ಬ್ರೇಕಿಂಗ್ ನ್ಯೂಸ್
03-11-20 12:52 pm Mangalore Correspondent ಕ್ರೈಂ
ಪುತ್ತೂರು, ನವೆಂಬರ್ 03: ಪುತ್ತೂರು ಪೇಟೆಯ ದರ್ಬೆಯಲ್ಲಿ ಸೋಮವಾರ ನಡೆದ ರಸ್ತೆ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಮಹಿಳೆಯೂ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಮೂಲತಃ ಉಪ್ಪಿನಂಗಡಿ ನಿವಾಸಿ, ಸದ್ಯ ಪುತ್ತೂರಿನ ದರ್ಬೆಯಲ್ಲಿ ವಾಸವಿದ್ದ ಅಚ್ಚುತ್ತ ಶೆಟ್ಟಿ ಎಂಬವರ ಪತ್ನಿ ಗೀತಾ ಶೆಟ್ಟಿ (38) ಮೃತರು. ಗೀತಾ ತನ್ನ ಜೊತೆಗಿದ್ದ 9 ವರ್ಷದ ಸ್ವಾತಿ ಹಾಗೂ ಆರು ವರ್ಷದ ಅನನ್ಯ ಜೊತೆಗೆ ರಸ್ತೆ ದಾಟುತ್ತಿದ್ದರು. ಈ ವೇಳೆ, ಯಮರೂಪಿಯಾಗಿ ಧಾವಿಸಿದ್ದ ಸ್ವಿಫ್ಟ್ ಕಾರು ಇವರಿಗೆ ಡಿಕ್ಕಿಯಾಗಿದೆ. ಸ್ವಾತಿ ಸ್ಥಳದಲ್ಲೇ ಸಾವನ್ನಪ್ಪಿದರೆ, ಗಂಭೀರ ಗಾಯಗೊಂಡಿದ್ದ ಇನ್ನೊಬ್ಬಳು ಬಾಲಕಿ ಮತ್ತು ಮಹಿಳೆಯನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.


ಸ್ವಾತಿ ಮತ್ತು ಅನನ್ಯ, ದರ್ಬೆಯ ದುಗ್ಗಮ್ಮ ದೇರಣ್ಣ ಶೆಟ್ಟಿ ಬಂಟರ ಭವನದಲ್ಲಿ ಕೆಲಸಕ್ಕಿದ್ದ ಕೂಲಿ ಕೆಲಸ ಮಾಡುತ್ತಿದ್ದ ದಂಪತಿಯ ಪುತ್ರಿಯರಾಗಿದ್ದರು. ಗೀತಾ ಶೆಟ್ಟಿಯ ಮನೆಯೂ ಪಕ್ಕದಲ್ಲೇ ಇದ್ದುದರಿಂದ ಮಕ್ಕಳನ್ನು ಗೀತಾರ ಬಳಿ ಬಿಟ್ಟು ದಂಪತಿ ಹೊರಗೆ ಹೋಗಿದ್ದರು. ಸೋಮವಾರ ಮಧ್ಯಾಹ್ನ ಊಟದ ಬಳಿಕ ಗೀತಾ ಮತ್ತು ಮಕ್ಕಳು ಸಭಾಭವನದತ್ತ ಹಿಂತಿರುಗುತ್ತಿದ್ದಾಗ ಮಂಗಳೂರು ಕಡೆಯಿಂದ ಬರುತ್ತಿದ್ದ ಸ್ವಿಫ್ಟ್ ಕಾರು ಚಾಲಕ ಥಾಮಸ್ ಎಂಬಾತನ ಅತಿವೇಗದ ಚಾಲನೆಯಿಂದಾಗಿ ಜವರಾಯನ ರೂಪದಲ್ಲಿ ಬಂದೆರಗಿತ್ತು. ಮಕ್ಕಳು ಮತ್ತು ಮಹಿಳೆಗೆ ಡಿಕ್ಕಿಯಾದ ಬಳಿಕ ಕಾರು, ಅಲ್ಲಿಯೇ ನಿಲ್ಲಿಸಿದ್ದ ಉಬೈದ್ ಎಂಬವರ ಎಸ್ – ಕ್ರಾಸ್ ಕಾರಿಗೆ ಡಿಕ್ಕಿಯಾಗಿತ್ತು. ಡಿಕ್ಕಿಯ ರಭಸಕ್ಕೆ ಎಸ್-ಕ್ರಾಸ್ ಕಾರಿನ ಹಿಂಬದಿ ಸಂಪೂರ್ಣ ನಜ್ಜುಗುಜ್ಜಾಗಿದೆ. ಕಾರು ಚಾಲಕನ ಧಾವಂತ ಮತ್ತು ಅತಿವೇಗದ ನಿರ್ಲಕ್ಷ್ಯ ಚಾಲನೆಯಿಂದಾಗಿ ಇಬ್ಬರು ದುರಂತ ಸಾವು ಕಂಡಿದ್ದಾರೆ.
In the accident which occurred in Puttur, Darbe highway two pedestrians a girl student and a woman have lost their lives.
29-08-26 10:49 pm
HK News Staffer
‘ದಬ್ಬಾಳಿಕೆ ಮಾಡಲಿ, ರಿಪೇರಿ ಮಾಡೋದು ನಂಗೆ ಗೊತ್ತಿದೆ...
29-08-26 10:47 pm
ನಾಗೇಂದ್ರ ರಾಜಿನಾಮೆ ನೀಡಿದ್ರೂ ಬಿಜೆಪಿ ಪಾದಯಾತ್ರೆ ಮ...
29-08-26 10:38 pm
ಸಿನಿಮಾಗಳಲ್ಲಿ ಮಹಿಳೆಯನ್ನು ಭೋಗದ ವಸ್ತುವನ್ನಾಗಿ ತೋರ...
28-08-26 09:35 pm
ವಾಲ್ಮೀಕಿ ನಿಗಮ ಹಗರಣ ಎಫೆಕ್ಟ್ ; ಕೊನೆಗೂ ಸಚಿವ ಸ್ಥಾ...
28-08-26 12:41 pm
29-08-26 10:25 pm
HK News Staffer
ನೇಪಾಳ ಪ್ರವಾಹದ ಬಳಿಕ ಇನ್ಫೋಸಿಸ್ ಪಬ್ಲಿಕ್ ಸರ್ವಿಸಸ್...
29-08-26 03:36 pm
ನೇಪಾಳದಲ್ಲಿ ಜಲಪ್ರಳಯ ; ಸಾವಿನ ಸಂಖ್ಯೆ 160ಕ್ಕೆ ಏರ...
27-08-26 12:39 pm
ಪುತ್ರಿಯ ಅಂತರ್ಜಾತಿ ವಿವಾಹ ; ಕಣ್ಣೂರು ಮುಚ್ಚಿಲೋಟ್...
26-08-26 06:41 pm
ಹಿಜಾಬ್ ಇಸ್ಲಾಮಿನ ಧಾರ್ಮಿಕ ಆಚರಣೆಯಲ್ಲಿ ಅನಿವಾರ್ಯ ಅ...
26-08-26 02:05 pm
29-08-26 08:35 pm
HK News Staffer
ಪಶ್ಚಿಮ ವಲಯ ಐಜಿಪಿ ಅಮಿತ್ ಸಿಂಗ್, ಮಂಗಳೂರು ಡಿಸಿಪಿ...
29-08-26 07:01 pm
ಮಂಗಳೂರಿನಲ್ಲಿ ಸಚಿವ ಸಂಪುಟ ಸಭೆ ; ತುಳುವನ್ನು ರಾಜ್ಯ...
29-08-26 04:39 pm
ಮಂಗಳೂರು ರೈಲ್ವೇ ; ಕೇರಳದಲ್ಲಿ ಯಾರು ಬಟ್ಟೆ ಬಿಚ್ಚಿ...
29-08-26 04:05 pm
ಪ್ರತಿಷ್ಠಿತ ಫೋರ್ಬ್ಸ್ ಇಂಡಿಯಾ ಪಟ್ಟಿಯಲ್ಲಿ ಸ್ಥಾನ ಪ...
28-08-26 08:57 pm
29-08-26 01:02 pm
HK News Staffer
ತುಮಕೂರು ; ಓವರ್ಟೇಕ್ ಭರದಲ್ಲಿ ಕಾರುಗಳ ನಡುವೆ ಮುಖ...
29-08-26 11:40 am
ಡೇಟಿಂಗ್ ಆ್ಯಪ್ನಲ್ಲಿ ಪರಿಚಯವಾಗಿದ್ದ ಹುಡುಗಿಯ ಕತರ್...
28-08-26 09:03 pm
ಮಧ್ಯಪ್ರದೇಶದಲ್ಲಿ ಪ್ರಪಾತಕ್ಕೆ ಉರುಳಿ ಬಿದ್ದ ಬಸ್ ;...
28-08-26 07:40 pm
ತೆರಿಗೆ ಮೊತ್ತವನ್ನು 80 ಲಕ್ಷದಿಂದ 30 ಲಕ್ಷ ರೂ.ಗೆ ಇ...
28-08-26 06:22 pm