ಬ್ರೇಕಿಂಗ್ ನ್ಯೂಸ್
30-12-20 03:33 pm Mangalore Correspondent ಕರಾವಳಿ
ಮಂಗಳೂರು, ಡಿ.30: ಅಂಗಡಿ ಮುಂದೆ ಬೈಕ್ ನಿಲ್ಲಿಸಿದ ಕಾರಣಕ್ಕಾಗಿ ಬೈಕ್ ಸವಾರನ ಮೇಲೆ ವ್ಯಾಪಾರಿಗಳಿಬ್ಬರು ಸೇರಿ ದೊಣ್ಣೆಯಲ್ಲಿ ಹಲ್ಲೆ ನಡೆಸಿದ ಘಟನೆ ಕಿನ್ನಿಗೋಳಿಯಲ್ಲಿ ನಡೆದಿದೆ.
ಬೈಕ್ ಪಾರ್ಕ್ ಮಾಡಿದ ವಿಚಾರದಲ್ಲಿ ವಾಗ್ವಾದ ನಡೆದಿದೆ. ಬೈಕ್ ಸವಾರ ಯಾಕೆ ಇಲ್ಲಿ ಪಾರ್ಕ್ ಮಾಡಬಾರದಾ.. ಇದು ಸರಕಾರಿ ಜಾಗ. ನಿಮ್ಮ ಖಾಸಗಿ ಜಾಗ ಅಲ್ಲ. ರಸ್ತೆ ಬದಿಯ ಸರಕಾರಿ ಜಾಗದಲ್ಲಿ ಪಾರ್ಕ್ ಮಾಡಿದರೆ ನಿಮ್ಮ ಅಡ್ಡಿಯೇನು ಎಂದು ಪ್ರಶ್ನೆ ಮಾಡಿದ್ದಾರೆ. ಇದರಿಂದ ಕ್ರುದ್ಧರಾದ ಅಂಗಡಿಯ ಮಾಲಕರಿಬ್ವರು ಉದ್ದಗಿನ ಬೆತ್ತದಲ್ಲಿ ಹಲ್ಲೆ ನಡೆಸಿದ್ದಾರೆ. ಹೀಗೆ ಹಲ್ಲೆ ನಡೆಸಿದ್ದನ್ನು ಸಾರ್ವಜನಿಕರು ಮೊಬೈಲಿನಲ್ಲಿ ವಿಡಿಯೋ ಮಾಡಿದ್ದಾರೆ. ವಿಡಿಯೋ ಜಾಲತಾಣದಲ್ಲಿ ವೈರಲ್ ಆಗಿದೆ. ]
ಘಟನೆ ನಡೆಯುತ್ತಿದ್ದಂತೆ ಜನ ಸೇರಿದ್ದು ಸಾರ್ವಜನಿಕರು ಅಂಗಡಿ ಮುಂದೆ ಜಮಾಯಿಸಿ ಹಲ್ಲೆ ನಡೆಸಿದ್ದ ವ್ಯಾಪಾರಿಗಳ ವಿರುದ್ದ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದೇ ಜಾಗದಲ್ಲಿ ಅನೇಕ ಬಾರಿ ಪಾರ್ಕ್ ವಿಚಾರದಲ್ಲಿ ಹಲ್ಲೆ ಮಾಡಲು ಮುಂದಾಗಿರುವ ಘಟನೆಗಳು ಈ ಹಿಂದೆಯೂ ನಡೆದಿದ್ದು ಬೈಕ್ ಚಾಲಕರಿಗೆ ಹಲ್ಲೆ, ನಿಲ್ಲಿಸಿದ್ದ ಬೈಕ್ ಗಳ ಚಕ್ರಕ್ಕೆ ಹಾನಿಗೊಳಿಸುವುದು, ಹಲ್ಲೆಯತ್ನ ಘಟನೆಗಳು ನಡೆದಿದೆ ಎಂದು ಸ್ಥಳೀಯರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಜಾಗ ಸರ್ಕಾರದಲ್ಲ. ನಮ್ಮ ಖಾಸಗಿ ಜಾಗ ಎಂದು ವ್ಯಾಪಾರಿಗಳು ವಾದಿಸುತ್ತಿದ್ದು ಹೊರಗಿನ ಯಾವುದೇ ವ್ಯಕ್ತಿಗಳು ಬಂದು ಪಾರ್ಕ್ ಮಾಡಿದ್ರೂ ತಕರಾರು ಸಾಮಾನ್ಯ ಅನ್ನುವಂತಾಗಿದೆ. ಘಟನೆ ಹಿನ್ನೆಲೆಯಲ್ಲಿ ಭಾರೀ ಜನ ಸೇರಿದ್ದು ಮೂಲ್ಕಿ ಠಾಣಾ ಪೊಲೀಸರು ಸ್ಥಳಕ್ಕೆ ಆಗಮಿಸಿ ದೂರು ದಾಖಲಿಸಿದ್ದಾರೆ.
ಪೆಟ್ಟು ತಿಂದ ವ್ಯಕ್ತಿ ಬಿಜೆಪಿ ಕಾರ್ಯಕರ್ತ ಎನ್ನಲಾಗುತ್ತಿದ್ದು ಮೂಲ್ಕಿ ಠಾಣೆಯಲ್ಲಿ ಕೇಸು ದಾಖಲಿಸಿದ್ದಾರೆ.
Video:
A BJP Member was assaulted by Duo for Parking Bike in front of the shop in Kinnigoli, Mangalore. Mulki police have registered the case. A video of this has gone viral on social media.
10-05-25 11:30 am
HK News Desk
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
U T Khader, Dinesh Gundurao, Suhas Shetty Mur...
08-05-25 07:50 pm
Karwar high alert: ಕಾರವಾರದಲ್ಲಿ ಹೈ ಎಲರ್ಟ್ ; ಸಮ...
08-05-25 12:23 pm
Special Poojas, Indian Army, Minister Ramalin...
07-05-25 04:07 pm
09-05-25 06:49 pm
HK News Desk
India Pak War: ಭಾರತ ವಾಯುಪಡೆಯಿಂದ ಭೀಕರ ಪ್ರತಿದಾಳ...
09-05-25 12:33 pm
India - Pak War update: ಪಾಕಿಸ್ತಾನದ ಎಫ್ -16, ಎ...
09-05-25 12:00 am
New Pope, Robert Francis Prevost;140 ಕೋಟಿ ಸದಸ...
08-05-25 11:44 pm
Pak drone-missile attack; ಚೈನಾ ಮೇಡ್ ಲಾಹೋರ್ ಏರ...
08-05-25 04:57 pm
09-05-25 11:07 pm
Mangalore Correspondent
Mangalore University, U T Khader, Syndicate M...
09-05-25 06:22 pm
Resham Bariga, Belthangady, Indo Pak War, Ant...
09-05-25 03:24 pm
Suhas Shetty Murder Case, Speaker UT Khader,...
09-05-25 01:32 pm
Ullal accident, Mangalore: ರಸ್ತೆ ದಾಟುತ್ತಿದ್ದ...
08-05-25 10:54 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm