ಬ್ರೇಕಿಂಗ್ ನ್ಯೂಸ್
21-03-24 08:04 pm HK News Desk ಕ್ರೈಂ
ರಾಯಚೂರು, ಮಾ 21: ಮದುವೆ ಆಗಿದ್ದರೂ ಮತ್ತೊಬ್ಬನ ಮೋಹಿಸಿದ ಮಹಿಳೆ ಗಂಡನನ್ನೇ ಕೊಂದು ಹಾಕಿದ್ದಾಳೆ. ಬಿಜೆಪಿಯ ಮಾಜಿ ತಾಲೂಕು ಪಂಚಾಯತಿ ಸದಸ್ಯನೊರ್ವ ಪತ್ನಿಯಿಂದಲೇ ಕೊಲೆಯಾಗಿದ್ದಾನೆ. ರಾಜು ನಾಯ್ಕ್ (38) ಕೊಲೆಯಾದವರು. ಸ್ನೇಹಾ ಕೊಲೆ ಆರೋಪಿ ಆಗಿದ್ದಾಳೆ. ರಾಯಚೂರಿನ ಸಿಂಗನೋಡಿ ತಾಂಡಾದಲ್ಲಿ ಈ ಘಟನೆ ನಡೆದಿದೆ.
ಗ್ರಾಮಕ್ಕೆ ದೇವಸ್ಥಾನದ ಗೋಪುರ ಕಟ್ಟಲು ಬಂದಿದ್ದ ಮಹಾರಾಷ್ಟ್ರ ಮೂಲದ ವ್ಯಕ್ತಿ ಜತೆಗೆ ಸ್ನೇಹಾ ಸಲುಗೆಯನ್ನು ಬೆಳೆಸಿದ್ದಳು. ಆತನನ್ನು ಮೋಹಿಸಿದ ಸ್ನೇಹಾ ಆತನೊಟ್ಟಿಗೆ ಅಕ್ರಮ ಸಂಬಂಧ ಹೊಂದಿದ್ದಳು. ಕದ್ದು ಮುಚ್ಚಿ ಆತನೊಟ್ಟಿಗೆ ಸೇರುತ್ತಿದ್ದಳು. ಆದರೆ ಇದು ಪತಿ ರಾಜುಗೆ ತಿಳಿದುಹೋಯಿತು.

ಹೆಂಡತಿ ವಿಷಯ ಊರವರಿಗೆ ತಿಳಿದರೆ ಮಾನ ಮಾರ್ಯಾದೆ ಹೋಗುತ್ತೆ ಎಂದು ರಾಜು, ತನ್ನ ಪತ್ನಿ ಸ್ನೇಹಾಗೆ ಬುದ್ಧಿವಾದ ಹೇಳಿದ್ದ. ಆದರೂ ಸ್ನೇಹಾ ತನ್ನ ಅಕ್ರಮ ಸಂಬಂಧವನ್ನು ಮುಂದುವರಿಸಿದ್ದಳು. ಇದೇ ವಿಚಾರಕ್ಕೆ ಇವರಿಬ್ಬರ ಮಧ್ಯೆ ಕಳೆದ 2 ವರ್ಷಗಳಿಂದ ಜಗಳ ನಡೆಯುತ್ತಿತ್ತು.
ಇತ್ತೀಚೆಗೆ ದಂಪತಿ ಮಧ್ಯೆ ಇದೇ ವಿಷಯಕ್ಕೆ ಜಗಳ ನಡೆದಿತ್ತು. ಅಕ್ರಮ ಸಂಬಂಧಕ್ಕೆ ಪತಿ ಅಡ್ಡಿಯಾಗಿದ್ದಕ್ಕೆ ಸ್ನೇಹಾ ಆತನನ್ನು ಮುಗಿಸಿಬಿಡುವ ಪ್ಲ್ಯಾನ್ ಮಾಡಿದ್ದಳು. ಪತಿಗಿದ್ದ ಕುಡಿತವನ್ನೇ ಬಂಡವಾಳ ಮಾಡಿಕೊಂಡ ಸ್ನೇಹ, ಮದ್ಯದಲ್ಲಿ ನಿದ್ರೆ ಮಾತ್ರೆ ಹಾಕಿ ಕೊಟ್ಟಿದ್ದಳು. ಅದನ್ನೂ ಕುಡಿಯುತ್ತಿದ್ದಂತೆ ರಾಜು ನಿದ್ರೆಗೆ ಜಾರಿದಾಗ ಕತ್ತು ಹಿಸುಕಿ ಕೊಲೆ ಮಾಡಿದ್ದಾಳೆ.
ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸ್ನೇಹಾಳನ್ನು ವಶಕ್ಕೆ ಪಡೆದಿರುವ ಯಾಪಲದಿನ್ನಿ ಪೊಲೀಸರು, ಈ ಸಂಬಂಧ ಪ್ರಕರಣಕ್ಕೆ ದಾಖಲಿಸಿಕೊಂಡು ತನಿಖೆಯನ್ನು ನಡೆಸುತ್ತಿದ್ದಾರೆ.
Raichur wife kills husband over her illicit affair. The deceased has been identified as Raju Naik. Since two years wife was in affair with a construction worker who had come from Maharashtra to Raichur.
13-12-25 10:47 pm
HK News Desk
ಕುರ್ಚಿ ಗುದ್ದಾಟ ; ಪರಮೇಶ್ವರ್ ಸಿಎಂ ಆಗಲೆಂದು ಹಾರೈಸ...
13-12-25 08:38 pm
BJP MLA Subhash Guttedar: ಅಳಂದ ಮತಗಳವು ಪ್ರಕರಣ...
13-12-25 04:00 pm
Pet Parrot, Bangalore Youth Death: 2 ಲಕ್ಷ ರೂ....
12-12-25 08:47 pm
Yatnal, Dk Shivakumar, Vijayendra: ಡಿಕೆ ಸಿಎಂ,...
12-12-25 07:47 pm
13-12-25 08:34 pm
HK News Desk
ಕಾರ್ತಿಗೈ ದೀಪೋತ್ಸವ ವಿವಾದ ; ಮಸೀದಿಯವರೇ ಆಕ್ಷೇಪಿಸಿ...
12-12-25 11:00 pm
ಮೋದಿ ಉತ್ತರಾಧಿಕಾರಿ ಯಾರು ? ಆರೆಸ್ಸೆಸ್ ನಿರ್ಧರಿಸುತ...
11-12-25 04:24 pm
ಮಂಗಳೂರು ಏರ್ಪೋರ್ಟ್ಗೆ ವಿದೇಶಿ ನೇರ ವಿಮಾನ ವ್ಯವಸ್...
11-12-25 02:09 pm
ತಮಿಳುನಾಡಿನಲ್ಲಿ ಕಾರ್ತಿಗೈ ದೀಪಕ್ಕೆ ಹೈಕೋರ್ಟ್ ಅನುಮ...
10-12-25 11:13 pm
13-12-25 11:02 pm
Mangalore Correspondent
ಕೆಂಜಾರು ಬಳಿ ಗೋವುಗಳನ್ನು ಕಡಿದು ಹತ್ಯೆ ; ಪೊದೆಯಲ್ಲ...
13-12-25 04:36 pm
ಸತತ ನಾಲ್ಕು ಗಂಟೆ ಸ್ಕೇಟಿಂಗ್ ನಲ್ಲಿ ಶಾಸ್ತ್ರೀಯ ನೃತ...
12-12-25 10:28 pm
ದೈವ ನರ್ತನದ ಬಗ್ಗೆ ನಮಗೆ ಸಂಶಯಗಳಿಲ್ಲ, ಗ್ರಾಮ ದೈವಕ್...
12-12-25 07:32 pm
ಆಯುಷ್ ಇಲಾಖೆಯಲ್ಲಿ ಅವಧಿ ಮೀರಿದ ಔಷಧ ಪೂರೈಕೆ ; ಅಧಿಕ...
12-12-25 02:02 pm
13-12-25 12:51 pm
HK News Desk
ಹಣ್ಣಿನ ವ್ಯಾಪಾರಿಯನ್ನು ಅಡ್ಡಗಟ್ಟಿ 19 ಸಾವಿರ ನಗದು...
12-12-25 01:58 pm
Hassan Crime, Murder: ಸ್ನೇಹಿತನನ್ನು ಪಾರ್ಟಿಗೆ ಕ...
11-12-25 09:53 pm
Bangalore Crime, Blackmail, Suicide: ಬೆತ್ತಲೆ...
11-12-25 07:49 pm
Imprisonment in Malpe Case: ಮಲ್ಪೆಯಲ್ಲಿ ನೆಲೆಸಿ...
10-12-25 10:14 pm