ಬ್ರೇಕಿಂಗ್ ನ್ಯೂಸ್
20-02-24 12:01 pm HK News Desk ಕ್ರೈಂ
ಗೋಕರ್ಣ, ಫೆ 20: ಡ್ರಗ್ಸ್ ಸೇವಿಸಿ ಪೊಲೀಸರ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಬೆಂಗಳೂರಿನ ಇಬ್ಬರು ಸಾಫ್ಟ್‌ವೇರ್ ಡೆವಲಪರ್‌ಗಳನ್ನು ಗೋಕರ್ಣ ಪೊಲೀಸರು ಬಂಧಿಸಿದ್ದಾರೆ.
ಮಹಿಳೆಯರನ್ನು ಬಿಹಾರದ ಮುಂಗೇರ್‌ನ ಜಮಾಲ್‌ಪುರದ ಪಲ್ಲವಿ ಪ್ರಿಯಾ 29 ಮತ್ತು ಜಾರ್ಖಂಡ್‌ನ ಬೆರಾಮೊ, ಬೊಕಾರೊ ಮೂಲದ ಪ್ರಿಯಾ ರಾಯ್ (26) ಎಂದು ಗುರುತಿಸಲಾಗಿದೆ. ಅಡ್ಡಾದಿಡ್ಡಿಯಾಗಿ ಚಾಲನೆ ಮಾಡುತ್ತಿದ್ದ ಅವರು, ಮಹಾಬಲೇಶ್ವರ ದೇವಸ್ಥಾನದ ಬಳಿ ನಿಂತಿದ್ದ ಮಹಿಳಾ ಪೊಲೀಸ್ ಪೇದೆಯೊಬ್ಬರಿಗೆ ತಮ್ಮ ಬಾಡಿಗೆ ವಾಹನದಿಂದ ಡಿಕ್ಕಿ ಹೊಡೆದಿದ್ದಾರೆ.
ಬಾಡಿಗೆ ವಾಹನವನ್ನು ಅಡ್ಡಾದಿಡ್ಡಿಯಾಗಿ ಓಡಿಸುತ್ತಿದ್ದುದನ್ನು ಕಂಡ ಪೊಲೀಸರು ತಡೆದಿದ್ದಾರೆ. ಮಹಿಳೆಯರು ಕಾನ್‌ಸ್ಟೆಬಲ್‌ಗೆ ಅಸಭ್ಯ ಭಾಷೆಯಲ್ಲಿ ನಿಂದಿಸಿ ಹಲ್ಲೆ ಮಾಡಲು ಪ್ರಾರಂಭಿಸಿದರು. ಸ್ಥಳದಲ್ಲಿ ಜಮಾಯಿಸಿದ ಜನರು ಕಾನ್‌ಸ್ಟೆಬಲ್‌ನನ್ನು ರಕ್ಷಿಸಿ ಮಹಿಳೆಯರನ್ನು ಠಾಣೆಗೆ ಕರೆದೊಯ್ದರು ಎಂದು ಪ್ರತ್ಯಕ್ಷ ದರ್ಶಿಗಳು ತಿಳಿಸಿದ್ದಾರೆ.
ಠಾಣೆಯಲ್ಲಿ ಮತ್ತೊಬ್ಬ ಪೊಲೀಸ್ ಅಧಿಕಾರಿ ಅವರನ್ನು ವಿಚಾರಣೆಗೆ ಒಳಪಡಿಸಿದಾಗ ಅಲ್ಲಿಯೂ ಮಹಿಳೆಯರು ಮತ್ತೆ ತಮ್ಮ ಕೃತ್ಯವನ್ನು ಪುನರಾವರ್ತಿಸಿದರು. ನಂತರ ಪೊಲೀಸರು ಅವರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದು, ಗಾಂಜಾ ಸೇವಿಸಿರುವುದು ಬೆಳಕಿಗೆ ಬಂದಿದೆ.
ಈ ಸಂಬಂಧ ದೂರು ದಾಖಲಾಗಿದ್ದು, ಇಬ್ಬರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಇದೀಗ ಅವರನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ. ಮುಂದಿನ ತನಿಖೆ ನಡೆಯುತ್ತಿದೆ. ಪುಣ್ಯ ಕ್ಷೇತ್ರವಾದ ಗೋಕರ್ಣದಲ್ಲಿ ಡ್ರಗ್ಸ್ ಸೇವನೆ ಹಾಗೂ ಅಕ್ರಮ ಪಾರ್ಟಿ ಮಾಡುವ ಘಟನೆಗಳು ಹೆಚ್ಚುತ್ತಿವೆ. ಗೋಕರ್ಣದಲ್ಲಿ ಮಾದಕ ವಸ್ತು ಸೇವನೆ ಮತ್ತು ಗಲಾಟೆ ಸೃಷ್ಟಿಸಿದ ಮಹಿಳೆಯರನ್ನು ಬಂಧಿಸಿರುವುದು ಇದೇ ಮೊದಲು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Two women software developers from Bangalore arrested in Gokarna over consumption of drugs. The two way driving car after consuming drugs and Rammed Police Constable and assaulted him.
09-06-26 07:04 pm
HK News Staffer
ವಿಧಾನ ಪರಿಷತ್ ಚುನಾವಣೆ ; ಕಾಂಗ್ರೆಸ್ ಐದನೇ ಅಭ್ಯರ್ಥ...
09-06-26 01:27 pm
Krishna Byre Gowda: ಡಿಕೆಶಿ ಸಂಪುಟದಲ್ಲಿ ಮತ್ತೊಂದ...
08-06-26 12:37 pm
ರಾಮಲಿಂಗಾರೆಡ್ಡಿ ರಾಜೀನಾಮೆ ಡ್ರಾಮಾಗೆ ಟ್ವಿಸ್ಟ್ ; ಡ...
06-06-26 12:49 pm
ಎಂಬಿಬಿಎಸ್ ಪದವಿ ಮುಗಿಸಿದ ಬೆನ್ನಲ್ಲೇ ಸರ್ಕಾರಿ ಆಸ್ಪ...
05-06-26 07:14 pm
08-06-26 09:11 pm
HK News Staffer
ದೇಲಂಪಾಡಿ ; ಭಾರೀ ಮಳೆಗೆ ಕಲ್ಲಿನ ತಡೆಗೋಡೆ ಕುಸಿದು ಬ...
06-06-26 10:42 pm
ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ; ಜಿರಳೆಗಳ ಮುಖವಾಡ ಧ...
06-06-26 05:48 pm
ತಮಿಳುನಾಡಿನಲ್ಲಿ ಅಣ್ಣಾಮಲೈ ಸಂಚಲನ ; ಬಿಜೆಪಿಗೆ ಗುಡ್...
05-06-26 02:34 pm
ಯೋಗಿಜೀ ನಮ್ಮನ್ನು ಕ್ಷಮಿಸಿ..! ಇನ್ನೆಂದೂ ಅಪರಾಧ ಕೃತ...
04-06-26 04:19 pm
09-06-26 08:58 pm
ರಿಚರ್ಡ್ | Richard
Mangalore: ಡಿಗ್ರಿ, ಇಂಜಿನಿಯರಿಂಗ್ ವಿದ್ಯಾರ್ಥಿಗಳಿ...
09-06-26 06:15 pm
ಮಳೆಗಾಲ ಹಿನ್ನೆಲೆ ; ರಸ್ತೆ ಹೊಂಡಕ್ಕೆ ಬಿದ್ದು ಪ್ರಾಣ...
08-06-26 09:21 pm
ಮಂಗಳೂರಿನಲ್ಲಿ ಡಿಎಚ್ಓಗೆ ಸಚಿವ ಯು.ಟಿ ಖಾದರ್ ಕ್ಲಾಸ್...
08-06-26 04:55 pm
UT Khader, Mangalore: ಎಂಬಿಬಿಎಸ್ ಆದವರಿಗೆ ಕಲಿತ...
07-06-26 03:38 pm
10-06-26 12:09 pm
HK News Staffer
ಬೆಳ್ತಂಗಡಿ ಪೊಲೀಸರ ಭರ್ಜರಿ ಕಾರ್ಯಚರಣೆ ; ಮನೆಗಳಿಗೆ...
09-06-26 05:03 pm
Mangalore Blackmail, crime, Honeytrap: ಸಲಿಂಗಕ...
09-06-26 10:26 am
ಬಂಟ, ಬಿಲ್ಲವ ಜಾತಿಗಳ ಬಗ್ಗೆ ಅವಹೇಳನ ಹೇಳಿಕೆ ; ಸಾಮಾ...
08-06-26 11:10 pm
ಡಿಜಿಟಲ್ ಅರೆಸ್ಟ್ ಹೆಸರಿನಲ್ಲಿ 98 ಲಕ್ಷ ರೂ. ದೋಚಿದ...
08-06-26 10:41 pm