ಬ್ರೇಕಿಂಗ್ ನ್ಯೂಸ್
23-01-26 11:44 am Mangalore Correspondent ಕರಾವಳಿ
ಮಂಗಳೂರು, ಜ 23 : ಕಳೆದ ಒಂದು ವರ್ಷಕ್ಕೂ ಹೆಚ್ಚು ಕಾಲ ಮಂಗಳೂರಿನ ಜನರನ್ನು, ವಿಶೇಷವಾಗಿ ತುಳು ಭಾಷಿಕರನ್ನು ಸೋಶಿಯಲ್ ಮೀಡಿಯಾದಲ್ಲಿ ನಕ್ಕು ನಗಿಸಿದ್ದ ಫೇಮಸ್ ರೀಲ್ಸ್ ಸ್ಟಾರ್ ಆಶಾ ಪಂಡಿತ್ ನಿಧನರಾಗಿದ್ದಾರೆ ಎಂದು ತಿಳಿದು ಬಂದಿದೆ.
ಈ ಬಗ್ಗೆ ಸ್ವತಃ ಅವರ ಇನ್ಸ್‌ಟಾಗ್ರಾಂ ಖಾತೆಯಲ್ಲಿ ಪೋಸ್ಟ್ ಹಾಕಲಾಗಿದ್ದು, ನಿನ್ನೆ ರಾತ್ರಿ ಆಶಾ ಪಂಡಿತ್ ಅವರು ಹೃದಯಾಘಾತದಿಂದ ನಿಧನ ಹೊಂದಿದರು ಎಂದು ವರದಿಯಾಗಿದೆ. ನಿನ್ನೆ ತಡರಾತ್ರಿ ಆಶಾ ಪಂಡಿತ್ ಅವರಿಗೆ ವಾಂತಿ ಸಮಸ್ಯೆ ಉಂಟಾಗಿದ್ದು, ಮನೆಯ ಅಂಗಳದಲ್ಲಿ ಪ್ರಜ್ಞೆ ತಪ್ಪಿ ಕುಸಿದು ಬಿದ್ದಿದ್ದ ಅವರನ್ನು ತಕ್ಷಣವೇ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಅವರು ಅದಾಗಲೇ ಹೃದಯಾಘಾತದಿಂದ ಕೊನೆಯುಸಿರೆಳಿದ್ದರು ಎಂದು ವೈದ್ಯರು ಘೋಷಿಸಿದರು.
ಆಶಾ ಪಂಡಿತ್ ಅವರ ನಿಧನದ ಸುದ್ದಿ ಅವರ ಅಭಿಮಾನಿಗಳಿಗೆ ಅಚ್ಚರಿಯನ್ನುಂಟು ಮಾಡಿದ್ದು, ಈ ಸುದ್ದಿ ನಿಜಕ್ಕೂ ನಂಬೋಕೆ ಸಾಧ್ಯವಿಲ್ಲ ಎಂದು ನೂರಾರು ಜನರು ಅವರ ಪೋಸ್ಟ್‌ನಲ್ಲಿ ಕಾಮೆಂಟ್ ಹಾಕುತ್ತಿದ್ದಾರೆ. ಪ್ರತಿನಿತ್ಯ ಬೈಗುಳದ ಪೋಸ್ಟ್‌ಗಳ ಮೂಲಕವೇ ಜನರನ್ನು ಮನರಂಜಿಸುತ್ತಿದ್ದ ಆಶಾ ಪಂಡಿತ್ ಅವರ ಪೋಸ್ಟ್‌ಗಳಿಗೆ ನಗುತ್ತಾ, ಬೈಯ್ಯುತ್ತಾ ಕಾಮೆಂಟ್ ಹಾಕುತ್ತಿದ್ದ ಜನರು ಇಂದು ಕಣ್ಣೀರಿನ ಕಾಮೆಂಟ್‌ಗಳನ್ನು ಹಾಕುತ್ತಿದ್ದಾರೆ.
ಕನ್ನಡ ಚಿತ್ರನಟಿ ಅಶ್ವಿತಿ ಶೆಟ್ಟಿ ಕೂಡ ಆಶಾ ಪಂಡಿತ್ ಅವರ ಪೋಸ್ಟ್‌ಗೆ ಕಾಮೆಂಟ್ ಹಾಕಿ ಕಂಬನಿ ಮಿಡಿದಿದ್ದಾರೆ, ಅಶ್ವಿತಿ ಶೆಟ್ಟಿ ಅವರು ತಮ್ಮ ಕಾಮೆಂಟ್‌ನಲ್ಲಿ ‘ನನಗೆ ಏನು ಹೇಳಬೇಕು ಅಂತಾನೇ ಗೊತ್ತಾಗ್ತಿಲ್ಲ, ನನಗೆ ಗೊತ್ತಿಲ್ಲದಂತೆ ನನ್ನ ಮುಖದಲ್ಲಿ ನೀವು ನಗು ತರಿಸಿದ್ದೀರಿ, ಈ ಸುದ್ದಿ ಕೇಳಿ ನನಗೆ ತುಂಬಾ ಬೇಸರವಾಯಿತು, ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ’ ಎಂದು ಪೋಸ್ಟ್ ಮಾಡಿದ್ದಾರೆ.
Popular Instagram reels creator Asha Pandit, fondly known as Mangaluru’s “Reels Queen,” passed away following a heart attack, leaving her followers in shock. Known for entertaining Tulu-language comedy videos, her sudden demise has triggered an outpouring of grief from fans and celebrities alike, with many expressing disbelief and sorrow on social media.
12-06-26 12:02 pm
HK News Staffer
ಪದತ್ಯಾಗದ ತರಾತುರಿಯಲ್ಲೇ ಸಿದ್ದರಾಮಯ್ಯ ಕುರುಬ ಸಮುದಾ...
11-06-26 08:31 pm
ಹಳಸಿತೇ ಜಮೀರ್ - ಸಿದ್ದು ಸ್ನೇಹ ಸಂಬಂಧ? ನಿಮ್ಮ ಆಪ್ತ...
11-06-26 07:36 pm
ಮಗು ಕರುಣಿಸಿದ ಪ್ರಕರಣ; ಕೊನೆಗೂ ರಾಜಿ ಸಂಧಾನಕ್ಕಿಳಿದ...
11-06-26 01:53 pm
ಬಿಟ್ಕಾಯಿನ್ ಹಗರಣ ; ಹ್ಯಾರಿಸ್ ನಲಪಾಡ್ ಹೆಸ್ರು ಚಾರ...
10-06-26 10:40 pm
15-06-26 11:18 am
HK News Staffer
ಬಿರಿಯಾನಿ ಹೆಸರಲ್ಲಿ ಮಹಿಳೆಯ ಮಾನ ಕಳೆದ ಟೆಕ್ಕಿ! ತಮಾ...
14-06-26 09:46 pm
ಸಹಕಾರಿ ಬ್ಯಾಂಕುಗಳಲ್ಲಿ ಸರ್ವಾಧಿಕಾರಕ್ಕೆ ಬ್ರೇಕ್ !...
14-06-26 07:17 pm
ಅಸ್ಸಾಂನಲ್ಲಿ 18 ವರ್ಷ ಮೇಲ್ಪಟ್ಟವರಿಗೆ ಆಧಾರ್ ಕಾರ್ಡ...
14-06-26 04:49 pm
ಕೇರಳದಲ್ಲಿ ಜೂನ್ 15ರಿಂದ 'ಪ್ರಿಯದರ್ಶಿನಿ' ಉಚಿತ ಬಸ್...
14-06-26 01:08 pm
15-06-26 04:52 pm
HK News Staffer
ಅಂಬಾನಿ ಕುಟುಂಬದ ಗುರೂಜಿ ಜೊತೆ ಕೊಲ್ಲೂರು ಮೂಕಾಂಬಿಕೆ...
14-06-26 09:47 pm
ದ.ಕ. ಜಿಲ್ಲೆಯ 14 ಪ್ರಮುಖ ರಸ್ತೆ ಅಭಿವೃದ್ದಿ ಕಾಮಗಾರ...
14-06-26 02:37 pm
ಧರ್ಮಸ್ಥಳ ಬುರುಡೆ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್:...
13-06-26 05:28 pm
ಮಧ್ಯರಾತ್ರಿ ಎದೆನೋವಿನಿಂದ ಮನೆಯಲ್ಲೇ ಕುಸಿದು ಬಿದ್ದ...
12-06-26 10:48 pm
15-06-26 09:21 pm
HK News Staffer
ನಿಯಂತ್ರಣ ತಪ್ಪಿ ನಿಲ್ದಾಣದ ಪ್ಲಾಟ್ ಫಾರಂಗೆ ನುಗ್ಗಿ...
15-06-26 08:37 pm
ಕಾರವಾರದ ಕಡ್ಲೆ ಬೀಚ್ನಲ್ಲಿ ರೀಲ್ಸ್ ಮಾಡುಲು ಹೋಗಿ ಅ...
15-06-26 04:54 pm
ಸೋಲಾಪುರದಲ್ಲಿ ಭೀಕರ ದುರಂತ! ನಿಯಂತ್ರಣ ತಪ್ಪಿ ನಾಲೆಗ...
15-06-26 11:50 am
ಧರ್ಮಸ್ಥಳಕ್ಕೆ ತೆರಳಿದ್ದ ಬೆಂಗಳೂರಿನ ಮೂವರು ಯುವಕರು...
15-06-26 11:27 am