ಬ್ರೇಕಿಂಗ್ ನ್ಯೂಸ್
30-12-21 11:20 am Mangalore Correspondent ಕರಾವಳಿ
ಉಳ್ಳಾಲ, ಡಿ.30 : ಕೋಟೆಕಾರು ಪಟ್ಟಣ ಪಂಚಾಯತ್ ಚುನಾವಣೆಯಲ್ಲಿ ಬಿಜೆಪಿ 11 ಸ್ಥಾನ ಜಯಿಸಿ ಮತ್ತೆ ಬಹುಮತದೊಂದಿಗೆ ಅಧಿಕಾರ ಉಳಿಸಿಕೊಂಡಿದೆ. ಕಾಂಗ್ರೆಸ್ ಹಿಂದಿನ ನಾಲ್ಕು ಸ್ಥಾನಗಳನ್ನೇ ಉಳಿಸಿಕೊಳ್ಳುವುದರಲ್ಲಿ ಯಶಸ್ವಿಯಾದರೆ, ಸಿಪಿಐಎಂ ಇದ್ದ ಒಂದು ಸ್ಥಾನವನ್ನೂ ಕಳಕೊಂಡಿದೆ.
ಕೋಟೆಕಾರು ಗ್ರಾಮ ಪಂಚಾಯತ್ ಪಟ್ಟಣ ಪಂಚಾಯತ್ ಆಗಿ ಮೇಲ್ದರ್ಜೆಗೇರಿದ ಮೇಲೆ ಬಿಜೆಪಿ ಎರಡನೇ ಅವಧಿಯ ಚುನಾವಣೆಯಲ್ಲೂ ಬಹುಮತ ಗಳಿಸಿದೆ. ಬಿಜೆಪಿ ಮತ್ತು ಕಾಂಗ್ರೆಸ್ ಎಲ್ಲಾ 17 ಸ್ಥಾನಗಳಲ್ಲಿ ಸ್ಪರ್ಧಿಸಿದ್ದರೆ, ಎಸ್‍ಡಿಪಿಐ 6 ಸ್ಥಾನಗಳಲ್ಲಿ, ಮೂರು ಕಡೆಗಳಲ್ಲಿ ಪಕ್ಷೇತರರು, ಸಿಪಿಐಎಂ ಅಭ್ಯರ್ಥಿ ಎರಡು ಸ್ಥಾನಗಳಲ್ಲಿ ಸ್ಪರ್ಧೆಯಲ್ಲಿದ್ದರು.

ಕಳೆದ ಬಾರಿಯ ಚುನಾವಣೆಯಲ್ಲಿ ಬಿಜೆಪಿ 9 ಸ್ಥಾನ ಜಯಿಸಿದ್ದರೆ, ಈ ಬಾರಿ 11 ಸ್ಥಾನ ಜಯಿಸಿ ಭರ್ಜರಿ ಬಹುಮತ ಗಳಿಸಿದೆ. ಕಳೆದ ಬಾರಿ 4 ಸ್ಥಾನಗಳನ್ನ ಜಯಿಸಿದ್ದ ಕಾಂಗ್ರೆಸ್ ಅದೇ ನಾಲ್ಕನ್ನು ಉಳಿಸುವಲ್ಲಿ ಯಶಸ್ವಿಯಾಗಿದೆ. ಕಳೆದ ಬಾರಿ ಒಂದು ಸ್ಥಾನ ಜಯಿಸಿದ್ದ ಎಸ್ ಡಿಪಿಐ ಈ ಬಾರಿಯೂ ಒಂದು ಸ್ಥಾನ ಗಳಿಸಿದೆ. ಕಳೆದ ಸಲ ಒಂದು ಸ್ಥಾನ ಗಳಿಸಿದ್ದ ಸಿಪಿಐಎಂ ಮಾತ್ರ ಈ ಬಾರಿ ಶೂನ್ಯ ಸಂಪಾದಿಸಿದೆ.

ಮೂರೇ ಮತಗಳಲ್ಲಿ ಸೋತ ಕಾಂಗ್ರೆಸ್ ಅಭ್ಯರ್ಥಿ
ವಾರ್ಡ್ 13 ಪನೀರ್ ನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಫೀಯಾ ಅವರು ಎಸ್ ಡಿಪಿಐ ನ ಸೆಲಿಮಾಬಿ ಹಸೀನಾ ಶಮೀರ್ ಅವರ ಎದುರು ಕೇವಲ ಮೂರು ಮತಗಳ ಅಂತರದಲ್ಲಿ ಸೋಲು ಅನುಭವಿಸಿದರು. ಇಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಫೀಯಾ 226 ಮತಗಳನ್ನು ಪಡೆದರೆ ವಿಜೇತ ಎಸ್ ಡಿಪಿಐ ಅಭ್ಯರ್ಥಿ ಸೆಲಿಮಾಬಿ ಹಸೀನಾ 229 ಮತಗಳನ್ನು ಪಡೆದು ಅಚ್ಚರಿಯ ಜಯ ಗಳಿಸಿದರು. ಮಂಗಳೂರು ತಾಲೂಕು ಪಂಚಾಯತ್ ನಲ್ಲಿ ಮತ ಎಣಿಕೆ ನಡೆದಿದ್ದು ಬೆಳಿಗ್ಗೆ 10 ಗಂಟೆಗೆ ಫಲಿತಾಂಶ ಹೊರ ಬಿದ್ದಿದೆ. ಡಿ.27ರಂದು ಪಪಂ ಚುನಾವಣೆ ನಡೆದಿತ್ತು.

ವಿಜೇತರ ವಿವರ: ವಾರ್ಡ್ 1: ಅಡ್ಕ ಕಾಳಿಕಾಂಬ - ರಾಘವ ಗಟ್ಟಿ (ಬಿಜೆಪಿ), ವಾರ್ಡ್ 2: ಕನೀರುತೊಟ - ಭವಾನಿ ದೇವದಾಸ್ (ಬಿಜೆಪಿ), ವಾರ್ಡ್ 3: ಮಾಡೂರು - ಸುಜಿತ್ ಮಾಡೂರು(ಬಿಜೆಪಿ), ವಾರ್ಡ್ 4; ಬಲ್ಯ, ಕಿರಣ್ ಕುಮಾರ್ (ಬಿಜೆಪಿ), ವಾರ್ಡ್ 5: ಬಗಂಬಿಲ ಸೈಟ್ - ಪ್ರವೀಣ್ ಬಗಂಬಿಲ (ಬಿಜೆಪಿ), ವಾರ್ಡ್ 6: ವೈದ್ಯನಾಥನಗರ ಬಗಂಬಿಲ - ದಿವ್ಯಾ ಸತೀಶ್ (ಬಿಜೆಪಿ), ವಾರ್ಡ್ 7: ಸುಳ್ಳಂಜೀರು, ಸಂಕೊಳಿಗೆ - ಉದಯ ಕುಮಾರ್ ಶೆಟ್ಟಿ (ಬಿಜೆಪಿ), ವಾರ್ಡ್ 8: ತಾರಿಪಡ್ಪು - ಇಸಾಕ್ (ಕಾಂಗ್ರೆಸ್), ವಾರ್ಡ್ 9: ಶಾರದಾನಗರ - ಅನಿತಾ ನಾರಾಯಣ (ಬಿಜೆಪಿ), ವಾರ್ಡ್ 10: ಕುಶಾಲ್‍ನಗರ - ಧೀರಜ್ ಕುಶಾಲ್‍ನಗರ(ಬಿಜೆಪಿ), ವಾರ್ಡ್ 11 : ಮಡ್ಯಾರ್ - ಹರೀಶ್ ರಾವ್ (ಬಿಜೆಪಿ), ವಾರ್ಡ್ 12: ಜಲಾಲ್ ಭಾಗ್ - ಆಯೇಷಾ ಜಲಾಲ್ ಭಾಗ್ (ಕಾಂಗ್ರೆಸ್), ವಾರ್ಡ್ 13: ಪನೀರ್ - ಸೆಲಿಮಾಬಿ ಹಸೀನಾ ಶಮೀರ್ (ಎಸ್ ಡಿಪಿ ಐ), ವಾರ್ಡ್ 14: ಮಿತ್ರನಗರ - ಜಗದೀಶ ಕೊಂಡಾಣ (ಬಿಜೆಪಿ), ವಾರ್ಡ್ 15: ಕೊಂಡಾಣ - ನವೀನ್ ಕೊಂಡಾಣ (ಬಿಜೆಪಿ), ವಾರ್ಡ್ 16: ಅಜ್ಜಿನಡ್ಕ - ಅಹ್ಮದ್ ಬಾವ ಕೋಟೆಕಾರು (ಕಾಂಗ್ರೆಸ್), ವಾರ್ಡ್ 17: ಕೊಮರಂಗಳ - ಜುಬೈದಾ (ಕಾಂಗ್ರೆಸ್)
BJP recorded victory in both urban local body elections of Kotekar and Kaup. In Kotekar, out of the 17 wards, BJP bagged 11, while Congress, Independent and SDPI got four, one and one seats each respectively. BJP and Congress have retained their seats of 11 and 7 respectively. SDPI also retained its only seat. However, CPIM which had bagged one seat last time did not win any seat this time around. The seat went to Independent candidate.
09-11-25 06:53 pm
Bangalore Correspondent
ಇಪಿಎಫ್ ಸೊಸೈಟಿಯಲ್ಲಿ 70 ಕೋಟಿ ದುರ್ಬಳಕೆ ; ಅಕೌಂಟೆಂ...
09-11-25 03:47 pm
ISIS Terrorists, Umesh Reddy, Parappana Agrah...
08-11-25 10:29 pm
High Court Directs Kalaburagi: ಚಿತ್ತಾಪುರ ಆರೆಸ...
08-11-25 12:38 pm
ಯಾವ ಕ್ರಾಂತಿಯೂ ಆಗಲ್ಲ, ವಾಂತಿಯೂ ಆಗಲ್ಲ.. ನನಗೆ ಸಿದ...
07-11-25 09:59 pm
09-11-25 07:49 pm
HK News Desk
ಮುಸ್ಲಿಂ ವ್ಯಕ್ತಿಯ ಎರಡನೇ ಮದುವೆ ನೋಂದಣಿಗೆ ನಿರಾಕರಣ...
07-11-25 05:21 pm
ಮತಗಳವು ಆರೋಪ ; ರಾಹುಲ್ ವಿರುದ್ಧ ತಿರುಗಿಬಿದ್ದ ಮತದಾ...
07-11-25 11:33 am
'ನವೆಂಬರ್ ಕ್ರಾಂತಿ' ವದಂತಿ ತಳ್ಳಿಹಾಕಿದ ಡಿಸಿಎಂ ; ನ...
06-11-25 10:22 pm
ಐಸಿಸಿ ಮಹಿಳಾ ವಿಶ್ವಕಪ್ ಎತ್ತಿಹಿಡಿದ ಭಾರತದ ವನಿತೆಯರ...
03-11-25 01:13 pm
08-11-25 08:31 pm
Mangalore Correspondent
ಬೆಂಗಳೂರು- ಮಂಗಳೂರು ಹೈಸ್ಪೀಡ್ ಕಾರಿಡಾರ್ ; ಶಿರಾಡ...
07-11-25 10:58 pm
ಕುದ್ರೋಳಿ ಕ್ಷೇತ್ರ ಸ್ಥಾಪಿಸಿದ ಫೆ.21ರಂದು ನಾರಾಯಣ ಗ...
07-11-25 07:23 pm
ಗೋಡಂಬಿ ಉದ್ಯಮಕ್ಕೆ ನೂರು ವರ್ಷ ; ನ.14-16ರಂದು ದೇಶದ...
07-11-25 05:25 pm
ನೆಲ್ಯಾಡಿಯಲ್ಲಿ ಹೊಟೇಲ್ ಉದ್ಯಮ ನಡೆಸುತ್ತಿದ್ದ ಅಭಿಷೇ...
07-11-25 02:18 pm
09-11-25 10:27 pm
Mangalore Correspondent
ಬಹುಕೋಟಿ ವಂಚಕ ರೋಷನ್ ಸಲ್ದಾನಗೆ ಸೇರಿದ 2.85 ಕೋಟಿ ಮ...
09-11-25 03:50 pm
ಕೋಮುದ್ವೇಷದ ಕೊಲೆ ; ಪ್ರತೀಕಾರಕ್ಕೆ ಪ್ರಚೋದಿಸಿ ಇನ್...
08-11-25 11:15 pm
Digital Arrest Scam, Mangalore Online Fraud:...
08-11-25 04:08 pm
ಆರೋಪಿಗೆ ಜಾಮೀನು ನೀಡಲು ಹೋಗಿ ತಾನೇ ತಗ್ಲಾಕ್ಕೊಂಡ !...
07-11-25 11:20 pm