ಬ್ರೇಕಿಂಗ್ ನ್ಯೂಸ್
11-08-20 04:59 am Mangalore Reporter ಕರಾವಳಿ
ಪುತ್ತೂರು, ಆಗಸ್ಟ್ 11: ತುಂಡಾಗಿ ರಸ್ತೆಯಲ್ಲಿ ಬಿದ್ದಿದ್ದ ಹೈಟೆನ್ಶನ್ ವಿದ್ಯುತ್ ತಂತಿ ತಗಲಿ ಬೈಕ್ ಸಮೇತ ಸವಾರ ಸ್ಥಳದಲ್ಲೇ ಸುಟ್ಟು ಕರಕಲಾದ ಘಟನೆ ಸುಳ್ಯ ತಾಲೂಕಿನ ಪಡ್ಪಿನಂಗಡಿಯಲ್ಲಿ ನಡೆದಿದೆ.
ಮೃತರನ್ನು ಮಂಡೆಕೋಲು ನಿವಾಸಿ ಉಮೇಶ್ ಗೌಡ (44) ಎಂದು ಗುರುತಿಸಲಾಗಿದೆ. ಸುಬ್ರಹ್ಮಣ್ಯ ಬಳಿಯ ಬಳ್ಪದಲ್ಲಿ ಆತನ ಹೆಂಡ್ತಿ ಮನೆಯಿದ್ದು ನಿನ್ನೆ ಸಂಜೆ ಬಂದಿದ್ದ ಉಮೇಶ್, ಇಂದು ನಸುಕಿನಲ್ಲಿ 4.30ಕ್ಕೆ ಮನೆಯತ್ತ ಹೊರಟಿದ್ದ. ಮನೆಯಲ್ಲಿ ಹಾಲು ಕರೆಯಲು ಇದೆಯೆಂದು ಬೈಕಿನಲ್ಲಿ ಬೇಗ ಹೊರಟಿದ್ದ ಉಮೇಶ್ ಅರ್ಧ ದಾರಿಯಲ್ಲೇ ಬಾರದ ಲೋಕಕ್ಕೆ ಹೋಗಿದ್ದಾರೆ. ನಿಂತಿಕಲ್ಲು ಬಳಿಯ ಪಡ್ಪಿನಂಗಡಿ ಎಂಬಲ್ಲಿ ರಸ್ತೆಯಲ್ಲಿ ಬಿದ್ದಿದ್ದ ವಿದ್ಯುತ್ ತಂತಿ ಮಳೆಯಿಂದ ಒದ್ದೆಯಾಗಿದ್ದ ಬೈಕಿಗೆ ಸುಲಭದಲ್ಲಿ ಪ್ರವಹಿಸಿದ್ದು ಬೆಂಕಿ ಹತ್ತಿಕೊಂಡಿದೆ. ಬೈಕ್ ಮತ್ತು ಸವಾರ ಸ್ಥಳದಲ್ಲಿಯೇ ಹೊತ್ತಿ ಉರಿದಿದ್ದು ಜೀವಂತ ದಹನವಾಗಿದ್ದಾರೆ. 5 ಗಂಟೆ ಸುಮಾರಿಗೆ ಘಟನೆ ನಡೆದಿದ್ದು ಈ ಸಮಯದಲ್ಲಿ ರಸ್ತೆಯಲ್ಲಿ ಜನರ ಸಂಚಾರ ಇಲ್ಲದೇ ಇದ್ದುದರಿಂದ 6 ಗಂಟೆ ಬಳಿಕವೇ ಘಟನೆ ಸ್ಥಳೀಯರಿಗೆ ತಿಳಿದುಬಂದಿದೆ.

ಪುತ್ತೂರು - ಸುಬ್ರಹ್ಮಣ್ಯ ಹೆದ್ದಾರಿಯಲ್ಲಿ ಘಟನೆ ನಡೆದಿದೆ. ವಿದ್ಯುತ್ ತಂತಿ ಹೈವೇ ರಸ್ತೆಗೆ ಅಡ್ಡಲಾಗಿ ಬಿದ್ದಿರುವುದು ಹೇಗೆ ಎನ್ನುವುದು ತಿಳಿದುಬಂದಿಲ್ಲ. ಘಟನೆ ನೋಡಿದರೆ ಬೆಚ್ಚಿ ಬೀಳುವ ರೀತಿಯಿದೆ. ಬೈಕ್ ಮತ್ತು ಅದರಲ್ಲಿನ ಸವಾರ ಬಿದ್ದಿರುವ ಜಾಗದಲ್ಲೇ ಧಗ ಧಗನೆ ಉರಿಯುವ ದೃಶ್ಯ ಮನ ಕಲಕುವಂತಿದೆ.
Video:
08-10-26 08:00 pm
HK News Staffer
B.Y. Vijayendra: ಸ್ಟಿಂಗ್, ಡಿಂಗ್ ಆಪರೇಷನ್ ಮಾ...
08-10-26 04:38 pm
ಜನಸಾಮಾನ್ಯರು ಅಪಘಾತದಲ್ಲಿ ಸತ್ತರೆ 5 ಲಕ್ಷ ಕೊಡಕ್ಕಾಗ...
07-10-26 10:45 pm
HD Kumaraswamy, DK Shivakumar: ಡಿಕೆಶಿ ಸಿಎಂ ಆಗ...
07-10-26 09:16 pm
ಬೆಂಗಳೂರು ನಗರದಲ್ಲಿ ಐದು ಕಮಿಷನರೇಟ್ ; ವಿಭಜನೆಗೆ ಸಚ...
06-10-26 10:46 pm
08-10-26 08:03 pm
HK News Staffer
ಭಾರತೀಯ ಪೈಲಟ್ ಸಾಹಸಕ್ಕೆ ಅಮೆರಿಕ ಸಂಸತ್ ಗೌರವ ; 17...
07-10-26 01:10 pm
ದೆಹಲಿಯಲ್ಲಿ ಚುನಾವಣಾ ಆಯೋಗದ ವಿರುದ್ಧ ಪ್ರತಿಭಟನೆ ;...
06-10-26 11:04 pm
London Flight, Chicago Flight: ದುಬೈ ವಿಮಾನ ಅಪಹ...
06-10-26 02:46 pm
Russia, pneumonic plague: ರಷ್ಯಾದಲ್ಲಿ ಹೊಸ ರೀತಿ...
06-10-26 12:58 pm
08-10-26 04:30 pm
HK News Staffer
Santhosh laad, Araga jnanendra ಕಾರ್ಮಿಕ ಇಲಾಖೆಯ...
08-10-26 04:27 pm
ಆಟೋದಲ್ಲಿ 48 ಗ್ರಾಂ ಚಿನ್ನ ಬಿಟ್ಟುಹೋದ ಮಹಿಳೆ ; ‘ಚಿ...
08-10-26 12:06 pm
Kural Tulu Touch, Tulu lipi: ತುಳು ಲಿಪಿಗೆ ಡಿಜಿ...
07-10-26 02:39 pm
ಸಿಲಿಂಡರ್ ಸ್ಫೋಟಕ್ಕೆ ತಾಯಿ, 3 ವರ್ಷದ ಮಗು ಬಲಿ ; ಮೂ...
07-10-26 02:21 pm
08-10-26 08:44 pm
HK News Staffer
ಹೆದ್ದಾರಿ ದಾಟುತ್ತಿದ್ದ ಕುರಿ-ಮೇಕೆಗಳ ಹಿಂಡಿಗೆ ಲಾರಿ...
08-10-26 08:07 pm
Online game, Death: ಆನ್ಲೈನ್ ಗೇಮ್ಗಾಗಿ 4 ಲಕ್ಷ...
08-10-26 04:56 pm
CBI ಹೆಸರಲ್ಲಿ ಬೆದರಿಕೆ, ‘ಡಿಜಿಟಲ್ ಅರೆಸ್ಟ್’ ನಾಟಕ...
08-10-26 11:08 am
ಮಂಗಳೂರು ರೈಲಿನಲ್ಲಿ ಲ್ಯಾಪ್ಟಾಪ್, ಚಿನ್ನದ ಸರ ಕಳವು...
08-10-26 10:59 am