ಬ್ರೇಕಿಂಗ್ ನ್ಯೂಸ್
30-10-22 06:02 pm Mangaluru Correspondent ಕ್ರೈಂ
ಸುಳ್ಯ, ಅ.30: ಗಂಡು ಮಗು ಹೆತ್ತವರನ್ನು ನೋಡಿಕೊಳ್ಳಲ್ಲ ಎಂದು ಹತ್ತು ತಿಂಗಳ ನವಜಾತ ಗಂಡು ಶಿಶುವನ್ನು ತಾಯಿಯೇ ಬಾವಿಗೆಸೆದು ಕೊಂದು ಹಾಕಿದ ಘಟನೆ ಸುಳ್ಯ ತಾಲೂಕಿನ ಸುಬ್ರಹ್ಮಣ್ಯ ಬಳಿಯ ಕೂತ್ಕುಂಜ ಎಂಬಲ್ಲಿ ನಡೆದಿದೆ.
ಕೂತ್ಕುಂಜ ನಿವಾಸಿ ಪವಿತ್ರಾ ಎಂಬಾಕೆ ಅ.19ರಂದು ಮಂಗಳೂರಿನ ಲೇಡಿಗೋಷನ್ ಆಸ್ಪತ್ರೆಯಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದಳು. ಗರ್ಭಿಣಿಯಾಗಿದ್ದಾಗಲೇ ನನಗೆ ಹೆಣ್ಣು ಮಗು ಆಗುತ್ತದೆ, ಗಂಡು ಮಕ್ಕಳು ತಂದೆ, ತಾಯಿಯನ್ನು ನೋಡಿಕೊಳ್ಳುವುದಿಲ್ಲ. ಹೆಣ್ಣು ಮಗುವೆಂದರೆ ತುಂಬ ಇಷ್ಟ ಎಂದು ಹೇಳಿಕೊಂಡಿದ್ದಳು. ತಾನು ಹೆತ್ತಿದ್ದು ಗಂಡು ಮಗು ಎಂದು ತಿಳಿದು ಅದಕ್ಕೆ ಮೊಲೆ ಹಾಲು ನೀಡದೇ ಸತಾಯಿಸುತ್ತಿದ್ದಳು.
ಅ.29ರಂದು ಸಂಜೆ ಈ ಗಂಡು ಮಗು ತನಗೆ ಇಷ್ಟವಿಲ್ಲದಿದ್ದರೂ ಹುಟ್ಟಿದೆ ಎಂದು ಹೇಳಿ ಮಗುವನ್ನು ಎತ್ತಿಕೊಂಡು ಮನೆಯಿಂದ ಹೊರಗೆ ಬಂದು ಅಂಗಳದಲ್ಲಿರುವ ಬಾವಿಗೆ ಎಸೆದಿದ್ದಾಳೆ. ಬಳಿಕ ಮನೆಯ ಒಳಗಡೆ ಓಡಿದ್ದಾಳೆ. ಮನೆಯಲ್ಲಿದ್ದ ಆಕೆಯ ಅಣ್ಣನ ಪತ್ನಿ ರಂಜಿತಾ ಇದನ್ನು ನೋಡಿದ್ದು, ತನ್ನ ಪತಿಗೆ ವಿಷಯ ತಿಳಿಸಿದ್ದಾಳೆ. ಪತಿ ಅರುಣ್ ಕುಮಾರ್ ಮತ್ತು ಆತನ ಸ್ನೇಹಿತರು ಬಂದು ಬಾವಿಯಿಂದ ಮಗುವನ್ನು ಎತ್ತಿ ಬಳಿಕ ಪಂಜ ಸರಕಾರಿ ಆಸ್ಪತ್ರೆಗೆ ಒಯ್ದಿದ್ದು, ಅಷ್ಟರಲ್ಲಿ ಮಗು ಮೃತಪಟ್ಟಿತ್ತು.
ಪವಿತ್ರಾ ನಾಲ್ಕು ವರ್ಷದ ಹಿಂದೆ ಬೆಂಗಳೂರು ಮೂಲದ ಹರೀಶ್ ಎಂಬಾತನನ್ನು ಮದುವೆಯಾಗಿದ್ದು ಆನಂತರ ಆತನಿಗೆ ವಿಚ್ಛೇದನ ಕೊಟ್ಟು ತುಮಕೂರು ಮೂಲದ ಮಣಿಕಂಠ ಎಂಬವನನ್ನು ಒಂದು ವರ್ಷದ ಹಿಂದೆ ಮದುವೆಯಾಗಿದ್ದಳು. ಕೆಲ ಕಾಲ ಆತನ ಜೊತೆಗಿದ್ದು ಹುಷಾರಿಲ್ಲವೆಂದು ತವರು ಮನೆಗೆ ಬಂದಿದ್ದಳು. ಈ ವೇಳೆ, ಗರ್ಭಿಣಿಯಾಗಿದ್ದ ಪವಿತ್ರಾ ತನಗೆ ಹೆಣ್ಣು ಮಗುವೇ ಆಗಬೇಕೆಂದು ಹಂಬಲಿಸುತ್ತಿದ್ದಳು. ಇಷ್ಟದಂತೆ ಹೆಣ್ಣು ಮಗುವಾಗದೆ ಗಂಡು ಮಗುವನ್ನು ಹೆತ್ತಿದ್ದರ ಕೋಪದಲ್ಲಿ ಸ್ವತಃ ತಾಯಿಯೇ ತನ್ನ ಹಸುಗೂಸನ್ನು ಬಾವಿಗೆಸೆದು ಕೊಂದಿದ್ದಾಳೆ. ಈ ಬಗ್ಗೆ ಘಟನೆಯನ್ನು ಕಣ್ಣಾರೆ ಕಂಡಿದ್ದ ರಂಜಿತಾ ಸುಬ್ರಹ್ಮಣ್ಯ ಪೊಲೀಸರಿಗೆ ದೂರು ನೀಡಿದ್ದಾರೆ. ಆರೋಪಿ ಪವಿತ್ರಾ ವಿರುದ್ಧ ಕೊಲೆ ಪ್ರಕರಣ ದಾಖಲಾಗಿದೆ.
Sullia 10 months old baby thrown to the well by mother for giving birth to a boy child in subramanya, Mangalore.
29-08-25 10:20 pm
HK News Desk
ಚಿಂತಾಮಣಿಯಲ್ಲಿ ಆಫ್ರಿಕನ್ ಹಂದಿ ಜ್ವರ ಪತ್ತೆ ; 100...
29-08-25 05:59 pm
Chikkamagaluru, Police, Fine: ಸಾರ್ವಜನಿಕರಿಗೆ ಮ...
28-08-25 06:23 pm
Bidar Bus Driver Suicide: ಬೀದರ್ ಬಸ್ ಡಿಪೋ ನಲ್ಲ...
28-08-25 02:41 pm
ಬಿಳಿಯಲ್ಲ ಮಾರಾಯರೇ ನೀಲಿ ಮೊಟ್ಟೆ ಇಟ್ಟ ನಾಟಿ ಕೋಳಿ ;...
28-08-25 11:56 am
29-08-25 05:20 pm
HK News Desk
PM Modi Japan: ಪ್ರಧಾನಿ ಮೋದಿಗೆ ಜಪಾನ್ನಲ್ಲಿ ಗಾಯ...
29-08-25 01:47 pm
ಮೋದಿ 75 ವರ್ಷಕ್ಕೆ ನಿವೃತ್ತರಾಗಬೇಕು ಎಂದು ಹೇಳಿಲ್ಲ...
29-08-25 12:50 pm
ಪ್ರತಿ ಭಾರತೀಯ ಕುಟುಂಬಗಳು ಮೂರಕ್ಕಿಂತ ಹೆಚ್ಚು ಮಕ್ಕಳ...
29-08-25 10:56 am
Kanhangad Suicide: ಕಾಞಂಗಾಡ್ ; ಬೆಳೆದು ನಿಂತ ಇಬ್...
28-08-25 12:19 pm
29-08-25 09:08 pm
Mangalore Correspondent
Mangalore, Eric Ozario, Konkani, Death: ಮಾಂಡ್...
29-08-25 08:13 pm
Mahesh Shetty Thimarodi, SIT, Mangalore: ಬೆಳ್...
29-08-25 03:48 pm
Puttur Tahsildar, Lokayukta Raid: ಜಮೀನು ಪರಭಾರ...
28-08-25 11:00 pm
Mangalore Rain, School College Holiday: ಭಾರೀ...
28-08-25 10:07 pm
27-08-25 10:23 pm
HK News Desk
Karkala Murder, Arrest, Crime: ಹೆಂಡ್ತಿ ಮಕ್ಕಳನ...
26-08-25 10:39 pm
ಟೆಕ್ನಾಲಜಿಯಲ್ಲಿ ಮುಂದಿರುವ ಅಮೆರಿಕದ ಪ್ರಜೆಗಳನ್ನೇ ಯ...
26-08-25 05:24 pm
ದುಬೈನಲ್ಲಿ ಗಂಡ, ಮೈಸೂರಿನಲ್ಲಿ ಪತ್ನಿಯ ಲವ್ವಿ ಡವ್ವಿ...
25-08-25 08:29 pm
ಶಿಕ್ಷಣ ಸಚಿವ ಮಧು ಬಂಗಾರಪ್ಪ ಪಿಎ ಹೆಸರಲ್ಲಿ ವಸೂಲಿ ;...
25-08-25 07:42 pm