ಬ್ರೇಕಿಂಗ್ ನ್ಯೂಸ್
01-02-24 01:54 pm HK News Desk ಕ್ರೈಂ
ಕಾಸರಗೋಡು, ಫೆ.1: ಕಾಸರಗೋಡಿನ ವ್ಯಕ್ತಿಯೊಬ್ಬರನ್ನು ಮಂಗಳೂರಿಗೆ ಕರೆದೊಯ್ದು ಹನಿಟ್ರ್ಯಾಪ್ ಮಾಡಿರುವ ಪ್ರಕರಣದ ಬೆನ್ನತ್ತಿದ ಮೇಲ್ಪರಂಬ ಪೊಲೀಸರು ಇಬ್ಬರು ಮಹಿಳೆಯರು ಸೇರಿ ಏಳು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ. ಮಾಂಗಾಡ್ ನಿವಾಸಿಯನ್ನು ಹನಿಟ್ರ್ಯಾಪ್‌ನಲ್ಲಿ ಸಿಲುಕಿಸಿ 5 ಲಕ್ಷ ರೂ. ಲಪಟಾಯಿಸಿದ ಬಗ್ಗೆ ಕಾಸರಗೋಡು ಜಿಲ್ಲೆಯ ಮೇಲ್ಪರಂಬ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಕೋಜಿಕ್ಕೋಡ್ ಮೂಲದ ಎಂ.ಪಿ.ರುಬೀನಾ(29), ಆಕೆಯ ಪತಿ ಪ್ರಕರಣದ ಸೂತ್ರಧಾರ ಫೈಝಲ್ (37), ಕಾಸರಗೋಡು ಶಿರಿಬಾಗಿಲು ನಿವಾಸಿ ಎನ್. ಸಿದ್ದಿಕ್ (48), ಮಾಂಗಾಡ್‌ನ ದಿಲ್ಶಾದ್ (40), ಮುಟ್ಟತ್ತೋಡಿಯ ನಫೀಸತ್ ಮಿಸ್ರಿಯ (40), ಮಾಂಗಾಡ್‌ನ ಅಬ್ದುಲ್ಲ ಕುಂಞಿ (32), ಪಡನ್ನಕ್ಕಾಡ್‌ನ ರಫೀಕ್ ಮಹಮ್ಮದ್ (42) ಬಂಧಿತ ಆರೋಪಿಗಳು.
ಜನವರಿ 23 ರಂದು ರುಬಿನಾ ಎಂಬಾಕೆ ಮೊಬೈಲ್ ಮೂಲಕ 59 ವರ್ಷದ ವ್ಯಕ್ತಿಯ ಪರಿಚಯ ಮಾಡಿಕೊಂಡಿದ್ದಳು. ಶೈಕ್ಷಣಿಕ ಉದ್ದೇಶಕ್ಕಾಗಿ ಲ್ಯಾಪ್ ಟಾಪ್ ಖರೀದಿಸಿದ್ದು ಅದು ಹಾಳಾಗಿದೆ. ನಿಮ್ಮ ಸಮಾಜ ಸೇವೆ ಬಗ್ಗೆ ತಿಳಿದುಕೊಂಡಿದ್ದೇನೆ. ಅದಕ್ಕಾಗಿ ಸಹಾಯ ಮಾಡಬೇಕೆಂದು ಬೇಡಿಕೆ ಇಟ್ಟಿದ್ದಳು. ಅದರಂತೆ ಯುವತಿಯೊಂದಿಗೆ ಕಾಸರಗೋಡಿಗೆ ಆಗಮಿಸಿದ ಅವರು ಲ್ಯಾಪ್ ಟಾಪ್ ರಿಪೇರಿ ಸಾಧ್ಯವಿಲ್ಲ. ಹೊಸ ಲ್ಯಾಪ್ ಟಾಪ್ ಖರೀದಿಸಿ ಕೊಡುವುದಾಗಿ ಹೇಳಿದ್ದರು.
ಲ್ಯಾಪ್‌ಟಾಪ್ ಖರೀದಿಸುವ ನೆಪದಲ್ಲಿ ಆರೋಪಿ ಯುವತಿ ರುಬಿನಾ ಮಂಗಳೂರಿಗೆ ಬಂದಿದ್ದಳು. ಈ ವೇಳೆ, ಆ ವ್ಯಕ್ತಿಯೊಂದಿಗೆ ಸಲುಗೆಯಲ್ಲಿದ್ದ ವಸತಿ ಗೃಹವೊಂದಕ್ಕೆ ತೆರಳಿದ್ದರು. ಅಷ್ಟರಲ್ಲಿ ರುಬಿನಾ ಪತಿ ಸೇರಿದಂತೆ ಐದಾರು ಮಂದಿಯ ತಂಡ ಎಂಟ್ರಿಯಾಗಿದ್ದು ಬಲವಂತದಿಂದ ನಗ್ನ ಫೋಟೊ ತೆಗೆದುಕೊಂಡಿದ್ದಾರೆ. ಬಳಿಕ ಆರೋಪಿಗಳು ಆ ವ್ಯಕ್ತಿಯನ್ನು ಕಾಸರಗೋಡಿಗೆ ಕರೆದೊಯ್ದು ಕೂಡಿಹಾಕಿ ಬೆದರಿಸಿ ₹5 ಲಕ್ಷ ಸುಲಿಗೆ ಮಾಡಿದ್ದಾರೆ. ಆನಂತರವೂ, ಆರೋಪಿಗಳು ಹಣಕ್ಕಾಗಿ ಬ್ಲಾಕ್ಮೇಲ್ ಮಾಡಿದ್ದರು.
ಈ ಬಗ್ಗೆ ಸಂತ್ರಸ್ತ ವ್ಯಕ್ತಿ ಕಾಸರಗೋಡು ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣದ ತನಿಖೆ ನಡೆಸಿದ್ದ ಮೇಲ್ಪರಂಬ ಠಾಣಾ ಎಸ್ ಐ ಸುರೇಶ್ ಮತ್ತು ಅರುಣ್ ಮೋಹನ್ ಹನಿಟ್ರಾಪ್ ತಂಡದ ಏಳು ಆರೋಪಿಗಳನ್ನು ಬಂಧಿಸಿದ್ದಾರೆ.
Kerala Police arrested seven people, including a woman, on Wednesday for embezzling around Rs 5 lakh from a 59-year-old man through 'honey trap'. The arrested are Kasaragod natives Dilshad, Siddique, Lubna, Faisal and three others.
25-08-26 03:39 pm
HK News Staffer
ಕರ್ನಾಟಕದಲ್ಲಿ H1N1 ಆತಂಕ ; 8 ತಿಂಗಳಲ್ಲಿ 4,212 ಪ...
24-08-26 03:16 pm
ಕರ್ನಾಟಕದಲ್ಲಿ ‘ಅನಲಾಗ್ ಪನ್ನೀರ್’ಗೆ ಒಂದು ವರ್ಷ ನಿಷ...
22-08-26 10:15 pm
ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ನಾಪತ್ತೆ ; ಏ...
22-08-26 03:01 pm
500 ಕೆಪಿಎಸ್ ಶಾಲೆಗಳ ಸಮಗ್ರ ಅಭಿವೃದ್ಧಿಗೆ ₹2500 ಕೋ...
22-08-26 11:10 am
26-08-26 06:41 pm
HK News Staffer
ಹಿಜಾಬ್ ಇಸ್ಲಾಮಿನ ಧಾರ್ಮಿಕ ಆಚರಣೆಯಲ್ಲಿ ಅನಿವಾರ್ಯ ಅ...
26-08-26 02:05 pm
ಮಂಗಳೂರನ್ನು ಪಾಲಕ್ಕಾಡ್ ರೈಲ್ವೇ ವಿಭಾಗದಿಂದ ತೆರವು ಮ...
26-08-26 12:01 pm
ಅಮರಾವತಿ ಆಸ್ಪತ್ರೆಯಲ್ಲಿ ಭೀಕರ ಅಗ್ನಿ ದುರಂತ ; ವೆಂಟ...
24-08-26 04:55 pm
ಪಾಲ್ಘಾಟ್ ರೈಲ್ವೇ ವಿಭಾಗದಿಂದ ಮಂಗಳೂರು ಹೊರಕ್ಕೆ ; ವ...
22-08-26 08:37 pm
26-08-26 10:58 pm
HK News Desk
ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹುದ್ದೆಗ...
26-08-26 10:48 pm
ಜಿರಳೆ ಇದೆಯೆಂದು ತೊಕ್ಕೊಟ್ಟಿನ ಹೊಟೇಲಿಗೆ ಆಹಾರ ಇಲಾಖ...
25-08-26 09:37 pm
'ಕಿಂಗ್ಸ್ ಬಜಾರ್' ಹೆಸರಲ್ಲಿ ದುಪ್ಪಟ್ಟು ಲಾಭದ ಹೂಡಿಕ...
25-08-26 09:00 pm
ಪುತ್ತೂರು ಪೇಟೆಯಲ್ಲಿ ಸ್ವಯಂಪ್ರೇರಿತ ಬಂದ್ ; ವಾಹನ ಸ...
25-08-26 02:55 pm
26-08-26 09:36 pm
HK News Staffer
ಸೂರ್ಯಪೇಟೆಯಲ್ಲಿ ಭೀಕರ ಅಪಘಾತ ; ಕಂಟೇನರ್ ಲಾರಿಗೆ ಬ...
26-08-26 11:26 am
ವಿಜಯಪುರದಲ್ಲಿ ಭೀಕರ ದುರಂತ ; ನಾಪತ್ತೆಯಾಗಿದ್ದ ಒಂದೇ...
26-08-26 11:23 am
ಚಿಕ್ಕಮಗಳೂರು ; ಟಿಪ್ಪು ಕಟೌಟ್ ಜೊತೆಗೆ ಮುಜಾಹಿದ್ ಹಾ...
25-08-26 10:39 pm
ಉಡುಪಿಯ ದೇವಸ್ಥಾನದ ಕೆರೆಯಲ್ಲಿ ಮುಳುಗಿ 15 ವರ್ಷದ ವಿ...
25-08-26 07:27 pm