ಬ್ರೇಕಿಂಗ್ ನ್ಯೂಸ್
17-07-24 08:18 pm Mangalore Correspondent ಕ್ರೈಂ
ಉಳ್ಳಾಲ, ಜು.17: ಉಳ್ಳಾಲ ಠಾಣೆ ವ್ಯಾಪ್ತಿಯಲ್ಲಿ ಕಳ್ಳರ ಕರಾಮತ್ತು ಮುಂದುವರಿದಿದೆ. ಕೊಲ್ಯದಲ್ಲಿ ಒಂಟಿ ಬಾಡಿಗೆ ಮನೆಗೆ ನುಗ್ಗಿದ ಕಳ್ಳರು ಹಾಡಹಗಲೇ 128 ಗ್ರಾಮ್ ನಷ್ಟು ಚಿನ್ನಾಭರಣ ಕಳವುಗೈದಿದ್ದಾರೆ. ಆದರೆ ಮನೆಯವರು ಹೇಳಿದರೂ ಉಳ್ಳಾಲ ಪೊಲೀಸರು ಮಾತ್ರ 30 ಗ್ರಾಮ್ ಗಿಂತ ಅಧಿಕ ಚಿನ್ನಾಭರಣ ಕಳವಾಗಿದೆಯೆಂದು ಎಫ್ಐಆರ್ ನಲ್ಲಿ ಉಲ್ಲೇಖಿಸಿದ್ದಾರೆಂದು ಆರೋಪ ಕೇಳಿಬಂದಿದೆ.
ಕೊಲ್ಯದ ಕುಲಾಲ ಮಂದಿರದ ಬಳಿಯ ಬಾಡಿಗೆ ಮನೆಯಲ್ಲಿ ನೆಲೆಸಿರುವ ಗುರುರಾಜ್ ಎಂಬವರ ಮನೆಯಲ್ಲಿ ಮಂಗಳವಾರ ಹಾಡಹಗಲೇ ಕಳ್ಳತನ ನಡೆದಿದೆ. ಗುರುರಾಜ್ ಮುಡಿಪು ಇನ್ಫೋಸಿಸ್ ಕಂಪನಿಯಲ್ಲಿ ಉದ್ಯೋಗಿ. ಅವರ ಪತ್ನಿಯೂ ಖಾಸಗಿ ಸಂಸ್ಥೆಯೊಂದರಲ್ಲಿ ಕೆಲಸಕ್ಕಿದ್ದಾರೆ. ದಂಪತಿ ಮಂಗಳವಾರ ಬೆಳಗ್ಗೆ ಮಗುವನ್ನ ಶಾಲೆಗೆ ಬಿಟ್ಟು ಮನೆಗೆ ಬೀಗ ಹಾಕಿ ಕೆಲಸಕ್ಕೆ ತೆರಳಿದ್ದರು. ಸಂಜೆ ವೇಳೆ ಮನೆಗೆ ವಾಪಸಾದಾಗಲೇ ಮನೆಯಲ್ಲಿ ಕಳ್ಳತನ ಆಗಿರುವುದು ತಿಳಿದುಬಂದಿತ್ತು.
ಮನೆಯ ಮುಂಬಾಗಿಲಿನ ಬೀಗ ಒಡೆದು ಒಳನುಗ್ಗಿದ್ದ ಕಳ್ಳರು ಕಪಾಟಿನ ಲಾಕರ್ ತೆರೆದು ಲಕ್ಷಾಂತರ ರೂಪಾಯಿ ಮೌಲ್ಯದ 128(16 ಪವನ್) ಗ್ರಾಮ್ ನಷ್ಟು ಚಿನ್ನಾಭರಣ ದೋಚಿದ್ದಾರೆಂದು ತಿಳಿದುಬಂದಿದೆ. ಘಟನಾ ಸ್ಥಳಕ್ಕೆ ಉಳ್ಳಾಲ ಪೊಲೀಸರು, ಬೆರಳಚ್ಚು ತಜ್ಞರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸ್ಥಳಕ್ಕೆ ತೆರಳಿದ್ದ ಉಳ್ಳಾಲ ಠಾಣಾ ಇನ್ಸ್ ಪೆಕ್ಟರ್ ಬಾಲಕೃಷ್ಣ ಅವರಲ್ಲಿ ಗುರುರಾಜ್ ಅವರ ಪತ್ನಿ 128 ಗ್ರಾಮ್ ನಷ್ಟು ಚಿನ್ನಾಭರಣ ಕಳವಾಗಿದೆಯೆಂದು ಗೋಗರೆದರೂ ಇನ್ಸ್ ಪೆಕ್ಟರ್ ಮಾತ್ರ 30 ಗ್ರಾಮ್ ಗಿಂತ ಅಧಿಕ ಚಿನ್ನಾಭರಣ ಕಳವಾಗಿದೆಯೆಂದು ಪ್ರಕರಣ ದಾಖಲಿಸಿದ್ದಾರಂತೆ. ಸ್ಥಳದಲ್ಲಿದ್ದ ಸ್ಥಳೀಯ ಆರೆಸ್ಸೆಸ್ ಮುಖಂಡರೋರ್ವರು ಪೊಲೀಸರ ಈ ನಡೆಯನ್ನ ಪ್ರಶ್ನಿಸಿದ್ದು ಇನ್ಸ್ ಪೆಕ್ಟರ್ ಬಾಲಕೃಷ್ಣ ಏರು ಧ್ವನಿಯಲ್ಲಿ ಹಾರಿಕೆಯ ಸಬೂಬು ನೀಡಿ ತೆರಳಿದ್ದಾರೆ. ಮನೆಯವರು ಹೇಳಿದ ರೀತಿಯಲ್ಲೇ ದೂರು ದಾಖಲಿಸಿಕೊಳ್ಳದೆ, ಕಡಿಮೆ ತೋರಿಸಿ ಕಳ್ಳತನದ ಮಾಲಿನಲ್ಲೂ ಪಾಲು ಪಡೆಯುವ ಹುನ್ನಾರ ಇದರ ಹಿಂದಿದೆಯೆಂಬ ಮಾತು ಕೇಳಿಬಂದಿದೆ.
ಭಲೇ ಕೃಷ್ಣನಾಗಲು ಹೊರಟ ಇನ್ಸ್ ಪೆಕ್ಟರ್ !
ಕಳೆದ ಜೂನ್ ತಿಂಗಳಲ್ಲಿ ಉಳ್ಳಾಲ ಠಾಣೆ ವ್ಯಾಪ್ತಿಯ ಧರ್ಮನಗರ ಎಂಬಲ್ಲಿ ಅಪ್ರಾಪ್ತ ಮಗನೇ ಶೋಕಿ ಜೀವನಕ್ಕಾಗಿ ಪೋಲಿ ಗೆಳೆಯರ ಜೊತೆ ಸೇರಿ ತನ್ನ ಮನೆಯಿಂದಲೇ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನ ದೋಚಿದ್ದ ಘಟನೆ ನಡೆದಿತ್ತು. ಪ್ರಕರಣದಲ್ಲಿ ಮೂವರು ಆರೋಪಿಗಳ ಬಂಧನವಾಗಿದ್ದರೂ ಉಳ್ಳಾಲ ಇನ್ಸ್ ಪೆಕ್ಟರ್ ಬಳಿ ಮಾಧ್ಯಮ ವರದಿಗಾರರು ಪದೇ ಪದೇ ಕೇಳಿದರೂ ಸುದ್ದಿ ಬಿಟ್ಟು ಕೊಡದೇ ಇದ್ದದ್ದು ಅನುಮಾನಕ್ಕೆ ಎಡೆಮಾಡಿ ಕೊಟ್ಟಿತ್ತು. ಪ್ರಕರಣದಲ್ಲಿ ದೊಡ್ಡ ಮೊತ್ತದ ಚಿನ್ನಾಭರಣ ಕಳವಾಗಿದ್ದರೂ, ಅದರಲ್ಲೂ ರಿಕವರಿ ತೋರಿಸಿರಲಿಲ್ಲ ಎಂಬ ಮಾತು ಕೇಳಿಬಂದಿತ್ತು.
Mangalore ullal Kollya robbery, thieves steal 128 grams of gold. Gururaj a Infosys employee and wife who had gone out to drop his son to the school later realised that their gold was missing and later came to know about the theft.
04-08-25 01:00 pm
Bangalore Correspondent
Veerappa Moily, Kharge: 1980ರಲ್ಲೇ ನಾನು ಸಿಎಂ ಆ...
03-08-25 09:30 pm
Ravi Poojary Aide Kaviraj Arrested, Kolar Pol...
03-08-25 10:52 am
Dharmasthala News, High Court; ಧರ್ಮಸ್ಥಳ ಸುದ್ದ...
01-08-25 11:34 pm
‘Comedy Kiladigalu’, Chandrashekhar Siddi Sui...
01-08-25 10:45 pm
04-08-25 05:11 pm
HK News Desk
ಗೆಳೆಯನೊಂದಿಗೆ ಪತ್ನಿಯ ಸರಸ ; ಪರಿ ಪರಿ ಬೇಡಿಕೊಂಡರೂ...
04-08-25 02:16 pm
ವಿಮಾನದಲ್ಲಿ ಸಹ ಪ್ರಯಾಣಿಕನಿಗೆ ಕಪಾಳಮೋಕ್ಷ ; ಅಶಿಸ್ತ...
03-08-25 05:44 pm
ಮಾಲೆಗಾಂವ್ ಸ್ಫೋಟ ಪ್ರಕರಣದಲ್ಲಿ ನರೇಂದ್ರ ಮೋದಿ, ಭಾಗ...
03-08-25 04:25 pm
ಮಾಲೆಗಾಂವ್ ಪ್ರಕರಣದಲ್ಲಿ ಮೋಹನ್ ಭಾಗವತ್ ಬಂಧಿಸುವುದಕ...
01-08-25 10:48 pm
04-08-25 10:58 pm
Mangalore Correspondent
Dharmasthala Case, Jayan T: ಧರ್ಮಸ್ಥಳ ಕೇಸ್, ಪೊ...
04-08-25 10:34 pm
Mangalore Congress: ಮೆಸ್ಕಾಂ ನೌಕರರ ಪಿಂಚಣಿಗೆ ಗ್...
04-08-25 09:51 pm
Dharmasthala Case, SIT, Body Found: ಬಂಗ್ಲೆಗುಡ...
04-08-25 07:38 pm
ವಿದ್ಯುತ್ ನಿಗಮಗಳ ನೌಕರರಿಗೆ ಪಿಂಚಣಿಗಾಗಿ ಗ್ರಾಹಕರಿ...
04-08-25 06:05 pm
03-08-25 10:11 pm
Mangalore Correspondent
ಮುಖ್ಯಶಿಕ್ಷಕನ ವರ್ಗಾವಣೆಗೆ ಸಂಚು ; ಶಾಲೆಯ ವಾಟರ್ ಟ...
03-08-25 08:16 pm
Mangalore Massive Lucky Scheme Fraud: ಸುರತ್ಕಲ...
02-08-25 10:04 pm
ಪ್ರಜ್ವಲ್ ರೇವಣ್ಣ ಅಪರಾಧಿ ; 14 ವರ್ಷ ಅಲ್ಲ, ಜೀವನಪರ...
02-08-25 07:20 pm
Suhas Shetty Murder, NIA Raid Mangalore: ಸುಹಾ...
02-08-25 04:43 pm