ಬ್ರೇಕಿಂಗ್ ನ್ಯೂಸ್
14-11-25 09:03 pm Mangalore Correspondent ಕರಾವಳಿ
ಉಳ್ಳಾಲ, ನ.13 : ಮುಖ್ಯೋಪಾಧ್ಯಾಯರ ಕಚೇರಿಯೊಳಗಡೆ ವಿದ್ಯಾರ್ಥಿಗಳಿಗೆ ಕ್ಲಾಸ್.. ಪ್ರತೀ ಕೊಠಡಿಗಳಲ್ಲು ಎರಡೆರಡು ತರಗತಿಯ ವಿದ್ಯಾರ್ಥಿಗಳನ್ನ ಒಟ್ಟಿಗೆ ಕೂರಿಸಿ ಶಿಕ್ಷಕರಿಂದ ಭೋದನೆ. ಇರುವ ಕೊಠಡಿಗಳನ್ನೇ ಅಡ್ಜೆಸ್ಟ್ ಮಾಡಿ ವಿದ್ಯಾರ್ಥಿಗಳಿಗೆ ಶಿಕ್ಷಣ ಕೊಡಲು ಹೆಣಗಾಡುತ್ತಿರುವ ನಾಲ್ಕು ಶಿಕ್ಷಕರು.. ಉಳ್ಳಾಲ ತಾಲೂಕಿನ ಮಾಡೂರಿನ ಉನ್ನತೀಕರಿಸಿದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರತ್ಯೇಕ ಆಂಗ್ಲ ಮಾಧ್ಯಮ ಶಿಕ್ಷಣ ಆರಂಭಗೊಂಡಿದ್ದರೂ ಸಹ ಕಲಿಕೆಗೆ ಬೇಕಾದ ಕೊಠಡಿ, ಶಿಕ್ಷಕರ ಕೊರತೆಯಿಂದ ಮಕ್ಕಳು ಯಾತನೆ ಅನುಭವಿಸುತ್ತಿದ್ದಾರೆ.
1979 ರಲ್ಲಿ 1ರಿಂದ 4 ನೇ ತರಗತಿ ವರೆಗೆ ಆರಂಭಗೊಂಡ ಮಾಡೂರು ಸರಕಾರಿ ಶಾಲೆ ಪ್ರಸ್ತುತ 8ನೇ ತರಗತಿ ವರೆಗೆ ಪ್ರಾಥಮಿಕ ಶಾಲೆಯಾಗಿ ಉನ್ನತೀಕರಣಗೊಂಡಿದೆ. ಆಂಗ್ಲ ಮಾಧ್ಯಮ ಶಿಕ್ಷಣದ ಪ್ರಭಾವದಿಂದ ಈ ಶಾಲೆಗೂ ಬರುವ ಮಕ್ಕಳ ಸಂಖ್ಯೆ ಕುಂಠಿತವಾಗಿತ್ತು.ಇನ್ನೇನು ಶಾಲೆ ಮುಚ್ಚುತ್ತದೆ ಎಂಬ ಭೀತಿ ಎದುರಾದಾಗ ಶಾಲೆ ಉಳಿಸಿಕೊಳ್ಳುವ ಸಲುವಾಗಿ ಸ್ಥಳೀಯ ಪ್ರನುಖರು ಸೇರಿ ಕಳೆದ ವರ್ಷ ಆಂಗ್ಲ ಮಾಧ್ಯಮ ಶಿಕ್ಷಣ ಆರಂಭಿಸಿದ್ದರು.








2025ರ ಸಾಲಿನಲ್ಲಿ ಎಮ್ಆರ್ ಪಿಎಲ್ ಸಂಸ್ಥೆಯ ಸಿಎಸ್ ಆರ್ ನಿಧಿ ಮತ್ತು ಕೋಟೆಕಾರು ಪ.ಪಂ ಅನುದಾನದಿಂದ ಇದ್ದ ಕಟ್ಟಡದ ಮೇಲೆ ಶೀಟ್ ಛಾವಣಿಯ ಹಾಲ್ ಒಂದನ್ನ ನಿರ್ಮಿಸಿ ಎಲ್ ಕೆಜಿ, ಯುಕೆಜಿ ಮತ್ತು ಒಂದನೇ ದರ್ಜೆಯ ಆಂಗ್ಲ ಮಾಧ್ಯಮ ತರಗತಿಗಳನ್ನ ಆರಂಭಿಸಲಾಗಿತ್ತು. ದಾನಿಗಳ ನೆರವಿನಿಂದ ತರಗತಿ ಕೊಠಡಿಗಳಿಗೆ ಸ್ಮಾರ್ಟ್ ಕ್ಲಾಸ್, ಟಿವಿ, ಸಿಸಿ ಕ್ಯಾಮೆರಾಗಳನ್ನ ಅಳವಡಿಸಿ ಹೈಟೆಕ್ ಸ್ಪರ್ಶ ನೀಡಿದ್ದಲ್ಲದೆ, ವಿದ್ಯಾರ್ಥಿಗಳಿಗೂ ಸುಂದರವಾದ ಸಮವಸ್ತ್ರಗಳನ್ನ ವಿತರಿಸಲಾಗಿತ್ತು. ಸ್ಪೀಕರ್ ಯು.ಟಿ ಖಾದರ್ ಈ ಕಾರ್ಯಕ್ಕೆ ವೈಯಕ್ತಿಕ ಒಂದು ಲಕ್ಷ ರೂಪಾಯಿ ನೆರವು ನೀಡಿದ್ದರು. ಮೂವರು ಅತಿಥಿ ಶಿಕ್ಷಕರು ಮತ್ತು ಎರಡು ಆಯಾಗಳನ್ನ ಶಾಲಾಭಿವೃದ್ಧಿ ಸಮಿತಿಯವರೇ ನೇಮಿಸಿದ್ದರು. ಸಿಬ್ಬಂದಿಗಳ ವೇತನ ಮತ್ತು ನಿರ್ವಹಣೆಗೆ ಮಾಸಿಕ 70,000 ರೂಪಾಯಿ ಖರ್ಚು ತಗಲುತ್ತಿದ್ದು ಸ್ಥಳೀಯ ಕೋಟೆಕಾರು ಪ.ಪಂ. ಸದಸ್ಯರಾದ ಸುಜಿತ್ ಮಾಡೂರು ನೇತೃತ್ವದಲ್ಲಿ ದಾನಿಗಳಿಂದ ದೇಣಿಗೆ ಸಂಗ್ರಹಿಸಿ ನಿರ್ವಹಣೆ ನಡೆಸಲಾಗುತ್ತಿದೆ. 2026 ನೇ ಶೈಕ್ಷಣಿಕ ಸಾಲಿನಲ್ಲಿ ಆಂಗ್ಲ ಮಾಧ್ಯಮದ ಎರಡನೇ ತರಗತಿ ಆರಂಭಗೊಳ್ಳಲಿದ್ದು ವಿದ್ಯಾರ್ಥಿಗಳಿಗೆ ಕೊಠಡಿಯೇ ಇಲ್ಲದಂತಾಗಿದೆ.
ಒಂದನೇ ತರಗತಿಯಿಂದ ಎಂಟನೇ ತರಗತಿ ವರೆಗಿನ ಕನ್ನಡ ಮಾಧ್ಯಮ ತರಗತಿಗಳಲ್ಲಿ 64 ವಿದ್ಯಾರ್ಥಿಗಳಿದ್ದು, ಅವರಿಗೆ ಭೋಧಿಸಲು ಮುಖ್ಯ ಶಿಕ್ಷಕಿ ಸೇರಿ ಮೂವರು ಶಿಕ್ಷಕರು ಮತ್ತು ಓರ್ವ ಅತಿಥಿ ಶಿಕ್ಷಕರಿದ್ದಾರೆ. ಕೊಠಡಿಗಳಿಲ್ಲದೆ ಪ್ರಸ್ತುತ ಮುಖ್ಯೋಪಾಧ್ಯಾಯರ ಕಚೇರಿಯಲ್ಲೇ ಆರನೇ ತರಗತಿ ನಡೆಸಲಾಗುತ್ತಿದೆ. ಉಳಿದ ಮೂರು ಕೊಠಡಿಗಳಲ್ಲಿ ಎಲ್ಲಾ ತರಗತಿಯ ಮಕ್ಕಳನ್ನ ಒಟ್ಟುಗೂಡಿಸಿ ಪಾಠ ಹೇಳಲಾಗುತ್ತಿದೆ. ಒಂದು ಅಂತಸ್ತಿನ ಕಟ್ಟಡದಲ್ಲಿ ಕನ್ನಡ, ಆಂಗ್ಲ ಮಾಧ್ಯಮ ತರಗತಿಗಳು ಸೇರಿದಂತೆ ಅಂಗನವಾಡಿಯೂ ಕಾರ್ಯಾಚರಿಸುತ್ತಿದೆ. ಫ್ರೆಂಡ್ಸ್ ಕೊಲ್ಯ ಸಂಘಟನೆ ವತಿಯಿಂದ ಅಂಗನವಾಡಿ ಕೇಂದ್ರಕ್ಕೆ ಪ್ರತ್ಯೇಕ ಕಟ್ಟಡ ನಿರ್ಮಾಣಗೊಳ್ಳುತ್ತಿದೆ. ಆ ಕಟ್ಟಡದ ಮೇಲೆ ಕೊಠಡಿ ನಿರ್ಮಿಸಲು ಶಾಸಕ ಖಾದರ್ ಅವರು ಐದು ಲಕ್ಷ ಅನುದಾನ ನೀಡುವುದಾಗಿ ಹೇಳಿದ್ದಾರಂತೆ.
ಎಲ್ ಕೆಜಿಗೆ ತಲಾ ಮೂವತ್ತು ವಿದ್ಯಾರ್ಥಿಗಳಂತೆ ಎಬಿಸಿಯೆಂದು ಪ್ರತ್ಯೇಕ ಮೂರು ತರಗತಿ ಆರಂಭಿಸುವಷ್ಟು ಮಕ್ಕಳಿದ್ದಾರೆ. ಮೂರು ಅಂತಸ್ತಿನ ಸುಸಜ್ಜಿತ ನೂತನ ಕಟ್ಟಡ ನಿರ್ಮಿಸಲು ಯೋಜನೆ ರೂಪಿಸಿದ್ದು, ಅನುದಾನಕ್ಕಾಗಿ ಶಾಸಕ ಯು.ಟಿ ಖಾದರ್ ಮತ್ತು ಶಿಕ್ಷಣ ಇಲಾಖಾಧಿಕಾರಿಗಳಿಗೆ ಮನವಿ ನೀಡಲಾಗಿದೆ. ಕಟ್ಟಡ ನಿರ್ಮಾಣಕ್ಕೆ ಕಾರ್ಪೊರೇಟ್ ಕಂಪನಿಗಳ ಸಿಎಸ್ಆರ್ ನಿಧಿ ತೆಗೆಸಿಕೊಡುವಂತೆಯೂ ಶಾಸಕರು ಮತ್ತು ಸಂಸದ ಬ್ರಿಜೇಶ್ ಚೌಟ ಅವರಲ್ಲಿ ಮನವಿ ನೀಡಲಾಗಿದೆ. ಶಿಕ್ಷಕರ ಕೊರತೆಯನ್ನೂ ತ್ವರಿತವಾಗಿ ಸರಕಾರ ನೀಗಿಸಬೇಕಿದೆಯೆಂದು ಕೋಟೆಕಾರು ಪಟ್ಟಣ ಪಂಚಾಯತ್ ಸದಸ್ಯ ಸುಜಿತ್ ಮಾಡೂರು ವಿನಂತಿಸಿದ್ದಾರೆ.
ಮಾಡೂರು ಸರಕಾರಿ ಶಾಲೆಯಲ್ಲಿ ಈ ಬಾರಿ ಆಂಗ್ಲ ಮಾಧ್ಯಮ ಶಿಕ್ಷಣ ಆರಂಭಿಸಿದ ಬಳಿಕ ಉತ್ತಮ ಸ್ಪಂದನೆ ದೊರಕಿದ್ದು ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಆಗಮಿಸುತ್ತಿದ್ದಾರೆ. ಎಂಆರ್ ಪಿಎಲ್ ಸಂಸ್ಥೆಯವರು ಈಗಾಗಲೇ ಸಿಎಸ್ ಆರ್ ನಿಧಿಯಡಿ ಶಾಲೆಗೆ ಹತ್ತು ಲಕ್ಷ ರೂಪಾಯಿ ನೀಡಿದ್ದು, ನೂತನ ಕಟ್ಟಡ ನಿರ್ಮಾಣಕ್ಕೆ ಮತ್ತೆ ಹೆಚ್ಚಿನ ಸಹಕಾರ ನೀಡುವುದಾಗಿ ಹೇಳಿದ್ದಾರೆ. ನನ್ನ ಕ್ಷೇತ್ರಾಭಿವೃದ್ಧಿ ನಿಧಿಯಿಂದ ಶಾಲಾ ಕಟ್ಟಡ ನಿರ್ಮಾಣಕ್ಕೆ ಹೆಚ್ಚಿನ ಮೊತ್ತ ವಿನಿಯೋಗಿಸುತ್ತೇನೆಂದು ವಿದಾನಸಭೆ ಸಭಾದ್ಯಕ್ಷ ಯು.ಟಿ.ಖಾದರ್ ಹೆಡ್ ಲೈನ್ ಕರ್ನಾಟಕಕ್ಕೆ ತಿಳಿಸಿದ್ದಾರೆ.
13-11-25 08:33 pm
HK News Desk
ಸಿದ್ದರಾಮಯ್ಯ ಸಿಎಂ ಆಗಿ ಮುಂದುವರಿದರೆ ತಪ್ಪೇನು? ನಾವ...
12-11-25 11:10 pm
ಧರ್ಮಸ್ಥಳ ಶವ ಹೂತ ಪ್ರಕರಣದಲ್ಲಿ ಎಸ್ಐಟಿ ತನಿಖೆಯ ತಡ...
12-11-25 11:06 pm
ಯಾರೂ ಗೂಟ ಹೊಡೆದು ಇರಕ್ಕಾಗಲ್ಲ, ಬಿಹಾರ ಚುನಾವಣೆ ಟೈಮ...
12-11-25 09:03 pm
ವಿಮಾನ ನಿಲ್ದಾಣದಲ್ಲಿ ನಮಾಜ್ ; ಅವರು ಎಲ್ಲಾದ್ರೂ ಶ್ರ...
10-11-25 07:17 pm
14-11-25 09:10 pm
HK News Desk
ಬಿಹಾರದಲ್ಲಿ ಎನ್ ಡಿಎ ಕ್ಲೀನ್ ಸ್ವೀಪ್ ಜಯಭೇರಿ ; 190...
14-11-25 11:50 am
ದೆಹಲಿ ಸ್ಫೋಟ ಪ್ರಕರಣ ; ಕಾನ್ಪುರ ವೈದ್ಯಕೀಯ ವಿದ್ಯಾರ...
13-11-25 10:56 pm
ಇಬ್ಬರು ಉಗ್ರರ ಡೈರಿ ಪತ್ತೆ ; ಮಹತ್ತರ ಮಾಹಿತಿ ಬಹಿರಂ...
13-11-25 08:41 pm
Tiruchi Aircraft: ತಿರುಚಿ- ಪುದುಕೋಟೈ ಹೆದ್ದಾರಿಯಲ...
13-11-25 05:13 pm
14-11-25 11:01 pm
Mangalore Correspondent
Kumpala, Dog, Crime, Mangalore: ಬೀದಿ ನಾಯಿಗಳ ದ...
14-11-25 10:10 pm
ಸರ್ಕಾರಿ ಶಾಲೆಯಲ್ಲಿ ಆಂಗ್ಲ ಮಾಧ್ಯಮ ಶಿಕ್ಷಣ ; ಮಕ್ಕ...
14-11-25 09:03 pm
ಡಿಸಿಸಿ ಬ್ಯಾಂಕ್ ಸಾಲಕ್ಕೆ ಜಾಮೀನು ನಿಂತು ಚೆಕ್ ನೀಡಿ...
14-11-25 03:34 pm
ಸದಸ್ಯತ್ವ ಕಳಕೊಂಡವರಿಂದಲೇ ದರ್ಗಾ ಕಮಿಟಿ ವಿರುದ್ಧ ಅಪ...
13-11-25 07:41 pm
14-11-25 05:32 pm
HK News Desk
Ullal News, Animal Attack, Crime, Kumpala: ಕಣ...
14-11-25 11:16 am
ಮಂಗಳೂರಿನಲ್ಲಿ ಡಿಜಿಟಲ್ ಅರೆಸ್ಟ್ ವಂಚನೆ ಹೆಚ್ಚಳ ; ಮ...
13-11-25 10:09 pm
Sexual Harassment in Anekal: ಸ್ಕ್ಯಾನಿಂಗ್ ವೇಳ...
13-11-25 10:00 pm
ವಿದೇಶಿ ಕಂಪನಿಯಲ್ಲಿ ಹೂಡಿಕೆ ಮಾಡಿದರೆ ದುಪ್ಪಟ್ಟು ಲಾ...
12-11-25 12:32 pm