂಗಳೂರಿನಲ್ಲಿ ಗೋಡೆ ಬರಹ ಬರೆಯಲು ಆತನೇ ಸೂಚನೆ ನೀಡಿದ್ದು. ಸಿರಿಯಾ, ಪಾಕಿಸ್ತಾನಗಳಲ್ಲಿ ಗೋಡೆ ಬರಹ ಬರೆದು ಪ್ರಚಾರ ಪಡೆದವರಿದ್ದಾರೆ. ಅಂಥ ಕಾರ್ಯ ಮಾಡುವುದು ದೇವರಿಗೆ ಪ್ರೀತಿ. ಈ ಕಾರ್ಯದಿಂದ ನಿನಗೆ ಸ್ವರ್ಗ ಸಿಗುತ್ತದೆ ಎಂದು ಆತ ಶಾರೀಕ್ ಮೆದುಳನ್ನು ಮಾಲಿಶ್ ಮಾಡಿದ್ದ. ಇದರಿಂದ ಉತ್ತೇಜಿತನಾಗಿದ್ದ ಮೊಹಮ್ಮದ್ ಶಾರೀಕ್, ತನ್ನ ಕೆಲಸ ಪೂರೈಸಲು ತನ್ನ ಸ್ನೇಹಿತನಾಗಿದ್ದ ಮಾಝ್ ಬೆಂಬಲ ಪಡೆದಿದ್ದ. ಇಬ್ಬರೂ ತೀರ್ಥಹಳ್ಳಿ ಮೂಲದವರಾಗಿದ್ದರಿಂದ ಮಾಝ್ ಮಂಗಳೂರಿನಲ್ಲಿ ಮಾಡಿಕೊಂಡಿದ್ದ ಬಾಡಿಗೆ ಮನೆಗೆ ಶಾರೀಕ್ ಬರುತ್ತಿದ್ದ. ಮೊದಲು ಬರೆದಿದ್ದು ಪ್ರಚಾರ ಪಡೆಯದ ಮತ್ತೊಮ್ಮೆ ಬರೆಯಲು ಪ್ರೇರಣೆ ಕೊಟ್ಟಿದ್ದೂ ಅದೇ ವಿದೇಶದಲ್ಲಿ ಕೂತಿರೋ ವ್ಯಕ್ತಿಯಂತೆ. ಆದರೆ, ಆತ ಯಾರು, ಆತನ ಉದ್ದೇಶ ಏನಿತ್ತು ಎನ್ನುವುದು ತನಿಖೆಯಲ್ಲಿ ಗೊತ್ತಾಗಬೇಕು.
ಇದನ್ನೂ ಓದಿ:
Detailed report by Headline Karnataka on How the Mangalore Police Nabbed two persons involved in Painting Pro-Terror Graffiti on the walls of Mangalore City.
13-12-25 10:47 pm
HK News Desk
ಕುರ್ಚಿ ಗುದ್ದಾಟ ; ಪರಮೇಶ್ವರ್ ಸಿಎಂ ಆಗಲೆಂದು ಹಾರೈಸ...
13-12-25 08:38 pm
BJP MLA Subhash Guttedar: ಅಳಂದ ಮತಗಳವು ಪ್ರಕರಣ...
13-12-25 04:00 pm
Pet Parrot, Bangalore Youth Death: 2 ಲಕ್ಷ ರೂ....
12-12-25 08:47 pm
Yatnal, Dk Shivakumar, Vijayendra: ಡಿಕೆ ಸಿಎಂ,...
12-12-25 07:47 pm
13-12-25 08:34 pm
HK News Desk
ಕಾರ್ತಿಗೈ ದೀಪೋತ್ಸವ ವಿವಾದ ; ಮಸೀದಿಯವರೇ ಆಕ್ಷೇಪಿಸಿ...
12-12-25 11:00 pm
ಮೋದಿ ಉತ್ತರಾಧಿಕಾರಿ ಯಾರು ? ಆರೆಸ್ಸೆಸ್ ನಿರ್ಧರಿಸುತ...
11-12-25 04:24 pm
ಮಂಗಳೂರು ಏರ್ಪೋರ್ಟ್ಗೆ ವಿದೇಶಿ ನೇರ ವಿಮಾನ ವ್ಯವಸ್...
11-12-25 02:09 pm
ತಮಿಳುನಾಡಿನಲ್ಲಿ ಕಾರ್ತಿಗೈ ದೀಪಕ್ಕೆ ಹೈಕೋರ್ಟ್ ಅನುಮ...
10-12-25 11:13 pm
13-12-25 11:02 pm
Mangalore Correspondent
ಕೆಂಜಾರು ಬಳಿ ಗೋವುಗಳನ್ನು ಕಡಿದು ಹತ್ಯೆ ; ಪೊದೆಯಲ್ಲ...
13-12-25 04:36 pm
ಸತತ ನಾಲ್ಕು ಗಂಟೆ ಸ್ಕೇಟಿಂಗ್ ನಲ್ಲಿ ಶಾಸ್ತ್ರೀಯ ನೃತ...
12-12-25 10:28 pm
ದೈವ ನರ್ತನದ ಬಗ್ಗೆ ನಮಗೆ ಸಂಶಯಗಳಿಲ್ಲ, ಗ್ರಾಮ ದೈವಕ್...
12-12-25 07:32 pm
ಆಯುಷ್ ಇಲಾಖೆಯಲ್ಲಿ ಅವಧಿ ಮೀರಿದ ಔಷಧ ಪೂರೈಕೆ ; ಅಧಿಕ...
12-12-25 02:02 pm
13-12-25 12:51 pm
HK News Desk
ಹಣ್ಣಿನ ವ್ಯಾಪಾರಿಯನ್ನು ಅಡ್ಡಗಟ್ಟಿ 19 ಸಾವಿರ ನಗದು...
12-12-25 01:58 pm
Hassan Crime, Murder: ಸ್ನೇಹಿತನನ್ನು ಪಾರ್ಟಿಗೆ ಕ...
11-12-25 09:53 pm
Bangalore Crime, Blackmail, Suicide: ಬೆತ್ತಲೆ...
11-12-25 07:49 pm
Imprisonment in Malpe Case: ಮಲ್ಪೆಯಲ್ಲಿ ನೆಲೆಸಿ...
10-12-25 10:14 pm