ಬ್ರೇಕಿಂಗ್ ನ್ಯೂಸ್
24-11-23 07:06 pm Mangalore Correspondent ಕ್ರೈಂ
ಉಳ್ಳಾಲ, ನ.24: ಮೈಯಿಡೀ ಚಿನ್ನವನ್ನ ಹೋಲುವ ಒನ್ ಗ್ರಾಮ್ ಒಡವೆಗಳನ್ನ ಹಾಕಿದ್ದ ವ್ಯಕ್ತಿಯೋರ್ವ ಕಳೆದ ತಿಂಗಳು ತೊಕ್ಕೊಟ್ಟಿನ ಎರಡು ಅಂಗಡಿಗಳಿಗೆ ವಂಚಿಸಿದ ಪ್ರಕರಣ ನಡೆದ ಬೆನ್ನಲ್ಲೇ ಅದೇ ಶೋಕಿಲಾಲ ಕುತ್ತಾರು ಪಂಡಿತ್ ಹೌಸ್ನ ಮೊಬೈಲ್ ಮಳಿಗೆಯಲ್ಲಿ ಮೊಬೈಲ್ ಖರೀದಿಸಿ ಫೋನ್ ಸ್ವಿಚ್ ಆಫ್ ಆಗಿದೆ, ಗೂಗಲ್ ಪೇ ಮಾಡಲು ಆಗುವುದಿಲ್ಲ, ನಾಳೆ ಹಣ ಕೊಡುವುದಾಗಿ ಹೇಳಿ ವಂಚಿಸಿದ ಘಟನೆ ನಡೆದಿದ್ದು, ಅಂಗಡಿ ಮಾಲೀಕ ಖತರ್ನಾಕ್ ವಂಚಕ ಗೂಡ್ಸ್ ಮುನೀರನ ವಿರುದ್ಧ ಉಳ್ಳಾಲ ಠಾಣೆಗೆ ದೂರು ನೀಡಿದ್ದಾರೆ.
ಕಳೆದ ಅಕ್ಟೋಬರ್ ತಿಂಗಳಲ್ಲಿ ತೊಕ್ಕೊಟ್ಟು ಓವರ್ ಬ್ರಿಡ್ಜ್ ನ ಅಯ್ಯಂಗಾರ್ ಬೇಕರಿ ಮತ್ತು ಸಮೀಪದ ಪೂರ್ಣಿಮಾ ಎಂಬವರ ದಿನಸಿ ಅಂಗಡಿಗೆ ಮೈಯಿಡೀ ಚಿನ್ನದ ಒಡವೆ ಧರಿಸಿದ್ದ ವ್ಯಕ್ತಿಯೋರ್ವ ಹೆಲ್ಮೆಟ್ ತೆಗೆಯದೆ ತಾನು ನಿತಿನ್ ಶೆಟ್ಟಿ ಎಂದು ಪರಿಚಯಿಸಿ ಸಾವಿರಾರು ರೂಪಾಯಿ ಮೌಲ್ಯದ ಸಿಹಿ ತಿಂಡಿ, ದಿನಸಿ ಖರೀದಿಸಿ ಗೂಗಲ್ ಪೇ ಮಾಡಲು ಫೋನ್ ಸ್ವಿಚ್ ಆಫ್ ಆಗಿದೆ, ಈಗಲೇ ಹಣ ತಂದು ಕೊಡುವೆ ಎಂದು ಹೇಳಿ ವ್ಯಾಪಾರಿಗಳನ್ನ ಯಾಮಾರಿಸಿದ್ದ. ಅದೇ ಶೋಕಿಲಾಲ ಕಳೆದ ನವೆಂಬರ್ 13 ರಂದು ಮತ್ತೆ ಕುತ್ತಾರು ಪಂಡಿತ್ ಹೌಸ್ ನಲ್ಲಿರುವ "ಸುಧಿ ಕಲೆಕ್ಷನ್" ಎಂಬ ಮೊಬೈಲ್ ಅಂಗಡಿಗೆ ತೆರಳಿ ಮಾಲಕ ದೀಪಕ್ ಅವರಲ್ಲಿ ಸೆಕೆಂಡ್ ಹ್ಯಾಂಡ್ ಮೊಬೈಲನ್ನ ಖರೀದಿಸಿ ಗೂಗಲ್ ಪೇ ಮಾಡಲು ತನ್ನ ಮೊಬೈಲ್ ಸ್ವಿಚ್ ಆಫ್ ಎಂದು ಸಬೂಬು ನೀಡಿದ್ದು ನನ್ನ ಮನೆ ಸಮೀಪದಲ್ಲೇ ಇದೆ, ನಾಳೆ ಹಣ ನೀಡೋದಾಗಿ ತನ್ನ ಸಂಪರ್ಕದ ಮೊಬೈಲ್ ನಂಬರ್ ನೀಡಿ ತೆರಳಿದ್ದ.
ದೀಪಕ್ ಅವರು ವಂಚಕ ನೀಡಿದ್ದ ಮೊಬೈಲ್ ನಂಬರ್ ಗೆ ಕರೆ ಮಾಡಿದಾಗ ಸ್ವಿಚ್ ಆಫ್ ಆಗಿತ್ತು. ತಾನು ಮೋಸ ಹೋಗಿರುವುದು ತಿಳಿದ ಮೇಲೆ ಮೊಬೈಲ್ ನಂಬರಿನ ಬಗ್ಗೆ ಮಾಹಿತಿ ಕಲೆ ಹಾಕಿದಾಗ ಅದು ಖತರ್ನಾಕ್ ವಂಚಕ ಗೂಡ್ಸ್ ಮುನೀರನದೆಂದು ತಿಳಿದುಬಂದಿದೆ. ಗೂಡ್ಸ್ ಮುನೀರನ ವಿರುದ್ಧ ನಗರದ ವಿವಿಧ ಠಾಣೆಗಳಲ್ಲಿ ವಂಚನೆ, ಕಳ್ಳತನ ಪ್ರಕರಣಗಳು ದಾಖಲಾಗಿವೆ. ಈತ ಈಗ ಡಮ್ಮಿ ಒಡವೆಗಳನ್ನ ಧರಿಸಿ ಅಮಾಯಕರನ್ನ ಯಾಮಾರಿಸಿ ವಂಚಿಸುವ ಖಯಾಲಿ ಬೆಳೆಸಿದ್ದಾನೆ. ಮೂಲತಃ ಕಸಬಾ ಬೆಂಗ್ರೆ ನಿವಾಸಿಯಾಗಿರೋ ಈತ ತೊಕ್ಕೊಟ್ಟು ಆಸುಪಾಸಿನಲ್ಲೇ ಬಿಡಾರ ಹೂಡಿರುವ ಶಂಕೆ ಇದೆ. ಉಳ್ಳಾಲ ಪೊಲೀಸರು ಆದಷ್ಟು ಬೇಗನೆ ಈತನ ಹೆಡೆಮುರಿ ಕಟ್ಟ ಬೇಕೆಂದು ವಂಚನೆಗೊಳಗಾದ ದೀಪಕ್ ಒತ್ತಾಯಿಸಿದ್ದಾರೆ.
Mangalore Ullal police arrest one for Cheating bakery and shops of money.
11-05-25 01:21 pm
HK News Desk
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
12-05-25 11:21 pm
HK Staff
Modi, India Pak War: ಪರಮಾಣು ಅಸ್ತ್ರದ ನೆಪದಲ್ಲಿ...
12-05-25 10:21 pm
ಪಾಕಿಸ್ತಾನದ ಒಳಗಡೆಯೇ ತಳಮಳ ; ಸೇನೆ ಮತ್ತು ಸರ್ಕಾರದ...
12-05-25 04:38 pm
ಉತ್ತರ ಪಾಕಿಸ್ತಾನದಲ್ಲಿ ಬಲೂಚಿಸ್ತಾನ್ ಹೋರಾಟ ತೀವ್ರ...
12-05-25 11:23 am
ಪಾಕಿಸ್ತಾನದ ಉಗ್ರರ ನೆಲೆಗಳ ಧ್ವಂಸ ; ಫೋಟೊ ಸಾಕ್ಷ್ಯ...
11-05-25 11:02 pm
12-05-25 08:22 pm
Mangalore Correspondent
Comedy Khiladigalu Rakesh Poojary Death: 'ಕಾಮ...
12-05-25 11:26 am
Mangalore, Pilikula, Dr Suryaprakash Shenoy:...
11-05-25 05:01 pm
Drone Ban, Mangalore, Mysuru: ಮಂಗಳೂರು, ಮೈಸೂರಿ...
10-05-25 07:10 pm
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm