ಮನೆ ಕಂಪೌಂಡ್ ಹೊರಗೆ ನಿಲ್ಲಿಸಿದ್ದ ಆಟೋ ರಿಕ್ಷಾ ಕಳವು ; ಖದೀಮನನ್ನ ಬಂಧಿಸಿ ರಿಕ್ಷಾ ವಶಕ್ಕೆ ಪಡೆದ ಉಳ್ಳಾಲ ಪೊಲೀಸರು 

28-12-25 09:12 pm       Mangalore Correspondent   ಕರಾವಳಿ

ಉಳ್ಳಾಲ ಠಾಣೆ ವ್ಯಾಪ್ತಿಯ ಚೀರುಂಭ ಭಗವತಿ ಕ್ಷೇತ್ರದ ರಸ್ತೆಯಲ್ಲಿ ನಿಲ್ಲಿಸಿದ್ದ ಆಟೋ ರಿಕ್ಷಾವನ್ನ ಕಳವುಗೈದ ಖದೀಮನನ್ನ ಉಳ್ಳಾಲ ಪೊಲೀಸರು ಬಂಧಿಸಿದ್ದು, ಕಳವಾದ ಆಟೋ ರಿಕ್ಷಾವನ್ನ ವಶಕ್ಕೆ ಪಡೆದಿದ್ದಾರೆ. ಉಳ್ಳಾಲ ಅಕ್ಕರೆಕೆರೆ, ಪಟೇಲ್ ಕಂಪೌಂಡ್ ನಿವಾಸಿ ಮಹಮ್ಮದ್ ಶಾಝಿಲ್ (29) ಬಂಧಿತ ಆರೋಪಿಯಾಗಿದ್ದಾನೆ.

ಉಳ್ಳಾಲ, ಡಿ.28 : ಉಳ್ಳಾಲ ಠಾಣೆ ವ್ಯಾಪ್ತಿಯ ಚೀರುಂಭ ಭಗವತಿ ಕ್ಷೇತ್ರದ ರಸ್ತೆಯಲ್ಲಿ ನಿಲ್ಲಿಸಿದ್ದ ಆಟೋ ರಿಕ್ಷಾವನ್ನ ಕಳವುಗೈದ ಖದೀಮನನ್ನ ಉಳ್ಳಾಲ ಪೊಲೀಸರು ಬಂಧಿಸಿದ್ದು, ಕಳವಾದ ಆಟೋ ರಿಕ್ಷಾವನ್ನ ವಶಕ್ಕೆ ಪಡೆದಿದ್ದಾರೆ. ಉಳ್ಳಾಲ ಅಕ್ಕರೆಕೆರೆ, ಪಟೇಲ್ ಕಂಪೌಂಡ್ ನಿವಾಸಿ ಮಹಮ್ಮದ್ ಶಾಝಿಲ್ (29) ಬಂಧಿತ ಆರೋಪಿಯಾಗಿದ್ದಾನೆ.

ಉಳ್ಳಾಲ ಚೀರುಂಭ ಭಗವತಿ ರಸ್ತೆಯ ನಿವಾಸಿ ನರೇಂದ್ರ ಕುಮಾರ್ ಎಂಬವರು ತಮ್ಮ ಮನೆಯ ಕಂಪೌಂಡಿನ ಹೊರಗಿನ ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಬಜಾಜ್ ಕಂಪನಿಯ ಆಟೋ ರಿಕ್ಷಾ ಕಳೆದ ಡಿ.13 ರ ರಾತ್ರಿ ಕಳವಾಗಿತ್ತು. ಅಂದಾಜು 1,92,000 ಬೆಲೆಯ ರಿಕ್ಷಾ ಮತ್ತು ಅದರಲ್ಲಿದ್ದ ಅಮೂಲ್ಯ ದಾಖಲೆಗಳೂ ಕಳವಾಗಿರುವ ಬಗ್ಗೆ ನರೇಂದ್ರ ಕುಮಾರ್ ಡಿ.19 ರಂದು ಉಳ್ಳಾಲ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ತನಿಖೆ ಕೈಗೆತ್ತಿಕೊಂಡ ಉಳ್ಳಾಲ ಪೊಲೀಸರು ಕಲ್ಲಾಪು ಪಟ್ಲ ಎಂಬಲ್ಲಿ ಆರೋಪಿ ಶಾಝಿಲ್ ನನ್ನು ಬಂಧಿಸಿದ್ದು, ಕಳವುಗೈದ ಆಟೋ ರಿಕ್ಷಾವನ್ನ ವಶಕ್ಕೆ ಪಡೆದಿದ್ದಾರೆ. ಬಂಧಿತ ಶಾಝಿಲ್ ಉಳ್ಳಾಲ ಠಾಣೆಯಲ್ಲಿ ಹಳೆಯ ಪ್ರಕರಣದ ಆರೋಪಿಯಾಗಿದ್ದಾನೆ.

Ullal Police have arrested a man involved in stealing an auto rickshaw that was parked outside a house in Chembugudde Bhagavathi Kshetra Road. The accused, Mohammed Shazil (29) from Akkarekare–Patel Compound, was caught at Kallapu Patla, and the stolen Bajaj auto rickshaw worth ₹1,92,000—along with important documents—was recovered.