ಬ್ರೇಕಿಂಗ್ ನ್ಯೂಸ್
04-02-24 07:55 pm HK News Desk ಕ್ರೈಂ
ಹಾಸನ, ಫೆ.4: ಪಿಸ್ತೂಲ್ ಹಿಡಿದು ಒಂಟಿ ಮನೆಗೆ ನುಗ್ಗಿರುವ ಇಬ್ಬರು ದರೋಡೆಕೋರರು ಮನೆಯ ಗೋಡೆಗೆ ಗುಂಡು ಹಾರಿಸಿ ಮನೆಯಲ್ಲಿದ್ದ ಮಹಿಳೆ ಧರಿಸಿದ್ದ ಚಿನ್ನಾಭರಣಗಳನ್ನು ಬಲವಂತವಾಗಿ ಕಸಿದು ಎಸ್ಕೇಪ್ ಆಗಿರುವ ಘಟನೆ ಹಾಸನ ಜಿಲ್ಲೆ, ಬೇಲೂರು ತಾಲ್ಲೂಕಿನ, ಮುದಿಗೆರೆ ಕ್ರಾಸ್‌ನಲ್ಲಿ ನಡೆದಿದೆ.
ಗ್ರಾಮದ ರವಿ ಎಂಬವರು ಶನಿವಾರ ಸಂಜೆ ಮನೆ ಪಕ್ಕದ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದರು. ಈ ವೇಳೆ ಮುಖಕ್ಕೆ ಕರವಸ್ತ್ರ ಹಾಕಿಕೊಂಡು ಇಬ್ಬರು ಕಳ್ಳರು ಮನೆಗೆ ನುಗ್ಗಿದ್ದಾರೆ. ಮನೆಯಲ್ಲಿ ರವಿ ಪತ್ನಿ ಶೃತಿ ಹಾಗೂ ಅವರ ತಾಯಿ ಚಂದ್ರಮ್ಮ ಇದ್ದು, ಅವರಿಗೆ ಪಿಸ್ತೂಲ್ ತೋರಿಸಿ ಮೈಮೇಲಿದ್ದ ಚಿನ್ನಾಭರಣ ನೀಡುವಂತೆ ಹೆದರಿಸಿದ್ದಾರೆ. ಚಿನ್ನಾಭರಣ ನೀಡದಿದ್ದಕ್ಕೆ ಗೋಡೆಗೆ ಗುಂಡು ಹಾರಿಸಿದ್ದಾರೆ. ಪಿಸ್ತೂಲ್‌ನಿಂದ ಫೈಯರ್ ಆಗುತ್ತಿದ್ದಂತೆ ಹೆದರಿದ ಶೃತಿ ತಮ್ಮ ಮಕ್ಕಳನ್ನು ರೂಂನಲ್ಲಿ ಕೂಡಿ ಹಾಕಿದ್ದಾರೆ. ಒಡವೆ ಕೊಡದಿದ್ದರೆ ಗುಂಡು ಹಾರಿಸುವುದಾಗಿ ಪಿಸ್ತೂಲ್ ತೋರಿಸಿ ಬೆದರಿಕೆ ಹಾಕಿದ್ದು, ಈ ವೇಳೆ ಶೃತಿ ಮೈಮೇಲಿದ್ದ ಚಿನ್ನದ ತಾಳಿ, ಒಂದು ಜೊತೆ ಚಿನ್ನದ ಓಲೆ, ಎರಡು ಚಿನ್ನದ ಗುಂಡು ತೆಗೆದು ಕೊಟ್ಟಿದ್ದಾರೆ. ಬಳಿಕ ಅವರ ಮೊಬೈಲ್ ಕಸಿದುಕೊಂಡು ಕಳ್ಳರು ಪರಾರಿಯಾಗಿದ್ದಾರೆ.
ಪಿಸ್ತೂಲ್ ಶಬ್ದ ಕೇಳುತ್ತಿದ್ದಂತೆ ರವಿ ಮನೆಗೆ ಓಡಿ ಬಂದಿದ್ದು ಕಳ್ಳರನ್ನು ಹಿಡಿಯಲು ಮುಂದಾಗಿದ್ದಾರೆ. ಈ ವೇಳೆ ಮತ್ತೊಮ್ಮೆ ಗಾಳಿಯಲ್ಲಿ ಫೈಯರ್ ಮಾಡಿ ಕಳ್ಳರು ಅಲ್ಲಿಂದ ಎಸ್ಕೇಪ್ ಆಗಿದ್ದಾರೆ. ಕಳ್ಳರು ಓಡಿ ಹೋಗುವ ದೃಶ್ಯ ಅಲ್ಲಿಯೇ ಸನಿಹ ಸಿಸಿಟಿಯಲ್ಲಿ ಸೆರೆಯಾಗಿದೆ. ಮನೆಗೆ ನುಗ್ಗಿದ ವೇಳೆ ಪಿಸ್ತೂಲ್ ತೋರಿಸಿ ಕನ್ನಡ ಭಾಷೆಯಲ್ಲೇ ಚಿನ್ನಾಭರಣ ನೀಡುವಂತೆ ಹೆದರಿಸಿದರು ಎಂದು ಪೊಲೀಸರಿಗೆ ದೂರು ನೀಡಿದ್ದಾರೆ. ಸ್ಥಳಕ್ಕೆ ಎಸ್ಪಿ ಮಹಮದ್ ಸುಜೀತಾ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬೇಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಆರೋಪಿಗಳ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.
Hassan robbers threaten people in home rob gold jewellery by showing pistol.
11-05-25 01:21 pm
HK News Desk
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
12-05-25 11:23 am
HK News Desk
ಪಾಕಿಸ್ತಾನದ ಉಗ್ರರ ನೆಲೆಗಳ ಧ್ವಂಸ ; ಫೋಟೊ ಸಾಕ್ಷ್ಯ...
11-05-25 11:02 pm
ಭಾರತದ ಮೇಲೆ ದಾಳಿಗೆ ಟರ್ಕಿ ಡ್ರೋಣ್ ಬಳಕೆ ; ಒಂದೇ ರಾ...
11-05-25 06:25 pm
ಆಪರೇಷನ್ ಸಿಂಧೂರ ಇನ್ನೂ ಮುಗಿದಿಲ್ಲ.. ಕದನ ವಿರಾಮ ಘೋ...
11-05-25 06:12 pm
ಜಮ್ಮು ಗಡಿಯಲ್ಲಿ ಪಾಕ್ ಶೆಲ್ ದಾಳಿ ; ಬಿಎಸ್ಎಫ್ ಯೋಧ,...
11-05-25 01:43 pm
12-05-25 11:26 am
HK News Desk
Mangalore, Pilikula, Dr Suryaprakash Shenoy:...
11-05-25 05:01 pm
Drone Ban, Mangalore, Mysuru: ಮಂಗಳೂರು, ಮೈಸೂರಿ...
10-05-25 07:10 pm
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
Mangalore University, U T Khader, Syndicate M...
09-05-25 06:22 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm