ಬ್ರೇಕಿಂಗ್ ನ್ಯೂಸ್
08-01-24 07:44 pm Mangalore Correspondent ಕ್ರೈಂ
ಮಂಗಳೂರು, ಜ.8: ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ (ಮೂಡಾ) ಆಯುಕ್ತರ ಮೇಲೆ ಲೈಂಗಿಕ ಕಿರುಕುಳ ಆರೋಪ ಹೊರಿಸಿದ ಪ್ರಕರಣದಲ್ಲಿ ಸ್ವತಃ ಮೂಡಾ ಕಮಿಷನರ್ ಮನ್ಸೂರ್ ಆಲಿ ಉರ್ವಾ ಠಾಣೆಗೆ ಹಾಜರಾಗಿ ಇನ್ಸ್ ಪೆಕ್ಟರ್ ಭಾರತಿ ಮುಂದೆ ತನ್ನ ಹೇಳಿಕೆಯನ್ನು ನೀಡಿದ್ದಾರೆ.
ಪೊಲೀಸ್ ಠಾಣೆಗೆ ಹಾಜರಾದ ಬಳಿಕ ಮಾಧ್ಯಮಕ್ಕೆ ಹೇಳಿಕೆ ನೀಡಿದ ಮನ್ಸೂರ್ ಆಲಿ, ಡಿ.27ರಂದು ಮೂಡಾ ಕಚೇರಿಯಲ್ಲಿ ನಡೆದ ಸಾಮಾನ್ಯ ಸಭೆಯ ಕುರಿತ ನಡಾವಳಿ ಬಗ್ಗೆ ಗುತ್ತಿಗೆ ಆಧಾರದಲ್ಲಿ ಉದ್ಯೋಗ ನಡೆಸುತ್ತಿರುವ ಮಹಿಳೆಗೆ ಸೂಚಿಸಿದ್ದೆ. ನೂರು ಪುಟಗಳಿಗೂ ಹೆಚ್ಚು ಇದ್ದ ವರದಿಯನ್ನು ತಪ್ಪು ತಪ್ಪಾಗಿ ಮಾಡಿಕೊಟ್ಟಿದ್ದರು. ತಪ್ಪಾಗಿ ವರದಿ ಕೊಟ್ಟ ಬಗ್ಗೆ ಅಷ್ಟು ಉದ್ದ ವರದಿ ಬರೆಯಲು ತನ್ನಿಂದ ಸಾಧ್ಯವಿಲ್ಲ ಎಂದಿದ್ದರು. ಸರಿಯಾಗಿ ಕೆಲಸ ಮಾಡೋದಿದ್ದರೆ ಇಲ್ಲಿರಿ, ಇಲ್ಲಾಂದ್ರೆ ಬೇರೆಯವರು ಕೆಲಸ ಮಾಡುತ್ತಾರೆ ಎಂದು ಹೇಳಿದ್ದೆ.
ಮರುದಿನ ಅವರ ಬದಲು ಬೇರೆ ಸಿಬಂದಿಯನ್ನು ಕೆಲಸಕ್ಕೆ ನೇಮಿಸುವಂತೆ ಗುತ್ತಿಗೆ ಏಜನ್ಸಿಗೆ ತಿಳಿಸಿದ್ದೆ. ಆದರೆ ಅದೇ ನೆಪದಲ್ಲಿ ತನ್ನನ್ನು ಕೆಲಸದಿಂದ ತೆಗೆದು ಹಾಕುತ್ತಾರೆಂಬ ಭಯ ಮತ್ತು ನನ್ನ ಮೇಲಿನ ಹಗೆತನದಲ್ಲಿ ಈ ರೀತಿ ದೂರು ಕೊಟ್ಟಿದ್ದಾರೆ. ತನಿಖಾಧಿಕಾರಿ ಮುಂದೆ ಹಾಜರಾಗಿ ಹೇಳಿಕೆ ನೀಡಿದ್ದೇನೆ. ಆ ಮಹಿಳೆ ಕೂಡ ಈ ರೀತಿ ಮಾಡಬಾರದಿತ್ತು, ತನ್ನಿಂದ ತಪ್ಪಾಗಿದೆ ಎಂದಿದ್ದಾರೆ. ಈಗ ಕಚೇರಿಗೆ ಬರುತ್ತಿದ್ದಾರೆ. ತನಿಖಾಧಿಕಾರಿ ಸೂಕ್ತ ಕ್ರಮ ತೆಗೆದುಕೊಳ್ಳಲಿದ್ದಾರೆ ಎಂದು ಹೇಳಿದರು.
ಸುಳ್ಳು ದೂರು ನೀಡಿರುವ ಬಗ್ಗೆ ಮಹಿಳೆ ವಿರುದ್ಧ ಕ್ರಮ ಕೈಗೊಳ್ತೀರಾ ಎಂದು ಕೇಳಿದ ಬಗ್ಗೆ ಈ ವಿಷಯವನ್ನು ಮೇಲಧಿಕಾರಿಗಳಿಗೆ ತಿಳಿಸಿದ್ದೇನೆ. ಏನು ಕ್ರಮ ಆಗಬೇಕೋ ಅವರು ಮಾಡಲಿದ್ದಾರೆ. ವಿಚಾರಣೆ ಹಂತದಲ್ಲಿರುವಾಗ ಈ ಬಗ್ಗೆ ಹೆಚ್ಚೇನು ಹೇಳಲು ಹೋಗುವುದಿಲ್ಲ ಎಂದಿದ್ದಾರೆ. ಮಹಿಳೆ ತನ್ನನ್ನು ಸಂಜೆ ಹೊತ್ತು ಚೇಂಬರಿಗೆ ಕರೆದು ಮೈ ಕೈ ಮುಟ್ಟಿ ಕಿರುಕುಳ ನೀಡುತ್ತಿದ್ದಾರೆ, ರಾತ್ರಿ ವರೆಗೂ ಕೆಲಸಕ್ಕಾಗಿ ನಿಲ್ಲಿಸುತ್ತಾರೆ, ಆಮೂಲಕ ಲೈಂಗಿಕ ಮತ್ತು ಮಾನಸಿಕ ಕಿರುಕುಳ ಆಗಿದೆ ಎಂದು ದೂರಿನಲ್ಲಿ ತಿಳಿಸಿದ್ದರು.
Mangalore Muda Commissioner Mansoor Ali alleged of sexual harrasment, says its revenge plan. Work pressure revenge has been turned into sexual harrasment which is wrong said Mansoor Ali speaking to media.
11-05-25 01:21 pm
HK News Desk
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
12-05-25 11:21 pm
HK Staff
Modi, India Pak War: ಪರಮಾಣು ಅಸ್ತ್ರದ ನೆಪದಲ್ಲಿ...
12-05-25 10:21 pm
ಪಾಕಿಸ್ತಾನದ ಒಳಗಡೆಯೇ ತಳಮಳ ; ಸೇನೆ ಮತ್ತು ಸರ್ಕಾರದ...
12-05-25 04:38 pm
ಉತ್ತರ ಪಾಕಿಸ್ತಾನದಲ್ಲಿ ಬಲೂಚಿಸ್ತಾನ್ ಹೋರಾಟ ತೀವ್ರ...
12-05-25 11:23 am
ಪಾಕಿಸ್ತಾನದ ಉಗ್ರರ ನೆಲೆಗಳ ಧ್ವಂಸ ; ಫೋಟೊ ಸಾಕ್ಷ್ಯ...
11-05-25 11:02 pm
12-05-25 08:22 pm
Mangalore Correspondent
Comedy Khiladigalu Rakesh Poojary Death: 'ಕಾಮ...
12-05-25 11:26 am
Mangalore, Pilikula, Dr Suryaprakash Shenoy:...
11-05-25 05:01 pm
Drone Ban, Mangalore, Mysuru: ಮಂಗಳೂರು, ಮೈಸೂರಿ...
10-05-25 07:10 pm
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm