ಬ್ರೇಕಿಂಗ್ ನ್ಯೂಸ್
24-04-24 05:39 pm HK News Desk ಕ್ರೈಂ
ಉತ್ತರಪ್ರದೇಶ, ಏ.24: ಅಣ್ಣ-ತಂಗಿ ನಡುವಿನ ಸಂಬಂಧ ಯಾವತ್ತಿದ್ರೂ ಬಹಳ ವಿಶೇಷವಾಗಿರುತ್ತೆ. ಆದ್ರೆ ಇಲ್ಲೊಂದು ಘಟನೆ ನಡೆದಿದೆ ನೋಡಿ. ಇದನ್ನು ಓದಿದ್ರೆ ಅಣ್ಣನಾಗಿ ಗಿಫ್ಟ್ ನೀಡೋದೆ ತಪ್ಪಾ ಅನಿಸುತ್ತೆ ನಿಮಗೆ. ಏಕೆಂದರೆ ಉತ್ತರಪ್ರದೇಶದಲ್ಲಿ ಮದುವೆಯಂದು ವಧುವಿಗೆ ತನ್ನ ಸಹೋದರ ಉಡುಗೊರೆ ನೀಡಿದಕ್ಕಾಗಿ ಘರ್ಷಣೆ ಆರಂಭವಾಗಿದೆ. ಕೊನೆಗೆ ಈ ಜಗಳ ಕೊಲೆಯಲ್ಲಿ ಅಂತ್ಯಗೊಂಡಿದೆ.
ಚಂದ್ರಪ್ರಕಾಶ್ ಮಿಶ್ರಾ ಎಂಬವರು ತನ್ನ ಸಹೋದರಿಯ ಮದುವೆಗೆ ಚಿನ್ನದ ಉಂಗುರ ಮತ್ತು ಟಿವಿಯನ್ನು ಉಡುಗೊರೆಯಾಗಿ ನೀಡಿದ ಕಾರಣಕ್ಕೆ, ಕೋಪಗೊಂಡ ಪತ್ನಿಯ ಮನೆಯವರು ಆತನನ್ನು ಹೊಡೆದು ಕೊಂದಿದ್ದಾರೆ. ಬಾರಾಬಂಕಿ ಜಿಲ್ಲೆಯ ಸಮೀಪದ ಹಳ್ಳಿಯಲ್ಲಿ ಈ ಘಟನೆ ನಡೆದಿದೆ.
35 ವರ್ಷದ ಚಂದ್ರ ಪ್ರಕಾಶ್ ಮಿಶ್ರಾ ಅವರು ಏಪ್ರಿಲ್ 26 ರಂದು ತನ್ನ ಸಹೋದರಿಯ ಮದುವೆಗೆ ಚಿನ್ನದ ಉಂಗುರ ಮತ್ತು ಟಿವಿ ಉಡುಗೊರೆಯಾಗಿ ನೀಡಲು ಬಯಸಿದ್ದರು. ಆದ್ರೆ ಇದಕ್ಕೆ ಪತ್ನಿಯ ಒಪ್ಪಿಗೆ ಇರಲಿಲ್ಲವಂತೆ ಚಂದ್ರ ಪ್ರಕಾಶ್ ಮಿಶ್ರಾ ಅವರು ತನ್ನ ಸಹೋದರಿಯ ಮದುವೆಗೆ ಚಿನ್ನದ ಉಂಗುರ ಮತ್ತು ಟಿವಿ ಗಿಫ್ಟ್ ನೀಡುವುದಾಗಿ ಪ್ಲಾನ್ ಮಾಡಿದ್ದರು. ಆದ್ರೆ ಚಂದ್ರಪ್ರಕಾಶ್ ಅವರ ಪತ್ನಿ ಚಾಬಿಗೆ ತನ್ನ ಪತಿಯ ಈ ಪ್ಲಾನ್ನಿಂದ ಅಸಮಾಧಾನಗೊಂಡಿದ್ದರು, ಇದೇ ಕಾರಣಕ್ಕೆ ದಂಪತಿ ನಡುವೆ ತೀವ್ರ ವಾಗ್ವಾದವೂ ನಡೆದಿತ್ತು.
ಕೋಪಗೊಂಡ ಪತ್ನಿ ಚಾಬಿ, ಪತಿಗೆ ಬುದ್ಧಿ ಕಲಿಸಬೇಕೆಂದು, ತನ್ನ ಸಹೋದರರನ್ನು ಮನೆಗೆ ಕರೆಸಿದ್ದಾಳೆ ನಂತರ ಒಂದು ಗಂಟೆಗಳ ಕಾಲ ಕೋಲಿನಿಂದ ಕ್ರೂರವಾಗಿ ಥಳಿಸಿ ಕೊಂದುಹಾಕಿದ್ದಾರೆ ಎಂದು ಆಧಿಕಾರಿಗಳು ಹೇಳಿದ್ದಾರೆ. ಈ ಸಂಗತಿ ತಿಳಿದ ಚಂದ್ರ ಪ್ರಕಾಶ್ ಅವರ ಕುಟುಂಬಸ್ಥರು ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಪೊಲೀಸರ ಪ್ರಕಾರ, ಚಾಬಿ ಮತ್ತು ಆಕೆಯ ಸಹೋದರರು ಸೇರಿದಂತೆ ಐವರನ್ನು ಬಂಧಿಸಲಾಗಿದೆ.
A wedding in Uttar Pradesh ended in murder over a conflict involving a gift to the bride from her brother. Chandra Prakash Mishra was beaten to death by his wife’s family because she was upset with him for gifting a gold ring and television to his sister at her wedding, police said. The incident took place in a village near the Barabanki district.
05-05-25 01:30 pm
HK News Desk
ಅಲ್ಲೊಂದು, ಇಲ್ಲೊಂದು ಕೊಲೆ ಆಗತ್ತೆ, ಅದನ್ಯಾಕೆ ಧರ್ಮ...
04-05-25 09:55 pm
ಸಿಇಟಿ ಬಳಿಕ ನೀಟ್ ಪರೀಕ್ಷೆಗೂ ಜನಿವಾರಕ್ಕೆ ಕತ್ತರಿ !...
04-05-25 09:26 pm
ಹಿಮಾಲಯ - ದೆಹಲಿಗೆ ಸುನಾಮಿ, ಮಹಾನ್ ನಾಯಕರ ದುರ್ಮರಣ...
04-05-25 09:15 pm
Bangalore Girl Naked, HSR Layout: ಬೆಂಗಳೂರಿನಲ್...
04-05-25 02:27 pm
05-05-25 11:10 pm
HK News Desk
ಪಾಕ್ ವಾಯು ಪ್ರದೇಶದಲ್ಲಿ ಭಾರತದ ವಿಮಾನಗಳಿಗೆ ನಿರ್ಬಂ...
30-04-25 06:59 pm
India Pakistan War: ಭಾರತೀಯ ಸೇನಾಪಡೆಗೆ ಪರಮಾಧಿಕಾ...
30-04-25 03:14 pm
Pakistan, No-fly zone islamabad: ಭಾರತದ ಪ್ರತೀಕ...
30-04-25 02:13 pm
ಮೋದಿ 'ಗಾಯಬ್' ಎಂದು ಕಾಂಗ್ರೆಸ್ ಪೋಸ್ಟ್ ; ಕಾಂಗ್ರೆಸ...
29-04-25 03:45 pm
05-05-25 10:59 pm
Mangalore Correspondent
Suhas Shetty murder, MP Brijesh Chowta, Param...
05-05-25 10:43 pm
Mangalore Suhas Shetty murder, BJP Umanath Ko...
05-05-25 07:15 pm
MLA Harish Poonja, Dinesh Gundurao: ಬುರ್ಖಾಧಾರ...
05-05-25 05:10 pm
Suhas Shetty Murder, VHP, Bajpe Police: ಸುಹಾಸ...
05-05-25 03:24 pm
03-05-25 02:16 pm
Mangalore Correspondent
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm
Mangalore Mudipu Murder, Mob, Police, Crime:...
29-04-25 09:59 pm