ಬ್ರೇಕಿಂಗ್ ನ್ಯೂಸ್
09-12-25 07:30 pm HK News Desk ಕರಾವಳಿ
ಮಂಗಳೂರು, ಡಿ.9: ಮಹಾನಗರ ಪಾಲಿಕೆ ಮತ್ತು ಮೂಡಾ ಅಧಿಕಾರಿಗಳು ಅಡ್ಜಸ್ಟ್ ಮಾಡಿಕೊಂಡರೆ ಬಿಲ್ಡರುಗಳು ಕಾಲುವೆಯನ್ನೂ ನುಂಗುತ್ತಾರೆ, ರಸ್ತೆಯನ್ನೂ ನುಂಗಿ ಬಿಡುತ್ತಾರೆ ಎನ್ನುವುದಕ್ಕೆ ನಗರದ ಬಿಜೈನಲ್ಲಿ ಜ್ವಲಂತ ನಿದರ್ಶನ ಸಿಗುತ್ತದೆ. ನಗರದ ಬಿಜೈ ನ್ಯೂರೋಡ್ ನಲ್ಲಿ ಕಟ್ಟಡ ನಿರ್ಮಾಣದ ಉದ್ಯಮಿಯೊಬ್ಬರು ಕಾನೂನನ್ನು ಗಾಳಿಗೆ ತೂರಿ ನೀರು ಹರಿಯುವ ತೋಡು ಮತ್ತು ರಸ್ತೆಯನ್ನು ಅತಿಕ್ರಮಿಸಿ ಐದು ಅಂತಸ್ತಿನ ಅಪಾರ್ಟ್ಮೆಂಟ್ ಕಟ್ಟುತ್ತಿದ್ದಾರೆ.
ಈ ಬಗ್ಗೆ ಸಾಮಾಜಿಕ ಕಾರ್ಯಕರ್ತರಾದ ಕೋಲಿನ್ ಡಿಸಿಲ್ವ ಮತ್ತು ಅಜಯ್ ಕ್ರಿಸ್ಟೋಫರ್ ಡಿಸಿಲ್ವ ಅವರು ಮಹಾನಗರ ಪಾಲಿಕೆ, ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ದೂರು ನೀಡಿದ್ದಾರೆ. ಕೊಡಿಯಾಲಬೈಲ್ ಗ್ರಾಮದ ಸರ್ವೆ ನಂಬ್ರ 36-1ಬಿ, 36-11ಬಿ ಮತ್ತು 36-11ಬಿ-2 15 ಸೆಂಟ್ಸ್ ಜಾಗವನ್ನು ನೆಲ್ಸನ್ ಸ್ಟೀವನ್ ಕಿರೋನ್ ಸಿರೂರ್ ಎಂಬವರು ಡಿವೈನ್ಸ್ ಹೋಮ್ಸ್ ಬಿಲ್ಡರ್ ಲವೀನಾ ಮಿನೇಜಸ್ ಅವರಿಗೆ ಮಾರಾಟ ಮಾಡಿದ್ದು, 2013ರಲ್ಲಿ ಈ ಜಾಗದ ನಕ್ಷೆಯಲ್ಲಿ ಒಂದು ಬದಿಗೆ ಮೂರು ಮೀಟರ್ ತೋಡು ಇರುವುದನ್ನು ತೋರಿಸಲಾಗಿತ್ತು. ಅಲ್ಲದೆ, ರಸ್ತೆಯ ಭಾಗದಲ್ಲಿ ಎರಡು ಮೀಟರ್ ಸರಕಾರಿ ಜಾಗ ಇರುವುದನ್ನೂ ತೋರಿಸಲಾಗಿತ್ತು. ಆದರೆ ಈ ನಕ್ಷೆಯನ್ನು 2022ರಲ್ಲಿ ಬದಲಿಸಲಾಗಿದ್ದು ತೋಡನ್ನು ಅತಿಕ್ರಮಿಸಿ ಒಂದೂವರೆ ಮೀಟರ್ ಎಂದು ತೋರಿಸಲಾಗಿದೆ. ಎದುರಲ್ಲಿದ್ದ ರಸ್ತೆಯ ಭಾಗವನ್ನೂ ಅತಿಕ್ರಮಿಸಿ ಜಾಗದ ನಕ್ಷೆಗೆ ಸೇರಿಸಿಕೊಳ್ಳಲಾಗಿದೆ.






ಸರ್ವೆ ಇಲಾಖೆಯ ಸರ್ವೆಯರ್ ಮನ್ಸೂರ್, ಸರ್ವೆ ಸುಪರ್ ವೈಸರ್ ಮಂಜುನಾಥ್, ಮೂಡಾ ಟೌನ್ ಪ್ಲಾನರ್ ರಘು ಎಂಬವರು ಬಿಲ್ಡರುಗಳ ಜೊತೆ ಸೇರಿಕೊಂಡು ನಕ್ಷೆಯನ್ನೇ ಅದಲು ಬದಲು ಮಾಡಿದ್ದಾಗಿ ಆರೋಪಗಳಿದ್ದು, ಮೂಡಾ ಮತ್ತು ಮಹಾನಗರ ಪಾಲಿಕೆ ಆಯುಕ್ತರಿಗೆ ದೂರು ಸಲ್ಲಿಸಲಾಗಿದೆ. ಹಾಗಿದ್ದರೂ ಮೂಡಾದಿಂದ ಜಮೀನಿನ ವಿನ್ಯಾಸ ನಕ್ಷೆ ತಯಾರಿಸಿ ಬಿಲ್ಡರು ಹೆಸರಲ್ಲಿ ನೀಡಲಾಗಿದೆ. ಇದಲ್ಲದೆ, ಮಹಾನಗರ ಪಾಲಿಕೆಯಿಂದ ಕಟ್ಟಡ ಪರವಾನಿಗೆಯನ್ನೂ ಪಾಲಿಕೆ ಆಯುಕ್ತರೇ ನೀಡಿದ್ದಾರೆ.
ಸದ್ರಿ ಜಾಗದಲ್ಲಿ ಐದು ಅಂತಸ್ತಿನ ವಸತಿ ಉದ್ದೇಶದ ಕಟ್ಟಡಕ್ಕಾಗಿ ಕಳೆದ ಒಂದು ತಿಂಗಳಿನಿಂದ ಕಾಮಗಾರಿಯನ್ನು ನಡೆಸಲಾಗುತ್ತಿದೆ. ಮಹಾನಗರ ಪಾಲಿಕೆಯ ಆಯುಕ್ತ ರವಿಚಂದ್ರ ನಾಯಕ್ ಅವರೇ ಬಿಲ್ಡರ್ ಲವೀನಾ ಮಿನೇಜಸ್ ಹೆಸರಿಗೆ ಕಟ್ಟಡ ನಿರ್ಮಾಣ ಪರವಾನಗಿ ನೀಡಿರುವುದರ ಪ್ರತಿ ಹೆಡ್ ಲೈನ್ ಕರ್ನಾಟಕಕ್ಕೆ ಲಭ್ಯವಾಗಿದೆ. ಇದಲ್ಲದೆ, ಜಾಗದ ನಕ್ಷೆಯನ್ನು ಮೂರು ಬಾರಿ ಬದಲಿಸಿರುವುದನ್ನು ಸಾಮಾಜಿಕ ಕಾರ್ಯಕರ್ತರು ಆರ್ಟಿಐನಡಿ ಪ್ರತಿಗಳನ್ನು ಪಡೆದಿದ್ದಾರೆ. ಈ ಬಗ್ಗೆ ಕಾಲುವೆ ಒತ್ತುವರಿ ಮಾಡಲು ಸಾಥ್ ನೀಡಿರುವ ಅಧಿಕಾರಿಗಳ ವಿರುದ್ಧ ಲೋಕಾಯುಕ್ತಕ್ಕೂ ದೂರು ಸಲ್ಲಿಸಿದ್ದಾಗಿ ತಿಳಿಸಿದ್ದಾರೆ.
ಮಳೆಗಾಲದಲ್ಲಿ ಕದ್ರಿ ಕೆಪಿಟಿ ಭಾಗದಿಂದ ಹರಿಯುವ ನೀರು ಇದೇ ತೋಡಿನಲ್ಲಿ ಹರಿದು ಹೋಗುತ್ತಿದ್ದು, ಬಿಜೈ ನೋಡುಲೇನ್ ಪ್ರದೇಶದಿಂದ ಒರತೆಯ ನೀರು ವರ್ಷ ಪೂರ್ತಿ ಹರಿಯುತ್ತಿರುತ್ತದೆ. ಆದರೆ ಈ ತೋಡನ್ನು ಬಿಜೈ ನ್ಯೂರೋಡ್ ಭಾಗದಲ್ಲಿ ಅತಿಕ್ರಮಿಸಿ, ಒಂದೂವರೆ ಮೀಟರ್ ಕಿರಿದಾಗಿಸಿದ್ದರಿಂದ ಬಿಜೈ, ಆನೆಗುಂಡಿ ಪ್ರದೇಶದಲ್ಲಿ ಮಳೆಗಾಲದಲ್ಲಿ ನೀರು ನಿಂತು ಕೃತಕ ಪ್ರವಾಹ ಉಂಟಾಗುತ್ತದೆ ಎಂದು ಅಜಯ್ ಡಿಸಿಲ್ವ ಹೇಳುತ್ತಾರೆ. ಇದಕ್ಕೆ ಸದ್ರಿ ತೋಡನ್ನು ಅತಿಕ್ರಮಿಸಿದ ಬಿಲ್ಡರುಗಳು ಮತ್ತು ಮಹಾನಗರ ಪಾಲಿಕೆ ಹಾಗೂ ಮೂಡಾ ಅಧಿಕಾರಿಗಳೇ ಕಾರಣವಾಗಿದ್ದಾರೆಂದು ಬೇರೆ ಹೇಳಬೇಕಿಲ್ಲ.
A major land-encroachment scandal has surfaced in Mangaluru’s Bejai area, where a builder has allegedly violated the original land map by narrowing a three-meter drainage canal to just 1.5 meters and occupying portions of public road land to construct a five-storey apartment building. Social activists Colin D’Silva and Ajay Christopher D’Silva have filed complaints with the Mangaluru City Corporation (MCC) and MUDA, accusing survey and planning officials of colluding with the builder to alter land records and approve the project illegally.
29-01-26 11:03 pm
Bangalore Correspondent
ಡಿಕೆ ಮುಖ್ಯಮಂತ್ರಿ ಸ್ಥಾನಕ್ಕೆ ಹೋಗಲು ಭಗವಂತ ಅವಕಾಶ...
29-01-26 10:48 pm
18 ಕೋಟಿ ಮೌಲ್ಯದ 11 ಕೇಜಿ ಚಿನ್ನ ಲೂಟಿ ; ಬೆಂಗಳೂರಿನ...
29-01-26 01:16 pm
ಮೈಸೂರಿನಲ್ಲಿ ಮತ್ತೆ ಡ್ರಗ್ಸ್ ಫ್ಯಾಕ್ಟರಿ ಶಂಕೆಯಲ್ಲಿ...
28-01-26 09:54 pm
ಅಕ್ರಮ ಮರಳು ಗಣಿಗಾರಿಕೆ, ಮಟ್ಕಾ, ಜೂಜು, ಇಸ್ಪೀಟು ದಂ...
27-01-26 09:57 pm
29-01-26 11:07 pm
HK News Desk
ಮಂಜು ಮುಸುಕಿದ್ದೇ ವಿಮಾನ ಅಪಘಾತಕ್ಕೆ ಕಾರಣ? ರನ್ ವೇ...
28-01-26 11:16 pm
ಬೌದ್ಧ ಧರ್ಮಕ್ಕೆ ಮತಾಂತರಗೊಂಡು ಅಲ್ಪಸಂಖ್ಯಾತ ಮೀಸಲಾತ...
28-01-26 11:14 pm
ಶಿಮ್ಲಾದಲ್ಲಿ ಹಿಮಪಾತ ; ರೀಲ್ಸ್ ಮಾಡಲು ಹೋಗಿದ್ದ ಹುಡ...
28-01-26 02:35 pm
ತಮ್ಮ ಕರ್ಮಭೂಮಿಯಲ್ಲೇ ಅಜಿತ್ ಪವಾರ್ ಕೊನೆಯುಸಿರು ; ವ...
28-01-26 01:28 pm
29-01-26 10:38 pm
Mangalore Correspondent
Kadri Flower Show 2026: ಕದ್ರಿಯಲ್ಲಿ ಫ್ಲವರ್ ಶೋ...
29-01-26 08:37 pm
ಕೋಡಿಬೆಂಗ್ರೆ ದುರಂತದ ಬಳಿಕ ಎಚ್ಚೆತ್ತ ಜಿಲ್ಲಾಡಳಿತ ;...
29-01-26 03:54 pm
ನಿರ್ಲಕ್ಷ್ಯದಿಂದಲೇ ಅಪಘಾತ ಹೆಚ್ಚಳ, ಕುಡಿದು ವಾಹನ ಚಲ...
27-01-26 10:50 pm
ಫೆ.1ರಂದು "ನಮ್ಮ ನಡಿಗೆ ತಲಪಾಡಿ ದೇವಿಪುರದ ಕಡೆಗೆ" ಬ...
27-01-26 08:58 pm
27-01-26 10:18 pm
Bangalore Correspondent
ಬೆಂಗಳೂರಿನಲ್ಲಿ ಮತ್ತೊಂದು ದರೋಡೆ ; 1.37 ಕೋಟಿ ರೂ....
27-01-26 05:56 pm
ಕೆನರಾ ಲೈಟಿಂಗ್ ಇಂಡಸ್ಟ್ರೀಸ್ ಸಂಸ್ಥೆಯಿಂದ ಕೊಲ್ಕತ್ತ...
27-01-26 05:15 pm
ನಿಮ್ಮ ಕ್ರೆಡಿಟ್ ಕಾರ್ಡ್ ಮೇಲೆ ಬೋನಸ್ ಬಂದಿದೆ ! ಬಣ್...
27-01-26 03:21 pm
JAKEA Michael Rego, Rajeev Gowda Arrest: ಧಮ್ಕ...
27-01-26 12:22 pm