ಬ್ರೇಕಿಂಗ್ ನ್ಯೂಸ್
06-08-22 07:44 pm HK News Desk ಕ್ರೈಂ
ಕೋಯಿಕ್ಕೋಡ್, ಆಗಸ್ಟ್ 6: ಕೋಜಿಕ್ಕೋಡ್ ಜಿಲ್ಲೆಯಲ್ಲಿ ತಿಂಗಳ ಅಂತರದಲ್ಲಿ ಇಬ್ಬರು ಯುವಕರು ನಾಪತ್ತೆಯಾಗಿದ್ದರು. ಒಬ್ಬ ದೀಪಕ್, ಇನ್ನೊಬ್ಬ ಇರ್ಶಾದ್. ಇಬ್ಬರ ನಾಪತ್ತೆ ಬಗ್ಗೆಯೂ ಪೊಲೀಸರು ಕೇಸು ದಾಖಲಿಸಿಕೊಂಡಿದ್ದರು. ಈ ನಡುವೆ, ಜುಲೈ 17ರಂದು ಕಡಲೂರು ಸಮುದ್ರ ತೀರದಲ್ಲಿ ಕೊಳೆತು ಹೋಗಿದ್ದ ಶವ ಪತ್ತೆಯಾಗಿತ್ತು. ದೀಪಕ್ ಸಂಬಂಧಿಕರು ಮೊದಲು ಶವ ನೋಡಿದ್ದರಿಂದ ಅದು ಆತನದ್ದೇ ಎಂದು ನಂಬಿಕೊಂಡು ಮನೆಗೆ ಒಯ್ದು ಹಿಂದು ಸಂಪ್ರದಾಯ ಪ್ರಕಾರ ಅಂತ್ಯಕ್ರಿಯೆ ನಡೆಸಿದ್ದರು. ಆದರೆ, ಕೆಲವು ಸಂಬಂಧಿಕರಿಗೆ ಶವದ ಬಗ್ಗೆ ಸಂಶಯ ಇದ್ದುದರಿಂದ ಪೊಲೀಸರು ಡಿಎನ್ಎ ಪರೀಕ್ಷೆ ನಡೆಸಿದ್ದರು. ಆಗಸ್ಟ್ 5ರಂದು ಡಿಎನ್ಎ ವರದಿ ಬಂದಿದ್ದು,
ಅದು ದೀಪಕ್ ಶವ ಅಲ್ಲ, ಇರ್ಶಾದನದ್ದು ಅನ್ನುವ ವರದಿಯನ್ನು ಕೊಟ್ಟಿದೆ.
ಡಿಎನ್ಎ ವರದಿ ಕೇಳಿದ ಎರಡೂ ಕುಟುಂಬಸ್ಥರು ಶಾಕ್ ಆಗಿದ್ದಾರೆ. ಗಲ್ಫ್ ಉದ್ಯೋಗಿಯಾಗಿದ್ದ ದೀಪಕ್ (28) ಕೋಜಿಕ್ಕೋಡಿನ ಪತ್ತಿಂಕರ ನಿವಾಸಿಯಾಗಿದ್ದು, ಜೂನ್ 7ರಂದು ಊರಿಗೆ ಬಂದಿದ್ದಾಗ ನಾಪತ್ತೆಯಾಗಿದ್ದ. ಈ ಹಿಂದೆಯೂ ಇದೇ ರೀತಿ ದೀಪಕ್ ಒಮ್ಮೆ ನಾಪತ್ತೆಯಾಗಿ ಮರಳಿದ್ದರಿಂದ ಮನೆಯವರು ಹೆಚ್ಚು ಸೀರಿಯಸ್ ಆಗಿರಲಿಲ್ಲ. ಕೊನೆಗೆ ದೀಪಕ್ ಮರಳದೇ ಇದ್ದುದರಿಂದ ತಿಂಗಳ ನಂತರ ಪೊಲೀಸು ಕೇಸು ದಾಖಲಿಸಿದ್ದರು. ಮೇಪಾಯೂರ್ ನಿವಾಸಿಯಾಗಿದ್ದ ಇರ್ಶಾದ್(26) ದುಬೈನಲ್ಲಿದ್ದು ಮೇ 13ರಂದು ಊರಿಗೆ ಬಂದಿದ್ದ. ಜುಲೈ 15ರಂದು ಏನೋ ಕಾರ್ಯ ನಿಮಿತ್ತ ಹೊರಗೆ ಹೋದವನು ನಾಪತ್ತೆಯಾಗಿದ್ದ. ಈ ಬಗ್ಗೆ ಆತನ ಮನೆಯವರು ಜುಲೈ 22ರಂದು ಪೊಲೀಸರಿಗೆ ದೂರು ನೀಡಿದ್ದರು.

ಇದೇ ವೇಳೆ, ಇರ್ಶಾದ್ ನನ್ನು ಗೋಲ್ಡ್ ಸ್ಮಗ್ಲಿಂಗ್ ಗ್ಯಾಂಗ್ ಕಿಡ್ನಾಪ್ ಮಾಡಿತ್ತು ಅನ್ನುವ ಅಂಶ ತಿಳಿಯುತ್ತಲೇ ಪೊಲೀಸರು ಕಾರ್ಯಾಚರಣೆ ನಡೆಸಿದ್ದರು. ಪ್ರಕರಣ ಸಂಬಂಧಿಸಿ ಜಿನಾದ್ ಮೊಹಮ್ಮದ್ ಕುಟ್ಟಿ ಮತ್ತು ಶಾಹಿಲ್ ಹನೀಫ ಎಂಬ ಇಬ್ಬರನ್ನು ಬಂಧಿಸಿ ವಿಚಾರಣೆ ನಡೆಸಿದಾಗ, ಇರ್ಶಾದ್ ಅಪಹರಣ ಸಂದರ್ಭದಲ್ಲಿ ತಪ್ಪಿಸಿಕೊಂಡು ನದಿಯೊಂದಕ್ಕೆ ಹಾರಿದ್ದಾಗಿ ತಿಳಿಸಿದ್ದರು. ಜುಲೈ 15ರಂದು ಪುರಕತ್ತಿರಿ ನದಿಯ ಸೇತುವೆಯಲ್ಲಿ ತೆರಳುತ್ತಿದ್ದಾಗ ವಾಹನದಿಂದ ಹಾರಿ, ನದಿಗೆ ಹಾರಿದ್ದಾಗಿ ಆರೋಪಿಗಳು ತಿಳಿಸಿದ್ದರು. ಆದರೆ, ಇತ್ತ ಆತನ ಶವ ಸಿಗದೇ ಇದ್ದುದರಿಂದ ಆರೋಪಿಗಳು ಸುಳ್ಳು ಹೇಳುತ್ತಿದ್ದಾರೆ, ಇರ್ಶಾದನ್ನು ಇವರು ಸೇರಿ ಕೊಂದಿದ್ದಾರೆಯೋ, ಎಲ್ಲಾದ್ರೂ ಕೂಡಿ ಹಾಕಿದ್ದಾರೆಯೇ ಅನ್ನುವ ಸಂಶಯ ಇದೆಯೆಂದು ಇರ್ಶಾದ್ ಕುಟುಂಬಸ್ಥರು ಪೊಲೀಸರಿಗೆ ಒತ್ತಡ ಹೇರಿದ್ದರು. ಹೀಗಾಗಿ ಪೊಲೀಸರು ಇರ್ಶಾದ್ ಫೋಟೋ ಮುಂದಿಟ್ಟು ಹುಡುಕಾಟ ನಡೆಸಿದ್ದರು.

ಪೊಲೀಸರಿಗೆ ಶಂಕೆ ಇದ್ದುದರಿಂದ ಶವದ ಬಗ್ಗೆ ಇರ್ಶಾದ್ ಹೆತ್ತವರ ಡಿಎನ್ಎ ಜೊತೆಗೆ ತಾಳೆ ಹಾಕಿ ನೋಡಿದ್ದರು. ವರದಿಯಲ್ಲಿ ಕಡಲೂರಿನಲ್ಲಿ ಪತ್ತೆಯಾದ ಶವ ಇರ್ಶಾದನದ್ದೇ ಎಂಬುದು ಬಂದಿತ್ತು. ಇದರೊಂದಿಗೆ ದೀಪಕ್ ಬಗ್ಗೆ ಸಂಶಯ ಹೆಚ್ಚಿಸಿದರೆ, ಆವರೆಗೂ ಇರ್ಶಾದನ ಬಗ್ಗೆ ಹುಡುಕಾಟ ನಡೆಸುತ್ತಿದ್ದ ಕುಟುಂಬಸ್ಥರಿಗೆ ಆತ ಅದಾಗಲೇ ಮೃತಪಟ್ಟಿದ್ದಾನೆ ಅನ್ನೋದು ತಿಳಿದುಬಂದಿತ್ತು. ಇದೀಗ ಡಿಎನ್ಎ ವರದಿ ಬರುತ್ತಲೇ ಪೊಲೀಸ್ ಕಾರ್ಯಾಚರಣೆ ಚುರುಕಾಗಿದೆ. ಪೊಲೀಸರು ಆರೋಪಿಗಳಿಗೆ ಮತ್ತಷ್ಟು ಡ್ರಿಲ್ ಮಾಡಿದ್ದಾರೆ. ಇರ್ಶಾದನ್ನು ಕೊಂದು ಸಮುದ್ರಕ್ಕೆ ಎಸೆದಿದ್ದರೇ ಎನ್ನುವ ಬಗ್ಗೆಯೂ ತನಿಖೆ ಆರಂಭಿಸಿದ್ದಾರೆ. ಪೊಲೀಸರು ಪ್ರಕರಣ ಸಂಬಂಧಿಸಿ ಒಟ್ಟು ನಾಲ್ವರನ್ನು ಬಂಧಿಸಿದ್ದು ಗೋಲ್ಡ್ ಸ್ಮಗ್ಲಿಂಗ್ ವಿಚಾರದಲ್ಲಿ ತನಿಖೆ ನಡೆಸಿದ್ದಾರೆ. ಇರ್ಶಾದ್ ಕುಟುಂಬಸ್ಥರ ಪ್ರಕಾರ, ಜುಲೈ 15ರಂದು ಆತ ವಯನಾಡಿಗೆಂದು ತೆರಳಿದ್ದ. ಆನಂತರ ಫೋನ್ ಸಂಪರ್ಕ ಕಳೆದುಕೊಂಡಿದ್ದನಂತೆ.
ಇದೇ ವೇಳೆ, ದೀಪಕ್ ಕುಟುಂಬಸ್ಥರು ತಮ್ಮ ಮಗ ಎಲ್ಲಿ ಹೋಗಿದ್ದಾನೆ ಎನ್ನುವ ಬಗ್ಗೆ ಪತ್ತೆ ಹಚ್ಚುವಂತೆ ಪೊಲೀಸರಿಗೆ ಒತ್ತಡ ಹೇರಲಾರಂಭಿಸಿದ್ದಾರೆ. ದೀಪಕ್ ತಾಯಿ ತನ್ನ ಮಗನನ್ನು ಹುಡುಕಿ ತರುವಂತೆ ಜಿಲ್ಲಾ ಪೊಲೀಸ್ ವರಿಷ್ಠರನ್ನು ಭೇಟಿಯಾಗಿ ಮನವಿ ಮಾಡಿದ್ದಾರೆ. ಅಂದು ಶವದ ಮುಖ ಪೂರ್ತಿ ಊದಿಕೊಂಡಿದ್ದು, ವಿಚಿತ್ರವಾಗಿದ್ದರಿಂದ ನೀವು ನೋಡಬೇಡಿ ಎಂದು ಸಂಬಂಧಿಕರು ಹೇಳಿದ್ದರು. ಹಾಗಾಗಿ ಮುಖ ನೋಡಲು ಹೋಗಲಿಲ್ಲ. ನಾನು ನೋಡುತ್ತಿದ್ದರೆ ಕಂಡು ಹಿಡಿಯುತ್ತಿದ್ದೆ ಎಂದು ಅಲವತ್ತುಕೊಳ್ಳುತ್ತಾರೆ, ದೀಪಕ್ ತಾಯಿ ಶ್ರೀಲತಾ.
Two young men — Deepak and Irshad — went missing in Kerala’s Kozhikode district within the span of a month. When the semi-decomposed body of a young man was retrieved from the Koyilandy coast on July 17, Deepak’s family identified it as his body and cremated it according to Hindu rituals. However, three weeks later, DNA testing revealed that the body was Irshad’s and not Deepak’s.
05-11-25 06:15 pm
Bangalore Correspondent
ಮಾಜಿ ಸಚಿವ ಎಚ್.ವೈ ಮೇಟಿ ಬೆಂಗಳೂರಿನ ಆಸ್ಪತ್ರೆಯಲ್ಲಿ...
04-11-25 04:38 pm
ಸಚಿವ ಸತೀಶ್ ಜಾರಕಿಹೊಳಿ ದಿಢೀರ್ ದೆಹಲಿಗೆ ; ಕೆಪಿಸಿಸ...
03-11-25 05:17 pm
ಕಣ್ಣೂರಿನ ಪಯ್ಯಂಬಲಂ ಬೀಚ್ ನಲ್ಲಿ ಸಮುದ್ರಕ್ಕಿಳಿದ ಬೆ...
02-11-25 11:09 pm
ಆರೆಸ್ಸೆಸ್ನವರಷ್ಟು ಹೇಡಿಗಳು ಯಾರೂ ಇಲ್ಲ, ಅವರ್ಯಾಕೆ...
01-11-25 09:33 pm
03-11-25 01:13 pm
HK News Desk
ಜೋಧಪುರ ; ಭೀಕರ ರಸ್ತೆ ಅಪಘಾತದಲ್ಲಿ 18 ಜನರು ಸಾವು,...
02-11-25 11:12 pm
ಕೇರಳದಲ್ಲಿ ಮುಸ್ಲಿಮ್ ಮತ್ತು ಕ್ರಿಶ್ಚಿಯನ್ನರಿಗೆ ಒಬಿ...
02-11-25 05:13 pm
ಜೆಡ್ಡಾದಿಂದ ಹೈದರಾಬಾದ್ ಬರುತ್ತಿದ್ದ ವಿಮಾನದಲ್ಲಿ ಬ...
01-11-25 07:27 pm
ಭಾರತದಲ್ಲಿ ಸ್ವತಂತ್ರವಾಗಿದ್ದೇನೆ, ಮತ್ತೆ ಬಾಂಗ್ಲಾದೇ...
30-10-25 03:20 pm
05-11-25 10:48 pm
Mangalore Correspondent
ಮಕ್ಕಳಿಲ್ಲದ ದಂಪತಿಗೆ ವೃದ್ಧಾಪ್ಯದಲ್ಲಿ ಗೃಹ ಭಾಗ್ಯ !...
05-11-25 10:19 pm
ಇಂದಿರಾ ಹೆಗ್ಗಡೆಯವರ ‘ಬಾರಗೆರೆ ಬರಂಬು ತುಳುವೆರೆ ಪುಂ...
05-11-25 07:49 pm
ಅಕ್ರಮ ಗೋಹತ್ಯೆ, ಮಾಂಸಕ್ಕೆ ಬಳಕೆ ; ಆರೋಪಿಯ ಉಳ್ಳಾಲದ...
05-11-25 03:35 pm
ಮಂಗಳೂರು ಕಮಿಷನರ್ ಸುಧೀರ್ ರೆಡ್ಡಿ ಹೆಸರಿನಲ್ಲಿ ನಕಲಿ...
04-11-25 10:51 pm
05-11-25 09:39 pm
Mangalore Correspondent
ಇಪಿಎಫ್ಒ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯಲ್ಲಿ ಭಾರೀ...
05-11-25 05:27 pm
ನಕಲಿ ಷೇರು ಮಾರುಕಟ್ಟೆ ಮೇಲೆ ಹೂಡಿಕೆ ; ಫೇಸ್ಬುಕ್ ಗೆ...
04-11-25 02:11 pm
ಟೋಪಿ ನೌಫಾಲ್ ಕೊಲೆಯಲ್ಲ, ರೈಲು ಡಿಕ್ಕಿ ಹೊಡೆದು ಸಾವು...
03-11-25 12:33 pm
ಶಬರಿಮಲೆ ಅಯ್ಯಪ್ಪ ದೇವಸ್ಥಾನದಲ್ಲಿ ಚಿನ್ನ ಕಳವು ಪ್ರಕ...
01-11-25 07:25 pm