ಬ್ರೇಕಿಂಗ್ ನ್ಯೂಸ್
17-04-21 04:06 pm Mangalore Correspondent ಕರಾವಳಿ
ಮಂಗಳೂರು, ಎ.17: ಹಾಸನದಲ್ಲಿ ರೇವ್ ಪಾರ್ಟಿ ಆಯೋಜಿಸಿ ಸಿಕ್ಕಿಬಿದ್ದಿರುವ ಮಂಗಳೂರಿನ ನಾರ್ಕೋಟಿಕ್ ಠಾಣೆಯ ಹೆಡ್ ಕಾನ್ಸ್ ಟೇಬಲ್ ಶ್ರೀಲತಾ ಅವರನ್ನು ಮಂಗಳೂರು ಕಮಿಷನರ್ ಶಶಿಕುಮಾರ್ ಕರ್ತವ್ಯದಿಂದ ಅಮಾನತು ಮಾಡಿದ್ದಾರೆ.

ರೇವ್ ಪಾರ್ಟಿಯಲ್ಲಿ ಸಿಕ್ಕಿಬಿದ್ದ ಶ್ರೀಲತಾ ವಿರುದ್ಧ ಹಾಸನದ ಆಲೂರು ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿತ್ತು. ಆನಂತರ ಹಾಸನ ಎಸ್ಪಿ ಶ್ರೀನಿವಾಸ ಗೌಡ ನೇತೃತ್ವದಲ್ಲಿ ಆರೋಪಿಗಳನ್ನು ತನಿಖೆ ನಡಸಲಾಗಿತ್ತು. ತನಿಖೆ ವೇಳೆ ಶ್ರೀಲತಾ ಮತ್ತು ಆಕೆಯ ಮಗ ಅತುಲ್, ಎಸ್ಟೇಟ್ ಮಾಲೀಕ ಗಗನ್ ಜೊತೆ ವಾರದ ಮೊದಲಿನಿಂದಲೇ ನಿರಂತರ ಸಂಪರ್ಕದಲ್ಲಿದ್ದುದ್ದು ಸಾಬೀತಾಗಿತ್ತು. ಅಲ್ಲದೆ, ರೇವ್ ಪಾರ್ಟಿ ನಡೆಸುವುದಕ್ಕೆ ಸ್ಥಳೀಯ ಪೊಲೀಸರ ಅನುಮತಿಯೂ ಬೇಕಾಗಿ ಬರಲ್ಲ. ಮಂಗಳೂರು ಸಿಸಿಬಿಯಲ್ಲಿ ತಾನು ಎಎಸ್ಐ ಆಗಿದ್ದು ಪ್ರಭಾವ ಹೊಂದಿದ್ದೇನೆ ಎಂದು ಎಸ್ಟೇಟ್ ಮಾಲೀಕನಿಗೆ ಭರವಸೆ ತುಂಬಿದ್ದಳು ಅನ್ನೋ ವಿಚಾರವೂ ತನಿಖೆಯಲ್ಲಿ ಬಯಲಾಗಿದೆ.

ಈ ಬಗ್ಗೆ ಮಾಧ್ಯಮಕ್ಕೆ ಮಾಹಿತಿ ನೀಡಿರುವ ಕಮಿಷನರ್ ಶಶಿಕುಮಾರ್, ಹಾಸನ ಎಸ್ಪಿ ನೇತೃತ್ವದಲ್ಲಿ ನಡೆದಿರುವ ತನಿಖೆಯಲ್ಲಿ ಲೋಪ ಆಗಿರುವುದು ಕಂಡುಬಂದಿದ್ದು, ಸದ್ಯಕ್ಕೆ ಕರ್ತವ್ಯದಿಂದ ಅಮಾನತು ಮಾಡಿದ್ದೇವೆ. ಒಟ್ಟು ಘಟನೆ ಬಗ್ಗೆ ಎಸಿಪಿ ದರ್ಜೆಯ ಅಧಿಕಾರಿಯನ್ನು ನೇಮಿಸಿ, ತನಿಖೆ ನಡೆಸಲಾಗುವುದು. ಆಬಳಿಕ ಮುಂದಿನ ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದ್ದಾರೆ.


ಎ.10ರಂದು ಹಾಸನದ ಆಲೂರು ಠಾಣೆ ವ್ಯಾಪ್ತಿಯ ಹೊಂಗರವಳ್ಳಿ ಎಂಬ ನಿಗೂಢ ತಾಣದಲ್ಲಿ ರೇವ್ ಪಾರ್ಟಿ ಆಯೋಜನೆ ಮಾಡಲಾಗಿತ್ತು. ಮಂಗಳೂರು ಮತ್ತು ಬೆಂಗಳೂರಿನ ಅತಿ ಹೆಚ್ಚು ಮಂದಿ ಪಾರ್ಟಿಯಲ್ಲಿ ಪಾಲ್ಗೊಂಡಿದ್ದರು. ವಿಚಾರ ತಿಳಿದ ಹಾಸನ ಪೊಲೀಸರು ನಸುಕಿನಲ್ಲಿ ದಾಳಿ ಮಾಡಿ, 131 ಮಂದಿಯನ್ನು ವಶಕ್ಕೆ ಪಡೆದಿದ್ದರು. ಈ ವೇಳೆ, ಸಾಕಷ್ಟು ಮಾದಕ ದ್ರವ್ಯಗಳು, ಡ್ರಗ್ಸ್ ಮಾತ್ರೆಗಳು, ಗಾಂಜಾ, ಮದ್ಯದ ಬಾಟಲಿಗಳು ಪತ್ತೆಯಾಗಿದ್ದವು. ಈ ವೇಳೆ, ಮಂಗಳೂರಿನ ಲೇಡಿ ಪೊಲೀಸ್ ಶ್ರೀಲತಾ ಸೇರಿ ನಾಲ್ವರನ್ನು ಪೊಲೀಸರು ಬಂಧಿಸಿದ್ದರು. ಆದರೆ, ಪಾರ್ಟಿ ಆಯೋಜನೆ ಮಾಡಿದ್ದ ಶ್ರೀಲತಾ ಮಗ ಅತುಲ್ ಪೊಲೀಸರ ಕಣ್ಣು ತಪ್ಪಿಸಿ ತಲೆಮರೆಸಿಕೊಂಡಿದ್ದಾನೆ.
ಹಾಸನದಲ್ಲಿ ರೇವ್ ಪಾರ್ಟಿ ; ಮಂಗಳೂರಿನ ಲೇಡಿ ಪೊಲೀಸ್ ಮತ್ತು ಮಗ ಕಿಂಗ್ ಪಿನ್ ! ಪೊಲೀಸ್ ಅರೆಸ್ಟ್, ಮಗ ಎಸ್ಕೇಪ್ !
Mangalore Police commissioners Shashi Kumar has suspended lady Police of Narcotics Srilata for organising Rave Party in Hassan in which more than 120 boys and girls were arrested.
08-10-26 08:00 pm
HK News Staffer
B.Y. Vijayendra: ಸ್ಟಿಂಗ್, ಡಿಂಗ್ ಆಪರೇಷನ್ ಮಾ...
08-10-26 04:38 pm
ಜನಸಾಮಾನ್ಯರು ಅಪಘಾತದಲ್ಲಿ ಸತ್ತರೆ 5 ಲಕ್ಷ ಕೊಡಕ್ಕಾಗ...
07-10-26 10:45 pm
HD Kumaraswamy, DK Shivakumar: ಡಿಕೆಶಿ ಸಿಎಂ ಆಗ...
07-10-26 09:16 pm
ಬೆಂಗಳೂರು ನಗರದಲ್ಲಿ ಐದು ಕಮಿಷನರೇಟ್ ; ವಿಭಜನೆಗೆ ಸಚ...
06-10-26 10:46 pm
11-10-26 10:28 pm
HK News Desk
ರಷ್ಯನ್ ತೈಲಕ್ಕಾಗಿ ಭಾರತಕ್ಕೆ ಬರೆ ಹಾಕಿದ್ದ ಅಮೆರಿಕ...
11-10-26 03:20 pm
ರಿಯಾದ್ ಏರ್ಪೋರ್ಟ್ ಮೇಲೆ ಹೌತಿಗಳಿಂದ ಬಾಂಬ್ ದಾಳಿ ;...
11-10-26 02:34 pm
Elon Musk , Ambani, Modi: ಭಾರತದ ಆತ್ಮೀಯ ಪ್ರಧಾನ...
10-10-26 10:31 pm
ಸಿಇಸಿ ವಿರುದ್ಧ ದೆಹಲಿ, ಮುಂಬೈನಲ್ಲಿ ಭಾರೀ ಪ್ರತಿಭಟನ...
10-10-26 07:33 pm
11-10-26 06:35 pm
HK News Staffer
Someshwar Beach, Mangalore: ಸೋಮೇಶ್ವರದಲ್ಲಿ ಸಮು...
11-10-26 05:37 pm
Mahesh Shetty Thimarodi, Sowjanya Case: ಸೌಜನ್...
10-10-26 09:27 pm
Sowjanya, Mangalore, Justice: ಬೆಳ್ತಂಗಡಿಯಲ್ಲಿ...
10-10-26 09:17 pm
ಕರ್ನಾಟಕ ಕಬಡ್ಡಿ ಪ್ರೀಮಿಯರ್ ಲೀಗ್ ; ಉತ್ತರ ಕನ್ನಡ ಸ...
10-10-26 05:09 pm
10-10-26 02:27 pm
HK News Staffer
ಮೃಗಾಲಯಕ್ಕೆ ಗಂಡನೊಂದಿಗೆ ಬಂದ ನವವಿವಾಹಿತೆ: ಪತಿ ಬೈಕ...
09-10-26 08:41 pm
Dharwad Accident: ಧಾರವಾಡ ; ಕಾರು - ಕ್ಯಾಂಟರ್ ನಡ...
09-10-26 05:37 pm
ಕೊರಿಯರ್ ನಲ್ಲಿ ಪಂಜಾಬಿನಿಂದ ಮಂಗಳೂರಿಗೆ ಎಂಡಿಎಂಎ ಪೂ...
09-10-26 03:25 pm
Nisha Raphael, POCSO: 11 ವರ್ಷದ ಬಾಲಕನ ಮೇಲೆ ಲೈಂ...
09-10-26 03:23 pm