ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡಿಸಿ ಕೋಟ್ಯಂತರ ವಂಚನೆ ; ತಲೆಮರೆಸಿದ್ದ ಆರೋಪಿ ಸೆರೆ

20-03-23 09:33 pm       Mangalore Correspondent   ಕ್ರೈಂ

ಷೇರು ಮಾರುಕಟ್ಟೆಯಲ್ಲಿ ಕೋಟ್ಯಾಂತರ ರೂಪಾಯಿ ಲಾಭ ಗಳಿಸಬಹುದು ಎಂದು ಶಕ್ತಿನಗರದ ನಿವಾಸಿಯೋರ್ವರನ್ನು ನಂಬಿಸಿ ಕೋಟ್ಯಾಂತರ ರೂ. ಹಣವನ್ನು ಹೂಡಿಕೆ ಮಾಡಿಸಿ ವಂಚನೆ ಎಸಗಿದ ಆರೋಪಿಯನ್ನು ಮಂಗಳೂರು ಸೆನ್ ಕ್ರೈಮ್ ಪೊಲೀಸರು ಬಂಧಿಸಿದ್ದಾರೆ. 

ಮಂಗಳೂರು, ಮಾ.20: ಷೇರು ಮಾರುಕಟ್ಟೆಯಲ್ಲಿ ಕೋಟ್ಯಾಂತರ ರೂಪಾಯಿ ಲಾಭ ಗಳಿಸಬಹುದು ಎಂದು ಶಕ್ತಿನಗರದ ನಿವಾಸಿಯೋರ್ವರನ್ನು ನಂಬಿಸಿ ಕೋಟ್ಯಾಂತರ ರೂ. ಹಣವನ್ನು ಹೂಡಿಕೆ ಮಾಡಿಸಿ ವಂಚನೆ ಎಸಗಿದ ಆರೋಪಿಯನ್ನು ಮಂಗಳೂರು ಸೆನ್ ಕ್ರೈಮ್ ಪೊಲೀಸರು ಬಂಧಿಸಿದ್ದಾರೆ. 

ಕೇರಳದ ಕಲ್ಲಿಕೋಟೆಯ ಚಲವೂರು ನಿವಾಸಿ ಜಿಜೊ ಜಾನ್  ಪಿ.ಕೆ. (29) ಬಂಧಿತ ಆರೋಪಿ. ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡಿ ಕೋಟ್ಯಾಂತರ ರೂ. ಗಳಿಸಬಹುದು ಎಂದು ಆರೋಪಿ ಜಾನ್, ಶಕ್ತಿನಗರದ ನಿವಾಸಿಯೋರ್ವರನ್ನು ನಂಬಿಸಿದ್ದ. ತಿಂಗಳಿಗೆ ಶೇ. 15ರಷ್ಟು ಲಾಭಾಂಶ ಬರುವುದಾಗಿ ತಿಳಿಸಿದ್ದ. ಅವರಿಂದ ಸುಮಾರು 1 ಕೋ.ರೂ. ಹಣವನ್ನು ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಿಕೊಂಡಿದ್ದ. 

ಬಳಿಕ ಲಾಭಾಂಶವನ್ನು ನೀಡದೆ ಪಡೆದ ಹಣವನ್ನು ಹಿಂದಿರುಗಿಸದೆ ವಂಚಿಸಿದ್ದ. ಈ ಬಗ್ಗೆ ಹಣ ಕಳೆದುಕೊಂಡ ನಿವಾಸಿ ಮಂಗಳೂರಿನ ಸೆನ್ ಕ್ರೈಮ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ದೂರು ದಾಖಲಿಸಿಕೊಂಡ ಪೊಲೀಸರು ಆರೋಪಿಗಾಗಿ ಬಲೆ ಬೀಸಿದ್ದು ಕೇರಳದ ಕಲ್ಲಿಕೋಟೆಯಲ್ಲಿ ಆತನನ್ನು ಬಂಧಿಸಿದ್ದಾರೆ.  ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು ನ್ಯಾಯಾಂಗ ಬಂಧನ ವಿಧಿಸಲಾಗಿದೆ.

Mangalore CEN police arrest man for cheating in Crores in stock market. The attested has been identified as Jiju John (29). The arrested is a native of Kozhikode, Kerala.