ಬ್ರೇಕಿಂಗ್ ನ್ಯೂಸ್
14-09-21 11:53 am Mangaluru Correspondent ಕರಾವಳಿ
ಮಂಗಳೂರು, ಸೆ.14: ಕಾರವಾರ ಮೂಲದ ಯುವಕ ತನಗೆ ನಿಫಾ ವೈರಸ್ ಶಂಕೆಯಲ್ಲಿ ನಗರದ ವೆನ್ಲಾಕ್ ಆಸ್ಪತ್ರೆಗೆ ದಾಖಲಾಗಿರುವುದನ್ನ ದ.ಕ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ದೃಢಪಡಿಸಿದ್ದಾರೆ. ಆದರೆ, ಆತನಿಗೆ ಯಾವುದೇ ರೋಗ ಲಕ್ಷಣ ಇಲ್ಲ. ಆರೋಗ್ಯವಾಗಿದ್ದಾನೆ. ನಿಫಾ ವೈರಸ್ ಶಂಕೆ ಎಂದು ಕರೆಯುವುದು ಬೇಡ ಎಂದು ಮನವಿ ಮಾಡಿದ್ದಾರೆ.
ಈ ಬಗ್ಗೆ ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿದ ಜಿಲ್ಲಾಧಿಕಾರಿ, ಕಾರವಾರ ಮೂಲದ ಯುವಕನ ಸ್ಯಾಂಪಲ್ ಟೆಸ್ಟ್ ಗೆ ಕಳಿಸಲಾಗಿದೆ. ಯುವಕ ಗೋವಾದಲ್ಲಿ ಆರ್ ಟಿಪಿಸಿಆರ್ ಟೆಸ್ಟ್ ಕಿಟ್ ತಯಾರಿಸುವ ಲ್ಯಾಬ್ನಲ್ಲಿ ಕೆಲಸ ಮಾಡ್ತಿದ್ದ. ಅಲ್ಲಿ ನಿಫಾಗೆ ಸಂಬಂಧಿಸಿದ ಟೆಸ್ಟಿಂಗ್ ಕಿಟ್ ಇಕ್ವಿಪ್ ಮೆಂಟ್ ಇದೆ. ಹಾಗಿದ್ದರೂ ಅಲ್ಲಿಂದ ರಜೆಯಲ್ಲಿ ಕಾರವಾರಕ್ಕೆ ಬಂದ ಮೇಲೆ ಆತನಿಗೆ ಜ್ವರ ಕಾಣಿಸಿಕೊಂಡಿತ್ತು. ಆದ್ರೆ ಆತನಿಗೆ ಯಾವುದೇ ನಿಫಾ ವೈರಸ್ ಸೋಂಕಿನ ಲಕ್ಷಣಗಳಿಲ್ಲ, ಆತ ಸ್ಟೇಬಲ್ ಆಗಿದ್ದಾನೆ. ಆದ್ರೆ ಆತನೇ ಗೂಗಲ್ ನಲ್ಲಿ ಹುಡುಕಾಡಿ ಸಣ್ಣ ಜ್ವರವನ್ನು ನಿಫಾ ಅಂತ ಆತಂಕಕ್ಕೆ ಒಳಗಾಗಿದ್ದಾನೆ. ಆತನ ಲ್ಯಾಬ್ ಸಂಪರ್ಕಿಸಿದಾಗಲೂ ಆತನ ಟ್ರಾವೆಲ್ ಹಿಸ್ಟರಿ ಅಥವಾ ಯಾವುದರಲ್ಲೂ ಆತನಿಗೆ ಸಂಪರ್ಕ ಇರುವುದು ಕಂಡುಬಂದಿಲ್ಲ. ಆದರೆ ಆತನೇ ಸುಮ್ಮನೆ ಆತಂಕಕ್ಕೆ ಒಳಗಾಗಿದ್ದು, ನಮ್ಮಲ್ಲಿ ದಾಖಲಾದ ಬಳಿಕವೂ ಆತಂಕ ವ್ಯಕ್ತಪಡಿಸಿದ್ದಾನೆ.
ಹೀಗಾಗಿ ಅವನ ಆತಂಕದ ಹಿನ್ನೆಲೆಯಲ್ಲಿ ನಾವು ನಿಫಾ ಟೆಸ್ಟ್ ಗೆ ಕಳುಹಿಸಿದ್ದೇವೆ. ಕಳೆದ ಶನಿವಾರ ಸಂಜೆ ಮಂಗಳೂರಿನ ವೆನ್ ಲಾಕ್ ಆಸ್ಪತ್ರೆಗೆ ದಾಖಲಾಗಿದ್ದು ಈತನನ್ನು ಶಂಕಿತ ಅಂತಾನೂ ಹೇಳುವುದು ಸರಿಯಲ್ಲ. ಆತನ ಆತಂಕದ ಹಿನ್ನೆಲೆ ಟೆಸ್ಟ್ ಗೆ ಕಳುಹಿಸಲಾಗಿದೆ ಅಷ್ಟೇ. ಆತನಿಗೆ ನಿಫಾ ಆಗಲೀ, ಯಾವುದೇ ಬೇರೆ ರೋಗದ ಲಕ್ಷಣ ಕೂಡ ಇಲ್ಲ. ಲ್ಯಾಬ್ ನಲ್ಲಿ ಕೆಲಸ ಮಾಡುತ್ತಿದ್ದ ಕಾರಣ ಆತನಿಗೆ ಆತಂಕ ಹೆಚ್ಚಾಗಿದೆ. ಮೊದಲು ಕಾರವಾರ ಆಸ್ಪತ್ರೆಗೆ ಹೋಗಿ ಮಣಿಪಾಲ ಆಸ್ಪತ್ರೆಗೆ ತೆರಳಿ ಅಲ್ಲಿಂದ ಮಂಗಳೂರು ಆಸ್ಪತ್ರೆಗೆ ಬಂದಿದ್ದಾರೆ. ಮಂಗಳೂರು ಆಸ್ಪತ್ರೆಗೆ ದಾಖಲಾದ ಬಳಿಕ ಜ್ವರ, ತಲೆನೋವು ಯಾವುದೂ ಆತನಿಗೆ ಇಲ್ಲ. ಸದ್ಯ ಆ ಯುವಕ ಆರೋಗ್ಯವಾಗಿದ್ದು, ಆತನ ಆತಂಕ ಕಡಿಮೆ ಮಾಡಲು ನಿಫಾ ಟೆಸ್ಟ್ ಗೆ ಕಳುಹಿಸಿದ್ದೇವೆ. ಇವತ್ತು ಅಥವಾ ನಾಳೆಯೊಳಗೆ ನಿಫಾ ಟೆಸ್ಟ್ ರಿಪೋರ್ಟ್ ಬರಲಿದೆ ಎಂದು ಜಿಲ್ಲಾಧಿಕಾರಿ ರಾಜೇಂದ್ರ ತಿಳಿಸಿದ್ದಾರೆ.
ಕಾರವಾರಕ್ಕೆ ಬೈಕ್ ನಲ್ಲಿ ಮಳೆಯಲ್ಲಿ ಬಂದಿದ್ದಾರೆ ಅಂತ ಗೊತ್ತಾಗಿದೆ. ಇದರಿಂದಾಗಿ ಜ್ವರ ಬಂದಿರಬಹುದು. ಪುಣೆಯಿಂದ ನಿಫಾ ವರದಿಯನ್ನು ಆದಷ್ಟು ಬೇಗ ತರಿಸುವ ವ್ಯವಸ್ಥೆ ಆಗಿದೆ. ಅವನ ಮನೆಯವರನ್ನು ಐಸೋಲೇಶನ್ ನಲ್ಲಿ ಇಡಲಾಗಿದೆ. ಅವನು ಸಂಪರ್ಕ ಮಾಡಿದವರನ್ನು ಕೂಡ ಪತ್ತೆ ಹಚ್ಚಲಾಗಿದೆ. ಅವನು ಓಡಾಡಿದ್ದ ಉಡುಪಿ ಮತ್ತು ಕಾರವಾರ ಭಾಗದಲ್ಲಿ ಅಲರ್ಟ್ ಮಾಡಲು ಆರೋಗ್ಯ ಇಲಾಖೆಯಿಂದ ಸೂಚಿಸಲಾಗಿದೆ ಎಂದಿದ್ದಾರೆ.
ಕಾರವಾರ ಮೂಲದ ಯುವಕ ಮಂಗಳೂರಿನಲ್ಲಿ ನಿಫಾ ವೈರಸ್ ಶಂಕೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದಾನೆ ಎಂದು ಸುದ್ದಿಯಾಗಿತ್ತು. ಈ ಬಗ್ಗೆ ಸ್ವತಃ ಜಿಲ್ಲಾಧಿಕಾರಿ ಸ್ಪಷ್ಟನೆ ಕೊಟ್ಟಿದ್ದಾರೆ.
Nipah virus found in patient in Mangalore Dc states nothing to worry as no symptoms are found but sample has been sent to Pune. Giving details Dr Rajendra said, “The concerned person is native of Karwar. He was working in Goa in a RTPCRT test kit manufacturing unit.
03-08-25 10:52 am
HK News Desk
Dharmasthala News, High Court; ಧರ್ಮಸ್ಥಳ ಸುದ್ದ...
01-08-25 11:34 pm
‘Comedy Kiladigalu’, Chandrashekhar Siddi Sui...
01-08-25 10:45 pm
Kannada Producer Ganesh, Film Dharmasthala Fi...
01-08-25 09:09 pm
Rape Case, Prajwal Revanna Verdict : ಮೈಸೂರಿನ...
01-08-25 02:55 pm
03-08-25 04:25 pm
HK News Desk
ಮಾಲೆಗಾಂವ್ ಪ್ರಕರಣದಲ್ಲಿ ಮೋಹನ್ ಭಾಗವತ್ ಬಂಧಿಸುವುದಕ...
01-08-25 10:48 pm
ಭಾರತ, ರಷ್ಯಾದ್ದು ಸತ್ತ ಆರ್ಥಿಕತೆ, ಒಟ್ಟಿಗೇ ನಾಶವಾಗ...
01-08-25 11:44 am
2008ರ ಮಾಲೆಗಾಂವ್ ಸ್ಫೋಟ ಪ್ರಕರಣ ; ಸಾಧ್ವಿ ಪ್ರಜ್ಞ...
31-07-25 10:08 pm
Trump, Modi, Export Tariff: ಸ್ನೇಹಿತ ಎನ್ನುತ್ತಲ...
31-07-25 09:51 am
02-08-25 10:51 pm
Mangalore Correspondent
Kallapu Highway News; ಕಲ್ಲಾಪು ಹೆದ್ದಾರಿಯಲ್ಲಿ ಬ...
02-08-25 03:51 pm
Inspector Manjunath Gowda, SIT, Dharmasthala:...
02-08-25 02:31 pm
Dharmasthala Case, UDR, SIT Police News; ಧರ್ಮ...
02-08-25 01:46 pm
Kerala Comes to Mangalore: Feast at Coral, Th...
02-08-25 01:40 pm
02-08-25 10:04 pm
Giridhar Shettt, Mangaluru
ಪ್ರಜ್ವಲ್ ರೇವಣ್ಣ ಅಪರಾಧಿ ; 14 ವರ್ಷ ಅಲ್ಲ, ಜೀವನಪರ...
02-08-25 07:20 pm
Suhas Shetty Murder, NIA Raid Mangalore: ಸುಹಾ...
02-08-25 04:43 pm
Mangalore CCB Police, Drugs: ಆಂಧ್ರಪ್ರದೇಶದಿಂದ...
01-08-25 05:05 pm
13 ವರ್ಷದ ಬಾಲಕನ ಕಿಡ್ನಾಪ್ ; 5 ಲಕ್ಷ ರೂ. ಹಣ ತರುವಷ...
01-08-25 04:27 pm