ಬ್ರೇಕಿಂಗ್ ನ್ಯೂಸ್
30-05-22 07:54 pm HK News Desk ಕ್ರೈಂ
ನವದೆಹಲಿ, ಮೇ 30: ಖ್ಯಾತ ಪಂಜಾಬಿ ಸಿಂಗರ್ ಕಂ ಕಾಂಗ್ರೆಸ್ ರಾಜಕಾರಣಿ ಸಿಧು ಮೂಸೇವಾಲನನ್ನು ನಡುಬೀದಿಯಲ್ಲಿ ಕೊಂದು ಹಾಕಿದ್ದು ನಾನೇ ಎಂದು ಅಬ್ಬರಿಸಿದ್ದಾನೆ ಕೆನಡಾದಲ್ಲಿ ಅವಿತು ಕುಳಿತಿರುವ ಗೋಲ್ಡಿ ಬ್ರಾರ್ ಅನ್ನುವ ನಟೋರಿಯಸ್ ಗ್ಯಾಂಗ್ ಸ್ಟರ್. ಇಷ್ಟಕ್ಕೂ ಪಂಜಾಬ್, ಹರ್ಯಾಣ, ದೆಹಲಿಯಲ್ಲಿ ಹರಡಿಕೊಂಡಿರುವ ಗ್ಯಾಂಗ್ ಸ್ಟರ್ ಗಳ ಕತೆಯೇ ರಕ್ತಸಿಕ್ತವಾದ್ದು. ಪಂಜಾಬಿನ ಡ್ರಗ್ಸ್ ಮಾಫಿಯಾ, ಅಲ್ಲಿನ ಸಿನಿಮಾ, ರಾಜಕೀಯಕ್ಕೂ ಈ ಗ್ಯಾಂಗುಗಳಿಗೂ ನೇರ ನಂಟು. ಇದೇ ಕಾರಣಕ್ಕೆ ಅಲ್ಲಿನ ಯಾವುದೇ ಕೊಲೆಗಳಿಗೂ ಒಂದು ಹಿನ್ನೆಲೆ ಇದ್ದೇ ಇರುತ್ತದೆ.
ಸೋಮವಾರ ಸಂಜೆ 4.30ಕ್ಕೆ ಸಿಧು ಮೂಸೇವಾಲ ತನ್ನದೇ ಊರು, ದಿನವೂ ಓಡಾಡುವ ಮಾನ್ಸಾ ನಗರದಲ್ಲಿ ಪಕ್ಷದ ಕಾರ್ಯಕ್ರಮಕ್ಕೆಂದು ಹೋಗುತ್ತಿದ್ದಾಗಲೇ ಎದುರಿನಿಂದ ಎರಡು ಕಾರುಗಳು ಅಡ್ಡಲಾಗಿದ್ದವು. ಮೂಸೇವಾಲ ತಾನೇ ಕಾರು ಚಲಾಯಿಸುತ್ತಿದ್ದ. ಎದುರು ಬದುರಾಗಿ ನಿಂತ ಎರಡು ಕಾರಿನಿಂದ ಇಳಿದುಬಂದಿದ್ದ ಎಂಟು ಮಂದಿ ಗನ್ ಧಾರಿಗಳು ಯದ್ವಾತದ್ವಾ ಗುಂಡು ಹಾರಿಸಿದ್ದರು. ಸಿಧು ಮೂಸೇವಾಲ ಮತ್ತು ಜೊತೆಗಿದ್ದವರು ಕೂಡ ಪ್ರತಿ ದಾಳಿ ನಡೆಸಿದ್ದರು. ಆದರೆ ಸಿಧು ಮೂಸೇವಾಲ ಮತ್ತು ಆತನ ಜೊತೆಗೆ ಕಾರಿನಲ್ಲಿದ್ದ ತಮ್ಮ ಗುರುಪ್ರೀತ್ ಸಿಂಗ್ ಮತ್ತು ನೆರೆಮನೆಯ ನಿವಾಸಿ ಗುರ್ವಿಂದರ್ ಸಿಂಗ್ ಎದುರಾಳಿ ತಂಡದ ಗುಂಡಿನ ದಾಳಿಗೆ ಮಕಾಡೆ ಮಲಗಿದ್ದರು. ಕೂಡಲೇ ಸ್ಥಳಕ್ಕೆ ಪೊಲೀಸರು ಆಗಮಿಸಿದ್ದರು. ದೇಹಕ್ಕೆ ಹತ್ತಕ್ಕೂ ಹೆಚ್ಚು ಗುಂಡು ಹೊಕ್ಕಿಸಿಕೊಂಡಿದ್ದ ಸಿಧು ಮೂಸೇವಾಲ ಸ್ಥಳದಲ್ಲೇ ಸಾವು ಕಂಡಿದ್ದರೆ, ಗುರುಪ್ರೀತ್ ಮತ್ತು ಗುರ್ವಿಂದರ್ ಚಿಂತಾಜನಕ ಸ್ಥಿತಿಯಲ್ಲಿದ್ದು ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದರು.
ಈ ಬಾರಿ ಗುರಿ ಮಿಸ್ ಆಗಲಿಲ್ಲ..!
ಸಿಧು ಮೂಸೇವಾಲ ಸಾವಿನ ಸುದ್ದಿ ಹರಡುತ್ತಲೇ ಅತ್ತ ಕೆನಡಾದಲ್ಲಿ ಕುಳಿತಿದ್ದ ಸತೀಂದರ್ ಸಿಂಗ್ ಯಾನೆ ಗೋಲ್ಡಿ ಬ್ರಾರ್ ತನ್ನದೇ ಫೇಸ್ಬುಕ್ ಪೇಜ್ ನಲ್ಲಿ ಕೊಲೆಯ ಬಗ್ಗೆ ಬರೆದುಕೊಂಡಿದ್ದ. ಇವತ್ತು ಪಂಜಾಬಿನಲ್ಲಿ ಸಿಧು ಮೂಸೇವಾಲ ಕೊಲೆಯಾಗಿದ್ದಾನೆ. ಈ ಹತ್ಯೆಯನ್ನು ಗೋಲ್ಡಿ ಬ್ರಾರ್, ಸಚಿನ್ ಬಿಷ್ಣೋಯ್ ಮತ್ತು ಲಾರೆನ್ಸ್ ಬಿಷ್ಣೋಯ್ ಮಾಡಿಸಿದ್ದೇವೆ. ನಾವೇ ಇದರ ಹೊಣೆ ಹೊತ್ತುಕೊಳ್ಳುತ್ತೇವೆ. ಸಿಧು ಮೂಸೇವಾಲ ಈ ಹಿಂದೆ ಅಕಾಲಿದಳದ ವಿಕ್ರಮ್ ಜಿತ್ ಸಿಂಗ್ ಮಿಡ್ಡುಕೇರ ಮತ್ತು ಗುರ್ಲಾಲ್ ಬ್ರಾರ್ ಕೊಲೆಯಲ್ಲಿ ಆರೋಪಿಯಾಗಿದ್ದ. ಆದರೆ, ದೆಹಲಿ ಮತ್ತು ಪಂಜಾಬ್ ಪೊಲೀಸರ ಮೇಲೆ ಪ್ರಭಾವ ಬೀರಿ ತಾನು ಅರೆಸ್ಟ್ ಆಗದಂತೆ ನೋಡಿಕೊಂಡಿದ್ದ. ಅಂಕಿತ್ ಭಾಡು ಅನ್ನುವಾತನ ಎನ್ಕೌಂಟರ್ ಪ್ರಕರಣದಲ್ಲಿಯೂ ಆತನೇ ಮಾಡಿಸಿದ್ದಾನೆಂಬ ಆರೋಪಗಳಿದ್ದವು. ಪ್ರತಿಬಾರಿ ನಾವು ಹಿಂದೆ ಬಿದ್ದಾಗಲೂ ಕೂದಲೆಳೆಯಲ್ಲಿ ಪಾರಾಗುತ್ತಿದ್ದ. ಈ ಬಾರಿ ಗುರಿ ಮಿಸ್ ಆಗಲಿಲ್ಲ ಎಂದು ಗೋಲ್ಡ್ ಬ್ರಾರ್ ಫೇಸ್ಬುಕ್ ಪೇಜ್ ನಲ್ಲಿ ಬರೆದುಕೊಂಡಿದ್ದಾನೆ.
ಅಕಾಲಿದಳ ಮಿಡ್ಡುಕೇರ ಕೊಲೆಗೆ ಸಂಚು
ಯೂತ್ ಅಕಾಲಿದಳ ನಾಯಕನಾಗಿದ್ದ ವಿಕ್ರಮ್ ಜಿತ್ ಸಿಂಗ್ ಮಿಡ್ಡುಕೇರ, ಪರೀದ್ ಕೋಟ್ ಜಿಲ್ಲೆಯಲ್ಲಿ ವಿಕ್ಕಿ ಮಿಡ್ಡುಕೇರ ಎಂದೇ ಫೇಮಸ್ ಆಗಿದ್ದ. ಆದರೆ, 2021ರ ಆಗಸ್ಟ್ 7ರಂದು ಮಿಡ್ಡುಕೇರನನ್ನು ಕೊಲೆ ಮಾಡಲಾಗಿತ್ತು. ಈ ಕೊಲೆಯನ್ನು ಸಿಧು ಮೂಸೇವಾಲ ತನ್ನ ಮ್ಯಾನೇಜರ್ ಶಗುನ್ ಪ್ರೀತ್ ಸಿಂಗ್ ಗೆ ಹೇಳಿ ಮಾಡಿಸಿದ್ದ ಎನ್ನಲಾಗಿತ್ತು. ದೆಹಲಿ ಮೂಲದ ಕೌಶಲ್ ಗ್ಯಾಂಗಿನ ಹುಡುಗರಿಗೆ ಸುಪಾರಿ ಕೊಟ್ಟು ಶಗುನ್ ಪ್ರೀತ್ ಸಿಂಗ್ ಈ ಕೊಲೆಯನ್ನು ಮಾಡಿಸಿದ್ದ. ಪ್ರಕರಣದಲ್ಲಿ ಸಿಂಗ್ ಹೆಸರು ಕೇಳಿಬರುತ್ತಿದ್ದಂತೆ, ಪಂಜಾಬನ್ನು ಬಿಟ್ಟು ವಿದೇಶಕ್ಕೆ ಪಲಾಯನ ಮಾಡಿದ್ದ. ಆಬಳಿಕ ಪೊಲೀಸರು ಕೌಶಲ್ ಗ್ಯಾಂಗಿನ ಹಲವರನ್ನು ಅರೆಸ್ಟ್ ಮಾಡಿದ್ದರು. ಆದರೆ, ಮಿಡ್ಡುಕೇರ ಕೊಲೆಗೆ ಪ್ರಮುಖ ಸೂತ್ರಧಾರಿ ಎನ್ನಲಾಗಿದ್ದ ಸಿಧು ಮೂಸೇವಾಲ ಆರೋಪಿಗಳ ಲಿಸ್ಟಲ್ಲಿ ತನ್ನ ಹೆಸರು ಬಾರದಂತೆ ನೋಡಿಕೊಂಡಿದ್ದ. ಪೊಲೀಸರು ಬಚಾವ್ ಮಾಡಿದ್ದು ಗೊತ್ತಾಗುತ್ತಲೇ ಗೋಲ್ಡಿ ಬ್ರಾರ್ ಕೊಲೆಗೆ ಸಂಚು ಹಾಕಿದ್ದ.
ಇಷ್ಟಕ್ಕೂ ಯಾರೀತ ಗೋಲ್ಡಿ ಬ್ರಾರ್ ?
ಪಂಜಾಬ್, ಹರ್ಯಾಣ, ದೆಹಲಿ, ರಾಜಸ್ಥಾನ ಭಾಗದಲ್ಲಿ ಅಪರಾಧ ಚಟುವಟಿಕೆಯನ್ನೇ ಕಸುಬಾಗಿಸಿಕೊಂಡು ದೊಡ್ಡ ಗ್ಯಾಂಗ್ ಕಟ್ಟಿಕೊಂಡಿದ್ದವನೇ ಲಾರೆನ್ಸ್ ಬಿಷ್ಣೋಯ್. ಸದ್ಯಕ್ಕೆ ಪ್ರಕರಣ ಒಂದರಲ್ಲಿ ಬಿಷ್ಣೋಯ್ ಅರೆಸ್ಟ್ ಆಗಿದ್ದು ದೆಹಲಿಯ ತಿಹಾರ್ ಜೈಲಿನಲ್ಲಿ ಬಿಗಿ ಭದ್ರತೆಯಲ್ಲಿದ್ದಾನೆ. ಆತನ ಖಾಸಾ ದೋಸ್ತ್ ಮತ್ತು ಪ್ರತಿ ಸಂಚನ್ನೂ ಕಾರ್ಯಗತ ಮಾಡ್ತಿದ್ದೋನು ಸತೀಂದರ್ ಸಿಂಗ್ ಅಲಿಯಾಸ್ ಗೋಲ್ಡಿ ಬ್ರಾರ್. ಪಂಜಾಬಿನಲ್ಲಿ ಡ್ರಗ್ಸ್ ರಾಕೆಟ್, ಹಫ್ತಾ ವಸೂಲಿ, ಗನ್ ಸಪ್ಲೈ ಹೀಗೆ ಹಲವಾರು ಕ್ರಿಮಿನಲ್ ಚಟುವಟಿಕೆಯನ್ನು ತನ್ನದೇ ಗ್ಯಾಂಗ್ ಕಟ್ಟಿಕೊಂಡು ನಡೆಸ್ತಿದ್ದ ಬ್ರಾರ್, ಮೂಲತಃ ಪಂಜಾಬಿನ ಫರೀದ್ ಕೋಟ್ ಜಿಲ್ಲೆಯವನು.
ಪಂಜಾಬಿನ ಲಾರೆನ್ಸ್ ಬಿಷ್ಣೋಯ್ ಮತ್ತು ದೆಹಲಿ ಮೂಲದ ದೇವಿಂದರ್ ಬಾಂಬಿಯಾ ಎರಡು ಗ್ಯಾಂಗ್ ಸ್ಟರ್ ಗಳು ಕಳೆದ ಹಲವಾರು ವರ್ಷಗಳಿಂದಲೂ ಒಬ್ಬರಿಗೊಬ್ಬರು ಕತ್ತಿ ಮಸೆಯುತ್ತಾ ಈ ಭಾಗದಲ್ಲಿ ರಕ್ತಪಾತ ನಡೆಸಿಕೊಂಡು ಬಂದಿದ್ದಾರೆ. ಅರ್ಮೇನಿಯಾದಲ್ಲಿ ಅಡಗಿಕೊಂಡಿರುವ ಪಾತಕಿ ಲಕ್ಕಿ ಪಾಟಿಯಾಲ್ ಹೆಸರಲ್ಲಿ ಬಾಂಬಿಯಾ ಗ್ಯಾಂಗ್ ಕಟ್ಟಿಕೊಂಡಿದ್ದರೆ, ಎದುರಾಗಿ ಲಾರೆನ್ಸ್ ಬಿಷ್ಣೋಯ್ ತನ್ನದೇ ತಂಡ ಕಟ್ಟಿಕೊಂಡಿದ್ದ. ಈಗ ಇವರಿಬ್ಬರೂ ಪೊಲೀಸರಿಗೆ ಸಿಕ್ಕಿಬಿದ್ದು ದೆಹಲಿಯ ಜೈಲಿನಲ್ಲಿದ್ದಾರೆ. ಆದರೆ ಇದರ ನಡುವಲ್ಲೇ ಗೋಲ್ಡಿ ಬ್ರಾರ್ ವಿದೇಶಕ್ಕೆ ಪರಾರಿಯಾಗಿ ಕೆನಡಾದಲ್ಲಿ ಸೆಟ್ಲ್ ಆಗಿದ್ದಾನೆ.
ಕಳೆದ 2021ರ ಜುಲೈನಲ್ಲಿ ಗೋಲ್ಡಿ ಬ್ರಾರ್ ತಮ್ಮನಾಗಿದ್ದ ಗುರ್ಲಾಲ್ ಬ್ರಾರ್ ಎಂಬಾತನ ಕೊಲೆಯಾಗಿತ್ತು. ಲಾರೆನ್ಸ್ ಬಿಷ್ಣೋಯ್ ಸಹಚರನಾಗಿದ್ದ ಗುರ್ಲಾಲ್ ಬ್ರಾರ್ ನನ್ನು ದುಷ್ಕರ್ಮಿಗಳ ತಂಡ ಚಂಡೀಗಢದ ಕೈಗಾರಿಕಾ ಪ್ರಾಂಗಣದಲ್ಲಿ ನಡುಬೀದಿಯಲ್ಲೇ ಹತ್ಯೆ ಮಾಡಿತ್ತು. ಇದರಿಂದ ಕ್ರುದ್ಧನಾಗಿದ್ದ ಗೋಲ್ಡಿ ಬ್ರಾರ್, ಕೊಲೆ ನಡೆದು ವಾರ ಕಳೆಯುವಷ್ಟರಲ್ಲಿ ರಿವೇಂಜ್ ತೀರಿಸಿದ್ದ. ಒಂದೇ ವಾರದ ಅಂತರದಲ್ಲಿ ಫರೀದ್ ಕೋಟ್ ಯೂತ್ ಕಾಂಗ್ರೆಸ್ ಘಟಕದ ನಾಯಕ ಗುರ್ಲಾಲ್ ಪಹಲ್ವಾನನ್ನು ನಡುಬೀದಿಯಲ್ಲೇ ಮುಗಿಸಿದ್ದರು. ಈ ಕೊಲೆ ಕೃತ್ಯದಲ್ಲಿ ಗೋಲ್ಡಿ ಬ್ರಾರ್ ಕೈವಾಡ ಪ್ರಮುಖವಾಗಿತ್ತು. ಗೋಲ್ಡಿಯ ತಮ್ಮ ಗುರ್ಲಾಲ್ ಬ್ರಾರ್ ಹತ್ಯೆಯಲ್ಲಿ ಪ್ರಖ್ಯಾತ ಸಿಂಗರ್ ಮತ್ತು ಕಾಂಗ್ರೆಸ್ ನಲ್ಲಿ ಬೆಳೆಯುತ್ತಿದ್ದ ಸಿಧು ಮೂಸೇವಾಲ ಕೈವಾಡ ಇತ್ತು ಅನ್ನುವ ಗುಮಾನಿಯೂ ಬಿಷ್ಣೋಯ್ ತಂಡಕ್ಕಿತ್ತು. ಈ ಹಿಂದೆ ಮಿಡ್ಡುಕೇರ ಪ್ರಕರಣದಲ್ಲಿ ಬಚಾವ್ ಆಗಿದ್ದ ಸಿಧು ಮೂಸೇವಾಲನನ್ನು ಬಿಷ್ಣೋಯ್ ಗ್ಯಾಂಗ್ ನಡುಬೀದಿಯಲ್ಲೇ ಮುಗಿಸಲು ಸಂಚು ಹೂಡಿತ್ತು.
ಅಂಗರಕ್ಷಕರನ್ನು ಹಿಂಪಡೆದ ಮಾನ್ ಸರ್ಕಾರ
ಇತ್ತೀಚೆಗೆ ಮಾಜಿ ಶಾಸಕರು ಸೇರಿದಂತೆ ಕೆಲವು ನಾಯಕರಿಗೆ ಕೊಡಲಾಗಿದ್ದ ಭದ್ರತಾ ಸಿಬಂದಿಯನ್ನು ಭಗವಂತ್ ಮಾನ್ ಸರಕಾರ ಹಿಂಪಡೆದಿತ್ತು. ಅದರಂತೆ, ಸಿಧು ಮೂಸೇವಾಲನಿಗೂ ಸರಕಾರ ಕೊಟ್ಟಿದ್ದ ಭದ್ರತಾ ಸಿಬಂದಿಯನ್ನು ಹಿಂದೆ ಪಡೆಯಲಾಗಿತ್ತು. ಆಪ್ ಸರಕಾರದ ಈ ನಡೆಗೆ ವ್ಯಾಪಕ ವಿರೋಧವೂ ಕೇಳಿಬಂದಿತ್ತು. ಆದರೆ, ಪೊಲೀಸ್ ಭದ್ರತೆ ಇಲ್ಲದೇ ಸಿಧು ಮೂಸೇವಾಲ ತಿರುಗಾಡಿಕೊಂಡಿದ್ದ. ಎದುರಾಳಿ ತಂಡ ಕೊಲ್ಲಲು ಸಂಚು ಹೂಡಿರುವ ವಿಚಾರ ತಿಳಿದಿದ್ದರೂ, ತನಗೆ ಸಿಖ್ಖರ ಬಗ್ಗೆ ಭಯ ಇಲ್ಲ. ಅವರೇ ನನಗೆ ಭದ್ರತೆ ನೋಡಿಕೊಳ್ಳುತ್ತಾರೆ ಎಂದು ಹೇಳುತ್ತಿದ್ದ. ಆದರೆ, ಇದಕ್ಕಾಗಿಯೇ ಕಾದು ಕುಳಿತಿದ್ದ ಗೋಲ್ಡಿ ಬ್ರಾರ್ ಪ್ರಣೀತ ಗ್ಯಾಂಗ್ ಸದಸ್ಯರು ಮೇ 29ರ ಸಂಜೆಯೇ ಸಿಧು ಮೂಸೇವಾಲನ ಕತೆ ಮುಗಿಸಿದ್ದಾರೆ. ವಿಶೇಷ ಅಂದರೆ, ಇದೇ ಮೊದಲ ಬಾರಿಗೆ ಎಕೆ -94 ಗನ್ ಕೊಲೆ ಕೃತ್ಯಕ್ಕೆ ಬಳಕೆಯಾಗಿದ್ದು ಕಂಡುಬಂದಿದೆ. ಸ್ಥಳದಲ್ಲಿ ಎರಡು ಈ ಮಾದರಿಯ ಗನ್ ಪತ್ತೆಯಾಗಿದ್ದು, ಪೊಲೀಸರು ವಶಕ್ಕೆ ಪಡೆದಿದ್ದಾರೆ.
Canada-based gangster Goldy Brar has claimed responsibility for Sidhu Moose Wala’s murder. The Punjabi singer was shot dead in Jawaharke village of Mansa district on Sunday, May 29. In a Facebook post, Goldy Brar, who is a close associate of gangster Lawrence Bishnoi, claimed responsibility for the attack on Sidhu Moose Wala. Goldy Brar said, “Sachin Bishnoi Dhattaranwali, Lawrence Bishnoi, and I are behind the killing of Sidhu Moose Wala.”
26-08-25 10:47 pm
HK News Desk
ನನ್ನ ಪಕ್ಷ ನಿಷ್ಠೆಯನ್ನು ಪ್ರಶ್ನಿಸುವವರು ಮೂರ್ಖರು ;...
26-08-25 07:07 pm
Dharmasthala, SIT, NIA, Home Minister: ಧರ್ಮಸ್...
26-08-25 06:06 pm
Dharmasthala Case SIT Officer M.N. Anucheth:...
26-08-25 04:48 pm
DK Shivakumar, BBMP, Potholea: ಬೆಂಗಳೂರಿನಲ್ಲಿ...
26-08-25 02:04 pm
26-08-25 09:02 pm
HK News Desk
ಜಮ್ಮು ಭಾರಿ ಮಳೆಗೆ ಒಂಬತ್ತು ಮಂದಿ ಬಲಿ ; ಹಲವೆಡೆ ಭೂ...
26-08-25 07:39 pm
Trump Immigrant Population: ಟ್ರಂಪ್ ಸಾಮ್ರಾಜ್ಯದ...
24-08-25 01:47 pm
Actor Vijay, Thalapathy; ಟಿವಿಕೆ ಮುಖ್ಯಸ್ಥ, ನಟ...
23-08-25 04:58 pm
Mp Brijesh Chowta, Mangalore: ಆನ್ಲೈನ್ ಗೇಮಿಂಗ್...
22-08-25 10:00 pm
26-08-25 10:57 pm
Mangalore Correspondent
Vasanth Giliyar Hate speech, Case: ಬೆಳ್ತಂಗಡಿ...
26-08-25 10:18 pm
Dharmasthala case, Chinmaya, Mahesh Shetty: ದ...
26-08-25 10:36 am
Mangalore, Rushabh Rao: ವಿಯಟ್ನಾಂ ಫ್ಯಾಷನ್ ಶೋ ಸ...
25-08-25 10:59 pm
Mangalore, Esyasoft, AI, Bajpe: ಬಜ್ಪೆ ; ಎಸ್ಯಾ...
25-08-25 10:44 pm
26-08-25 10:39 pm
HK News Desk
ಟೆಕ್ನಾಲಜಿಯಲ್ಲಿ ಮುಂದಿರುವ ಅಮೆರಿಕದ ಪ್ರಜೆಗಳನ್ನೇ ಯ...
26-08-25 05:24 pm
ದುಬೈನಲ್ಲಿ ಗಂಡ, ಮೈಸೂರಿನಲ್ಲಿ ಪತ್ನಿಯ ಲವ್ವಿ ಡವ್ವಿ...
25-08-25 08:29 pm
ಶಿಕ್ಷಣ ಸಚಿವ ಮಧು ಬಂಗಾರಪ್ಪ ಪಿಎ ಹೆಸರಲ್ಲಿ ವಸೂಲಿ ;...
25-08-25 07:42 pm
How Did Pastor John Shamine and Criminal Mada...
25-08-25 07:31 pm