ಬ್ರೇಕಿಂಗ್ ನ್ಯೂಸ್
19-04-24 10:25 pm Mangalore Correspondent ಕ್ರೈಂ
ಉಳ್ಳಾಲ, ಎ.19: ಬೆಂಗಳೂರಿನ ಅನಾಥಾಶ್ರಮ ಹೆಸರಲ್ಲಿ ಟೆಂಪೋದಲ್ಲಿ ಬಂದು ತೊಕ್ಕೊಟ್ಟಿನ ಅಂಬಿಕಾ ರೋಡಿನಲ್ಲಿ ಚಂದಾ ವಸೂಲಿ ಮಾಡುತ್ತಿದ್ದ ಓರ್ವ ಪುರುಷ ಮತ್ತು ಇಬ್ಬರು ಮಹಿಳೆಯರನ್ನ ಸ್ಥಳೀಯರು ವಿಚಾರಿಸಿದಾಗ ತಡಬಡಾಯಿಸಿದ್ದು ಓರ್ವ ಮಹಿಳೆ ಪಲಾಯನಗೈದು ಮತ್ತೋರ್ವ ಮಹಿಳೆ ಮತ್ತು ಪುರುಷನನ್ನ ಸಾರ್ವಜನಿಕರು ಹಿಡಿದು ಉಳ್ಳಾಲ ಪೊಲೀಸರ ವಶಕ್ಕೆ ನೀಡಿದ್ದಾರೆ.
ಶುಕ್ರವಾರ ಬೆಳಗ್ಗೆ ನಾಗರಾಜ್, ರೇಣುಕಾ ಮತ್ತು ಕವಿತಾ ಎಂಬ ಮೂವರು ಉಳ್ಳಾಲ ಠಾಣೆ ವ್ಯಾಪ್ತಿಯ ಸೋಮೇಶ್ವರ ಗ್ರಾಮದ ಅಂಬಿಕಾ ರೋಡಿನ ನಿರ್ಮಲಾ ಟ್ರಾವೆಲ್ಸ್ ಗ್ಯಾರೇಜ್ ಪರಿಸರದಲ್ಲಿ ಬೆಂಗಳೂರಿನ ಸ್ನೇಹ ಜ್ಯೋತಿ ಎಂಬ ಹೆಸರಿನ ಮಕ್ಕಳ ಅನಾಥಾಶ್ರಮ ಹೆಸರಲ್ಲಿ ಚಂದಾ ವಸೂಲಿ ಮಾಡಿದ್ದಾರೆ. ಅಂಬಿಕಾ ರೋಡ್ ನಿವಾಸಿ ರೋಷನ್ ಎಂಬವರ ಮನೆಗೆ ತೆರಳಿದ್ದ ತಂಡವು ನಾವು ಮೂಲತಃ ಹಾಸನದವರು, ಕಾಸರಗೋಡಿನ ಕುಂಬ್ಳೆಯ ಬಾಡಿಗೆ ಕೋಣೆಯಲ್ಲಿ ನೆಲೆಸಿರುವುದಾಗಿ ಹೇಳಿದ್ದಾರೆ. ಅನಾಥಾಶ್ರಮದ ಮಕ್ಕಳಿಗಾಗಿ ಡೊನೇಷನ್ ಅಥವಾ ಬಟ್ಟೆಗಳನ್ನ ಕೊಡುವಂತೆ ಹೇಳಿದ್ದಾರೆ. ಇಷ್ಟಲ್ಲದೆ ತಂಡದ ಕ್ಯಾಪ್ಟನ್ ನಾಗರಾಜ್ ಮದರ್ ಥೆರೆಸಾ ಟ್ರಸ್ಟಿಗೂ ತಾವೇ ಚಂದಾ ಎತ್ತುತ್ತಿರುವುದಾಗಿ ಓಳು ಬಿಟ್ಟಿದ್ದಾನೆ.
ಇದರಿಂದ ಅನುಮಾನಗೊಂಡ ರೋಷನ್ ಅವರು ನಾಗರಾಜ್ ಮತ್ತು ತಂಡವನ್ನ ತೀವ್ರ ತರಾಟೆಗೆತ್ತಿದ್ದಾರೆ. ನಾಗರಾಜ್ ಮತ್ತು ಮಹಿಳೆಯರು ಹಾಸನದವರೆಂದಿದ್ದು ಪರಸ್ಪರ ಮರಾಠಿ ಭಾಷೆಯಲ್ಲಿ ಹರಟುತ್ತಿದ್ದುದನ್ನ ಕಂಡ ಸ್ಥಳೀಯರು ಮತ್ತಷ್ಟು ಸಂಶಯಗೊಂಡು ಅವರಲ್ಲಿದ್ದ ಆಶ್ರಮದ ಕಲೆಕ್ಷನ್ ರಿಸಿಪ್ಟ್ ನಲ್ಲಿದ್ದ ಸ್ಥಿರ ದೂರವಾಣಿಗೆ ಕರೆ ಮಾಡಿದಾಗ ಸಂಪರ್ಕ ಸಾಧ್ಯವಾಗಿಲ್ಲ. ಸ್ಥಳೀಯರು ಬಟ್ಟೆಗಳನ್ನ ಹೇಗೆ ಕೊಂಡೊಯ್ಯುತ್ತೀರಿ, ನಿಮ್ಮಲ್ಲಿ ವಾಹನ ಇದೆಯೇ ಎಂದು ಕೇಳಿದಾಗ ನಾಗರಾಜ್ ಮತ್ತು ಮಹಿಳೆಯರು ನಮ್ಮಲ್ಲಿ ವಾಹನ ಇಲ್ಲ ಎಂದು ಹೇಳಿದ್ದಾರೆ.
ರೋಷನ್ ಅವರು ಅಂಬಿಕಾ ರೋಡಿನ ಮುಖ್ಯ ರಸ್ತೆಗೆ ಬಂದು ಪರಿಶೀಲಿಸಿದಾಗ ಟಾಟಾ ಏಸ್(ಟೆಂಪೊ) ವಾಹನ ನಿಂತಿದ್ದು ಅದರಲ್ಲಿ ದಾನಿಗಳು ನೀಡಿದ್ದ ಬಟ್ಟೆಗಳನ್ನ ತುಂಬಿಸಲಾಗಿತ್ತು. ತಕ್ಷಣ ಮೂವರು ವಾಹನವನ್ನ ಅಲ್ಲೇ ಬಿಟ್ಟು ಪರಾರಿಯಾಗಿದ್ದಾರೆ. ಮಧ್ಯಾಹ್ನ ವೇಳೆ ವಾಹನವನ್ನು ಕೊಂಡೊಯ್ಯಲು ಬಂದ ನಾಗರಾಜ್ ಮತ್ತು ರೇಣುಕಾ ಅವರನ್ನ ಸ್ಥಳೀಯರು ತಡೆದಿದ್ದಾರೆ. ಸ್ಥಳೀಯ ಅಂಗಡಿ ಮಾಲೀಕನಲ್ಲೂ ಇವರು 500 ರೂಪಾಯಿ ಚಂದಾ ಎತ್ತಿದ್ದು, ಮಾಲೀಕ ಗದರಿದಾಗ 500 ರೂಪಾಯಿಯನ್ನ ಹಿಂದಿರುಗಿಸಿದ್ದಾರೆ. ಸ್ಥಳಕ್ಕೆ ಬಂದ ಉಳ್ಳಾಲ ಪೊಲೀಸರು ನಾಗರಾಜ್ ಮತ್ತು ರೇಣುಕಾರನ್ನ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೊರ ಜಿಲ್ಲೆಯಿಂದ ಬರುವ ಇಂತಹ ಅನೇಕ ತಂಡಗಳು ಕಾನೂನು ಬಾಹಿರವಾಗಿ ಅಪ್ರಾಪ್ತ ಮಕ್ಕಳ ಫೋಟೊ ಬಳಸಿ ಅನಾಥಾಶ್ರಮದ ಹೆಸರಲ್ಲಿ ಚಂದಾ ಎತ್ತಿ ಸ್ಥಳೀಯರಿಗೆ ಮಂಕು ಬೂದಿ ಎರಚುತ್ತಿದ್ದಾರೆ. ಸಂಬಂಧಪಟ್ಟ ಪೊಲೀಸರು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖಾಧಿಕಾರಿಗಳು ಇವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.
Money collection in the name of Bangalore orphanage in Mangalore at ullal, two women and a man wandering in tempo collecting money were handed over to the police.
05-05-25 01:30 pm
HK News Desk
ಅಲ್ಲೊಂದು, ಇಲ್ಲೊಂದು ಕೊಲೆ ಆಗತ್ತೆ, ಅದನ್ಯಾಕೆ ಧರ್ಮ...
04-05-25 09:55 pm
ಸಿಇಟಿ ಬಳಿಕ ನೀಟ್ ಪರೀಕ್ಷೆಗೂ ಜನಿವಾರಕ್ಕೆ ಕತ್ತರಿ !...
04-05-25 09:26 pm
ಹಿಮಾಲಯ - ದೆಹಲಿಗೆ ಸುನಾಮಿ, ಮಹಾನ್ ನಾಯಕರ ದುರ್ಮರಣ...
04-05-25 09:15 pm
Bangalore Girl Naked, HSR Layout: ಬೆಂಗಳೂರಿನಲ್...
04-05-25 02:27 pm
05-05-25 11:10 pm
HK News Desk
ಪಾಕ್ ವಾಯು ಪ್ರದೇಶದಲ್ಲಿ ಭಾರತದ ವಿಮಾನಗಳಿಗೆ ನಿರ್ಬಂ...
30-04-25 06:59 pm
India Pakistan War: ಭಾರತೀಯ ಸೇನಾಪಡೆಗೆ ಪರಮಾಧಿಕಾ...
30-04-25 03:14 pm
Pakistan, No-fly zone islamabad: ಭಾರತದ ಪ್ರತೀಕ...
30-04-25 02:13 pm
ಮೋದಿ 'ಗಾಯಬ್' ಎಂದು ಕಾಂಗ್ರೆಸ್ ಪೋಸ್ಟ್ ; ಕಾಂಗ್ರೆಸ...
29-04-25 03:45 pm
05-05-25 10:59 pm
Mangalore Correspondent
Suhas Shetty murder, MP Brijesh Chowta, Param...
05-05-25 10:43 pm
Mangalore Suhas Shetty murder, BJP Umanath Ko...
05-05-25 07:15 pm
MLA Harish Poonja, Dinesh Gundurao: ಬುರ್ಖಾಧಾರ...
05-05-25 05:10 pm
Suhas Shetty Murder, VHP, Bajpe Police: ಸುಹಾಸ...
05-05-25 03:24 pm
03-05-25 02:16 pm
Mangalore Correspondent
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm
Mangalore Mudipu Murder, Mob, Police, Crime:...
29-04-25 09:59 pm