ಬ್ರೇಕಿಂಗ್ ನ್ಯೂಸ್
16-08-24 03:52 pm Giridhar, HK News Desk ಕ್ರೈಂ
ಕೊಲ್ಕತ್ತಾ, ಆಗಸ್ಟ್ 16: 11 ವರ್ಷಗಳ ಹಿಂದೆ ರಾಜಧಾನಿ ದೆಹಲಿಯಲ್ಲಿ ನಿರ್ಭಯಾ ಎಂಬ ಹೆಣ್ಮಗಳನ್ನು ಬಸ್ಸಿನಲ್ಲೇ ಅತ್ಯಂತ ವಿಕೃತವಾಗಿ ಅತ್ಯಾಚಾರಗೈದು ಆಕೆಯ ಮರ್ಮಾಂಗಕ್ಕೆ ಕಬ್ಬಿಣದ ರಾಡ್ ತೂರಿಸಿ, ಘೋರವಾಗಿ ಹತ್ಯೆ ಮಾಡಲಾಗಿತ್ತು. ಅಂಥದ್ದೇ ಕೃತ್ಯ ಪಶ್ಚಿಮ ಬಂಗಾಳದ ರಾಜಧಾನಿ ಕೊಲ್ಕತ್ತಾದಲ್ಲಿ ನಡೆದಿದ್ದು, ವೈದ್ಯ ವಿದ್ಯಾರ್ಥಿನಿಯನ್ನು ಸರಕಾರಿ ಆಸ್ಪತ್ರೆಯಲ್ಲೇ ಅತ್ಯಂತ ಭೀಕರವಾಗಿ ಅತ್ಯಾಚಾರಗೈದು ಅಮಾನುಷ ರೀತಿಯಲ್ಲಿ ಕೊಲೆ ಮಾಡಲಾಗಿದೆ.
ವಾರದ ಹಿಂದೆ ಘಟನೆ ನಡೆದಿದ್ದು, ಭೀಭತ್ಸ ಘಟನೆಯ ಬಗ್ಗೆ ಆಕ್ರೋಶ ಭುಗಿಲೇಳುತ್ತಿದ್ದಂತೆ ದೇಶಾದ್ಯಂತ ವೈದ್ಯರು ಬೀದಿಗಿಳಿದಿದ್ದಾರೆ. ವಿಕೃತ ಘಟನೆಯ ಬಗ್ಗೆ ಪಶ್ಚಿಮ ಬಂಗಾಳ ಸರಕಾರ ಮತ್ತು ಅಲ್ಲಿನ ಪೊಲೀಸರು ನಿರ್ಲಕ್ಷ್ಯ ವಹಿಸಿದ್ದನ್ನು ಖಂಡಿಸಿ ವಿದ್ಯಾರ್ಥಿನಿಯ ಹೆತ್ತವರು ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಹೈಕೋರ್ಟ್ ಸೂಚನೆಯಂತೆ ಪ್ರಕರಣವನ್ನು ಸಿಬಿಐ ಅಧಿಕಾರಿಗಳು ತನಿಖೆಗೆ ಎತ್ತಿಕೊಂಡಿದ್ದಾರೆ. 31 ವರ್ಷದ ವೈದ್ಯಕೀಯ ಪಿಜಿ ಕಲಿಯುತ್ತಿದ್ದ ವಿದ್ಯಾರ್ಥಿನಿಯ ಹತ್ಯೆ ಖಂಡಿಸಿ ಆಗಸ್ಟ್ 17 ಮತ್ತು 18ರಂದು ವೈದ್ಯರು ದೇಶಾದ್ಯಂತ ಪ್ರತಿಭಟನೆ ನಡೆಸಲಿದ್ದಾರೆ.
ಆಟೋಪ್ಸಿಯಲ್ಲಿ 150 ಮಿ. ಗ್ರಾಂ ವೀರ್ಯ ಪತ್ತೆ
ಪೋಸ್ಟ್ ಮಾರ್ಟಂ ವರದಿಯಲ್ಲಿ ವಿದ್ಯಾರ್ಥಿನಿ ಮೇಲಾದ ಅಮಾನುಷ ವಿಕೃತಿಯ ಸ್ವರೂಪ ಬಯಲಾಗಿದೆ. ಆಕೆಯ ಮರ್ಮಾಂಗದಲ್ಲಿ 150 ಮಿಲ್ಲಿ ಗ್ರಾಮ್ ನಷ್ಟು ವೀರ್ಯ ಪತ್ತೆಯಾಗಿದೆ ಎನ್ನುವ ಮಾಹಿತಿಯಿದ್ದು, ಹೀಗಾಗಿ ಐದಾರು ಮಂದಿ ಸೇರಿ ಸಾಮೂಹಿಕ ಅತ್ಯಾಚಾರಗೈದು ಕೊಂದಿರುವ ಶಂಕೆ ವ್ಯಕ್ತವಾಗಿದೆ. ಅಲ್ಲದೆ, ಕುತ್ತಿಗೆ, ಎರಡೂ ಕಿವಿಯನ್ನು ಕಚ್ಚಿ ಹರಿದು ಹಾಕಿದ್ದಾರೆ. ತುಟಿಯ ಚರ್ಮವನ್ನು ಸುಲಿದು ತೆಗೆಯಲಾಗಿದೆ. ಕುತ್ತಿಗೆಯನ್ನು ವೈರ್ ನಲ್ಲಿ ಬಿಗಿದು ಕುತ್ತಿಗೆ, ಗಂಟಲನ್ನು ಒಡೆದು ಹಾಕಿದ್ದಾರೆ. ಕಣ್ಣಿಗೆ ಕನ್ನಡಕ ಹಾಕಿದ್ದನ್ನು ಒಡೆದಿದ್ದು, ಕನ್ನಡಕದ ಚೂರು ಕಣ್ಣಿನ ಒಳಗೆ ಸೇರಿದೆ. ಅಮಾನುಷ ವಿಕೃತಿಯನ್ನು ಪೋಸ್ಟ್ ಮಾರ್ಟಂ ವರದಿ ತೆರೆದಿಟ್ಟಿದೆ. ಕೊಲ್ಕತ್ತಾದ ಆರ್.ಜಿ. ಕಾರ್ ಎನ್ನುವ ಸರಕಾರಿ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಆಗಸ್ಟ್ 9ರಂದು ನಸುಕಿನ ವೇಳೆಗೆ 3ರಿಂದ 5 ಗಂಟೆಯ ಒಳಗಡೆ ಘಟನೆ ನಡೆದಿದ್ದು, ಆಸ್ಪತ್ರೆಯವರು ಮಾತ್ರ ಇಂಥ ಭೀಭತ್ಸ ವಿಕೃತಿಯಾಗಿದ್ದರೂ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆಂದು ಹೇಳಿ ಆರಂಭದಲ್ಲಿ ಪ್ರಕರಣ ಮುಚ್ಚಿ ಹಾಕುವ ಯತ್ನ ಮಾಡಿದ್ದರು.
ಪೋಸ್ಟ್ ಮಾರ್ಟಂ ವರದಿಯನ್ನು ಮುಂದಿಟ್ಟು ತಮ್ಮ ಮಗಳ ಮೇಲೆ ಗ್ಯಾಂಗ್ ರೇಪ್ ಆಗಿದೆಯೆಂದು ಹೆತ್ತವರು ಹೈಕೋರ್ಟಿನಲ್ಲಿ ದೂರು ದಾಖಲಿಸಿದ್ದು, ಸಿಬಿಐ ತನಿಖೆಗೆ ಒತ್ತಾಯ ಮಾಡಿದ್ದರು. ಆಟೋಪ್ಸಿ ವರದಿಯಲ್ಲಿ 150 ಗ್ರಾಮ್ ನಷ್ಟು ವೀರ್ಯ ಪತ್ತೆಯಾಗಿದೆ ಎಂದು ಮಾಹಿತಿ ಇದ್ದು, ಒಂದಕ್ಕಿಂತ ಹೆಚ್ಚು ಮಂದಿ ಕೃತ್ಯದಲ್ಲಿ ತೊಡಗಿದ್ದಾರೆ ಎನ್ನುವುದಕ್ಕಿದು ಸಾಕ್ಷಿ. ಆದರೆ ಪಶ್ಚಿಮ ಬಂಗಾಳ ಪೊಲೀಸರು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಕೋರ್ಟ್ ಗಮನ ಸೆಳೆಯಲಾಗಿತ್ತು. ಇದಕ್ಕೂ ಮುನ್ನ ಕೊಲ್ಕತ್ತಾ ಪೊಲೀಸರು, ಆಸ್ಪತ್ರೆಯಲ್ಲಿ ಕೆಲಸಕ್ಕಿದ್ದ ಸಂಜಯ್ ರಾಯ್ ಎನ್ನುವ ವ್ಯಕ್ತಿಯನ್ನು ಬಂಧಿಸಿದ್ದು, ಆತನೇ ಕೃತ್ಯ ಎಸಗಿದ್ದಾನೆಂದು ಬಿಂಬಿಸಲು ಯತ್ನಿಸಿದ್ದಾರೆ. ಈ ರೀತಿಯ ಕೃತ್ಯ ಒಬ್ಬ ವ್ಯಕ್ತಿಯಿಂದ ಮಾಡಲು ಸಾಧ್ಯವಿಲ್ಲ, ಇಷ್ಟು ಭಯಾನಕ ರೀತಿಯ ಕ್ರೌರ್ಯ ಆಗಿದ್ದರೂ ಪಶ್ಚಿಮ ಬಂಗಾಳ ಸರಕಾರ ಮೌನ ವಹಿಸಿದೆ. ಆಸ್ಪತ್ರೆಯಲ್ಲಿ ಇಂಥ ಕೃತ್ಯ ಆಗಿದ್ದರೆ, ಅಲ್ಲಿನ ವೈದ್ಯಾಧಿಕಾರಿಗಳು, ಮುಖ್ಯಸ್ಥರು ಹೊಣೆಗಾರರಲ್ಲವೇ ಎಂದು ಕೋರ್ಟಿನಲ್ಲಿ ಪ್ರಶ್ನೆ ಮಾಡಲಾಗಿದೆ. ಮೊದಲು ಸುಸೈಡ್ ಎಂದು ಬಿಂಬಿಸಿದ್ದರಿಂದ ಮೆಡಿಕಲ್ ಕಾಲೇಜು ಆಡಳಿತವೇ ಕೃತ್ಯದಲ್ಲಿ ಭಾಗಿಯಾಗಿದೆಯೇ ಎಂದು ಕೋರ್ಟ್ ಪ್ರಶ್ನೆ ಮಾಡಿದೆ.
ಆಸ್ಪತ್ರೆ ಮುಖ್ಯಸ್ಥನ ಪರ ನಿಂತ ಸರ್ಕಾರ
ಘಟನೆ ಕುರಿತಾಗಿ ಹೈಕೋರ್ಟ್ ಪಶ್ಚಿಮ ಬಂಗಾಳಕ್ಕೆ ಛೀಮಾರಿ ಹಾಕಿದ್ದಲ್ಲದೆ, ಆಸ್ಪತ್ರೆ ಮುಖ್ಯಸ್ಥ ಡಾ.ಸಂದೀಪ್ ಘೋಷ್ ಯಾಕೆ ಘಟನೆ ನಡೆದ ಕೂಡಲೇ ಪೊಲೀಸರಿಗೆ ದೂರು ನೀಡಿಲ್ಲ. ಆತ್ಮಹತ್ಯೆ ಎಂದು ಬಿಂಬಿಸಿ ಪ್ರಕರಣ ಮುಚ್ಚಿ ಹಾಕಲು ಯತ್ನಿಸಿದ್ದು ಯಾಕೆ ಎಂದು ಪ್ರಶ್ನೆ ಮಾಡಿದೆ. ಸಂದೀಪ್ ಘೋಷ್ ನನ್ನ ಒಂದೆಡೆ ಕಡ್ಡಾಯ ರಜೆಯಲ್ಲಿ ಕಳುಹಿಸಿದ್ದರೂ, ರಾಜ್ಯ ಸರಕಾರ ಆತನನ್ನು 24 ಗಂಟೆಯ ಒಳಗಡೆ ಇನ್ನೊಂದು ಮೆಡಿಕಲ್ ಕಾಲೇಜಿನ ಮುಖ್ಯಸ್ಥನಾಗಿ ನೇಮಕ ಮಾಡಿದೆ. ಇದಲ್ಲದೆ, ಆಟೋಪ್ಸಿ ಪರೀಕ್ಷೆಯನ್ನು ಸೂಕ್ತವಾಗಿ ನಡೆಸಿಲ್ಲ. ಕೃತ್ಯದಲ್ಲಿ ಇತರೇ ಪ್ರಭಾವಿಗಳು ಭಾಗಿಯಾಗಿರುವ ಕಾರಣಕ್ಕಾಗಿಯೇ ಆಟೋಪ್ಸಿಯನ್ನು ಸರಿಯಾಗಿ ನಿರ್ವಹಿಸಿಲ್ಲ ಎಂದು ಹೆತ್ತವರು ಶಂಕೆ ವ್ಯಕ್ತಪಡಿಸಿದ್ದಾರೆ. ರಾಜ್ಯ ಸರಕಾರದ ವಕೀಲರು ಮಾತ್ರ, ಸ್ಥಳೀಯ ಜುಡೀಶಿಯಲ್ ಮ್ಯಾಜಿಸ್ಟ್ರೇಟ್ ಮತ್ತು ಇಬ್ಬರು ಮಹಿಳಾ ವೈದ್ಯರ ಸಮ್ಮುಖದಲ್ಲಿಯೇ ಆಟೋಪ್ಸಿ ಮತ್ತು ಪೋಸ್ಟ್ ಮಾರ್ಟಂ ಮಾಡಲಾಗಿತ್ತು. ಅಲ್ಲದೆ, ಇದನ್ನು ವಿಡಿಯೋ ಚಿತ್ರೀಕರಿಸಲಾಗಿದೆ ಎಂದು ಹೈಕೋರ್ಟಿಗೆ ಮಾಹಿತಿ ನೀಡಿದ್ದಾರೆ.
ಗೂಂಡಾ ರಾಜ್ಯ, ಆಸ್ಪತ್ರೆಯಲ್ಲೇ ದಾಂಧಲೆ
ಸಿಬಿಐ ಅಧಿಕಾರಿಗಳು ತನಿಖೆ ಆರಂಭಿಸಿದ್ದು, ವೈದ್ಯರು, ಫಾರೆನ್ಸಿಕ್ ತಜ್ಞರು ಮತ್ತು ಅಧಿಕಾರಿಗಳು ಹೀಗೆ ತನಿಖಾ ದೃಷ್ಟಿಯಿಂದ ಮೂರು ತಂಡಗಳನ್ನು ರಚಿಸಲಾಗಿದೆ. ರಾತ್ರಿ ಡ್ಯೂಟಿಯಲ್ಲಿದ್ದ ವೈದ್ಯಕೀಯ ವಿದ್ಯಾರ್ಥಿನಿ ತನ್ನ ಕೆಲಸ ಮುಗಿಸಿ ನಸುಕಿನಲ್ಲಿ ಹಾಲ್ ನಲ್ಲಿ ನಿದ್ರಿಸಿದ್ದರು. ಈ ವೇಳೆ, ಅಲ್ಲಿಗೆ ನುಗ್ಗಿದ್ದ ದುಷ್ಕರ್ಮಿಗಳು ಅತ್ಯಾಚಾರ ಎಸಗಿದ್ದಲ್ಲದೆ, ವಿಕೃತವಾಗಿ ನಡೆದುಕೊಂಡಿದ್ದಾರೆ. ವೈದ್ಯ ವಿದ್ಯಾರ್ಥಿನಿಯ ಅಮಾನುಷ ಹತ್ಯೆಯನ್ನು ಖಂಡಿಸಿ ಪಶ್ಚಿಮ ಬಂಗಾಳ ರಾಜ್ಯದಾದ್ಯಂತ ವೈದ್ಯರು ಪ್ರತಿಭಟನೆ ನಡೆಸುತ್ತಿದ್ದರೆ, ಬುಧವಾರ ರಾತ್ರಿ ದುಷ್ಕರ್ಮಿಗಳ ತಂಡವೊಂದು ಘಟನೆ ನಡೆದಿರುವ ಆರ್.ಜಿ ಕಾರ್ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ನುಗ್ಗಿ ದಾಂಧಲೆ ನಡೆಸಿದೆ. ಆಸ್ಪತ್ರೆಯಲ್ಲಿ ವೈದ್ಯರು, ಇತರ ಸಿಬಂದಿಗಳ ಮೇಲೆ ಹಲ್ಲೆಯನ್ನೂ ನಡೆಸಿದೆ. ಮಾಧ್ಯಮಕ್ಕೆ ಹೇಳಿಕೆ ನೀಡದಂತೆ ಬೆದರಿಕೆ ಹಾಕಿದೆ.
ಇನ್ನೊಂದೆಡೆ ಘಟನೆ ನಡೆದಿರುವ ಆಸ್ಪತ್ರೆ ಆವರಣದಲ್ಲಿ ತುರ್ತಾಗಿ ನವೀಕರಣ ಕಾಮಗಾರಿ ಕೈಗೆತ್ತಿಕೊಂಡು ಅಲ್ಲಿನ ಸಾಕ್ಷಿಗಳನ್ನು ನಾಶಪಡಿಸುವ ಯತ್ನ ನಡೆದಿದೆ. ಹೀಗಾಗಿ ಆಸ್ಪತ್ರೆ ಅಧಿಕಾರಿಗಳೇ ಕೃತ್ಯದಲ್ಲಿ ಶಾಮೀಲಾಗಿರುವ ಶಂಕೆ ವ್ಯಕ್ತವಾಗಿದೆ. ವಿದ್ಯಾರ್ಥಿನಿ ಮುನ್ನಾ ದಿನ ರಾತ್ರಿ ತಾಯಿಗೆ ಫೋನ್ ಮಾಡಿ, ಉಷಾರಿದ್ದೇನೆ ಎಂದು ಹೇಳಿದ್ದಳು. ಆದರೆ ಮರುದಿನ ಮನೆಯವರಿಗೆ ಫೋನ್ ಮಾಡಿದ್ದ ಆಸ್ಪತ್ರೆ ಸಿಬಂದಿ, ವಿದ್ಯಾರ್ಥಿನಿ ಸುಸೈಡ್ ಮಾಡಿದ್ದಾಳೆಂದು ತಿರುಚಲು ಯತ್ನಿಸಿದ್ದರು. ಹೀಗಾಗಿ ಪ್ರಭಾವಿಗಳೇ ಈ ಕೃತ್ಯದಲ್ಲಿ ಶಾಮೀಲಾಗಿದ್ದು, ಕೊಲ್ಕತ್ತಾದಲ್ಲಿ ಗೂಂಡಾಗಳನ್ನು ಮುಂದಿಟ್ಟು ಘಟನೆಯನ್ನು ಮುಚ್ಚಿ ಹಾಕಲು ಯತ್ನಿಸಿದ್ದಾರೆ. ಇದೇ ವೇಳೆ, ನಿರ್ಭಯಾ ಮೀರಿದ ದುಷ್ಕೃತ್ಯ ಆಗಿದ್ದರೂ, ಕೇಂದ್ರ ಸರಕಾರದ ಪ್ರತಿನಿಧಿಗಳು, ಪ್ರಧಾನಿ ಮೋದಿ ಸುಮ್ಮನಿದ್ದಾರೆ ಎನ್ನುವ ಬಗ್ಗೆಯೂ ಜಾಲತಾಣದಲ್ಲಿ ಕೆಲವು ವೈದ್ಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹರ್ ಘರ್ ತಿರಂಗಾ ಜೊತೆಗೆ ಮಹಿಳೆಯರ ಮೇಲಿನ ದಾಳಿ ಬಗ್ಗೆಯೂ ಮಾತಾಡಿ ಎಂದು ಕಮೆಂಟ್ ಮಾಡಿದ್ದಾರೆ.
Kolkata doctor rape and murder case, top 10 developments in the case so far in Kannada. Sanjoy Roy, a civic volunteer, was taken into custody by the CBI for the murder of a 31-year-old trainee doctor at RG Kar Medical College and Hospital, whose body was discovered last Friday. The CBI is conducting a thorough investigation, including a medical examination of Roy and a three-pronged strategy focusing on the crime scene, court presentation, and coordination with Kolkata Police, according to NDTV.
04-08-25 01:00 pm
Bangalore Correspondent
Veerappa Moily, Kharge: 1980ರಲ್ಲೇ ನಾನು ಸಿಎಂ ಆ...
03-08-25 09:30 pm
Ravi Poojary Aide Kaviraj Arrested, Kolar Pol...
03-08-25 10:52 am
Dharmasthala News, High Court; ಧರ್ಮಸ್ಥಳ ಸುದ್ದ...
01-08-25 11:34 pm
‘Comedy Kiladigalu’, Chandrashekhar Siddi Sui...
01-08-25 10:45 pm
04-08-25 05:11 pm
HK News Desk
ಗೆಳೆಯನೊಂದಿಗೆ ಪತ್ನಿಯ ಸರಸ ; ಪರಿ ಪರಿ ಬೇಡಿಕೊಂಡರೂ...
04-08-25 02:16 pm
ವಿಮಾನದಲ್ಲಿ ಸಹ ಪ್ರಯಾಣಿಕನಿಗೆ ಕಪಾಳಮೋಕ್ಷ ; ಅಶಿಸ್ತ...
03-08-25 05:44 pm
ಮಾಲೆಗಾಂವ್ ಸ್ಫೋಟ ಪ್ರಕರಣದಲ್ಲಿ ನರೇಂದ್ರ ಮೋದಿ, ಭಾಗ...
03-08-25 04:25 pm
ಮಾಲೆಗಾಂವ್ ಪ್ರಕರಣದಲ್ಲಿ ಮೋಹನ್ ಭಾಗವತ್ ಬಂಧಿಸುವುದಕ...
01-08-25 10:48 pm
04-08-25 10:58 pm
Mangalore Correspondent
Dharmasthala Case, Jayan T: ಧರ್ಮಸ್ಥಳ ಕೇಸ್, ಪೊ...
04-08-25 10:34 pm
Mangalore Congress: ಮೆಸ್ಕಾಂ ನೌಕರರ ಪಿಂಚಣಿಗೆ ಗ್...
04-08-25 09:51 pm
Dharmasthala Case, SIT, Body Found: ಬಂಗ್ಲೆಗುಡ...
04-08-25 07:38 pm
ವಿದ್ಯುತ್ ನಿಗಮಗಳ ನೌಕರರಿಗೆ ಪಿಂಚಣಿಗಾಗಿ ಗ್ರಾಹಕರಿ...
04-08-25 06:05 pm
03-08-25 10:11 pm
Mangalore Correspondent
ಮುಖ್ಯಶಿಕ್ಷಕನ ವರ್ಗಾವಣೆಗೆ ಸಂಚು ; ಶಾಲೆಯ ವಾಟರ್ ಟ...
03-08-25 08:16 pm
Mangalore Massive Lucky Scheme Fraud: ಸುರತ್ಕಲ...
02-08-25 10:04 pm
ಪ್ರಜ್ವಲ್ ರೇವಣ್ಣ ಅಪರಾಧಿ ; 14 ವರ್ಷ ಅಲ್ಲ, ಜೀವನಪರ...
02-08-25 07:20 pm
Suhas Shetty Murder, NIA Raid Mangalore: ಸುಹಾ...
02-08-25 04:43 pm