ಬ್ರೇಕಿಂಗ್ ನ್ಯೂಸ್
12-08-24 02:50 pm Dinesh Nayak, Mangaluru ಕ್ರೈಂ
ಉಳ್ಳಾಲ, ಆ.12: ಭಾನುವಾರ ರಾತ್ರಿ ದುಷ್ಕರ್ಮಿಗಳಿಂದ ಬರ್ಬರ ಹತ್ಯೆಗೀಡಾದ ನಟೋರಿಯಸ್ ರೌಡಿ ಸಮೀರ್(34) ಅಲಿಯಾಸ್ ಕಡಪ್ಪರ ಸಮೀರ್ ಕೊಲೆಯ ಹಿಂದೆ ಕಾಸರಗೋಡು ಜಿಲ್ಲೆಯ ಉಪ್ಪಳದ ಗೋಲ್ಡ್ ಸ್ಮಗ್ಲಿಂಗ್ ದಂಧೆಯ ಕರಿಛಾಯೆ ಇದ್ದು, ಸುಪಾರಿ ಕಿಲ್ಲರ್ ಗಳಿಂದ ಕೊಲೆ ನಡೆದಿದೆ ಎಂದು ಕೊಲೆಯಾದ ಸಮೀರ್ ಆಪ್ತರು ಶಂಕೆ ವ್ಯಕ್ತಪಡಿಸಿದ್ದಾರೆ.
ನಿನ್ನೆ ರಾತ್ರಿ ಉಳ್ಳಾಲದ ಮುಕ್ಕಚ್ಚೇರಿ ಕಡಪ್ಪರ ನಿವಾಸಿ ಸಮೀರ್ ತನ್ನ ತಾಯಿ, ಪತ್ನಿ, ಇಬ್ಬರು ಪುಟ್ಟ ಮಕ್ಕಳೊಂದಿಗೆ ಕಾರಲ್ಲಿ ಕಲ್ಲಾಪು ಬಳಿಯ ಫಾಸ್ಟ್ ಫುಡ್ ಸೆಂಟರ್ ವೊಂದಕ್ಕೆ ಉಪಾಹಾರಕ್ಕೆ ತೆರಳಿದ್ದ ವೇಳೆ ಮತ್ತೊಂದು ಕಾರಲ್ಲಿ ಹಿಂಬಾಲಿಸಿ ಬಂದ ತಂಡವೊಂದು ತಾಯಿಯ ಎದುರಲ್ಲೇ ಮಾರಕಾಸ್ತ್ರಗಳನ್ನ ಹಿಡಿದು ಅಟ್ಟಾಡಿಸಿದ್ದಾರೆ. ತಪ್ಪಿಸಿಕೊಳ್ಳಲು ಸಮೀರ್ ರೈಲ್ವೇ ಟ್ರ್ಯಾಕ್ ಕಡೆ ಓಡಿದಾಗ ದುಷ್ಕರ್ಮಿಗಳು ಆತನನ್ನ ಕೊಚ್ಚಿ ಬರ್ಬರವಾಗಿ ಕೊಲೆ ಮಾಡಿ ತಾವು ಬಂದಿದ್ದ ಉಡುಪಿ ನೋಂದಣಿಯ ಸ್ವಿಫ್ಟ್ ಕಾರಿನಲ್ಲಿ ಪರಾರಿಯಾಗಿದ್ದರು. ಸಮೀರ್ ಉಳ್ಳಾಲದ ಟಾರ್ಗೆಟ್ ಗ್ಯಾಂಗ್ ಲೀಡರ್ ಆಗಿದ್ದ ಇಲ್ಯಾಸ್ ಕೊಲೆ ಸೇರಿದಂತೆ ಕೊಲೆಯತ್ನ, ದರೋಡೆ, ಮಾದಕ ವಸ್ತುಗಳ ಸಾಗಾಟ ಹೀಗೆ ಅನೇಕ ಪ್ರಕರಣಗಳನ್ನ ಎದುರಿಸುತ್ತಿದ್ದ. ತಿಂಗಳ ಹಿಂದೆ ದರೋಡೆ ಪ್ರಕರಣವೊಂದರಲ್ಲಿ ಮತ್ತೆ ಸಮೀರ್ ತನ್ನ ಸಹಚರರೊಂದಿಗೆ ಜೈಲು ಸೇರಿದ್ದ. ಮೃತ ಸಮೀರ್ ಪತ್ನಿ, ಎರಡು ವರುಷದ ಹೆಣ್ಣು, ನಾಲ್ಕು ತಿಂಗಳ ಗಂಡು ಮಗು, ತಾಯಿ, ಸಹೋದರ, ಸಹೋದರಿಯರನ್ನ ಅಗಲಿದ್ದಾರೆ.





ಕೊಲೆ ಹಿಂದೆ ಗೋಲ್ಡ್ ಸ್ಮಗ್ಲಿಂಗ್ ಮಾಫಿಯಾ ನೆರಳು !
ಉಪ್ಪಳದ ನಟೋರಿಯಸ್ ಕ್ರಿಮಿನಲ್ ಓರ್ವ ವಿದೇಶದಿಂದ ಭಾರತಕ್ಕೆ ವಿಮಾನದಲ್ಲಿ ಅಕ್ರಮವಾಗಿ ತರಿಸಿದ್ದ ಕೋಟಿ ಬೆಲೆಯ ಒಂದು ಕೆಜಿ ಚಿನ್ನವನ್ನು ಕೊಲೆಯಾದ ಸಮೀರ್ ಆರು ತಿಂಗಳ ಹಿಂದೆ ಮಧ್ಯವರ್ತಿಯನ್ನ ಅಪಹರಿಸಿ ಎಗರಿಸಿದ್ದ ಎನ್ನಲಾಗಿದೆ. ಇದೇ ದ್ವೇಷದಲ್ಲಿ ಕಳೆದ ತಿಂಗಳಲ್ಲಿ ಜೈಲಿನಲ್ಲೇ ಖೈದಿಗಳಿಂದ ಸಮೀರ್ ಕೊಲೆಗೆ ಯತ್ನಿಸಲಾಗಿತ್ತು. ಕೋಟಿ ಬೆಲೆಯ ಚಿನ್ನ ಮರಳಿಸದೇ ಇರುವ ಕಾರಣಕ್ಕೆ ಉಪ್ಪಳದ ನಟೋರಿಯಸ್ ಗಳು ಸುಪಾರಿ ಕಿಲ್ಲರ್ ಗಳಿಂದ ಕೊಲೆ ನಡೆಸಿದ್ದಾರೆಯೇ ಎನ್ನುವ ಆಯಾಮದಲ್ಲಿಯೂ ತನಿಖೆ ನಡೆಸಲಾಗುತ್ತಿದೆ.
ಕೊಲೆಯಾದ ಸಮೀರ್ ಮತ್ತು ಗ್ಯಾಂಗ್, 2018ರ ಜನವರಿಯಲ್ಲಿ ಜಪ್ಪುವಿನ ಕುತ್ಪಾಡಿಯ ಫ್ಲ್ಯಾಟ್ ವೊಂದರಲ್ಲಿ ಮಲಗಿದ್ದ ಟಾರ್ಗೆಟ್ ಗ್ಯಾಂಗಿನ ರೌಡಿ ಇಲ್ಯಾಸನ್ನು ಕಡಿದು ಕೊಲೆ ಮಾಡಿತ್ತು. ಇಲ್ಯಾಸ್ ಕೊಲೆಯ ಪ್ರತೀಕಾರಕ್ಕೆ ಆತನ ಭಾವನೇ ಸಮೀರನನ್ನು ಕೊಲೆ ಮಾಡಿದ್ದಾನೋ ಎಂಬ ಆಯಾಮಗಳಲ್ಲೂ ತನಿಖೆ ನಡೆಯುತ್ತಿದೆ. ಆದರೆ ಇಲ್ಯಾಸ್ ಭಾವ ಈವರೆಗೂ ಯಾವುದೇ ಅಪರಾಧ ಪ್ರಕರಣಗಳಲ್ಲಿ ಭಾಗವಹಿಸಿಲ್ಲವೆಂದು ತಿಳಿದುಬಂದಿದೆ.

ಸ್ನೇಹಿತನ ರಕ್ಷಣೆಗೆ ನಿಂತ ಸಮೀರ್ ರೌಡಿ ಆದದ್ದೇ ರೋಚಕ
ಕೆಲವು ವರ್ಷಗಳ ಹಿಂದೆ ಉಳ್ಳಾಲದಲ್ಲಿ ಟಾರ್ಗೆಟ್ ಗ್ಯಾಂಗ್ ನದ್ದೇ ಸದ್ದು ಕೇಳಿಸುತ್ತಿದ್ದ ಸಮಯವದು. ಸಮೀರ್ ಹದಿಹರೆಯದ ಯುವಕನಿದ್ದಾಗ ಕಡಪ್ಪರದ ನೆರೆಮನೆಯ ಸ್ನೇಹಿತನೋರ್ವನಿಗೆ ಟಾರ್ಗೆಟ್ ಗ್ಯಾಂಗಿನ ಸಹಚರರು ಹಲ್ಲೆ ನಡೆಸಿದ್ದರು. ಈ ವೇಳೆ ಮಧ್ಯ ಪ್ರವೇಶಿಸಿದ ಸಮೀರ್ ಸ್ನೇಹಿತನಿಗೆ ಏಕೆ ಹಲ್ಲೆ ಮಾಡುತ್ತಿದ್ದೀರಾ ಎಂದು ಪ್ರಶ್ನಿಸಿದಾಗ ಪರಸ್ಪರ ಹೊಯ್ ಕೈ ನಡೆದಿತ್ತು. ಇದರಿಂದ ಟಾರ್ಗೆಟ್ ಗ್ಯಾಂಗ್, ಸಮೀರ್ ಮೇಲೆ ಹಗೆ ಸಾಧಿಸಲು ಹಠ ತೊಟ್ಟಿತ್ತು. ಆನಂತರ, ಇವರ ಉಸಾಬರಿಯೆ ಬೇಡವೆಂದು ಕುಟುಂಬ ನಿರ್ವಹಣೆಗಾಗಿ ಸಮೀರ್ ಕೊಲ್ಲಿ ರಾಷ್ಟ್ರಕ್ಕೆ ಉದ್ಯೋಗಕ್ಕೆ ತೆರಳಿದ್ದ. ವಿದೇಶದಲ್ಲಿದ್ದಾಗಲೂ ಸಮೀರ್ ಚಲನವಲನಗಳನ್ನು ಕೆಲವರು ಟಾರ್ಗೆಟ್ ಗ್ಯಾಂಗಿಗೆ ತಿಳಿಸುತ್ತಿದ್ದರು. ಸಮೀರ್ ವಿದೇಶದಿಂದ ಮತ್ತೆ ಮಂಗಳೂರಿಗೆ ಬಂದಾಗ ಟಾರ್ಗೆಟ್ ತಂಡದ ಇಲ್ಯಾಸ್ ಮತ್ತು ಸಹಚರರು ಕೈಯಲ್ಲೇ ಹಲ್ಲೆ ನಡೆಸಿ ಭಯ ಹುಟ್ಟಿಸಿದ್ದರು. ಕೆಲ ದಿನಗಳ ನಂತರ ಉಳ್ಳಾಲ ಮಾಸ್ತಿಕಟ್ಟೆಯಲ್ಲಿ ಬೈಕಲ್ಲಿ ತೆರಳುತ್ತಿದ್ದ ಸಮೀರ್ ಗೆ ಇಲ್ಯಾಸ್ ಮತ್ತು ಸಹಚರರು ಹೆಲ್ಮೆಟಲ್ಲಿ ಯದ್ವಾತದ್ವಾ ಹಲ್ಲೆ ನಡೆಸಿದ್ದರು. ಸಮೀರ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದು, ಪೊಲೀಸರಿಗೆ ದೂರನ್ನೂ ನೀಡಿದ್ದರು.

ಇದೇ ವೇಳೆ ಟಾರ್ಗೆಟ್ ಇಲ್ಯಾಸ್ನ ಪರಮ ವೈರಿಯಾಗಿದ್ದ, ನಟೋರಿಯಸ್ ರೌಡಿ ಒಂಭತ್ತು ಕೆರೆಯ ದಾವೂದ್ ಎಂಬಾತ ಸಮೀರ್ ಸ್ನೇಹ ಸಂಪಾದಿಸಿದ್ದ. ಅದಾಗಲೇ ಕೊಲೆ, ಕೊಲೆಯತ್ನ ಪ್ರಕರಣಗಳಲ್ಲಿ ಪಳಗಿದ್ದ ದಾವೂದ್ ಜೊತೆ ಅಮಾಯಕ ಯುವಕ ಸಮೀರ್ ಕೂಡ ಪಾತಕ ಲೋಕಕ್ಕೆ ಎಂಟ್ರಿ ಕೊಟ್ಟು ತಮ್ಮ ಕಡು ವೈರಿಯಾಗಿದ್ದ ಟಾರ್ಗೆಟ್ ಇಲ್ಯಾಸ್ ಕಥೆ ಮುಗಿಸಲು ಸಂಚು ಹಾಕಿ ಕೆಲಸ ಮುಗಿಸಿದ್ದರು. ಈಮೂಲಕ ಸಮಾಜದ ಮುಖ್ಯ ವಾಹಿನಿಯಿಂದ ದೂರ ಸರಿದ ಸಮೀರ್ ಪಾತಕ ಲೋಕದಲ್ಲಿ ತೊಡಗಿಸಿಕೊಂಡು ಉಳ್ಳಾಲದಲ್ಲಿ ತನ್ನದೇ ಹೆಸರಿನ ಹವಾ ಸೃಷ್ಟಿಸಿದ್ದ. ಆದರೇನಂತೆ ಗುಡ್ಡಕ್ಕೆ ಗುಡ್ಡವೇ ಅಡ್ಡ ಎಂಬಂತೆ ನಿನ್ನೆ ವೈರಿಗಳು ಇಟ್ಟ ಮುಹೂರ್ತಕ್ಕೆ ಆತನೂ ಬಲಿಯಾಗಿದ್ದಾನೆ. ಹುಟ್ಟುವಾಗ ಯಾರೂ ಕೆಟ್ಟವರಲ್ಲ, ಕೆಲವೊಂದು ಸಂದಿಗ್ಧ ಪರಿಸ್ಥಿತಿ ಅವರನ್ನ ಕೆಟ್ಟವರನ್ನಾಗಿಸುತ್ತೆ ಎಂಬುದಕ್ಕೆ ಸಮೀರ್ ಕಥೆಯೂ ನಿದರ್ಶನ.
Mangalore Target Ilyas murder case, Sameer murdered over gold smuggling revenge. The victim, identified as Sameer (35), a resident of Ullal Kadappura, was attacked with a sword. The incident occurred around 10 pm when Sameer had gone to a restaurant in Kallapu with his mother. As they were about to enter the restaurant, a group that had been trailing them in a car attacked Sameer with a sword as soon as he stepped out.
21-12-25 05:33 pm
HK News Desk
ಸಿಎಂ ಸ್ಥಾನ ಉಳಿಸಿಕೊಳ್ಳಲು ಅಹಿಂದ ಶಾಸಕರು, ಸಚಿವರ ರ...
20-12-25 03:05 pm
ನನ್ನ ಮತ್ತು ಸಿಎಂ ನಡುವೆ ಒಂದು ಒಪ್ಪಂದವಾಗಿದೆ ; ಅದರ...
19-12-25 10:03 pm
ಪ್ರೀತ್ಸೆ ಪ್ರೀತ್ಸೆ ಎಂದು ಪೊಲೀಸ್ ಅಧಿಕಾರಿ ಹಿಂದೆ ಬ...
19-12-25 01:41 pm
ಡಿಸಿಎಂ ಡಿಕೆಶಿ ಆಪ್ತ ಕಾರ್ಯದರ್ಶಿ ಕಾರು ಅಪಘಾತ ; ಬೈ...
18-12-25 11:05 pm
20-12-25 01:51 pm
HK News Desk
ಮರಳುಗಾಡಿನ ನಗರಿ ದುಬೈ, ಅಬುಧಾಬಿಯಲ್ಲಿ ಭಾರೀ ಗಾಳಿ-...
19-12-25 02:40 pm
ಜೆಡ್ಡಾದಿಂದ ಕೋಝಿಕ್ಕೋಡ್ ತೆರಳುತ್ತಿದ್ದ ಏರ್ ಇಂಡಿಯ...
18-12-25 04:34 pm
ಸಮವಸ್ತ್ರ ಕಳಪೆಯೆಂದು ಸಹಪಾಠಿಗಳ ಅಣಕ ; ನೊಂದ ನಾಲ್ಕನ...
17-12-25 10:27 pm
ಆಸ್ಟ್ರೇಲಿಯಾ ಬೋಂಡಿ ಬೀಚ್ ದಾಳಿ ; ಹೈದ್ರಾಬಾದ್ ಮೂಲದ...
17-12-25 01:38 pm
22-12-25 12:26 pm
Mangalore Correspondent
ಕೇಪು ಜಾತ್ರೆ ಕೋಳಿ ಅಂಕಕ್ಕೆ ಎರಡನೇ ದಿನವೂ ಪೊಲೀಸ್ ದ...
21-12-25 11:04 pm
ಕೇಪು ಜಾತ್ರೆ ಕೋಳಿ ಅಂಕ ಮಾಡಿಸಿದ ಶಾಸಕರ ವಿರುದ್ಧ ಕೇ...
20-12-25 10:53 pm
ಕಟ್ಲೆ ಕಟ್ಲೆ.. ಏರ್ಲಾ ಬಲಿಪೊಡ್ಚಿ..!ವಿಟ್ಲ ಪೊಲೀಸರ...
20-12-25 08:47 pm
ಮೃದು ಧೋರಣೆ ; ಎಸ್ಡಿಪಿಐ ಆರೋಪದ ಬಗ್ಗೆ ಕಮಿಷನರ್ ಸುಧ...
20-12-25 08:44 pm
22-12-25 02:18 pm
HK News Desk
Udupi Arrest, Pakistan: ಕೊಚ್ಚಿನ್ ಶಿಪ್ ಯಾರ್ಡ್...
22-12-25 01:06 pm
ಟ್ರಾಫಿಕ್ ದಂಡದ ಹೆಸರಲ್ಲಿ ಎಪಿಕೆ ಫೈಲ್ ಲಿಂಕ್ ; ಮೋಸ...
21-12-25 09:36 pm
Cyber Fraud: ಸೈಬರ್ ವಂಚಕರಿಗೆ 22 ಲಕ್ಷ ವರ್ಗಾವಣೆ...
21-12-25 08:55 pm
Minor Girl Sexually Assaulted in Puttu: ಜೇನು...
21-12-25 01:18 pm