ಬ್ರೇಕಿಂಗ್ ನ್ಯೂಸ್
03-02-24 11:54 am HK News Desk ಕ್ರೈಂ
ಕಾಸರಗೋಡು, ಫೆ.3: ನಕಲಿ ವೀಸಾ, ಪಾಸ್‌ಪೋರ್ಟ್ ದಂಧೆಯಲ್ಲಿ ತೊಡಗಿಸಿದ್ದ ಜಾಲವೊಂದನ್ನು ಕಾಸರಗೋಡು ಜಿಲ್ಲೆಯ ಬೇಡಗಂ ಪೊಲೀಸರು ಭೇದಿಸಿದ್ದು ಮೂವರು ಆರೋಪಿಗಳನ್ನು ಬಂಧಿಸಲಾಗಿದೆ.
ಬಂಧಿತರಿಂದ 37 ನಕಲಿ ಸೀಲುಗಳು, ಬ್ಯಾಂಕ್, ಕಾಲೇಜು ಮತ್ತು ವೈದ್ಯರ ಲೆಟರ್‌ಹೆಡ್, ಲ್ಯಾಪ್ ಟಾಪ್ ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಬಂಧಿತರಲ್ಲಿ ದಕ್ಷಿಣ ಕೊರಿಯಾದಲ್ಲಿ ಉದ್ಯೋಗಿಯಾಗಿದ್ದವರು ಸೇರಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಬಂಧಿತರಿಂದ ಮೂರು ಪಾಸ್‌ಪೋರ್ಟ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ತ್ರಿಕರಿಪುರ ನಿವಾಸಿ ಎಂ.ಎ. ಅಹಮದ್ ಅಬ್ರಾರ್ (26) ಮತ್ತು ಎಂ.ಎ. ಸಾಬಿತ್ (25) ಮತ್ತು ಕಾಞಂಗಾಡು ಪುರಸಭೆಯ ಪಡನ್ನಕ್ಕಾಡ್ ಮಹಮ್ಮದ್ ಸಫ್ವಾನ್ (28) ಬಂಧಿತ ಆರೋಪಿಗಳಾಗಿದ್ದಾರೆ.
ನಕಲಿ ರಬ್ಬರ್ ಸೀಲ್‌ಗಳಲ್ಲಿ ವೈದ್ಯರು ಮತ್ತು ಬ್ಯಾಂಕ್ ವ್ಯವಸ್ಥಾಪಕರ ರಬ್ಬರ್ ಸ್ಟ್ಯಾಂಪ್‌ಗಳು ಸೇರಿವೆ. ವಶಪಡಿಸಿಕೊಂಡ ಲೆಟರ್ ಪ್ಯಾಡ್‌ಗಳಲ್ಲಿ ಪಟಣ್ಣ ಶರಾಫ್ ಕಾಲೇಜು, ಚಟ್ಟಂಚಾಲ್ ಎಂಐಸಿ ಕಾಲೇಜು ಮತ್ತು ಎಂಇಎಸ್ ಕಾಲೇಜುಗಳದ್ದಿವೆ. ಗುರುವಾರ ರಾತ್ರಿ ಬೇಡಗಂ ಠಾಣೆ ಪೊಲೀಸರು ವಾಹನ ತಪಾಸಣೆ ನಡೆಸುತ್ತಿದ್ದಾಗ ನಕಲಿ ದಾಖಲೆ, ರಬ್ಬರ್ ಸೀಲು, ಲೆಟರ್ ಪ್ಯಾಡ್ ಗಳೊಂದಿಗೆ ಈ ಮೂವರ ತಂಡ ಸಿಕ್ಕಿಬಿದ್ದಿದೆ. ಇಂಡಿಯನ್ ಓವರ್‌ಸೀಸ್ ಬ್ಯಾಂಕ್ ಅಲುವಾ, ಅಂಗಮಾಲಿ ಫೆಡರಲ್ ಬ್ಯಾಂಕ್, ತ್ರಿಕ್ಕರಿಪುರ ಸೌತ್ ಇಂಡಿಯನ್ ಬ್ಯಾಂಕ್ ಮೊದಲಾದ ಬ್ಯಾಂಕ್‌ಗಳ ವ್ಯವಸ್ಥಾಪಕರ ಹೆಸರಿನಲ್ಲಿರುವ ನಕಲಿ ರಬ್ಬರ್ ಸ್ಟ್ಯಾಂಪ್ ಗಳು ಸಿಕ್ಕಿವೆ. ಜೊತೆಗೆ ಬೆಂಗಳೂರು ಸೂಪರ್ ಸ್ಪೆಷಾಲಿಟಿ ಕೇಂದ್ರದ ಉದ್ಯೋಗ ದೃಢೀಕರಣ ಪತ್ರ ಹಾಗೂ ಎಂಇಎಸ್ ಕಾಲೇಜಿಗೆ ಸೇರಿದ ನಕಲಿ ನಿರಾಕ್ಷೇಪಣಾ ಪತ್ರವನ್ನೂ ವಶಪಡಿಸಲಾಗಿದೆ. ಆರೋಪಿಗಳು ಕೊರಿಯಾ ಇನ್ನಿತರ ದೇಶಗಳಿಗೆ ನಕಲಿ ವೀಸಾ ಮಾಡಿಕೊಡುವ ದಂಧೆಯಲ್ಲಿ ತೊಡಗಿಕೊಂಡಿದ್ದರು ಎನ್ನಲಾಗಿದೆ.
Three persons, including an employee of KIA in South Korea, were arrested with 37 fake seals, and letterheads of banks, colleges, and doctors, said Bedakam Police in Kasaragod. Three passports were also seized from them but they appear to be genuine, said Bedakam Sub-Inspector M Gangadharan.
13-12-25 10:47 pm
HK News Desk
ಕುರ್ಚಿ ಗುದ್ದಾಟ ; ಪರಮೇಶ್ವರ್ ಸಿಎಂ ಆಗಲೆಂದು ಹಾರೈಸ...
13-12-25 08:38 pm
BJP MLA Subhash Guttedar: ಅಳಂದ ಮತಗಳವು ಪ್ರಕರಣ...
13-12-25 04:00 pm
Pet Parrot, Bangalore Youth Death: 2 ಲಕ್ಷ ರೂ....
12-12-25 08:47 pm
Yatnal, Dk Shivakumar, Vijayendra: ಡಿಕೆ ಸಿಎಂ,...
12-12-25 07:47 pm
13-12-25 08:34 pm
HK News Desk
ಕಾರ್ತಿಗೈ ದೀಪೋತ್ಸವ ವಿವಾದ ; ಮಸೀದಿಯವರೇ ಆಕ್ಷೇಪಿಸಿ...
12-12-25 11:00 pm
ಮೋದಿ ಉತ್ತರಾಧಿಕಾರಿ ಯಾರು ? ಆರೆಸ್ಸೆಸ್ ನಿರ್ಧರಿಸುತ...
11-12-25 04:24 pm
ಮಂಗಳೂರು ಏರ್ಪೋರ್ಟ್ಗೆ ವಿದೇಶಿ ನೇರ ವಿಮಾನ ವ್ಯವಸ್...
11-12-25 02:09 pm
ತಮಿಳುನಾಡಿನಲ್ಲಿ ಕಾರ್ತಿಗೈ ದೀಪಕ್ಕೆ ಹೈಕೋರ್ಟ್ ಅನುಮ...
10-12-25 11:13 pm
13-12-25 11:02 pm
Mangalore Correspondent
ಕೆಂಜಾರು ಬಳಿ ಗೋವುಗಳನ್ನು ಕಡಿದು ಹತ್ಯೆ ; ಪೊದೆಯಲ್ಲ...
13-12-25 04:36 pm
ಸತತ ನಾಲ್ಕು ಗಂಟೆ ಸ್ಕೇಟಿಂಗ್ ನಲ್ಲಿ ಶಾಸ್ತ್ರೀಯ ನೃತ...
12-12-25 10:28 pm
ದೈವ ನರ್ತನದ ಬಗ್ಗೆ ನಮಗೆ ಸಂಶಯಗಳಿಲ್ಲ, ಗ್ರಾಮ ದೈವಕ್...
12-12-25 07:32 pm
ಆಯುಷ್ ಇಲಾಖೆಯಲ್ಲಿ ಅವಧಿ ಮೀರಿದ ಔಷಧ ಪೂರೈಕೆ ; ಅಧಿಕ...
12-12-25 02:02 pm
13-12-25 12:51 pm
HK News Desk
ಹಣ್ಣಿನ ವ್ಯಾಪಾರಿಯನ್ನು ಅಡ್ಡಗಟ್ಟಿ 19 ಸಾವಿರ ನಗದು...
12-12-25 01:58 pm
Hassan Crime, Murder: ಸ್ನೇಹಿತನನ್ನು ಪಾರ್ಟಿಗೆ ಕ...
11-12-25 09:53 pm
Bangalore Crime, Blackmail, Suicide: ಬೆತ್ತಲೆ...
11-12-25 07:49 pm
Imprisonment in Malpe Case: ಮಲ್ಪೆಯಲ್ಲಿ ನೆಲೆಸಿ...
10-12-25 10:14 pm