ಬ್ರೇಕಿಂಗ್ ನ್ಯೂಸ್
04-08-24 10:48 pm Mangalore Correspondent ಕ್ರೈಂ
ಮಂಗಳೂರು, ಆಗಸ್ಟ್ 4: ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವ ಬಗ್ಗೆ ಅಪರಿಚಿತ ವ್ಯಕ್ತಿಯ ಮಾತು ಕೇಳಿ ಮಹಿಳೆಯೊಬ್ಬರು 1.65 ಕೋಟಿ ರೂಪಾಯಿ ಹಣ ಕಳಕೊಂಡಿದ್ದು ತಾನು ಮೋಸಕ್ಕೀಡಾದ ಬಗ್ಗೆ ಮಂಗಳೂರು ಸೈಬರ್ ಠಾಣೆಗೆ ದೂರು ನೀಡಿದ್ದಾರೆ.
ಮಹಿಳೆ ಷೇರು ಮಾರುಕಟ್ಟೆಯ ಬಗ್ಗೆ ತಿಳಿದುಕೊಳ್ಳಲು ಇನ್ಸ್ ಟಾ ಗ್ರಾಮಿನಲ್ಲಿ ಸರ್ಚ್ ಮಾಡಿದ್ದರು. ಈ ವೇಳೆ, ಅಂಕಿತಾ ಪಟೇಲ್ ಹೆಸರಿನ ಅಪರಿಚಿತ ವ್ಯಕ್ತಿ ವಾಟ್ಸಪ್ ನಲ್ಲಿ ಚಾಟ್ ಮಾಡಿ, ಷೇರ್ ಮಾರ್ಕೆಟ್ ಕುರಿತ ಗ್ರೂಪಿಗೆ ಜಾಯಿನ್ ಮಾಡಿಸಿದ್ದ. ಆನಂತರ, ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವಂತೆ ಪ್ರೇರಣೆ ನೀಡಿದ್ದ.
ನಂತರ, Fidelity pearl of south Asia ಎಂಬ ಷೇರು ಮಾರುಕಟ್ಟೆ ವಾಟ್ಸಪ್ ಗ್ರೂಪಿಗೆ ಜಾಯಿನ್ ಮಾಡಿಸಿದ್ದರು. ಅದರಲ್ಲಿ ಹೂಡಿಕೆ ಮಾಡುವಂತೆ ಅಪರಿಚಿತ ವ್ಯಕ್ತಿ ತಿಳಿಸಿದಂತೆ, ಫಿಡೆಲಿಟಿ ಏಪ್ ಡೌನ್‌ಲೋಡ್ ಮಾಡಿ ತನ್ನ ಎಚ್ ಡಿಎಫ್ ಸಿ ಬ್ಯಾಂಕಿನಿಂದ ಜೂನ್ 26ರಿಂದ ಜುಲೈ 31ರ ನಡುವೆ ಹಂತ ಹಂತವಾಗಿ ಒಟ್ಟು 1,65,92,293 ರೂ. ಮೊತ್ತವನ್ನು ವರ್ಗಾವಣೆ ಮಾಡಿದ್ದರು.
ಹೂಡಿಕೆ ಮಾಡಿದ ಹಣವನ್ನು ಹಿಂತಿರುಗಿ ಪಡೆಯಲು ಯತ್ನಿಸಿದಾಗ ಸಾಧ್ಯವಾಗಲಿಲ್ಲ. ಅದು ತಿಳಿಯುತ್ತಿದ್ದನಂತೆ ಮಹಿಳೆಗೆ ಮೋಸದ ಅರಿವಾಗಿದ್ದು ಮಂಗಳೂರಿನ ಸೈಬರ್ ಠಾಣೆಗೆ ದೂರು ನೀಡಿದ್ದಾರೆ.
ವ್ಯಕ್ತಿ ಹೇಳಿದಂತೆ ಬೇರೆ ಬೇರೆ ಖಾತೆಗಳಿಗೆ IMPS ಮತ್ತು RTGS ಮೂಲಕ ಮಹಿಳೆ ಹಣ ವರ್ಗಾವಣೆ ಮಾಡಿದ್ದರು. ಈ ಹಣ ಹೂಡಿಕೆ ರೂಪದಲ್ಲಿ ಫಿಡೆಲಿಟಿ ಏಪ್ ನಲ್ಲಿ ತೋರಿಸುತ್ತಿತ್ತು. ಆದರೆ ಹೂಡಿಕೆ ಮಾಡಿದ ಹಣವನ್ನು ಹಿಂತಿರುಗಿ ಪಡೆಯುವ ಅವಕಾಶ ಇರಲಿಲ್ಲ. ಈ ರೀತಿ ಹಲವಾರು ಸಾರ್ವಜನಿಕರನ್ನು ವಂಚಕರು ನೇರವಾಗಿ ಸಂಪರ್ಕಿಸಿ ಮೋಸದ ಜಾಲಕ್ಕೆ ಸಿಲುಕಿಸುತ್ತಾರೆ. ಅತಿ ಹೆಚ್ಚು ಲಾಭ ಕೊಡಿಸುವ ಭರವಸೆಯನ್ನೂ ಕೊಡುತ್ತಾರೆ. ಮೋಸದ ಅರಿವಿರದೆ ಹಣ ಹೂಡಿಕೆ ಮಾಡಿದವರನ್ನು ಮತ್ತಷ್ಟು ಹೂಡಿಕೆ ಮಾಡುವಂತೆ ಪ್ರೇರಣೆ ನೀಡುತ್ತಾರೆ. ಇದೇ ಕಾರಣಕ್ಕೆ ಏಪ್ ನಲ್ಲಿ ಹೂಡಿಕೆ ಮಾಡಿದ ಮೊತ್ತ ಹೆಚ್ಚು ಅಪ್ ಆದ ರೀತಿ ಕಾಣಿಸುತ್ತಾರೆ. ಆಮೂಲಕ ಹಣ ಇದ್ದವರನ್ನು ಮತ್ತಷ್ಟು ಹೂಡಿಕೆ ಮಾಡಲು ಪ್ರೇರೇಪಿಸುತ್ತದೆ. ಇದೊಂದು ಸೈಬರ್ ವಂಚಕರ ಜಾಲವಾಗಿದ್ದು ತಂಡವಾಗಿ ಕಾರ್ಯ ನಿರ್ವಹಿಸುತ್ತದೆ. ಉತ್ತರ ಭಾರತದ ಮೂಲೆಯಲ್ಲಿ ಕುಳಿತು ಈ ಕೃತ್ಯ ಎಸಗುತ್ತಿದ್ದು ಇವರನ್ನು ಪತ್ತೆ ಮಾಡಲು ಪೊಲೀಸರೂ ಸರ್ವ ಪ್ರಯತ್ನ ಹಾಕದೇ ಇರುವುದು ಮತ್ತಷ್ಟು ವಂಚನೆಗೆ ದಾರಿಯಾಗಿಸಿದೆ.
Mangalore Share market fraud, women looses 1.65 crore money. Fidelity Pearl of South Asia company share market Fraud exposed. A case has been registered at cyber crime police station.
16-09-26 10:40 pm
kannada news
Tulu Language, Shivraj Tangadagi: ತುಳುವಿಗೆ 2ನ...
16-09-26 01:51 pm
Pradeep Eshwar, Pratap Simha: ಪೊಲೀಸ್ ಠಾಣೆಗೆ...
15-09-26 09:13 pm
Imran Pasha, Pratap Simha: ನಿನ್ನಂತಹ ಒಂದು ಲಕ್...
15-09-26 04:46 pm
ಬಿಜೆಪಿಯವರಿಗೆ ಕೊಬ್ಬು ಹೆಚ್ಚಾಗಿದೆ ಅದಕ್ಕೆ ಬಳ್ಳಾರಿ...
12-09-26 09:40 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
17-09-26 09:41 am
HK News Staffer
Mangalore Jail, Fight, Crime: ಜೈಲಿನಲ್ಲಿ ಬೀಡಿ...
16-09-26 10:46 pm
ಪುತ್ತೂರಿಗೆ ಮೆಡಿಕಲ್ ಕಾಲೇಜು ಅನುಮೋದನೆ, ತುಳು ಭಾಷೆ...
16-09-26 09:56 pm
ಅಪಘಾತದಲ್ಲಿ ಗಾಯಗೊಂಡಿದ್ದ ಯುವಕನ ಮೆದುಳು ಡೆಡ್ ; ಮೂ...
16-09-26 08:49 pm
ಸೆ.18ರಂದು ಸಂಪುಟ ಸಭೆಗೆ ಗಣ್ಯರ ಆಗಮನ ; ಮಂಗಳೂರಿನ ಪ...
16-09-26 06:28 pm
16-09-26 11:18 am
HK News Staffer
Mangalore, Kuttar Accident: ಕುತ್ತಾರುವಿನಲ್ಲಿ ಗ...
16-09-26 10:51 am
ಆನೆಗುಡ್ಡೆ ವಿನಾಯಕ ದೇವಸ್ಥಾನಕ್ಕೆ ಬಂದಿದ್ದ ವೃದ್ಧ ಮ...
15-09-26 09:19 pm
Mangalore Blackmail: ಫೋಟೋ ಮಾರ್ಫ್ ಮಾಡಿ ಬ್ಲ್ಯಾಕ...
15-09-26 12:55 pm
Manyda Accident: ಗಣೇಶ ಹಬ್ಬ ಮುಗಿಸಿ ಬೆಂಗಳೂರಿಗೆ...
15-09-26 12:48 pm