ಬ್ರೇಕಿಂಗ್ ನ್ಯೂಸ್
31-12-25 03:35 pm Mangalore Correspondent ಕರಾವಳಿ
ಉಳ್ಳಾಲ, ಡಿ.31 : ಸರಕಾರಿ ಜಮೀನನ್ನ ಅತಿಕ್ರಮಿಸಿ ಅಕ್ರಮವಾಗಿ ಮನೆಗಳನ್ನ ನಿರ್ಮಿಸಿರುವವರ ಪರವಾಗಿ ನಿಂತ ವಿಪಕ್ಷ ನಾಯಕ ಬಡವರು ನಿರ್ಮಿಸಿರುವ ಮನೆಗಳನ್ನ ಕೆಡವಿದರೆ ಪಟ್ಟಣ ಪಂಚಾಯತ್ ಆಡಳಿತಕ್ಕೆ ಶಾಪ ತಟ್ಟುತ್ತದೆಂದು ಅಹವಾಲು ತೋಡಿಕೊಂಡ ಪ್ರಸಂಗ ಕೋಟೆಕಾರು ಪಟ್ಟಣ ಪಂಚಾಯತ್ನ ಸಾಮಾನ್ಯ ಸಭೆಯಲ್ಲಿ ನಡೆದಿದ್ದು, ಅಕ್ರಮ ಮನೆಗಳನ್ನ ನೆಲಸಮಗೊಳಿಸಲು ಮುಂದಾಗಿರುವ ಪಟ್ಟಣ ಪಂಚಾಯತ್ ನಿರ್ಧಾರವನ್ನು ಆಡಳಿತ ಬಿಜೆಪಿ ಪಕ್ಷದ ಸದಸ್ಯರು ಸ್ವಾಗತಿಸಿದ್ದಾರೆ.
ಕೋಟೆಕಾರು ಪಟ್ಟಣ ಪಂಚಾಯತ್ ನಲ್ಲಿ ಮಂಗಳವಾರ ಪಂಚಾಯತ್ ಅಧ್ಯಕ್ಷೆ ದಿವ್ಯಾ ಶೆಟ್ಟಿ ಅಧ್ಯಕ್ಷತೆಯಲ್ಲಿ ಸಾಮಾನ್ಯ ಸಭೆ ನಡೆಯಿತು. ಪಟ್ಟಣ ವ್ಯಾಪ್ತಿಯ ನಡುಕುಮೇರಿನ ಸರಕಾರಿ ಜಾಗದಲ್ಲಿ ಮನೆಗಳನ್ನ ಕಟ್ಟಿ ಕೈಸುಟ್ಟುಕೊಂಡ ಬಡವರಿಗೆ ಅದೇ ಪ್ರದೇಶದಲ್ಲಿ ತಲಾ ಎರಡು ಸೆಂಟ್ಸ್ ನಷ್ಟು ಜಾಗವನ್ನಾದರೂ ಕೊಡಬೇಕು. ಪ.ಪಂ ನಲ್ಲಿ ಜನಪ್ರತಿನಿಧಿಗಳ ಆಡಳಿತವಿಲ್ಲದ ಸಮಯದಲ್ಲಿ ನಡುಕುಮೇರು ಪ್ರದೇಶದಲ್ಲಿ ಪಾರ್ಕ್, ಈಜು ಕೊಳ ನಿರ್ಮಾಣಕ್ಕೆ ಅಧಿಕಾರಿಗಳು ನಿರ್ಣಯ ಮಾಡಿದ್ದರು. ಇಲ್ಲಿ ಈಜು ಕೊಳದ ಆವಶ್ಯಕತೆಯಾದರೂ ಏನಿದೆ. ಈಜು ಕೊಳ ನಿರ್ಮಾಣದ ನೆಪದಲ್ಲಿ ಮಾನವೀಯತೆ ಮರೆತು ಬಡವರು ಕಟ್ಟಿದ ಮನೆಗಳನ್ನ ನೆಲಸಮಗೊಳಿಸಿದರೆ ನಿಮಗೆ ಶಾಪ ತಟ್ಟುತ್ತದೆಂದು ವಿಪಕ್ಷ ನಾಯಕರಾದ ಅಹ್ಮದ್ ಬಾವ ಅಜ್ಜಿನಡ್ಕ ಅವರು ಪಂಚಾಯತ್ ಅಧ್ಯಕ್ಷೆ ದಿವ್ಯಾ ಶೆಟ್ಟಿಯವರಲ್ಲಿ ಅಹವಾಲು ಮಂಡಿಸಿದರು.


ಈ ವೇಳೆ ಮಧ್ಯ ಪ್ರವೇಶಿಸಿದ ಆಡಳಿತ ಪಕ್ಷದ ಸುಜಿತ್ ಮಾಡೂರು ಅವರು ನಡುಕುಮೇರಿನ ಸರಕಾರಿ ಜಾಗದಲ್ಲಿ ಅಕ್ರಮವಾಗಿ ಮನೆಗಳನ್ನ ಕಟ್ಟಿದ ವಿಚಾರದಲ್ಲಿ ಅಧಿಕಾರಿಗಳ ಲೋಪ ಎದ್ದು ಕಾಣುತ್ತಿದೆ. ಪಂಚಾಯತ್ಗೆ ಸೇರಿರುವ ಜಾಗಕ್ಕೆ ಬೇಲಿ ಹಾಕಿ, ಸಿಸಿ ಕ್ಯಾಮೆರಾ ಅಳವಡಿಸಿದರೂ ಅದನ್ನ ಹಾಳುಗೆಡವಿ ಅಕ್ರಮ ಪ್ರವೇಶಗೈದು ಮತ್ತೆ ಮನೆಗಳನ್ನ ನಿರ್ಮಿಸುವವರು ಬಡವರೋ ಅಥವಾ ಇದು ಪಂಚಾಯತ್ ಆಡಳಿತದ ವಿರುದ್ಧ ನಡೆಸಿರುವ ದಬ್ಬಾಳಿಕೆಯೋ ಎಂದು ಆಲೋಚಿಸಬೇಕಿದೆ. ಇಲ್ಲಿನ ಸರಕಾರಿ ಕುಮ್ಕಿ ಜಾಗವನ್ನು ಏಳು ಲಕ್ಷ, ಹದಿಮೂರು ಲಕ್ಷ ಕೊಟ್ಟು ಖರೀದಿಸಿದ ಬಡವರ ಪಟ್ಟಿ ನನ್ನಲ್ಲಿ ಉಂಟು. ಲಕ್ಷಾಂತರ ರೂಪಾಯಿಗಳನ್ನ ಪಡೆದು ಯಾರು ಕುಮ್ಕಿ ಜಾಗ ಮಾರಿದ್ದಾರೋ ಅವರಿಗೆ ಖಂಡಿತ ಶಾಪ ತಟ್ಟುತ್ತದೆ. ಪ್ರದೇಶದಲ್ಲಿರುವ ಕಾರಣೀಕ ಗುಳಿಗ ದೈವದ ಕೋಪ, ಶಾಪವು ಯಾರಿಗೆ ತಟ್ಟುತ್ತದೆಂದು ಸುಜಿತ್ ಅವರು ಅಹ್ಮದ್ ಬಾವರಲ್ಲಿ ಪ್ರಶ್ನಿಸಿದರು. ಅಕ್ರಮ ಮನೆಗಳನ್ನ ನೆಲಸಮ ಮಾಡಲು ಮುಂದಾಗಿರುವ ಪಂಚಾಯತ್ ಆಡಳಿತದ ನಿರ್ಣಯ ಸ್ವಾಗತಾರ್ಹವೆಂದರು.
ಅಧ್ಯಕ್ಷೆ ದಿವ್ಯ ಶೆಟ್ಟಿ ಮಾತನಾಡಿ ಪಂಚಾಯತ್ ಗೆ ಸೇರಿರುವ ಸರಕಾರಿ ನಿವೇಶನದಲ್ಲಿ ಆರಂಭದಲ್ಲಿ ಒಂದು ಅಕ್ರಮ ಮನೆ ನಿರ್ಮಾಣವಾಗಿತ್ತು. ಬಳಿಕ ಪಂಚಾಯತ್ ಕಡೆಯಿಂದ ಪ್ರದೇಶದಲ್ಲಿ ಬೇಲಿ ಮತ್ತು ಎಚ್ಚರಿಕೆಯ ನಾಮಫಲಕ ಹಾಕಿದ ಮೇಲೂ ಮತ್ತೆ ಏಳೆಂಟು ಅಕ್ರಮ ಮನೆಗಳನ್ನ ನಿರ್ಮಿಸಿ ಸಾಕಷ್ಟು ತೊಂದರೆ ನೀಡಲಾಗಿದೆ. ಪಟ್ಟಣದಲ್ಲಿ ಅದೆಷ್ಟೋ ಬಡವರಿಲ್ಲವೇ..? ಬಡವರಾದಲ್ಲಿ ಸರಕಾರಿ ನಿವೇಶನಗಳಿಗೆ ಅರ್ಜಿ ನೀಡಲಿ. ಅದನ್ನ ಬಿಟ್ಟು ಸರಕಾರಿ ಜಾಗವನ್ನ ಅತಿಕ್ರಮಿಸಿ ತಮಗಿಷ್ಟದಂತೆ ಮನೆ ನಿರ್ಮಿಸಿದ್ದು ತಪ್ಪಲ್ಲವೇ ಎಂದು ಖಾರವಾಗಿಯೇ ಪ್ರತಿಕ್ರಿಯಿಸಿದರು. ದೇವರ ಅರಮನೆ ಎಂಬಲ್ಲಿನ 9.5 ಎಕರೆ ಜಮೀನಿನಲ್ಲಿ ತ್ಯಾಜ್ಯ ನಿರ್ವಹಣಾ ಘಟಕ ನಿರ್ಮಾಣ ವಿಚಾರದ ಆಕ್ಷೇಪಣಾ ವ್ಯಾಜ್ಯವು ನ್ಯಾಯಾಲಯದಲ್ಲಿದ್ದು, ಆ ಜಮೀನನ್ನು ತ್ಯಾಜ್ಯ ನಿರ್ವಹಣಾ ಘಟಕದ ಬದಲು ನಿವೇಶನರಹಿತರಿಗೆ ನೀಡೋಣವೆಂದು ದಿವ್ಯಾ ಶೆಟ್ಟಿ ತಿಳಿಸಿದರು.
ಪಂಚಾಯತ್ಗೆ 27 ಲಕ್ಷ ರೂ. ನೀರಿನ ಬಿಲ್ ಬರಲು ಬಾಕಿ ಇದ್ದು,ಬಿಲ್ ಬಾಕಿ ಇರಿಸಿದವರಿಗೆ ನೋಟೀಸು ಯಾಕೆ ಮಾಡಿಲ್ಲ. ಶ್ರೀಮಂತರೆ ಹತ್ತು, ಇಪ್ಪತ್ತು ಸಾವಿರ ರೂಪಾಯಿ ಬಿಲ್ ಬಾಕಿ ಉಳಿಸಿದ್ದು ಹೀಗಾದರೆ ಅಭಿವೃದ್ಧಿ ಹೇಗೆ ಸಾಧ್ಯ. ಡೋರ್ ನಂಬರ್ ಇಲ್ಲದೆಯೆ ಆಧಾರ್ ಇನ್ನಿತರ ದಾಖಲೆ ಆಧಾರದಡಿ 150ಕ್ಕೂ ಹೆಚ್ಚು ಮನೆಗಳಿಗೆ ನೀರು ಸಂಪರ್ಕ ನೀಡಲಾಗಿದೆ. ಅವರೆಲ್ಲ ಅದನ್ನ ಬಿಟ್ಟು ಹೊಸ ಸಂಪರ್ಕ ಪಡೆದು ಹಿಂದಿನ ಪೈಪ್ ಲೈನ್ ಸಂಪರ್ಕ ನಮ್ಮದಲ್ಲವೆಂದು ಬಿಲ್ ಬಾಕಿ ಇಟ್ಟಿದ್ದಾರೆ. ಇದರ ಬಗ್ಗೆ ಸಮಗ್ರ ಪರಿಶೀಲನೆ ನಡೆಸಬೇಕಿದೆ. ಬಿಲ್ ಕಟ್ಟದ ಮನೆಗಳ ಕಸ ಸಂಗ್ರಹವನ್ನೂ ಸ್ಥಗಿತಗೊಳಿಸಬೇಕಿದೆಯೆಂದು ಸುಜಿತ್ ಮಾಡೂರು ಸಭೆಯಲ್ಲಿ ಆಗ್ರಹಿಸಿದರು. ಪ.ಪಂ ಉಪಾಧ್ಯಕ್ಷರಾದ ಪ್ರವೀಣ್ ಬಗಂಬಿಲ, ಸ್ಥಾಯಿ ಸಮಿತಿ ಅಧ್ಯಕ್ಷರಾದ ಉದಯ ಕುಮಾರ್ ಶೆಟ್ಟಿ, ಮುಖ್ಯಾಧಿಕಾರಿ ಮಾಲಿನಿ ಉಪಸ್ಥಿತರಿದ್ದರು.
A heated debate erupted at the Kotekar Town Panchayat meeting after Opposition leader Ahmed Bava opposed the demolition of homes built illegally on government land, urging rehabilitation for poor families. BJP members backed the administration’s decision to clear the encroachments, accusing repeated violations despite fencing and warnings.
31-12-25 02:35 pm
Bangalore Correspondent
ಧಾರವಾಡದ ಕೃಷಿ ವಿಶ್ವವಿದ್ಯಾಲಯಕ್ಕೆ ಚಕ್ರವರ್ತಿ ಸೂಲಿ...
30-12-25 11:12 pm
ಬಯೋಕಾನ್ ಕಂಪನಿ ಟೆಕ್ಕಿ ಆಫೀಸ್ ಕಟ್ಟಡದ ಆರನೇ ಮಹಡಿಯಿ...
30-12-25 10:14 pm
ವ್ಯವಸ್ಥಾಪನಾ ಸಮಿತಿ ಸದಸ್ಯರನ್ನು ವಜಾಗೊಳಿಸುವ ಅಧಿಕಾ...
30-12-25 06:34 pm
ಪ್ರಿಯಾಂಕ ಗಾಂಧಿ ಪುತ್ರ ರೈಹಾನ್ ಮದುವೆ ನಿಶ್ಚಿತಾರ್ಥ...
30-12-25 05:44 pm
30-12-25 06:48 pm
HK News Desk
ಹಿಂದುಗಳ ಮನೆ ಸುಡುತ್ತಿದ್ದರೆ ಮಹಮ್ಮದ್ ಯೂನಸ್ ಕೊಳಲು...
30-12-25 03:32 pm
ರಸ್ತೆ ಬದಿ ನಮಾಜ್ ಮಾಡುತ್ತಿದ್ದ ಪ್ಯಾಲೆಸ್ತೀನ್ ವ್...
27-12-25 04:29 pm
ನಮ್ಮನ್ನಿಲ್ಲಿ ಬದುಕಲು ಬಿಡುತ್ತಿಲ್ಲ, ಗಡಿಯನ್ನು ತೆರ...
27-12-25 01:46 pm
ತಿರುವನಂತಪುರಂ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ಮೇಯರ್...
26-12-25 09:41 pm
31-12-25 03:35 pm
Mangalore Correspondent
ಶೀಘ್ರದಲ್ಲೇ ಸ್ಕ್ಯಾನ್ ಜೆಟ್ ವಿಮಾನ ಸೇವೆ ; ವಿಜಯ್ ಮ...
31-12-25 11:47 am
ಹೊಸ ವರ್ಷಾಚರಣೆ ; ಕಾರ್ಯಕ್ರಮಕ್ಕೆ ಪೂರ್ವಾನುಮತಿ ಅಗತ...
30-12-25 10:43 pm
ಯುವತಿಗೆ ಮಗು ಕರುಣಿಸಿದ ಪ್ರಕರಣ ; ಬಿಜೆಪಿಯಿಂದ ಜಗನ್...
29-12-25 11:03 pm
Punjalkatte Crash: ಪುಂಜಾಲಕಟ್ಟೆ ; ಪೊಲೀಸ್ ಸಿಬಂದ...
29-12-25 08:47 pm
30-12-25 10:40 pm
Mangalore Correspondent
ಬ್ರಹ್ಮರಕೂಟ್ಲು ಟೋಲ್ ಗೇಟ್ ಸಿಬ್ಬಂದಿಗಳಿಗೆ ಹಲ್ಲೆ ;...
30-12-25 12:42 pm
ಯೆಯ್ಯಾಡಿ ಬಳಿ ನಡೆದು ಹೋಗುತ್ತಿದ್ದ ಮಹಿಳೆಯ ಕರಿಮಣಿ...
29-12-25 03:02 pm
ಬೆಂಗಳೂರಿನಲ್ಲಿ ಮೂರು ಡ್ರಗ್ಸ್ ಫ್ಯಾಕ್ಟರಿ ಮೇಲೆ ಮ...
29-12-25 02:07 pm
ಮೈಸೂರಿನಲ್ಲಿ ಹಾಡಹಗಲೇ ಜುವೆಲ್ಲರಿ ಅಂಗಡಿಗೆ ನುಗ್ಗಿ...
28-12-25 05:19 pm