ಬ್ರೇಕಿಂಗ್ ನ್ಯೂಸ್
10-01-24 10:16 pm Bangalore Correspondent ಕ್ರೈಂ
ಬೆಂಗಳೂರು, ಜ.10: ಹೊಸ ವರ್ಷದ ಪಾರ್ಟಿಗೆಂದು ವ್ಯಕ್ತಿಯೊಬ್ಬನನ್ನು ಅಪಹರಿಸಿ ಆತನಿಂದ 5 ಲಕ್ಷ ರೂ. ಕಿತ್ತುಕೊಂಡಿದ್ದಲ್ಲದೆ, ಹಾಗೇ ಬಿಟ್ಟು ಕಳಿಸಿದರೆ ಅಪಾಯ ಎಂದುಕೊಂಡು ಕಾರಿನಲ್ಲಿ ಸುತ್ತಾಡುತ್ತಲೇ ಕೊಲೆಗೈದು ಕಾಡಿನಲ್ಲಿ ಎಸೆದು ಹೋದ ಕೃತ್ಯ ತಡವಾಗಿ ಬೆಳಕಿಗೆ ಬಂದಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ರಾಮಸಂದ್ರ ಗಾಯತ್ರಿ ಲೇಔಟ್‌ನ ಸಂಜಯ್ (25), ಮಂಗನಹಳ್ಳಿ ಕ್ರಾಸ್ ಎಸ್.ಎಂ.ವಿ ಲೇಔಟ್ 5ನೇ ಬ್ಲಾಕ್ ನಿವಾಸಿ ಆನಂದ ಹಾಗೂ ನಾಗದೇವಹಳ್ಳಿ ನಿವಾಸಿ ಹನುಮಂತು ಎಂಬ ಕಿರಾತಕರನ್ನು ಪೊಲೀಸರು ಬಂಧಿಸಿದ್ದಾರೆ.
ಮೊದಲಿಗೆ ಕಿಶನ್ ಕುಮಾರ್ ಎಂಬ ಯುವಕನನ್ನು ಅಪಹರಿಸಿ ಹತ್ತು ಸಾವಿರ ಹಣಕ್ಕಾಗಿ ಪೀಡಿಸಿದ್ದರು. ಆತ ಉಪಾಯದಿಂದ ತಪ್ಪಿಸಿಕೊಂಡ ಬಳಿಕ ತಮ್ಮ ಪರಿಚಯದ ಸೇಲ್ಸ್ ಎಕ್ಸಿಕ್ಯುಟಿವ್ ಆಗಿದ್ದ ಗುರುಸಿದ್ದಪ್ಪ ಎಂಬಾತನನ್ನು ಡಿ.30ರಂದು ಕಿಡ್ನಾಪ್ ಮಾಡಿದ್ದರು. ನಂತರ, ಆತನ ಪತ್ನಿಗೆ ಕರೆ ಮಾಡಿಸಿ 5 ಲಕ್ಷ ರೂ. ಪೀಕಿಸಿದ್ದಾರೆ. ಆತನಿಂದ ಹಣ ಪಡೆದರೂ, ಆತನನ್ನು ಬಿಟ್ಟು ಕಳುಹಿಸದೇ ಕಾರಿನಲ್ಲಿ ಕೂರಿಸಿ ಮಂಚಿನಬೆಲೆ ಡ್ಯಾಮ್ ಬಳಿ ಸುತ್ತಾಡಿದ್ದಾರೆ. ಅಲ್ಲಿನ ಅರಣ್ಯ ಪ್ರದೇಶದಲ್ಲಿ ಪಾರ್ಟಿ ಮಾಡಿದ್ದ ಗ್ಯಾಂಗ್, ಡಿಸೆಂಬರ್ 31ರ ರಾತ್ರಿ ಪಾರ್ಟಿ ಮಾಡಿ ಗುರು ಸಿದ್ದಪ್ಪನನ್ನು ಬಿಟ್ಟು ಕಳಿಸುವುದಾಗಿ ಹೇಳಿದ್ದರು. ಆದ್ರೆ ಇವನನ್ನು ಬಿಟ್ರೆ ಪೊಲೀಸರಿಗೆ ಹೇಳುತ್ತಾನೆ ಎಂದು ಕೊಲೆ ಮಾಡಿದ್ದಾರೆ. ಗುರುಸಿದ್ದಪ್ಪನಿಗೆ ಚಾಕುವಿನಿಂದ ಇರಿದು ಕೊಲೆ ಮಾಡಿ, ಶವವನ್ನು ಕಾಡಿನಲ್ಲಿಯೇ ಬಿಸಾಕಿ, ಅಲ್ಲಿಂದ ಹೊಸ ವರ್ಷ ಆಚರಣೆಗೆ ಗೋವಾಕ್ಕೆ ತೆರಳಿ ಪಾರ್ಟಿ ಮಾಡಿದ್ದಾರೆ.
ಈ ನಡುವೆ ಗುರುಸಿದ್ದಪ್ಪ ಪತ್ನಿ ತನ್ನ ಗಂಡ ಹಣ ಪಡೆದುಕೊಂಡು ಹೋದವರು ಮನೆಗೆ ಬಂದಿಲ್ಲ ಎಂದು ಪೊಲೀಸರಿಗೆ ದೂರು ನೀಡಿದ್ದರು. ವಿಚಾರಣೆ ವೇಳೆ ಗುರುಸಿದ್ದಪ್ಪ ಕೊಲೆ ಆಗಿರುವುದು ಪತ್ತೆಯಾಗಿತ್ತು. ಇತ್ತ ಮಂಚಿನಬೆಲೆ ಬಳಿಯ ಅರಣ್ಯ ಪ್ರದೇಶದಲ್ಲಿ ಅರೆಬರೆ ತಿಂದು ಉಳಿದಿದ್ದ ಶವದ ಕುರುಹು ಪತ್ತೆಯಾಗಿದೆ. ಶವವನ್ನು ಕಾಡು ಪ್ರಾಣಿಗಳು ತಿಂದಿದ್ದವು. ತಲೆ ಬುರುಡೆ, ಎಲುಬಿನ ಭಾಗಗಳು ಸಿಕ್ಕಿದ್ದು ಪೊಲೀಸರು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ರವಾನೆ ಮಾಡಿದ್ದಾರೆ.
Young man brutally murdered by drunk friends during New Year celebrations in Bengalore. A horrifying incident unfolded on Hanumanta Nagar's 80-foot Road in Bengaluru. The jubilant atmosphere of the night was shattered by a gruesome murder that occurred around 1 am, sending shockwaves through the community.
11-05-25 01:21 pm
HK News Desk
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
12-05-25 11:21 pm
HK Staff
Modi, India Pak War: ಪರಮಾಣು ಅಸ್ತ್ರದ ನೆಪದಲ್ಲಿ...
12-05-25 10:21 pm
ಪಾಕಿಸ್ತಾನದ ಒಳಗಡೆಯೇ ತಳಮಳ ; ಸೇನೆ ಮತ್ತು ಸರ್ಕಾರದ...
12-05-25 04:38 pm
ಉತ್ತರ ಪಾಕಿಸ್ತಾನದಲ್ಲಿ ಬಲೂಚಿಸ್ತಾನ್ ಹೋರಾಟ ತೀವ್ರ...
12-05-25 11:23 am
ಪಾಕಿಸ್ತಾನದ ಉಗ್ರರ ನೆಲೆಗಳ ಧ್ವಂಸ ; ಫೋಟೊ ಸಾಕ್ಷ್ಯ...
11-05-25 11:02 pm
12-05-25 08:22 pm
Mangalore Correspondent
Comedy Khiladigalu Rakesh Poojary Death: 'ಕಾಮ...
12-05-25 11:26 am
Mangalore, Pilikula, Dr Suryaprakash Shenoy:...
11-05-25 05:01 pm
Drone Ban, Mangalore, Mysuru: ಮಂಗಳೂರು, ಮೈಸೂರಿ...
10-05-25 07:10 pm
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm