ಬ್ರೇಕಿಂಗ್ ನ್ಯೂಸ್
05-12-23 05:22 pm HK News Desk ಕ್ರೈಂ
ಜೈಪುರ, ಡಿ 05: ರಾಜಸ್ಥಾನದ ಪ್ರಮುಖ ರಜಪೂತ ನಾಯಕ, ಹಾಗೂ ವಿವಾದಾತ್ಮಕ ಸಂಘಟನೆಯನ್ನು ಮುನ್ನಡೆಸುತ್ತಿದ್ದ ಸುಖದೇವ್ ಸಿಂಗ್ ಗೊಗಾಮೇದಿಯನ್ನು ಮಂಗಳವಾರ ಹತ್ಯೆ ಮಾಡಲಾಗಿದೆ. ಸುಖದೇವ್ ಮೇಲೆ ಆತನ ಜೈಪುರ ನಿವಾಸದ ಒಳಗೆ ಗುಂಡಿನ ದಾಳಿ ನಡೆಸಿ ಕೊಲ್ಲಲಾಗಿದೆ.
ರಾಷ್ಟ್ರೀಯ ರಜಪೂತ ಕರ್ಣಿ ಸೇನಾದ ಮುಖ್ಯಸ್ಥನಾಗಿದ್ದ ಸುಖದೇವ್ ಮೇಲೆ ಸ್ಕೂಟರ್‌ನಲ್ಲಿ ಬಂದಿದ್ದ ಇಬ್ಬರು ದುಷ್ಕರ್ಮಿಗಳು ಗುಂಡು ಹಾರಿಸಿದ್ದಾರೆ. ಇದು ತನ್ನ ಕೃತ್ಯ ಎಂದು ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್ ಹೇಳಿಕೊಂಡಿದೆ.
ಸುಖದೇವ್ ಸಿಂಗ್ ಮತ್ತು ಆತನ ಇಬ್ಬರು ಸಹವರ್ತಿಗಳಿಗೆ ಗುಂಡೇಟಿನಿಂದ ಗಾಯಗಳಾಗಿದ್ದವು. ಮೂವರನ್ನೂ ಆಸ್ಪತ್ರೆಯೊಂದಕ್ಕೆ ದಾಖಲಿಸಲಾಗಿತ್ತು. ಆದರೆ ಸುಖದೇವ್ ಮೃತಪಟ್ಟಿದ್ದಾನೆ ಎಂದು ವೈದ್ಯರು ಘೋಷಿಸಿದರು. ಗಾಯಾಳುಗಳಲ್ಲಿ ಒಬ್ಬನ ಸ್ಥಿತಿ ಗಂಭೀರವಾಗಿದೆ.
ಬಾಲಿವುಡ್ ಸಿನಿಮಾ ಪದ್ಮಾವತ್ ವಿರುದ್ಧ ಪ್ರತಿಭಟನೆ ನಡೆಸಿದ್ದ ರಜಪೂತ್ ಕರ್ಣಿ ಸೇನಾಕ್ಕಿಂತ ವಿಭಿನ್ನವಾದ ಸಂಘಟನೆಯನ್ನು ಸುಖದೇವ್ ಮುನ್ನಡೆಸುತ್ತಿದ್ದ. ಲೋಕೇಂದ್ರ ಸಿಂಗ್ ಕಲ್ವಿ ನಾಯಕತ್ವದ ಕರ್ಣಿ ಸೇನಾದ ಭಾಗವಾಗಿದ್ದ ಸುಖದೇವ್, 2015ರಲ್ಲಿ ಸಂಘಟನೆಯಿಂದ ಹೊರಬಂದು ತನ್ನದೇ ಸಂಘಟನೆ ಸ್ಥಾಪಿಸಿದ್ದ.
ಸುಖದೇವ್ ಸಿಂಗ್‌ನ ಎದೆ ಮತ್ತು ತಲೆಗೆ ಗುಂಡು ಹಾರಿಸಲಾಗಿದೆ. ಸ್ಥಳದಲ್ಲಿ ಒಡೆದ ಬಾಗಿಲು ಹಾಗೂ ನೆಲದ ಮೇಲೆ ರಕ್ತ ಚೆಲ್ಲಾಡಿರುವ ದೃಶ್ಯಗಳು ವಿಡಿಯೋಗಳಲ್ಲಿ ಕಾಣಿಸಿದೆ.
ಸುಖದೇವ್ ಹಾಗೂ ಆತನ ಸಹವರ್ತಿಗಳ ಜತೆ ಮನೆಯ ಒಳಗೆ ಸೋಫಾ ಮೇಲೆ ಕುಳಿತು ಇಬ್ಬರು ಅಪರಿಚಿತ ದುಷ್ಕರ್ಮಿಗಳು ಮಾತನಾಡುವುದು ಹಾಗೂ ಇದ್ದಕ್ಕಿದ್ದಂತೆ ಗನ್ ಹೊರಗೆ ತೆಗೆದು ಗುಂಡು ಹಾರಿಸುವುದು ಸಿಸಿಟಿವಿ ವಿಡಿಯೋದಲ್ಲಿ ಕಾಣಿಸಿದೆ. ತನ್ನನ್ನು ಬಿಟ್ಟುಬಿಡುವಂತ ಸುಖದೇವ್‌ನ ಸಹಚರನೊಬ್ಬ ಬೇಡಿಕೊಂಡರೂ, ಆತನ ಮೇಲೆ ಗುಂಡು ಹಾರಿಸಲಾಗಿದೆ. ಮನೆಯಿಂದ ಹೊರಗೆ ಹೊರಟ್ಟಿದ್ದ ಒಬ್ಬ ಬಂದೂಕುಧಾರಿ, ಪುನಃ ಒಳಗೆ ಬಂದು ಸಮೀಪದಿಂದ ಸುಖದೇವ್ ಮೇಲೆ ಮತ್ತೊಂದು ಗುಂಡು ಹಾರಿಸಿದ್ದಾನೆ.
ಬಿಷ್ಣೋಯಿ ಗ್ಯಾಂಗ್ ಹೊಣೆ ;
ಸುಖದೇವ್ ಸಿಂಗ್ ಗೊಗಾಮೇದಿ ಕೊಲೆಗೆ ತಾನೇ ಹೊಣೆ ಎಂದು ಜೈಲಿನಲ್ಲಿರುವ ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್ ಜತೆ ನಂಟು ಹೊಂದಿರುವ ರೋಹಿತ್ ಗೊಡಾರಾ ಫೇಸ್‌ಬುಕ್ ಪೋಸ್ಟ್‌ನಲ್ಲಿ ಹೇಳಿಕೊಂಡಿದ್ದಾನೆ.
ರಾಜಸ್ಥಾನದ ನಟೋರಿಯಸ್ ಗ್ಯಾಂಗ್‌ಸ್ಟರ್ ಆಗಿರುವ ರೋಹಿತ್, ಭಾರತದಿಂದ ತಲೆಮರೆಸಿಕೊಂಡಿದ್ದಾನೆ. ಆತನ ವಿರುದ್ಧ ಎನ್‌ಐಎ ಕೂಡ ಕ್ರಮ ಕೈಗೊಂಡಿತ್ತು
Sukhdev Singh Gogamedi, national president of Rashtriya Rajput Karni Sena has been shot dead by unidentified bike-borne criminals in Jaipur. He was declared dead by doctors at the hospital where he was rushed to.
11-05-25 01:21 pm
HK News Desk
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
12-05-25 11:21 pm
HK Staff
Modi, India Pak War: ಪರಮಾಣು ಅಸ್ತ್ರದ ನೆಪದಲ್ಲಿ...
12-05-25 10:21 pm
ಪಾಕಿಸ್ತಾನದ ಒಳಗಡೆಯೇ ತಳಮಳ ; ಸೇನೆ ಮತ್ತು ಸರ್ಕಾರದ...
12-05-25 04:38 pm
ಉತ್ತರ ಪಾಕಿಸ್ತಾನದಲ್ಲಿ ಬಲೂಚಿಸ್ತಾನ್ ಹೋರಾಟ ತೀವ್ರ...
12-05-25 11:23 am
ಪಾಕಿಸ್ತಾನದ ಉಗ್ರರ ನೆಲೆಗಳ ಧ್ವಂಸ ; ಫೋಟೊ ಸಾಕ್ಷ್ಯ...
11-05-25 11:02 pm
12-05-25 08:22 pm
Mangalore Correspondent
Comedy Khiladigalu Rakesh Poojary Death: 'ಕಾಮ...
12-05-25 11:26 am
Mangalore, Pilikula, Dr Suryaprakash Shenoy:...
11-05-25 05:01 pm
Drone Ban, Mangalore, Mysuru: ಮಂಗಳೂರು, ಮೈಸೂರಿ...
10-05-25 07:10 pm
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm