ಬ್ರೇಕಿಂಗ್ ನ್ಯೂಸ್
12-11-23 06:18 pm Udupi Correspondent ಕ್ರೈಂ
ಉಡುಪಿ, ನ.12: ಉಡುಪಿಯ ಕಲ್ಸಂಕ ಬಳಿಯ ನೇಜಾರಿನಲ್ಲಿ ಆಗಂತುಕನೊಬ್ಬ ಮನೆಗೆ ನುಗ್ಗಿ ತಾಯಿ, ಮಕ್ಕಳನ್ನು ಇರಿದು ಹತ್ಯೆ ಮಾಡಿದ್ದಾನೆ. ಬೆಳಗ್ಗೆ 8.30ರಿಂದ 9 ಗಂಟೆಯ ನಡುವೆ ಆಟೋದಲ್ಲಿ ಬಂದಿದ್ದ ವ್ಯಕ್ತಿ ಕೇವಲ 15 ನಿಮಿಷದಲ್ಲಿ ಕೃತ್ಯ ಎಸಗಿ ಪರಾರಿಯಾಗಿದ್ದಾನೆ. ಹಾಡಹಗಲೇ ಒಂದೇ ಕುಟುಂಬದ ನಾಲ್ವರನ್ನು ಬಲಿ ಪಡೆದು ಆಗಂತುಕ ಪರಾರಿಯಾದ ಘಟನೆ ಬಗ್ಗೆ ಉಡುಪಿಯ ಜನರು ಬೆಚ್ಚಿಬಿದ್ದಿದ್ದಾರೆ.
ಮುಖಕ್ಕೆ ಲೈಟ್ ನೀಲಿ ಮಾಸ್ಕ್ ಹಾಕ್ಕೊಂಡಿದ್ದು ಕನ್ನಡ ಮಾತನಾಡುತ್ತಿದ್ದ 40-45 ವರ್ಷದ ವ್ಯಕ್ತಿಯೆಂದು ಆಟೋದಲ್ಲಿ ಕರೆದೊಯ್ದಿದ್ದ ಚಾಲಕ ಶ್ಯಾಮ್ ತಿಳಿಸಿದ್ದಾರೆ. ನೇಜಾರು ತೃಪ್ತಿ ನಗರದಲ್ಲಿ ಬಿಡಲು ಹೇಳಿದ್ದು, ಮನೆಯ ಗೇಟ್ ಹತ್ತಿರ ಆಟೋದಿಂದ ಇಳಿದು ಹೋಗಿದ್ದಾನೆ. ರಿವರ್ಸ್ ಗೇರ್ ನಲ್ಲಿಯೇ ಮರಳಿ ಬಂದಿದ್ದೇನೆ. ಮರಳಿ ಕಲ್ಸಂಕ ಆಟೋ ನಿಲ್ದಾಣದಲ್ಲಿ ತಲುಪುವಷ್ಟರಲ್ಲಿ ಆತ ಬೇರೊಂದು ಬೈಕಿನಲ್ಲಿ ಬಂದಿದ್ದು ಮತ್ತೊಂದು ಆಟೋದಲ್ಲಿ ಹೋಗಿದ್ದಾರೆ. ಬೇಗ, ಅರ್ಜೆಂಟ್ ಹೋಗುವಂತೆ ಹೇಳಿದ್ದಾನೆ, ಆಟೋ ಚಾಲಕ ಟ್ರಾಫಿಕ್ ಇರುವುದರಿಂದ ಬೇಗ ಹೋಗಲು ಆಗಲ್ಲ ಎಂದಿದ್ದರು. ನಾನು ನೋಡಿ, ನನಗೆ ನಿಲ್ಲಲು ಹೇಳುತ್ತಿದ್ದರೆ, ನಾನೇ ನಿಲ್ತಿದ್ದೆ ಅಲ್ವಾ ಎಂದು ಆತನಲ್ಲಿ ಹೇಳಿದೆ. ಆತ ಮಾತನಾಡಿಲ್ಲ. ಮತ್ತೇನೂ ಗೊತ್ತಿಲ್ಲ. ಬೆಂಗಳೂರು ಶೈಲಿಯ ಕನ್ನಡ ಮಾತನಾಡುತ್ತಿದ್ದ ಎಂದು ಆಟೋ ಚಾಲಕ ಹೇಳಿದ್ದಾರೆ.
ತಾಯಿ ಹಸೀನಾ(43), ಆಕೆಯ ಮಕ್ಕಳಾದ ಅಫ್ವಾನ್(23), ಅಯಾಜ್(21) ಮತ್ತು ಅಸೀಮ್ (14) ಮೃತರು. ಹಸೀನಾ ಅವರ ಅತ್ತೆಗೂ ಚೂರಿಯಿಂದ ಇರಿದಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ. ಆಗಂತುಕ ಆಟೋದಲ್ಲಿ ಬಂದ ಕೂಡಲೇ ಮನೆಗೆ ನುಗ್ಗಿ ನೇರವಾಗಿ ತಾಯಿ ಮಕ್ಕಳಿಗೆ ಚೂರಿಯಿಂದ ಇರಿದು ಕೊಲೆ ಮಾಡಿದ್ದಾನೆ. ಒಬ್ಬ ಮಗನಂತೂ ಮಲಗಿದಲ್ಲೇ ಕೊಲೆಯಾಗಿದ್ದಾನೆ. 14 ವರ್ಷದ ಅಸೀಮ್ ಹೊರಗಡೆ ಸೈಕಲ್ ನಲ್ಲಿ ಆಟವಾಡುತ್ತಿದ್ದು ತಾಯಿಯ ಬೊಬ್ಬೆ ಕೇಳಿ ಒಳಗೆ ಓಡಿ ಬರುತ್ತಲೇ ಆತನಿಗೂ ಇರಿದು ಕೊಲೆ ಮಾಡಿದ್ದಾನೆ. ರಕ್ತಸಿಕ್ತವಾಗಿ ಮನೆಯ ಹಾಲ್ ನಲ್ಲಿ ತಾಯಿ, ಮಕ್ಕಳು ಬರ್ಬರವಾಗಿ ಕೊಲೆಯಾಗಿದ್ದು, ಇಡೀ ಮನೆಯೇ ಸ್ಮಶಾನವಾಗಿದೆ.
ಕೊಲೆಯಾದ ಹಸೀನಾ ಅವರ ಪತಿ ಗಲ್ಫ್ ನಲ್ಲಿದ್ದಾರೆ. ತಾಯಿ, ಮಕ್ಕಳು ಎರಡಂತಸ್ತಿನ ಮನೆಯಲ್ಲಿ ವಾಸವಿದ್ದರು. ಆಗಂತುಕ ಯಾಕಾಗಿ ಕೊಲೆ ನಡೆಸಿದ್ದಾನೆ, ಆತನಿಗೂ ಈ ಕುಟುಂಬಕ್ಕೂ ಏನು ಸಂಬಂಧ ಅನ್ನೋದು ತಿಳಿದುಬಂದಿಲ್ಲ. ಉಡುಪಿ ಎಸ್ಪಿ ಅರುಣ್ ಕುಮಾರ್ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದಾರೆ. ಮನೆಯಲ್ಲಿ ಯಾವುದೇ ಕಳವು ಆಗಿಲ್ಲ. ಯಾಕಾಗಿ ಕೊಲೆ ನಡೆಸಿದ್ದಾನೆ ಅನ್ನೋದು ತಿಳಿದುಬಂದಿಲ್ಲ. ಸಿಸಿಟಿವಿ ಪರಿಶೀಲನೆ ನಡೆಸಿದ್ದೇವೆ. ಅಕ್ಕ ಪಕ್ಕದವರು ವಿಷಯ ತಿಳಿದು ಪೊಲೀಸರಿಗೆ ತಿಳಿಸಿದ್ದಾರೆ. ನಾವು ಆದಷ್ಟು ಬೇಗನೆ ಆರೋಪಿಯನ್ನು ಬಂಧಿಸುತ್ತೇವೆ. ಕುಟುಂಬದಲ್ಲಿ ಕಲಹವೋ, ಮಹಿಳೆಯ ಬಗ್ಗೆ ದ್ವೇಷ ಇತ್ತೇ ಎನ್ನುವ ಬಗ್ಗೆ ಪರಿಶೀಲನೆ ಮಾಡುತ್ತೇವೆ ಎಂದಿದ್ದಾರೆ.
ಆರೋಪಿ ಸ್ಥಳದಿಂದ ಪರಾರಿಯಾಗಿದ್ದು, ಇದೇ ವೇಳೆ ಆತ ರಸ್ತೆ ದಾಟುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ದಾಖಲಾಗಿದೆ. ಕೈಯಲ್ಲಿ ಕಪ್ಪು ಬ್ಯಾಗ್ ಇಟ್ಟುಕೊಂಡಿದ್ದು, ತುರ್ತಾಗಿ ರಸ್ತೆ ದಾಟಿ ಹೋಗಿದ್ದಾನೆ. ಪೊಲೀಸರು ನಾಕಾಬಂದಿ ಹಾಕಿದ್ದು, ಆರೋಪಿ ಪತ್ತೆಗೆ ವಿಶೇಷ ತಂಡವನ್ನು ಎಸ್ಪಿ ರಚನೆ ಮಾಡಿದ್ದಾರೆ. ಹಸೀನಾ ಅವರ ಗಂಡನಿಂದಲೂ ಮಾಹಿತಿಯನ್ನು ಪೊಲೀಸರು ಸಂಗ್ರಹ ಮಾಡಿದ್ದಾರೆ.
Udupi Murder, Four killed, CCTV of accused going in Auto released. In a shocking and horrifying incident, four individuals, including a mother and her three children , were found brutally murdered in Hampankatte of Kemmannu, falling under the jurisdiction of the Malpe police station.
14-08-25 03:51 pm
Bangalore Correspondent
DK Shivakumar, Dharmasthala, Virendra Heggade...
14-08-25 03:49 pm
IPS Alok Kumar, News: ಪೊಲೀಸ್ ಶಾಲೆಗಳಲ್ಲೇ ಲಂಚ,...
14-08-25 01:48 pm
Dharmasthala Case, Dinesh Gundu Rao: ಮತ್ತೆ ಗು...
13-08-25 07:03 pm
ವಜಾ ಹಿಂದೆ ದೊಡ್ಡ ಷಡ್ಯಂತ್ರ ಆಗಿದೆ, ರಾಹುಲ್ ಗಾಂಧಿ...
12-08-25 10:39 pm
14-08-25 07:24 pm
HK News Desk
ಯುಎಇ ಸುದ್ದಿ ; ಆರೇ ತಿಂಗಳಲ್ಲಿ ದುಬೈನಲ್ಲಿ 3,600ಕ್...
14-08-25 07:02 pm
ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಮೋಡಿ ಮಾಡಲಿದ್ದಾರ...
14-08-25 11:26 am
ತಾಯಿ ಜೊತೆ ಅಂಡಮಾನ್ ಹೋಗ್ತೀನಿ ಎಂದಿದ್ದ ಮಗಳು ; ಬೇಡ...
13-08-25 11:56 am
ಪುಣ್ಯಕ್ಷೇತ್ರ ಯಾತ್ರೆ ಹೊರಟವರ ಮೇಲೆರಗಿದ ಜವರಾಯ ; ರ...
13-08-25 10:41 am
14-08-25 10:29 pm
Mangalore Correspondent
SCDCC Bank Launches Special Independence Day...
14-08-25 01:12 pm
Bantwal Deputy Tahsildar, Lokayukta: 20 ಸಾವಿರ...
13-08-25 10:22 pm
Dharmasthala News Today, Point No 13: ಕಡೆಗೂ ಪ...
13-08-25 10:01 pm
The Ocean Pearl Brings “Flavors of India” to...
13-08-25 08:23 pm
14-08-25 05:31 pm
Bangalore Correspondent
Supreme Court, Actor Darshan Jail Order: ಸುಪ್...
14-08-25 11:51 am
Fake Stock Market Scam, Fraud: 10 ಲಕ್ಷ ಹೂಡಿಕೆ...
13-08-25 05:40 pm
Fraud, Laxmi Hebbalkar: ಸಚಿವೆ ಲಕ್ಷ್ಮೀ ಹೆಬ್ಬಾಳ...
13-08-25 04:14 pm
ಅನೈತಿಕ ಸಂಬಂಧ ಶಂಕೆ ; ಅತ್ತೆ ಮೇಲಿನ ದ್ವೇಷದಿಂದ ಕೊಲ...
12-08-25 12:36 pm