ಪದ್ಮಾ ರಾಯಲ್ ಚಾಲೆಂಜ್ ಸ್ಕೀಮ್ ಹೆಸರಲ್ಲಿ ನೂರಾರು ಮಂದಿಗೆ ವಂಚನೆ ; ಮಹಿಳೆಯರಿಂದ ಕಂತಿನಲ್ಲಿ ಹಣ ಪಡೆದು ಮೋಸ, ಗಂಗೊಳ್ಳಿಯಲ್ಲಿ ನಕಲಿ ಸ್ಕೀಮ್ ಬೆಳಕಿಗೆ

03-02-23 08:42 pm       Udupi Correspondent   ಕ್ರೈಂ

ಸ್ಕೀಮ್ ಹೆಸರಲ್ಲಿ ನೂರಾರು ಮಂದಿಯ ಬಳಿ ಹಣ ಸಂಗ್ರಹಿಸಿ, ಡಬಲ್ ನೀಡುವ ಆಮಿಷವೊಡ್ಡಿ ಕೋಟ್ಯಂತರ ರೂಪಾಯಿ ವಂಚನೆ ಎಸಗಿರುವ ಕೃತ್ಯ ಗಂಗೊಳ್ಳಿಯಲ್ಲಿ ಬೆಳಕಿಗೆ ಬಂದಿದೆ.

ಕುಂದಾಪುರ, ಫೆ.3: ಸ್ಕೀಮ್ ಹೆಸರಲ್ಲಿ ನೂರಾರು ಮಂದಿಯ ಬಳಿ ಹಣ ಸಂಗ್ರಹಿಸಿ, ಡಬಲ್ ನೀಡುವ ಆಮಿಷವೊಡ್ಡಿ ಕೋಟ್ಯಂತರ ರೂಪಾಯಿ ವಂಚನೆ ಎಸಗಿರುವ ಕೃತ್ಯ ಗಂಗೊಳ್ಳಿಯಲ್ಲಿ ಬೆಳಕಿಗೆ ಬಂದಿದೆ. ಪದ್ಮಾ ರಾಯಲ್ ಚಾಲೆಂಜ್ ಸ್ಕೀಮ್ ಹೆಸರಲ್ಲಿ ಪದ್ಮಾ ಹೆಗಡೆ ಮತ್ತು ಆಕೆಯ ಕುಟುಂಬಸ್ಥರು ವಂಚನೆ ಎಸಗಿದ್ದಾರೆಂದು ಗಂಗೊಳ್ಳಿ ಠಾಣೆಗೆ ದೂರು ನೀಡಲಾಗಿದೆ. ಈ ಬಗ್ಗೆ ತೊರಳ್ಳಿ ನಡುಮನೆಯ ರತ್ನಾ ಎಂಬವರು ಪೊಲೀಸ್ ದೂರು ನೀಡಿದ್ದಾರೆ.

ಪದ್ಮಾ ಹೆಗ್ಡೆ ಮತ್ತು ಮುಕಾಂಬು ಎಂಬವರು ಸೇರಿ ಸ್ಕೀಮ್ ಹೆಸರಲ್ಲಿ ಹಣ ಸಂಗ್ರಹಿಸುವ ಉದ್ಯಮ ಆರಂಭಿಸಿದ್ದರು. ರತ್ನಾ ಅವರಲ್ಲಿ ಎರಡು ಲಕ್ಷ ರೂಪಾಯಿ ಪಡೆದು, ಅವರನ್ನು ಕ್ಯಾಶಿಯರ್ ಆಗಿಸುತ್ತೇವೆಂದು ಹೇಳಿ ವಂಚನೆ ಎಸಗಿದ್ದಾರೆ. ಅಲ್ಲದೆ, ವಾರದ ಸ್ಕೀಮಿಗೆ ಸದಸ್ಯರನ್ನು ಮಾಡಿದರೆ, 100 ರೂಪಾಯಿ ಕಮಿಷನ್ ನೀಡುವುದಾಗಿ ಹೇಳಿದ್ದರು. ಅದರಂತೆ ರತ್ನಾ 131 ಸದಸ್ಯರನ್ನು ಮಾಡಿದ್ದು, ಅವರಿಂದ ವಾರಕ್ಕೆ 500, ಒಂದು ಸಾವಿರ, ಎರಡು ಸಾವಿರ ಹೀಗೆ ಸಂಗ್ರಹಿಸುತ್ತಿದ್ದರು. 500 ರೂ.ನಂತೆ 50 ಕಂತು ಕಟ್ಟಿದಲ್ಲಿ 34 ಸಾವಿರ, ವಾರಕ್ಕೆ 950 ರೂ.ನಂತೆ 50 ಕಂತು ಕಟ್ಟಿದಲ್ಲಿ 68 ಸಾವಿರ, ತಿಂಗಳಿಗೆ ಒಂದು ಸಾವಿರ 12 ಕಂತು ಕಟ್ಟಿದರೆ 17 ಸಾವಿರ, ಎರಡು ಸಾವಿರ ಕಟ್ಟಿದರೆ 12 ತಿಂಗಳಿಗೆ 34 ಸಾವಿರ ಕೊಡುವುದಾಗಿ ನಂಬಿಸಿದ್ದರು.

ಗ್ರಾಹಕರಲ್ಲಿ ಹಣ ಪಡೆದಿರುವುದಕ್ಕೆ ಪದ್ಮಾ ಹೆಗ್ಡೆ ಅವರ ಕಚೇರಿಯಲ್ಲಿ ಸಹಿ ಹಾಕಿದ ಕರಾರುಪತ್ರ ನೀಡುತ್ತಿದ್ದರು. ಪದ್ಮಾ ಹೆಗ್ಡೆ, ಸೆಲ್ವರಾಜ, ಪುತ್ರ ದಿಶಾಂತ್ ಹೆಗ್ಡೆ, ಪುತ್ರಿ ಸುಹಾನಿ ಹೆಗ್ಡೆ ಇವರು ಸಹಿ ಹಾಕಿ ಹಣ ಸ್ವೀಕರಿಸುತ್ತಿದ್ದರು. ರತ್ನಾ ಅವರು ಕೂಡ ಕಾರ್ಡ್ ನಲ್ಲಿ ಸಹಿ ಹಾಕಿಸಿಕೊಂಡು ಹಣ ಸಂಗ್ರಹಿಸುತ್ತಿದ್ದರು. ರತ್ನಾ ಸೇರಿದಂತೆ ಹಲವರು ಏಜಂಟರಾಗಿ ಕೆಲಸ ಮಾಡುತ್ತಿದ್ದು ತಮ್ಮ ಊರಲ್ಲಿ ಗ್ರಾಹಕರಿಂದ ಹಣ ಸಂಗ್ರಹಿಸಿ ನೀಡುತ್ತಿದ್ದರು.

ಸುಜಾತಾ ಹಾಗೂ ಅವರ ಗ್ರಾಹಕರಿಗೆ 12 ಲಕ್ಷ ರೂ., ಸುಭಾಶ್ ಹಾಗು ಅವರ ಗ್ರಾಹಕರಿಗೆ 6 ಲಕ್ಷ, ಭಾಗ್ಯಶ್ರೀ ಹಾಗೂ ಅವರ ಗ್ರಾಹಕರಿಗೆ 7.87 ಲಕ್ಷ, ರೇವತಿ ಹಾಗೂ ಅವರ ಗ್ರಾಹಕರಿಗೆ 4 ಲಕ್ಷ, ದೀಪಾ ಹಾಗೂ ಅವರ ಗ್ರಾಹಕರಿಗೆ 3.94 ಲಕ್ಷ, ರಾಘವೇಂದ್ರ ಪೂಜಾರಿ ಹಾಗೂ ಅವರ ಗ್ರಾಹಕರಿಗೆ 11 ಲಕ್ಷ, ಭಾರತಿ ಹಾಗೂ ಅವರ ಗ್ರಾಹಕರಿಗೆ 2.14 ಲಕ್ಷ, ಸರೋಜಾ ಹಾಗೂ ಅವರ ಗ್ರಾಹಕರಿಗೆ 3.90 ಲಕ್ಷ, ಸವಿತಾ ಹಾಗೂ ಅವರ ಗ್ರಾಹಕರಿಗೆ 76 ಸಾವಿರ, ಸುಶೀಲಾ ಹಾಗೂ ಅವರ ಗ್ರಾಹಕರಿಗೆ 2.5 ಲಕ್ಷ ಹೀಗೆ ಒಟ್ಟು 1 ಕೋಟಿ 7 ಲಕ್ಷ ರೂಪಾಯಿ ವಂಚನೆ ಎಸಗಿದ್ದಾರೆಂದು ದೂರಿನಲ್ಲಿ ತಿಳಿಸಿದ್ದಾರೆ.

The Padma Royal Challenge Scheme started by Padma Hegde and Mukambu, duping crores of Rupees from 131 people, has been reported at the Gangolli police station on February 2. After starting the scheme, Padma Hegde and Mookambu appointed Ratna from Kundabarandady as a member of their organization. They instructed Ratna to get investors for the organization by assuring them of good returns. Accordingly, 131 people have joined the scheme through Ratna.