ಬ್ರೇಕಿಂಗ್ ನ್ಯೂಸ್
19-12-23 03:39 pm Mangalore Correspondent ಕ್ರೈಂ
ಮಂಗಳೂರು, ಡಿ 19: ಮನೆ ಬಾಡಿಗೆ ಕೊಡುವ ಜಾಹೀರಾತು ನೀಡಿದ್ದ ಹಿರಿಯ ನಾಗರಿಕರಿಗೆ ಸೈನಿಕನೆಂದು ಹೇಳಿ 2.41 ಲಕ್ಷ ರೂಪಾಯಿ ವಂಚಿಸಿದ ಘಟನೆ ನಗರದಲ್ಲಿ ನಡೆದಿದೆ.
ಹಿರಿಯ ನಾಗರೀಕರೊಬ್ಬರು ಅಪಾರ್ಟ್ ಮೆಂಟ್ ಬಾಡಿಗೆ ನೀಡುವ ಬಗ್ಗೆ ಆನ್ಲೈನ್ ಸೈಟ್ವೊಂದರಲ್ಲಿ ಜಾಹೀರಾತು ನೀಡಿದ್ದರು. ಡಿಸೆಂಬರ್ 8 ರಂದು ಯಾರೋ ಅಪರಿಚಿತ ವ್ಯಕ್ತಿ ತಾನು ಆಶೀಶ್ ಕುಮಾರ್ ಹಾಗೂ ತಾನು ಭಾರತೀಯ ಸೇನೆಯಲ್ಲಿ ನೌಕರನಾಗಿರುವುದಾಗಿ ತಿಳಿಸಿ ಮಾತನಾಡಿದ್ದಾನೆ.
ಆನ್ಲೈನ್ ಸೈಟ್ನಲ್ಲಿ ಅಪಾರ್ಟ್ಮೆಂಟ್ ಖಾಲಿ ಇರುವ ಬಗ್ಗೆ ಮಾತನಾಡಿ ನಂತರ ಬಾಡಿಗೆ ವಿಷಯವಾಗಿ ಅವರಲ್ಲಿ ವಿಚಾರಿಸಿಕೊಂಡು ನಂತರ ಮುಂಗಡ ಹಣ ಪಾವತಿಸುವುದಾಗಿಯೂ ಹಾಗೂ ಆರ್ಮಿ ಇಲಾಖೆಯಿಂದ ಕಮಾಂಡಿಂಗ್ ಪೇಮೆಂಟ್ ನಿಂದ ಹಣ ಸಂದಾಯವಾಗುವುದಾಗಿ ತಿಳಿಸಿದ್ದಾನೆ. ವಂಚನೆಗೊಳಗಾದವರು ಮೊದಲಿಗೆ 1/-ರೂ,5/-ರೂ., 49,999/-ರೂ. ಮತ್ತು 49994/-ರೂಗಳ UPI CODE ಗಳನ್ನು ವಾಟ್ಸ ಆಪ್ ಮುಖಾಂತರ ಕಳುಹಿಸಿದ್ದಾರೆ. ನಂತರ ಸತ್ಯವೆಂದು ಭಾವಿಸಿ ತಮ್ಮ ಬಾಬ್ತು ಹೆಚ್ಡಿಎಫ್ಸಿ ಬ್ಯಾಂಕ್, ಮಲ್ಲೇಶ್ವರಂ ಶಾಖೆ ಖಾತೆ ನಂಬರ್ನಿಂದ ಗೂಗಲ್ ಪೇ ಮುಖಾಂತರ ದಿನಾಂಕ ಡಿಸೆಂಬರ್ 8 ರಂದು 1,41,999/-ರೂ ಪಾವತಿಸಿರುತ್ತಾರೆ.
ನಂತರ ದಿನಾಂಕ ಡಿಸೆಂಬರ್ 9 ರಂದು ಈ ಅಪರಿಚಿತ ವ್ಯಕ್ತಿ ಮತ್ತೊಮ್ಮೆ ಕರೆ ಮಾಡಿ ಅದೇ ರೀತಿ ಮತ್ತೊಮ್ಮೆ ಪಾವತಿ ಮಾಡಬೇಕೆಂದು ಹಾಗೂ ಈ ಹಣ ಆರ್ಮಿ ಇಲಾಖೆಯಿಂದ ಕಮಾಂಡಿಂಗ್ ಪೇಮೆಂಟ್ ನಿಂದ ದೊರೆಯುವುದಾಗಿ ನಂಬಿಸಿದ್ದಾನೆ. ಹಿರಿಯ ನಾಗರಿಕರು ಅದೇ ರೀತಿ ಐಎಂಪಿ ಎಸ್ ಮುಖಾಂತರ 1,00,000/-ರೂ ಹಣ ಪಾವತಿಸಿರುತ್ತಾರೆ. ಈ ರೀತಿಯಾಗಿ ಯಾರೋ ಅಪರಿಚಿತ ವ್ಯಕ್ತಿ ಆನ್ಲೈನ್ ಮುಖಾಂತರ ಆಶೀಶ್ ಕುಮಾರ್ ಎಂದು ಪರಿಚಯಿಸಿಕೊಂಡು ತಾನು ಆರ್ಮಿಯಲ್ಲಿ ನೌಕರನೆಂದು ಹಿರಿಯ ನಾಗರಿಕರಿಗೆ ನಂಬಿಸಿ ಆನ್ಲೈನ್ ಮುಖಾಂತರ ಒಟ್ಟು 2,41,999/- ರೂಗಳನ್ನು ಮೋಸದಿಂದ ವರ್ಗಾಯಿಸಿಕೊಂಡು ವಂಚನೆ ಮಾಡಿದ್ದಾನೆ. ಈ ಅಪರಿಚಿತ ವ್ಯಕ್ತಿಯ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಸೆನ್ ಪೊಲೀಸ್ ಠಾಣೆಯಲ್ಲಿ ವಂಚೆನಗೊಳಗಾದವರು ದೂರು ನೀಡಿದ್ದಾರೆ.
ಆನ್ಲೈನ್ ಮೂಲಕ ಹಣಕಾಸು ವಂಚನೆ ನಡೆಸುತ್ತಿರುವ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಇದಕ್ಕೆ ಕಡಿವಾಣ ಹಾಕಲು ಸರ್ಕಾರದ ಅಧೀನ ಸ್ಟಾರ್ಟ್ ಅಪ್ ಸಂಸ್ಥೆ ಸೈಸೆಕ್ ಹೊಸ ಆ್ಯಪ್ ಸಿದ್ಧಪಡಿಸಿದೆ. ಬ್ರೌಸ್ ಸೇಫ್ ಎನ್ನುವ ಆ್ಯಪ್ ಸಿದ್ಧಪಡಿಸಿದ್ದು, ಈ ಆ್ಯಪ್ ಬಳಸಿದರೆ ಲಿಂಕ್ಗಳನ್ನು ಒತ್ತಿ ಹಣ ಕಳೆದುಕೊಳ್ಳುವುದಕ್ಕೆ ಬ್ರೇಕ್ ಬೀಳಲಿದೆ.
In a shocking incident, a senior citizen was duped of Rs 2.41 lakh by posing as a soldier for advertising house rent. A senior citizen had advertised on an online site about renting out an apartment. On December 8, an unidentified person told him that he was Ashish Kumar and that he was an employee of the Indian Army.
11-05-25 01:21 pm
HK News Desk
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
12-05-25 11:21 pm
HK Staff
Modi, India Pak War: ಪರಮಾಣು ಅಸ್ತ್ರದ ನೆಪದಲ್ಲಿ...
12-05-25 10:21 pm
ಪಾಕಿಸ್ತಾನದ ಒಳಗಡೆಯೇ ತಳಮಳ ; ಸೇನೆ ಮತ್ತು ಸರ್ಕಾರದ...
12-05-25 04:38 pm
ಉತ್ತರ ಪಾಕಿಸ್ತಾನದಲ್ಲಿ ಬಲೂಚಿಸ್ತಾನ್ ಹೋರಾಟ ತೀವ್ರ...
12-05-25 11:23 am
ಪಾಕಿಸ್ತಾನದ ಉಗ್ರರ ನೆಲೆಗಳ ಧ್ವಂಸ ; ಫೋಟೊ ಸಾಕ್ಷ್ಯ...
11-05-25 11:02 pm
12-05-25 08:22 pm
Mangalore Correspondent
Comedy Khiladigalu Rakesh Poojary Death: 'ಕಾಮ...
12-05-25 11:26 am
Mangalore, Pilikula, Dr Suryaprakash Shenoy:...
11-05-25 05:01 pm
Drone Ban, Mangalore, Mysuru: ಮಂಗಳೂರು, ಮೈಸೂರಿ...
10-05-25 07:10 pm
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm