ಬ್ರೇಕಿಂಗ್ ನ್ಯೂಸ್
22-11-25 03:49 pm Mangaluru Correspondent ಕರಾವಳಿ
ಮಂಗಳೂರು, ನ.22 : ಕೆಎಸ್ಸಾರ್ಟಿಸಿ ಬಸ್ಸುಗಳಲ್ಲಿ ಡ್ರೀಮ್ ಡೀಲ್ ಲಕ್ಕಿ ಸ್ಕೀಮ್ ಪ್ರಚಾರಕ್ಕಾಗಿ ಹಾಕಿರುವ ಜಾಹೀರಾತುಗಳನ್ನು ಕೂಡಲೇ ತೆರವು ಮಾಡುವಂತೆ ದಕ್ಷಿಣ ಕನ್ನಡ ಜಿಲ್ಲಾ ಕೆಎಸ್ಸಾರ್ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ರಾಜೇಶ್ ಶೆಟ್ಟಿ ಆದೇಶ ಮಾಡಿದ್ದಾರೆ.
ಲಕ್ಕಿ ಸ್ಕೀಮ್ ನಡೆಸುವುದು ಕಾನೂನು ರೀತ್ಯ ಅಪರಾಧವಾಗಿದ್ದರಿಂದ ಕೆಎಸ್ಸಾರ್ಟಿಸಿ ಬಸ್ಸುಗಳಲ್ಲಿ ಜಾಹೀರಾತು ಕೊಟ್ಟಿರುವುದನ್ನು ಪ್ರಶ್ನಿಸಿ ‘ಹೆಡ್ ಲೈನ್ ಕರ್ನಾಟಕ’ ಸುದ್ದಿ ಪ್ರಸಾರ ಮಾಡಿತ್ತು. ಇದರಿಂದ ಎಚ್ಚತ್ತುಕೊಂಡ ಕೆಎಸ್ಸಾರ್ಟಿಸಿ ಅಧಿಕಾರಿಗಳು ಬಸ್ಸುಗಳಲ್ಲಿ ಹಾಕಿರುವ ಜಾಹೀರಾತನ್ನು ತೆರವು ಮಾಡಲು ಮುಂದಾಗಿದ್ದಾರೆ.
ಈ ಬಗ್ಗೆ ಹೆಡ್ ಲೈನ್ ಕರ್ನಾಟಕ ಜೊತೆಗೆ ಅಭಿಪ್ರಾಯ ಹಂಚಿಕೊಂಡಿರುವ ರಾಜೇಶ್ ಶೆಟ್ಟಿ, ಸರ್ಕಾರಿ ಬಸ್ ಗಳಲ್ಲಿ ಈ ರೀತಿಯ ಜಾಹೀರಾತು ಹಾಕಿರುವುದು ನಮ್ಮ ಗಮನಕ್ಕೆ ಬಂದಿರಲಿಲ್ಲ. ಕೆಎಸ್ಸಾರ್ಟಿಸಿ ಬಸ್ಸುಗಳಲ್ಲಿ ಜಾಹೀರಾತು ಹಾಕುವುದಕ್ಕೆ ಸಾಯಿ ಏಡ್ ಏಜನ್ಸಿ ಇದೆ. ಮೂರು ವರ್ಷಕ್ಕೆ ಬೆಂಗಳೂರಿನಿಂದಲೇ ಗುತ್ತಿಗೆ ಪಡೆದುಕೊಂಡಿದ್ದು ಅವರೇ ಜಾಹೀರಾತುಗಳನ್ನು ನಿರ್ವಹಿಸುತ್ತಾರೆ. ಲಕ್ಕಿ ಸ್ಕೀಮ್ ಕಾನೂನು ರೀತ್ಯ ಅಪರಾಧವಾಗಿದ್ದರಿಂದ ಡ್ರೀಮ್ ಡೀಲ್ ಜಾಹೀರಾತು ಹಾಕಿರುವುದಕ್ಕೆ ಏಜನ್ಸಿಗೆ ನೋಟೀಸು ನೀಡುತ್ತೇವೆ ಎಂದಿದ್ದಾರೆ.

ಪುತ್ತೂರು ಕೆಎಸ್ಸಾರ್ಟಿಸಿ ಡಿಪೋ ಮಾಹಿತಿ ಪ್ರಕಾರ, ಮಂಗಳೂರಿನಿಂದ ಸಂಚರಿಸುವ ಐದು ಬಸ್ ಗಳಲ್ಲಿ ಈ ರೀತಿ ಜಾಹೀರಾತು ಹಾಕಲಾಗಿತ್ತು. ಅದನ್ನು ಕೂಡಲೇ ತೆರವು ಮಾಡಲಾಗುತ್ತಿದೆ. ಜಾಹೀರಾತು ಹಾಕುವ ಸಂದರ್ಭದಲ್ಲಿ ಲಕ್ಕಿ ಸ್ಕೀಮ್ ಎನ್ನುವುದು ತಿಳಿದಿರಲಿಲ್ಲ ಎಂದು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ. ಸುರತ್ಕಲ್ ಮತ್ತು ಪುತ್ತೂರು ಠಾಣೆಗಳಲ್ಲಿ ಲಕ್ಕಿ ಸ್ಕೀಮ್ ನಡೆಸುತ್ತಿರುವ ನಾಲ್ಕು ಕಂಪನಿಗಳ ವಿರುದ್ಧ ಎಫ್ಐಆರ್ ದಾಖಲಾಗಿದೆ. ನಾಲ್ಕು ದಿನಗಳ ಹಿಂದೆ ಬಿಎಂಆರ್ ಗ್ರೂಪ್ ಹೆಸರಿನಲ್ಲಿ ಲಕ್ಕಿ ಸ್ಕೀಮ್ ನಡೆಸುತ್ತಿದ್ದ ಸುರತ್ಕಲ್ ಬಳಿಯ ಕೃಷ್ಣಾಪುರದ ಕಚೇರಿಗೆ ಗ್ರಾಹಕರು ನುಗ್ಗಿ ದಾಂಧಲೆಗೈದಿದ್ದು ನಡೆದಿತ್ತು.
ಡ್ರೀಮ್ ಡೀಲ್ ಕಂಪನಿಯವರು ತಮ್ಮದು ಕಾನೂನು ರೀತ್ಯ ನಡೆಯುತ್ತಿದೆ ಎಂದು ಹೇಳಿಕೊಂಡು ಗ್ರಾಹಕರನ್ನು ವಂಚಿಸುತ್ತಿದ್ದಾರೆ. ಯಾವುದೇ ಹಣಕಾಸು ವಹಿವಾಟು ನಡೆಸುವುದಕ್ಕೂ ಆಯಾ ಕಾನೂನು ವ್ಯಾಪ್ತಿಯಲ್ಲಿ ಸರ್ಕಾರದಿಂದ ಲೈಸನ್ಸ್ ಪಡೆದಿರಬೇಕು. ಸೊಸೈಟಿಗಳಾದರೆ ಸೊಸೈಟಿ ಆಕ್ಟ್ ನಡಿ ರಿಜಿಸ್ಟರ್ ಆಗಿರಬೇಕು. ಚಿಟ್ ಫಂಡ್ ಗಳಾದರೆ ರಾಜ್ಯ ಹಣಕಾಸು ಸಚಿವಾಲಯದಡಿ ಚಿಟ್ ಫಂಡ್ ಕಾಯ್ದೆಯಡಿ ರಿಜಿಸ್ಟರ್ ಮಾಡಿಕೊಂಡಿರಬೇಕು. ತಿಂಗಳ ಕಂತಿನಲ್ಲಿ ಹಣ ಪಡೆದು ಲಕ್ಕಿ ಡ್ರಾ ನಡೆಸುವುದು, ಅದರ ನೆಪದಲ್ಲಿ ಹಣ ಸಂಗ್ರಹಿಸುವುದು ಸಂಪೂರ್ಣ ಕಾನೂನು ಉಲ್ಲಂಘನೆಯಾಗುತ್ತದೆ. ಇದರ ವಿರುದ್ಧ ಪೊಲೀಸರು ಸ್ವಂಯಪ್ರೇರಿತ ಕೇಸು ದಾಖಲಿಸಿ ಕ್ರಮ ತೆಗೆದುಕೊಳ್ಳಲು ಅವಕಾಶ ಇದೆ.
ಚಿಟ್ ಫಂಡ್, ಸೊಸೈಟಿಗಳಲ್ಲಿ ತಿಂಗಳ ಕಂತಿನಲ್ಲಿ ಹಣ ಸಂಗ್ರಹಣೆ ಮಾಡಬಹುದು. ಇದರ ನೆಪದಲ್ಲಿ ದುಬಾರಿ ಗಿಫ್ಟ್ ನೀಡುವುದಾಗಿ ಹೇಳಿ ಲಕ್ಕಿ ಡ್ರಾ ನೆಪದಲ್ಲಿ ಗ್ರಾಹಕರನ್ನು ಆಕರ್ಷಿಸುವುದಕ್ಕೆ ಅವಕಾಶ ಇಲ್ಲ. ಲಕ್ಕಿ ಸ್ಕೀಮ್ ಹೆಸರಿನಲ್ಲಿ ಮಂಗಳೂರು, ಪುತ್ತೂರಿನಲ್ಲಿ 25ಕ್ಕೂ ಹೆಚ್ಚು ನಕಲಿ ಕಂಪನಿಗಳ ಹೆಸರಿನಲ್ಲಿ ರಾಜಾರೋಷ ಎನ್ನುವಂತೆ ಅಕ್ರಮವಾಗಿ ಹಣಕಾಸು ವಹಿವಾಟು ನಡೆಯುತ್ತಿದೆ. ತಿಂಗಳಿಗೆ ಒಂದು ಸಾವಿರ ಕಟ್ಟಿದರೆ 50 ಲಕ್ಷ ಬೆಲೆಯ ಐಷಾರಾಮಿ ಕಾರು, ಮಂಗಳೂರಿನಲ್ಲಿ ಫ್ಲಾಟ್ ಬಹುಮಾನ ಇದೆಯೆಂದು ಹೇಳಿ ಜನರನ್ನು ಯಾಮಾರಿಸುತ್ತಿದ್ದಾರೆ. ಸುರತ್ಕಲ್ ಠಾಣೆಯಲ್ಲಿ ಕೇಸು ದಾಖಲಾದ ಬಳಿಕ ಅದನ್ನು ನಡೆಸುತ್ತಿದ್ದವರು ಕಾಸರಗೋಡು ಜಿಲ್ಲೆಯ ಮಂಜೇಶ್ವರ, ಪೈವಳಿಕೆ ಭಾಗದಲ್ಲಿ ಶುರು ಮಾಡಿದ್ದಾರೆ. ಈ ಬಗ್ಗೆ ಪೊಲೀಸ್ ಇಲಾಖೆ ಕಠಿಣ ಕ್ರಮ ಜರುಗಿಸದ ಹೊರತು ಕಡಿವಾಣ ಬೀಳುವ ಸಾಧ್ಯತೆ ಇಲ್ಲ.
In Mangaluru, KSRTC has ordered the immediate removal of advertisements promoting the Dream Deal lucky scheme from its buses after it was revealed that such schemes are legally prohibited. South Kannada KSRTC Divisional Controller Rajesh Shetty directed officials to take down the ads, stating that the corporation was unaware of the agency’s decision to display them.
22-11-25 02:25 pm
Bangalore Correspondent
ಸಿಎಂ ಬದಲಾವಣೆ ಬಗ್ಗೆ ಹೈಕಮಾಂಡ್ ಹೇಳಿದ್ಯಾ? ಮತ್ಯಾಕೆ...
21-11-25 05:25 pm
ವಾಹನ ಸವಾರರಿಗೆ ಗುಡ್ ನ್ಯೂಸ್ ; ಮತ್ತೆ 50% ದಂಡ ವ...
21-11-25 10:19 am
CM. Siddaramaiah, CM SEAT: ಯಾವ ಕ್ರಾಂತಿಯೂ ಇಲ್ಲ...
20-11-25 03:30 pm
DK Suresh, CM Siddaramaiah : ಸಿಎಂ ಕುರ್ಚಿ ಕ್ಲೈ...
20-11-25 03:01 pm
21-11-25 06:10 pm
HK News Desk
ಶಬರಿಮಲೆ ಚಿನ್ನ ಲೂಟಿ ಪ್ರಕರಣ ; ಕೊನ್ನಿ ಕ್ಷೇತ್ರದ ಸ...
21-11-25 02:26 pm
ಶ್ರೀಲಂಕಾದಲ್ಲಿ ನ್ಯೂಜಿಲೆಂಡ್ ಮಹಿಳೆಯ ಜೊತೆ ಯುವಕನ ಅ...
19-11-25 06:47 pm
ಕೆಂಪು ಕೋಟೆ ಬ್ಲಾಸ್ಟ್ ಕೇಸ್ ; ಅಲ್ ಫಲಾಹ್ ವಿವಿಗೆ ಸ...
19-11-25 11:10 am
ಬಾಂಗ್ಲಾದಲ್ಲಿ ವಿದ್ಯಾರ್ಥಿಗಳ ಮಾರಣ ಹೋಮಕ್ಕೆ ಅವರೇ ಕ...
17-11-25 10:58 pm
22-11-25 05:46 pm
Mangalore Correspondent
Drem Deal Group Fraud, Mangalore: IMPACT: ಕೆಎ...
22-11-25 03:49 pm
ಈ ಬಾರಿ ಕಂಬಳದಲ್ಲಿ ಸಬ್ ಜೂನಿಯರ್ ಓಟ ಇರಲ್ಲ ; 24 ಗಂ...
21-11-25 10:39 pm
ನವೆಂಬರ್ 23ರಿಂದ ಪ್ರತಿ ವಾರ 'ಸಂಸದ್ ಖೇಲ್ ಮಹೋತ್ಸವ'...
21-11-25 10:03 pm
ಸುರತ್ಕಲ್- ನಂತೂರು- ಬಿಸಿ ರೋಡ್ ಹೆದ್ದಾರಿ ಎನ್ಎಚ...
21-11-25 09:55 pm
21-11-25 11:07 pm
Bangalore Correspondent
ಮಲ್ಪೆ ಶಿಪ್ ಯಾರ್ಡ್ ನಿಂದ ಪಾಕಿಸ್ತಾನಕ್ಕೆ ಮಾಹಿತಿ ಸ...
21-11-25 05:11 pm
ಬೆಂಗಳೂರು ಎಟಿಎಂ ಹಣ ದರೋಡೆ ಪ್ರಕರಣ ; ತಿರುಪತಿಯಲ್ಲಿ...
20-11-25 10:53 pm
BMR Group Fraud, Money, Mangalore, Surathkal:...
20-11-25 06:01 pm
Bangalore ATM Van Robbery, Update: ಬೆಂಗಳೂರಿನ...
20-11-25 11:51 am