ಬ್ರೇಕಿಂಗ್ ನ್ಯೂಸ್
14-11-25 11:01 pm Mangalore Correspondent ಕರಾವಳಿ
ಉಳ್ಳಾಲ, ನ.14 : ಕಣ್ಣಿನ ಗುಡ್ಡೆಯೇ ಬೇರ್ಪಟ್ಟು ನಿಗೂಢವಾಗಿ ಸಾವನ್ನಪ್ಪಿದ ಸ್ಥಿತಿಯಲ್ಲಿ ವ್ಯಕ್ತಿಯ ಶವ ಪತ್ತೆಯಾದ ಪ್ರಕರಣದಲ್ಲಿ ಶಂಕಿತ ಹಂತಕ ಬೀದಿ ನಾಯಿಯೊಂದನ್ನು ಸೋಮೇಶ್ವರ ಪುರಸಭೆಯ ಅಧಿಕಾರಿಗಳು ಸೆರೆಹಿಡಿದಿದ್ದಾರೆ. ಈ ಮಧ್ಯೆ ಮೃತ ವ್ಯಕ್ತಿಯ ಸಹೋದರ ಸಾವಿನ ಬಗ್ಗೆ ಶಂಕೆ ವ್ಯಕ್ತಪಡಿಸಿದ್ದು ಸೂಕ್ತ ತನಿಖೆಗೆ ಆಗ್ರಹಿಸಿ ಉಳ್ಳಾಲ ಠಾಣೆಗೆ ದೂರು ನೀಡಿದ್ದಾರೆ.
ಕುಂಪಲ ಮೂರುಕಟ್ಟೆ ನಿವಾಸಿ ಅವಿವಾಹಿತ ದಯಾನಂದ ಗಟ್ಟಿ (53) ನಿಗೂಢ ರೀತಿ ಸಾವನ್ನಪ್ಪಿದ್ದರು. ಪ್ರಾಣಿಗಳು ಕಚ್ಚಿ ಸಾಯಿಸಿದ್ದಾಗಿ ಎಫ್ಎಸ್ಎಲ್ ತಜ್ಞರ ಹೇಳಿಕೆ ಆಧರಿಸಿ ಪೊಲೀಸರೂ ಅದನ್ನೇ ಹೇಳಿದ್ದರು. ಶುಕ್ರವಾರ ಬೆಳಗ್ಗೆ ಘಟನೆ ಬೆಳಕಿಗೆ ಬಂದಿದ್ದು ಕುಂಪಲ ಬೈಪಾಸಿನ ಮುಖ್ಯ ರಸ್ತೆಯ ಅಂಚಿನ ಲಾಂಡ್ರಿ ಅಂಗಡಿಯ ಎದುರಲ್ಲಿ ನೋಟಿನ ಕಂತೆಯೊಂದಿಗೆ ರಕ್ತಸಿಕ್ತ ಶವ ಸಿಕ್ಕಿತ್ತು. ಪಕ್ಕದಲ್ಲೇ ಕಣ್ಣಿನ ಗುಡ್ಡೆಯೊಂದು ದೇಹದಿಂದ ಬೇರ್ಪಟ್ಟು ಬಿದ್ದಿತ್ತು. ಆ ಮೂಲಕ ಲಾಂಡ್ರಿ ಎದುರಲ್ಲೇ ದಯಾನಂದ್ ಮೇಲೆ ಭೀಕರ ದಾಳಿ ನಡೆದಿರುವ ಬಗ್ಗೆ ಸಾಕ್ಷ ಸಿಕ್ಕಿತ್ತು.


ಶುಕ್ರವಾರ ಬೆಳಗ್ಗೆ ಲಾಂಡ್ರಿಯ ಎದುರಿನ ಮನೆಯ ಜಗಲಿ ಬಳಿಯಲ್ಲಿ ದಯಾನಂದ್ ಅವರ ಜರ್ಜರಿತ ಮೃತದೇಹ ಪತ್ತೆಯಾಗಿತ್ತು. ಜೀವನ್ಮರಣ ಹೋರಾಟ ನಡೆಸಿದ ದಯಾನಂದ್ ಬೆಳಗ್ಗಿನ ವೇಳೆಗೆ ಅಸುನೀಗಿದ್ದರು. ಮೃತದೇಹದ ಪಕ್ಕದಲ್ಲೇ ಬೀದಿ ನಾಯಿಯೊಂದು ಇದ್ದು ಜನರನ್ನ ಕಂಡು ಓಡಿ ಹೋಗಿದೆ. ಮುಖದ ಎಡ ಭಾಗ ಪ್ರಾಣಿಗಳು ಕಚ್ಚಿದ ಸ್ಥಿತಿಯಲ್ಲಿದ್ದರೆ, ಕಣ್ಣಿನ ಗುಡ್ಡೆ ಕಿತ್ತೋಗಿದ್ದು ಮುಖದ ಎಡ ಭಾಗವೇ ಜರ್ಜರಿತವಾಗಿತ್ತು.
ಘಟನಾ ಸ್ಥಳಕ್ಕೆ ದೇರಳಕಟ್ಟೆ ಕೆ.ಎಸ್ ಹೆಗ್ಡೆ ಆಸ್ಪತ್ರೆಯ ಡಾ.ಮಹಾಬಲ ಶೆಟ್ಟಿ ನೇತೃತ್ವದ ಫಾರೆನ್ಸಿಕ್ ತಂಡ ಭೇಟಿ ನೀಡಿದ್ದು ಪರಿಶೀಲನೆ ನಡೆಸಿ ಸಾಕ್ಷ್ಯ ಕಲೆ ಹಾಕಿದೆ. ನಾಯಿ ದಾಳಿಯಿಂದಲೇ ದಯಾನಂದ್ ಸಾವನ್ನಪ್ಪಿರೋದಾಗಿ ಸ್ಥಳದಲ್ಲೇ ಮಹಾಬಲ ಶೆಟ್ಟಿ ಪರೀಕ್ಷೆಗೂ ಮುನ್ನ ತೀರ್ಪು ನೀಡಿದ್ದರು. ಇದೇ ವೇಳೆ, ನಾಯಿಗಳು ಕಣ್ಣು ಗುಡ್ಡೆಯನ್ನ ಕೀಳಲು ಸಾಧ್ಯವೇ? ನಾಯಿ ಕಣ್ಣು ಕೀಳುವಾಗ ದಯಾನಂದ್ ಪ್ರತಿರೋಧ ತೋರಿರಲಿಲ್ಲವೇ..? ದಯಾನಂದ್ ಅವರಲ್ಲಿದ್ದ ಹಣ ಕೀಳಲು ಯಾರೋ ಕೊಲೆ ಮಾಡಿದರೇ..? ಅರೆಪ್ರಜ್ಞೆಯಲ್ಲಿದ್ದ ದೇಹವನ್ನ ನಾಯಿ ತಿಂದಿತೇ ಎಂಬ ಬಲವಾದ ಸಂಶಯವನ್ನು ಸ್ಥಳೀಯರು ವ್ಯಕ್ತಪಡಿಸಿದ್ದರು. ಸ್ಥಳದಲ್ಲಿದ್ದ ಪೊಲೀಸರು ನಾಯಿ ದಾಳಿ ಎಂದು ಹೇಳಿದರೂ ಸಂಜೆಯ ವೇಳೆಗೆ, ದಯಾನಂದ್ ಸಾವಿನ ಬಗ್ಗೆ ಶಂಕೆ ವ್ಯಕ್ತಪಡಿಸಿ ಅವರ ಸೋದರ ಗಣೇಶ್ ಗಟ್ಟಿ ಉಳ್ಳಾಲ ಠಾಣೆಗೆ ದೂರು ನೀಡಿದ್ದಾರೆ.
ದಯಾನಂದ್ ಸಾವನ್ನಪ್ಪಿ ರಕ್ತದ ಮಡುವಲ್ಲಿ ಬಿದ್ದ ಸ್ಥಳದಲ್ಲಿದ್ದ ಬೀದಿ ನಾಯಿಯೊಂದು ಬೈಪಾಸ್ ಪ್ರದೇಶದಲ್ಲೇ ತಿರುಗಾಡುತ್ತಿತ್ತು. ಬಳಿಕ ಸೋಮೇಶ್ವರ ಪುರಸಭೆ ಅಧಿಕಾರಿಗಳು ಆನಿಮಲ್ ಕೇರ್ ನವರನ್ನ ಕರೆಸಿ ಶಂಕಿತ ಬೀದಿ ನಾಯಿಯನ್ನ ಸೆರೆ ಹಿಡಿಸಿದ್ದಾರೆ. ಕುಂಪಲ ಪ್ರದೇಶದ ಮುಖ್ಯ ರಸ್ತೆಯಲ್ಲಿ ಸಮರ್ಪಕ ಸಿಸಿಟಿವಿ ಕ್ಯಾಮೆರಾಗಳೇ ಇಲ್ಲದೆ ದಯಾನಂದ್ ಸಾವಿಗೆ ನಿಖರ ಕಾರಣ ತಿಳಿಯಲು ಸಾಧ್ಯವಾಗಿಲ್ಲ. ಲಾಂಡ್ರಿ ಪಕ್ಕದ ಮನೆಯೊಂದರಲ್ಲಿ ಮಾತ್ರ ಸಿಸಿ ಕ್ಯಾಮೆರಾ ಇದ್ದು ಅದು ಘಟನಾ ಸ್ಥಳಕ್ಕೆ ಕೇಂದ್ರೀಕೃತವಾಗಿರದ ಕಾರಣ ಸ್ಪಷ್ಟ ಚಿತ್ರಣ ಸಿಕ್ಕಿಲ್ಲ. ಮೃತ ದಯಾನಂದ್ ಮೊಬೈಲನ್ನೂ ಬಳಸದ ಕಾರಣ ಪ್ರಕರಣದ ತನಿಖೆ ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದೆ.
ದೇರಳಕಟ್ಟೆಯ ಕೆ.ಎಸ್ ಹೆಗ್ಡೆ ಆಸ್ಪತ್ರೆಯಲ್ಲಿ ಮೃತದೇಹದ ಮರಣೋತ್ತರ ಪರೀಕ್ಷೆ ನಡೆದಿದ್ದು, ಸಂಜೆ ಅಂತ್ಯ ಸಂಸ್ಕಾರ ನಡೆಸಲಾಗಿದೆ.
A 53-year-old man was found dead under mysterious circumstances near Kumpala Bypass, with one eyeball detached and severe facial injuries. While FSL experts indicated a stray-dog attack, the victim’s brother has filed a police complaint demanding a deeper investigation. Meanwhile, the suspected stray dog has been captured by Someshwara Municipality.
13-11-25 08:33 pm
HK News Desk
ಸಿದ್ದರಾಮಯ್ಯ ಸಿಎಂ ಆಗಿ ಮುಂದುವರಿದರೆ ತಪ್ಪೇನು? ನಾವ...
12-11-25 11:10 pm
ಧರ್ಮಸ್ಥಳ ಶವ ಹೂತ ಪ್ರಕರಣದಲ್ಲಿ ಎಸ್ಐಟಿ ತನಿಖೆಯ ತಡ...
12-11-25 11:06 pm
ಯಾರೂ ಗೂಟ ಹೊಡೆದು ಇರಕ್ಕಾಗಲ್ಲ, ಬಿಹಾರ ಚುನಾವಣೆ ಟೈಮ...
12-11-25 09:03 pm
ವಿಮಾನ ನಿಲ್ದಾಣದಲ್ಲಿ ನಮಾಜ್ ; ಅವರು ಎಲ್ಲಾದ್ರೂ ಶ್ರ...
10-11-25 07:17 pm
14-11-25 09:10 pm
HK News Desk
ಬಿಹಾರದಲ್ಲಿ ಎನ್ ಡಿಎ ಕ್ಲೀನ್ ಸ್ವೀಪ್ ಜಯಭೇರಿ ; 190...
14-11-25 11:50 am
ದೆಹಲಿ ಸ್ಫೋಟ ಪ್ರಕರಣ ; ಕಾನ್ಪುರ ವೈದ್ಯಕೀಯ ವಿದ್ಯಾರ...
13-11-25 10:56 pm
ಇಬ್ಬರು ಉಗ್ರರ ಡೈರಿ ಪತ್ತೆ ; ಮಹತ್ತರ ಮಾಹಿತಿ ಬಹಿರಂ...
13-11-25 08:41 pm
Tiruchi Aircraft: ತಿರುಚಿ- ಪುದುಕೋಟೈ ಹೆದ್ದಾರಿಯಲ...
13-11-25 05:13 pm
14-11-25 11:01 pm
Mangalore Correspondent
Kumpala, Dog, Crime, Mangalore: ಬೀದಿ ನಾಯಿಗಳ ದ...
14-11-25 10:10 pm
ಸರ್ಕಾರಿ ಶಾಲೆಯಲ್ಲಿ ಆಂಗ್ಲ ಮಾಧ್ಯಮ ಶಿಕ್ಷಣ ; ಮಕ್ಕ...
14-11-25 09:03 pm
ಡಿಸಿಸಿ ಬ್ಯಾಂಕ್ ಸಾಲಕ್ಕೆ ಜಾಮೀನು ನಿಂತು ಚೆಕ್ ನೀಡಿ...
14-11-25 03:34 pm
ಸದಸ್ಯತ್ವ ಕಳಕೊಂಡವರಿಂದಲೇ ದರ್ಗಾ ಕಮಿಟಿ ವಿರುದ್ಧ ಅಪ...
13-11-25 07:41 pm
14-11-25 05:32 pm
HK News Desk
Ullal News, Animal Attack, Crime, Kumpala: ಕಣ...
14-11-25 11:16 am
ಮಂಗಳೂರಿನಲ್ಲಿ ಡಿಜಿಟಲ್ ಅರೆಸ್ಟ್ ವಂಚನೆ ಹೆಚ್ಚಳ ; ಮ...
13-11-25 10:09 pm
Sexual Harassment in Anekal: ಸ್ಕ್ಯಾನಿಂಗ್ ವೇಳ...
13-11-25 10:00 pm
ವಿದೇಶಿ ಕಂಪನಿಯಲ್ಲಿ ಹೂಡಿಕೆ ಮಾಡಿದರೆ ದುಪ್ಪಟ್ಟು ಲಾ...
12-11-25 12:32 pm