ಬ್ರೇಕಿಂಗ್ ನ್ಯೂಸ್
15-11-23 08:29 pm Udupi Correspondent ಕ್ರೈಂ
ಉಡುಪಿ, ನ.15: ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣ ಇಡೀ ರಾಜ್ಯದಲ್ಲಿ ಸಂಚಲನ ಎಬ್ಬಿಸಿತ್ತು. ಯಾರು, ಯಾಕಾಗಿ ಈ ರೀತಿಯ ಕೃತ್ಯ ಎಸಗಿದ್ದಾರೆ ಅನ್ನುವ ಹತ್ತಾರು ಪ್ರಶ್ನೆಗಳು ಎದ್ದಿದ್ದವು. ಸದ್ಯಕ್ಕೆ ಆರೋಪಿ ಪ್ರವೀಣ್ ಕುಮಾರ್ ಚೌಗುಲೆಯನ್ನು ಉಡುಪಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಆದರೆ ಯಾಕಾಗಿ ಈ ರೀತಿಯ ಅಮಾನುಷ ಕೃತ್ಯ ಎಸಗಿದ್ದಾನೆ, ಅಂಥ ದ್ವೇಷ ಏನಿತ್ತು ಅನ್ನುವ ಮಾಹಿತಿ ಹೊರಬಂದಿಲ್ಲ.
ಪ್ರವೀಣ್ ಕುಮಾರ್ ಚೌಗುಲೆ ಈ ಹಿಂದೆ ಮಹಾರಾಷ್ಟ್ರದ ಪುಣೆಯಲ್ಲಿ ಮೂರು ತಿಂಗಳ ಕಾಲ ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡಿದ್ದ ಅನ್ನುವ ವಿಚಾರ ತಿಳಿದುಬಂದಿದೆ. ಆನಂತರ, ಮಂಗಳೂರು ಏರ್ಪೋರ್ಟ್ ನಲ್ಲಿ ಇಂಡಿಯನ್ ಏರ್ವೇಸ್ ನಲ್ಲಿ ಕೆಲಸಕ್ಕೆ ಸೇರಿದ್ದ. ಏಳು ವರ್ಷಗಳಿಂದ ಏರ್ವೇಸ್ ನಲ್ಲಿ ಕೆಲಸ ಮಾಡುತ್ತಿದ್ದ ಈತನಿಗೆ ಅಯ್ನಾಜ್ ಪರಿಚಯವಾಗಿ ಕೆಲವೇ ತಿಂಗಳಲ್ಲಿ ಆಕೆಯನ್ನು ಕೊಲ್ಲುವಷ್ಟು ದ್ವೇಷ ಹುಟ್ಟಿದ್ದು ಯಾಕೆಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.



ಹಸೀನಾ ಅವರ ಪುತ್ರಿ ಅಯ್ನಾಜ್ ಸಣ್ಣಂದಿನಿಂದಲೇ ಗಗನಸಖಿಯಾಗಬೇಕೆಂದು ಕನಸು ಹೊಂದಿದ್ದಳು. ಅದಕ್ಕಾಗಿ ಕಷ್ಟಪಟ್ಟು ಟ್ರೈನಿಂಗ್ ಪಡೆದು ಏಳು ತಿಂಗಳ ಹಿಂದಷ್ಟೇ ಏರ್ ಇಂಡಿಯಾದಲ್ಲಿ ಕೆಲಸಕ್ಕೆ ಸೇರಿದ್ದಳು ಎನ್ನಲಾಗುತ್ತಿದೆ. ಆಮೂಲಕ ತನ್ನ ಸುದೀರ್ಘ ಕಾಲದ ಕನಸನ್ನೂ ಈಡೇರಿಸಿಕೊಂಡಿದ್ದಳು. ಈ ನಡುವೆ, ವಿಮಾನದಲ್ಲಿ ಕ್ಯಾಬಿನ್ ಸಿಬಂದಿಯಾಗಿದ್ದ ಪ್ರವೀಣ್ ಕುಮಾರ್ ಚೌಗುಲೆ ಪರಿಚಯ ಆಗಿರಬಹುದು ಅಥವಾ ಪ್ರೀತಿ ಮೊಳೆತಿರಬಹುದು ಎನ್ನಲಾಗುತ್ತಿದೆ. ಆದರೆ ಪ್ರವೀಣ್ ಚೌಗುಲೆಗೆ ಮದುವೆಯಾಗಿದ್ದು ಸಾಂಗ್ಲಿಯಲ್ಲಿ ಕುಟುಂಬ ಹೊಂದಿದ್ದು ಒಂದು ಮಗುವನ್ನೂ ಹೊಂದಿದ್ದಾನೆ. ಮದುವೆ ವಿಷಯ ತಿಳಿದಿದ್ದರಿಂದ ಅಯ್ನಾಜ್ ಪ್ರೀತಿ ನಿರಾಕರಣೆಯನ್ನೂ ಮಾಡಿರಬಹುದು ಅಥವಾ ಏಕಮುಖವಾಗಿ ಪ್ರೀತಿಸಿ ಭ್ರಮನಿರಶನಗೊಂಡು ಪ್ರವೀಣ್ ಈ ಕೃತ್ಯ ಎಸಗಿದ್ದಾನೋ ಅನ್ನುವ ಬಗ್ಗೆ ಪೊಲೀಸರ ತನಿಖೆಯಲ್ಲಿ ತಿಳಿಯಬೇಕಿದೆ.


ಪದವಿನಂಗಡಿಯಲ್ಲಿದ್ದ ಪ್ರವೀಣ್ ಚೌಗುಲೆ
ಈ ನಡುವೆ, ಪ್ರವೀಣ್ ಚೌಗುಲೆ ಮಂಗಳೂರಿನ ಬೋಂದೆಲ್, ಪದವಿನಂಗಡಿಯಲ್ಲಿ ಕೆಲವು ಸಮಯ ಬಾಡಿಗೆ ಮನೆಯನ್ನೂ ಹೊಂದಿದ್ದ ಅನ್ನುವ ವಿಚಾರ ತಿಳಿದುಬಂದಿದೆ. ಆರೋಪಿಯ ಫೋಟೋ ಹೊರಬರುತ್ತಲೇ ಸ್ಥಳೀಯರು ಈತ ಇಲ್ಲೇ ಓಡಾಡಿಕೊಂಡಿದ್ದ, ಬಾಡಿಗೆ ಮನೆ ಮಾಡಿಕೊಂಡಿದ್ದ ಅನ್ನುವ ಮಾತನ್ನು ಮಾಧ್ಯಮಕ್ಕೆ ತಿಳಿಸಿದ್ದಾರೆ. ನಾಲ್ವರು ಅಮಾಯಕರ ಕೊಲೆಯನ್ನು ಈತನೇ ಮಾಡಿದ್ದಾನೆ ಎಂದು ತಿಳಿದಾಗ, ಬೆಚ್ಚಿ ಬಿದ್ದಿದ್ದಾರೆ.
ಪ್ರೇಮ ವೈಫಲ್ಯ ಆಗಿರುತ್ತಿದ್ದರೆ ಸಾಯ್ತಿದ್ದ
ಏಕಮುಖದ ಪ್ರೀತಿಯನ್ನು ತಳ್ಳಿ ಹಾಕುವಂತಿಲ್ಲ. ಆದರೆ ಪ್ರೀತಿಯ ಕಾರಣಕ್ಕೆ ಈ ರೀತಿ ಅಮಾನುಷವಾಗಿ ಹತ್ಯೆ ಮಾಡುವುದಿಲ್ಲ. ಇಷ್ಟೊಂದು ಕ್ರೂರವಾಗಿ ನಡೆದುಕೊಳ್ಳುವುದಿಲ್ಲ. ಪ್ರೇಮ ವೈಫಲ್ಯವೇ ಆಗಿದ್ದರೆ, ಆತನೂ ಈ ರೀತಿ ಕೊಲೆ ಮಾಡಿ ಆತ್ಮಹತ್ಯೆ ಮಾಡಿಕೊಳ್ಳಬೇಕಿತ್ತು. ಪ್ರೀತಿ ನಿರಾಕರಿಸಿದ್ದಕ್ಕೆ ಕೊಲ್ಲಲು ಹೋಗಿರಬಹುದು. ಆದರೆ, ಆತನಿಗೆ ಅಯ್ನಾಜ್ ಮನೆಯ ಬಗ್ಗೆ ಸ್ವಷ್ಟವಾಗಿ ತಿಳಿದಿತ್ತು. ಆಟೋ ಚಾಲಕನಲ್ಲಿ ಇಂಥದ್ದೇ ಮನೆಯೆಂದು ತಿಳಿಸಿ ಒಳಗಿನ ರೂಟಿನಲ್ಲಿ ಹೋಗಲು ತಿಳಿಸಿರುವುದು ಈ ಹಿಂದೆಯೂ ಪ್ರವೀಣ್ ಚೌಗುಲೆ ಆ ಜಾಗಕ್ಕೆ ಬಂದು ಹೋಗಿರಬೇಕು ಅನ್ನುವುದಕ್ಕೆ ಸಾಕ್ಷಿ. ಒಂದು ದಿನದ ಹಿಂದೆ ಬೆಳಗಾವಿಯಲ್ಲಿ ಆರೋಪಿಯನ್ನು ಬಂಧಿಸಿದ್ದರೂ, ಮೊದಲಿಗೆ ಕೃತ್ಯದ ಬಗ್ಗೆ ಆರೋಪಿ ಒಪ್ಪಿಕೊಂಡಿರಲಿಲ್ಲ. ಈಗ ಕೃತ್ಯ ಎಸಗಿದ್ದನ್ನು ಒಪ್ಪಿಕೊಂಡಿದ್ದಾನೆ, ಆದರೆ ಯಾಕಾಗಿ ಈ ಕೃತ್ಯ ಎಸಗಿದ್ದಾನೆಂದು ಪೊಲೀಸರು ಆತ ಮತ್ತು ಆಕೆಯ ಸ್ನೇಹಿತರ ವಲಯದ ಹೇಳಿಕೆ ಆಧರಿಸಿ ದೃಢ ಪಡಿಸಬೇಕಿದೆ.

ಮೆಚ್ಚುಗೆ ಪಡೆದ ಉಡುಪಿ ಎಸ್ಪಿ ನಡೆ
ಉಡುಪಿ ಎಸ್ಪಿ ಅರುಣ್ ಕುಮಾರ್ ಒಟ್ಟು ಪ್ರಕರಣದ ಬಗ್ಗೆ ತುಂಬ ತಾಳ್ಮೆಯಿಂದ ಮಾಧ್ಯಮಕ್ಕೆ ಹೇಳಿಕೆ ನೀಡಿರುವುದು, ಒಟ್ಟು ವೃತ್ತಾಂತದ ಬಗ್ಗೆ ಖಚಿತತೆ ಇಲ್ಲದೆ ಹೇಳಿಕೆಯನ್ನೇ ನೀಡದಿರುವುದು ಗಮನಿಸಬೇಕಾದ ಅಂಶ. ಸಿಐಎಸ್ಎಫ್ ಅಥವಾ ಸಿಆರ್ ಪಿಎಫ್ ನಲ್ಲಿ ಇರುವ ಮಾಹಿತಿ ಇಲ್ಲ ಎಂದೇ ಹೇಳಿದ್ದಾರೆ. ತಾಂತ್ರಿಕ ಸಾಕ್ಷ್ಯ, ಅಪರಾಧ ಪತ್ತೆಯ ನಿಶ್ಚಿತ ಮಾರ್ಗಗಳನ್ನು ಅನುಸರಿಸಿಯೇ ಪ್ರಕರಣ ಭೇದಿಸಿರುವುದು ಎಸ್ಪಿ ಹೇಳಿಕೆಯಿಂದ ದೃಢವಾಗುತ್ತದೆ. ಪ್ರಚಾರದ ಹುಚ್ಚಿಲ್ಲದೆ, ಕೃತ್ಯ ಎಸಗಿದ್ದು ಯಾರು ಎಂಬುದನ್ನಷ್ಟೇ ಪ್ರಾಥಮಿಕವಾಗಿ ಪತ್ತೆ ಮಾಡಿದ್ದಾರೆ. ಅಲ್ಲದೆ, ಆತನ ಹೇಳಿಕೆಯಷ್ಟೇ ಸಾಕಾಗದು. ಅವೆಲ್ಲದಕ್ಕೂ ಸಾಕ್ಷ್ಯವನ್ನು ಕಲೆಹಾಕಬೇಕಿದೆ ಎಂದು ಹೇಳಿದ್ದಾರೆ. ಸದ್ಯಕ್ಕೆ ಆರೋಪಿಯನ್ನು ಕೋರ್ಟಿಗೆ ಹಾಜರುಪಡಿಸಿ 15 ದಿನಕ್ಕೆ ಪೊಲೀಸರು ಕಸ್ಟಡಿ ಪಡೆದಿದ್ದಾರೆ. ಕೆಲವೇ ದಿನಗಳಲ್ಲಿ ಒಟ್ಟು ಪ್ರಕರಣದ ವೃತ್ತಾಂತದ ಬಗ್ಗೆ ಸ್ಪಷ್ಟ ಚಿತ್ರಣ ಸಿಗಬಹುದು.
Udupi Murder, Air hostess was a dream of Ainaz, accused Praveen Chowgule was a police officer in Pune. The shocking murder of Ainaz (21), her sister Afnan (23), brother Aseem (12), and mother Haseena (46) in Nejar on Sunday, November 12, during broad daylight, had sent shivers down the spines of the Udupi residents.
09-11-25 03:47 pm
Bangalore Correspondent
ISIS Terrorists, Umesh Reddy, Parappana Agrah...
08-11-25 10:29 pm
High Court Directs Kalaburagi: ಚಿತ್ತಾಪುರ ಆರೆಸ...
08-11-25 12:38 pm
ಯಾವ ಕ್ರಾಂತಿಯೂ ಆಗಲ್ಲ, ವಾಂತಿಯೂ ಆಗಲ್ಲ.. ನನಗೆ ಸಿದ...
07-11-25 09:59 pm
ಖಾಸಗಿ ಸಂಸ್ಥೆಗೆ ಸಾರ್ವಜನಿಕ ಸ್ಥಳದಲ್ಲಿ ನಿರ್ಬಂಧ ;...
06-11-25 07:34 pm
07-11-25 05:21 pm
HK News Desk
ಮತಗಳವು ಆರೋಪ ; ರಾಹುಲ್ ವಿರುದ್ಧ ತಿರುಗಿಬಿದ್ದ ಮತದಾ...
07-11-25 11:33 am
'ನವೆಂಬರ್ ಕ್ರಾಂತಿ' ವದಂತಿ ತಳ್ಳಿಹಾಕಿದ ಡಿಸಿಎಂ ; ನ...
06-11-25 10:22 pm
ಐಸಿಸಿ ಮಹಿಳಾ ವಿಶ್ವಕಪ್ ಎತ್ತಿಹಿಡಿದ ಭಾರತದ ವನಿತೆಯರ...
03-11-25 01:13 pm
ಜೋಧಪುರ ; ಭೀಕರ ರಸ್ತೆ ಅಪಘಾತದಲ್ಲಿ 18 ಜನರು ಸಾವು,...
02-11-25 11:12 pm
08-11-25 08:31 pm
Mangalore Correspondent
ಬೆಂಗಳೂರು- ಮಂಗಳೂರು ಹೈಸ್ಪೀಡ್ ಕಾರಿಡಾರ್ ; ಶಿರಾಡ...
07-11-25 10:58 pm
ಕುದ್ರೋಳಿ ಕ್ಷೇತ್ರ ಸ್ಥಾಪಿಸಿದ ಫೆ.21ರಂದು ನಾರಾಯಣ ಗ...
07-11-25 07:23 pm
ಗೋಡಂಬಿ ಉದ್ಯಮಕ್ಕೆ ನೂರು ವರ್ಷ ; ನ.14-16ರಂದು ದೇಶದ...
07-11-25 05:25 pm
ನೆಲ್ಯಾಡಿಯಲ್ಲಿ ಹೊಟೇಲ್ ಉದ್ಯಮ ನಡೆಸುತ್ತಿದ್ದ ಅಭಿಷೇ...
07-11-25 02:18 pm
09-11-25 03:50 pm
Mangalore Correspondent
ಕೋಮುದ್ವೇಷದ ಕೊಲೆ ; ಪ್ರತೀಕಾರಕ್ಕೆ ಪ್ರಚೋದಿಸಿ ಇನ್...
08-11-25 11:15 pm
Digital Arrest Scam, Mangalore Online Fraud:...
08-11-25 04:08 pm
ಆರೋಪಿಗೆ ಜಾಮೀನು ನೀಡಲು ಹೋಗಿ ತಾನೇ ತಗ್ಲಾಕ್ಕೊಂಡ !...
07-11-25 11:20 pm
ಹಗಲು ಕುರಾನ್ ಬೋಧಕ, ರಾತ್ರಿ ಮನೆಗಳ್ಳ..! ಬೀಗ ಹಾಕಿದ...
07-11-25 08:05 pm